ಮತ್ತೆ ಮತ್ತೆ ಕಾಡೋ ಅನಾರೋಗ್ಯದಿಂದ ಮುಕ್ತರಾಗಿ....

Published : Feb 05, 2019, 04:01 PM IST
ಮತ್ತೆ ಮತ್ತೆ ಕಾಡೋ ಅನಾರೋಗ್ಯದಿಂದ ಮುಕ್ತರಾಗಿ....

ಸಾರಾಂಶ

ಕೆಲವೊಂದು ಉತ್ತಮ ಗುಣಗಳನ್ನು ರೂಢಿಸಿಕೊಂಡರೆ ಆರೋಗ್ಯ ನಮ್ಮನ್ನು ಕಾಪಾಡುತ್ತದೆ. ಅದು ಬಿಟ್ಟು ಬೇಕಾಬಿಟ್ಟಿ ಜೀವನಶೈಲಿ ನಿಮ್ಮದಾದರೆ ಒಂದಲ್ಲ ಒಂದು ಸಮಸ್ಯೆ ನಿಮ್ಮನ್ನು ಕಾಡುತ್ತೆ....

ಅನಾರೋಗ್ಯದಿಂದ ಬಚಾವಾಗಲು ಹಲವಾರು ಟಿಪ್ಸ್ ಇವೆ. ಆದರೆ ಎಲ್ಲವೂ ರೋಗಗಳನ್ನು ನಿವಾರಿಸುವಲ್ಲಿ ಸಹಕರಿಸುವುದಿಲ್ಲ. ಪದೇ ಪದೇ ಅನಾರೋಗ್ಯಕ್ಕೀಡಾದರೆ ನಿಮ್ಮ ಜೀವನಶೈಲಿ ಮತ್ತು ಆಹಾರ ಕ್ರಮದ ಮೇಲೆ ಗಮನಿಸಬೇಕು. ಆದರೂ ನೀವು ಅನಾರೋಗ್ಯಕ್ಕೆ ಈಡಾಗುತ್ತಿದ್ದರೆ ಈ ಬದಲಾವಣೆಗಳನ್ನು ನೀವು ಜೀವನದಲ್ಲಿ ತರಬೇಕು. 

ನೀರು ಕುಡಿಯಿರಿ: ಇದು ಪ್ರಾಕೃತಿಕ ಔಷಧಿ. ಕುದಿಸಿ ಆರಿಸಿದ ಶುದ್ಧ ನೀರು ಸೇವಿಸುತ್ತಿದ್ದರೆ ದೇಹದಲ್ಲಿನ ಟಾಕ್ಸಿನ್ ಹೊರ ಬರುತ್ತದೆ. ಇದರಿಂದ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ. 

ಹಣ್ಣು ತಿನ್ನಿ: ಕಿತ್ತಳೆ, ಮೂಸಂಬಿ, ಮೊದಲಾದ ರಸಭರಿತ ಆಹಾರವನ್ನು ಸೇವಿಸಿ. ಇದರಲ್ಲಿ ವಿಟಮಿನ್ ಸಿ ಇರುತ್ತದೆ. ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಈ ಹಣ್ಣುಗಳ ರಸ ತೆಗೆದು ಸೇವಿಸಬೇಕು. 

ಡ್ರೈ ಫ್ರೂಟ್ಸ್ : ಚಳಿಗಾಲದಲ್ಲಿ ಡ್ರೈ ಫ್ರೂಟ್ಸ್ ಸೇವಿಸುವುದು ಉತ್ತಮ. ರಾತ್ರಿ ನೀರಲ್ಲಿ ಇವುಗಳನ್ನು ನೆನೆಸಿ ಬೆಳಗ್ಗೆ ಹಾಲಿನೊಂದಿಗೆ ಸೇವಿಸಿ. ಆದರೆ ತಿಂಡಿ ತಿನ್ನುವ ಅರ್ಧ ಗಂಟೆ ಮೊದಲು ಸೇವಿಸಿದರೆ ಒಳಿತು. 

ಮೊಳಕೆ ಕಾಳು: ಮೊಳಕೆ ಬಂದ ಹೆಸರು, ಕಡ್ಲೆ ಕಾಳನ್ನು ಪ್ರತಿದಿನ ಒಂದು ಕಪ್ ಸೇವಿಸಿ. ಇವುಗಳ ಸೇವನೆಯಿಂದ ದೇಹಕ್ಕೆ ಬೇಕಾದ ಪೋಷಕಾಂಶಗಳು ಸಿಗುತ್ತವೆ. 

ಸಲಾಡ್: ಸೌತೆಕಾಯಿ, ಟೊಮ್ಯಾಟೋ, ಮೂಲಂಗಿ, ಕ್ಯಾರೇಟ್, ಎಲೆಕೋಸು, ಈರುಳ್ಳಿ, ಬೀಟ್ ರೂಟ್ ಎಲ್ಲವನ್ನೂ ಸೇರಿಸಿ ಸಲಾಡ್ ಮಾಡಿ ಸೇವಿಸಿ. 

ತುಳಸಿ: ತುಳಸಿಗೆ ಧಾರ್ಮಿಕ ಮಹತ್ವ ಇದೆ. ಪ್ರತಿದಿನ ಬೆಳಗ್ಗೆ ಎರಡು ಮೂರು ತುಳಸಿ ಸೇವಿಸುತ್ತಿದ್ದರೆ ನೋವು ನಿವಾರಣೆಯಾಗಿ ರೋಗ ಪ್ರತಿರೋಧಕ ಶಕ್ತಿ ಹೆಚ್ಚುತ್ತದೆ. 

ಯೋಗ: ಯೋಗ ಅಥವಾ ಪ್ರಾಣಾಯಾಮದಿಂದ ಶರೀರ ಅರೋಗ್ಯವಾಗಿರುತ್ತದೆ. ಪ್ರತಿದಿನ ಮುಂಜಾನೆ ಅಥವಾ ಸಂಜೆ ಯೋಗ ಮಾಡಿ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತ ವಿರೋಧಿ ಬಾಂಗ್ಲಾದೇಶದಲ್ಲೀಗ ಕಾಂಡೋಮ್‌ ಬರಗಾಲ, ಕೇವಲ 38 ದಿನಗಳ ಸ್ಟಾಕ್‌!
ಈ ಎರಡು ಬಣ್ಣದ ಬ್ರೇಸಿಯರ್ ಧರಿಸುವುದರಿಂದ ಸ್ತನ ಕ್ಯಾನ್ಸರ್ ಬರುತ್ತದೆಯೇ?