ಊಟ ಆದ್ಮೇಲ್ ಹಿಂಗ್ ಮಾಡೋದ್ ಒಳ್ಳೇದಲ್ಲ....

Published : Feb 08, 2019, 03:21 PM IST
ಊಟ ಆದ್ಮೇಲ್ ಹಿಂಗ್ ಮಾಡೋದ್ ಒಳ್ಳೇದಲ್ಲ....

ಸಾರಾಂಶ

ತಿಂಡಿ, ಊಟ , ಪಾಠ ಸಮಯಕ್ಕೆ ಸರಿಯಾಗಿ ಆದ್ರೆ ಶೇ.100ರಷ್ಟು ಆರೋಗ್ಯವಾಗಿ ಇರಬಹುದು. ಅದರಲ್ಲೂ ಊಟ ಆದ ಕೂಡಲೇ ಈ ಕೆಳಗಿರುವ 7 ಕೆಟ್ಟ ಅಭ್ಯಾಸಗಳಿಂದ ದೂರವಿರುವುದೊಳಿತು...

  • ಊಟದ ನಂತರ ನೀರು ಸೇವಿಸುವುದು ಉತ್ತಮ. ಆದರೆ ಊಟ ಆದ ಕೂಡಲೇ 10 ನಿಮಿಷ ಗ್ಯಾಪ್ ಕೊಟ್ಟರೆ ಒಳಿತು. ಅದರಲ್ಲಿಯೂ ತಣ್ಣೀರು ಕುಡಿದರೆ ಆಹಾರ ಜೀರ್ಣವಾಗಲು ಸಮಯ ಕೇಳುತ್ತದೆ. ವೈದ್ಯರ ಸಲಹೆ ಪ್ರಕಾರ ಊಟದ ನಂತರ ಬೆಚ್ಚನೆ ನೀರು ಕುಡಿಯಬೇಕು.
  • ಊಟದ ನಂತರ ದೇಹ ದಂಡಿಸುವ ಕೆಲಸ ಮಾಡಬಾರದು. ಇದರಿಂದ ರಕ್ತದೂತ್ತಡ ಹೆಚ್ಚಾಗಿ ವಾಂತಿ, ಭೇದಿ ಹಾಗೂ ಕೆಮ್ಮು ಬರುತ್ತದೆ.
  • ಸಾಮಾನ್ಯವಾಗಿ ಹಲವರಿಗೆ ಊಟವಾದ ಕೂಡಲೇ ಕಾಫಿ, ಟೀ ಕುಡಿಯುವ ಅಭ್ಯಾಸವಿರುತ್ತದೆ. ಆದರೆ, ಹಾಲಿನಂಶ ಇರುವ ದ್ರವ ಆಹಾರವನ್ನು ಊಟದ ನಂತರ ವರ್ಜಿಸಿದರೆ ಒಳಿತು. ಗ್ರೀನ್ ಅಥವಾ ಹರ್ಬಲ್ ಟೀ, ಕುಡಿದರೆ ಗ್ಯಾಸ್ಟ್ರಿಕ್ ಸಮಸ್ಯೆ ನಿವಾರಣೆಯಾಗುತ್ತದೆ.
  • ಹೊಟ್ಟೆ ಭರ್ತಿ ತಿಂದಾಗ, ಧರಿಸಿಟ ಪ್ಯಾಂಟ್ ಅಥವಾ ಬೆಲ್ಟನ್ನು ಲೂಸ್ ಮಾಡೋದು ಕಾಮನ್. ಆದರೆ ಹೀಗ್ ಮಾಡಿದರೆ ಕಿಬ್ಬೊಟ್ಟೆ ನೋವು ಬರುತ್ತದೆ.
  • ಧೂಮಪಾನವೇ ಆರೋಗ್ಯಕ್ಕೆ ಹಾನಿಕರ. ಇನ್ನು ಊಟದ ನಂತರ ಮಾಡಿದರಂತೂ ಅಪಾಯ ಕಟ್ಟಿಟ್ಟ ಬುತ್ತಿ.
  • ಹೊಟ್ಟೆ ತುಂಬಿದರೆ ನಿದ್ದೆ ಗ್ಯಾರಂಟಿ. ಆದರೆ ಹೊಟ್ಟೆ ಬಿರಿ ತಿಂದರೆ ಅಥವಾ ತಿಂದ ಕೂಡಲೇ ಮಲಗಿದರೆ ಹೃದಯ ಸಂಬಂಧಿ ಕಾಯಿಲೆ, ಗೊರಕೆ ಹಾಗೂ ಹೊಟ್ಟೆ ಮುಂದೆ ಬರೋದು ಗ್ಯಾರಂಟಿ.
  • ಕೆಲವೊಮ್ಮೆ ಊಟದ ನಂತರ ಸ್ನಾನ ಮಾಡುವುದಿದೆ. ಹೀಗೆ ಮಾಡುವುದರಿಂದ ದೇಹದ ತಾಪಮಾನ ಹಾಗೂ ರಕ್ತ ಸಂಚಾರವ ಕಡಿಮೆಯಾಗುವ ಸಾಧ್ಯತೆ ಇರುತ್ತದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಎಸ್‌ಟಿಡಿ ಟೆಸ್ಟ್ ಮಾಡುವಂತೆ ಪದೇ ಪದೇ ಪೀಡಿಸುತ್ತಿದ್ದ ಗರ್ಲ್‌ಫ್ರೆಂಡ್‌ ಕತೆ ಮುಗಿಸಿದ ವಿದ್ಯಾರ್ಥಿ
ಇವನ್ನೆಲ್ಲಾ ಸ್ಟೀಲ್ ಪಾತ್ರೆಯಲ್ಲಿ ಹಾಕಿಡಬೇಡಿ.. ರುಚಿ, ಪರಿಮಳ ಇರಲ್ಲ, ಆರೋಗ್ಯನೂ ಹಾಳಾಗುತ್ತೆ!