ಕಲೆ ರಹಿತ, ಸುಂದರ ವದನಕ್ಕೆ ಅಕ್ಕಿಹಿಟ್ಟಿನ ಮದ್ದು....

By Web DeskFirst Published Feb 13, 2019, 10:46 AM IST
Highlights

ಕಲೆ ರಹಿತ ತ್ವಚೆ ಹೊಂದುವ ಬಯಕೆ ಯಾರಿಗೆ ತಾನೇ ಇರೋಲ್ಲ ಹೇಳಿ. ಎಲ್ಲರಿಗೂ ತಾವು ಆಕರ್ಷಕರಾಗಿ ಕಾಣಿಸಿಕೊಳ್ಳಬೇಕೆಂಬ ಆಸೆ ಇದ್ದೇ ಇರುತ್ತದೆ. ಅಂಥ ಆಸೆ ನಿಮಗೂ ಇದ್ದರೆ ಹೀಗ್ ಮಾಡಿ...

ಸೀಸನ್‌ಗೆ ತಕ್ಕಂತೆ ನಮ್ಮ ತ್ವಚೆಯೂ ತನ್ನ ಕಳೆಗುಂದುತ್ತದೆ. ಅದರಲ್ಲಿಯೂ ಚಳಿಗಾಲದಲ್ಲಿ ಚರ್ಮ ಒಣಗಿ, ನೋಡಲು ವಿಕಾರವಾಗಿ ಕಾಣಿಸುತ್ತದೆ. ಚರ್ಮದಲ್ಲಿ ತೈಲದ ಅಂಶವಿದ್ದರೆ ಕಳಾಹೀನವಾಗುವುದಿಲ್ಲ. ಮುಖದ ಕಳೆ ಕುಂದದಂತೆ ಏನು ಮಾಡಬಹುದು? 

ಮಾಯಿಶ್ಚರೈಸರ್ ಬಳಕೆ: ಸ್ಕಿನ್ ಮಾಯಿಶ್ಚರೈಸ್ ಆಗಿರಬೇಕು. ಅದಕ್ಕೆ ವಿಟಮಿನ್ ಇ, ಶಿಯಾ ಬಟರ್ ಮತ್ತು ಇತರೆ ಎಣ್ಣೆಯಂಶ ಇರುವ ಮಾಯಿಶ್ಚರೈಸರ್ ಬಳಸಿ. 

ಅವಸರ ಬೇಡ: ಆಫೀಸ್ ಹೋಗುವ ಸಮಯದಲ್ಲಿ ಪುರುಷರು ಅರ್ಜೆಂಟ್ ಆಗಿ ಶೇವ್ ಮಾಡಿಕೊಳ್ಳುತ್ತಾರೆ. ಇದರಿಂದ ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ನಿಧಾನವಾಗಿ ಶೇವ್ ಮಾಡಿದರೆ, ಗುಳ್ಳೆಗಳಾಗುವುದಿಲ್ಲ. 

ಗ್ಲೋಯಿಂಗ್ ಸ್ಕಿನ್‌ಗೆ: ಸನ್ ಸ್ಕ್ರೀನ್ ಸರಿಯಾದ ರೀತಿಯಲ್ಲಿ ಬಳಸಿದರೆ ಚರ್ಮಕ್ಕೊಳ್ಳೆಯದು. ಎಸ್ಪಿಎಫ್ 15 ಪವರ್ ಹೊಂದಿರುವ ಸನ್‌ಸ್ಕ್ರೀನ್ ಬಳಸಿ.  ತುಂಬಾ ಹೊತ್ತು ಬಿಸಿಲಿನಲ್ಲಿ ಇರುವುದಾದ್ರೆ ಎಸ್ಪಿಎಫ್ 30 ಹೊಂದಿರುವ ಕ್ರೀಮ್ ಬಳಸಿದರೆ ತ್ವಚೆ ಸ್ವಚ್ಛವಾಗಿರುತ್ತದೆ. 

ಕ್ಲೀನಿಂಗ್: ಮುಖವನ್ನು ಯಾವಾಗಲೂ ಕ್ಲೀನ್ ಆಗಿ ಇಟುಕೊಳ್ಳಲು ಕ್ಲೆನ್ಸರ್ ಬಳಸಿ. ಸ್ನಾನ ಮಾಡಿದ ನಂತರ ಹಾಗೂ ನಿದ್ರೆ ಮಾಡುವ ಮುನ್ನ ಇದನ್ನು ಬಳಸಬಹುದು.

ಸ್ಕ್ರಬ್ ಮಾಡಿ: ಡೆಡ್ ಸ್ಕಿನ್, ಬ್ಲ್ಯಾಕೆಡ್ಸ್ ಮತ್ತು ವೈಟೆಡ್ಸ್ ನಿವಾರಿಸಲು ವಾರದಲ್ಲಿ ಎರಡು ಬಾರಿಯಾದರೂ ಸ್ಕ್ರಬ್ಬಿಂಗ್ ಮಾಡಿ. ಅದರಲ್ಲೂ ಅಕ್ಕಿ ಹಿಟ್ಟಿನಲ್ಲಿ ಸ್ಕ್ರಬ್ಬಿಂಗ್ ಮಾಡಿದರೊಳಿತು. 

click me!