ಈ ಪಿಂಪಲ್ ಯುವ ಜನಾಂಗವನ್ನು ನಿದ್ದೆ ಕೆಡಿಸುವ ಸಮಸ್ಯೆ. ಕೂದಲಿನ ಸ್ವಚ್ಛತೆ ಹಾಗೂ ಕೆಲವು ಸಿಂಪಲ್ ಔಷಧಗಳಿಂದ ಈ ಸಮಸ್ಯೆಗೆ ಮುಕ್ತಿ ಹಾಡಬಹುದು. ಈ ತರಕಾರಿಯೂ ಮೊಡವೆಗೆ ಆಗುತ್ತೆ ಮದ್ದು.. ಹೇಗೆ?
ಹಾಗಲಕಾಯಿ ರುಚಿ ಕಹಿ ಇರಬಹುದು. ಆದರೆ ಇದರಿಂದ ಆರೋಗ್ಯಕ್ಕೆ ಹೆಚ್ಚಿನ ಪ್ರಯೋಜನವಿದೆ. ಹೆಚ್ಚಿನವರು ಹಾಗಲವನ್ನು ಇಷ್ಟಪಡೋದಿಲ್ಲ. ಆದರೆ ಇದನ್ನು ಬಳಸುವುದರಿಂದ ಆರೋಗ್ಯದೊಂದಿಗೆ ಸೌಂದರ್ಯವೂ ಹೆಚ್ಚುತ್ತದೆ. ಸೌಂದರ್ಯಕ್ಕೆ ಹಾಗಲಕಾಯಿಯೇ? ಹೇಗೆಂದು ತಿಳಿಯಲು ಮುಂದೆ ಓದಿ...
ಮುಖದಲ್ಲಿ ಸುಕ್ಕು ಕಾಣಿಸಿಕೊಂಡರೆ, ವಯಸ್ಸಿಗೂ ಮುನ್ನವೇ ವೃದ್ಧಾಪ್ಯ ನಮ್ಮನ್ನು ಕಾಡುತ್ತದೆ. ಅದಕ್ಕೆ ಹಾಗಲಕಾಯಿ ಸೇವಿಸಲು ಆರಂಭಿಸಿ. ಯಾಕೆಂದರೆ ಹಾಗಲಕಾಯಿಯಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಇದೆ. ಇದು ಮುಖವನ್ನು ಯಂಗ್ ಆಗಿರುವಂತೆ ಮಾಡುತ್ತದೆ.
ಹಾಗಲಕಾಯಿಯಲ್ಲಿ ಅಧಿಕ ಪ್ರಮಾಣದ ಆ್ಯಂಟಿ ಆ್ಯಕ್ಸಿಡೆಂಟ್ ಇರುತ್ತದೆ. ಇದು ರಕ್ತದಲ್ಲಿರುವ ಟಾಕ್ಸಿನ್ ಅಂಶವನ್ನು ದೇಹದಿಂದ ಹೊರ ಹಾಕುತ್ತದೆ. ಇದರಿಂದ ರಕ್ತ ಕ್ಲೀನ್ ಆಗುತ್ತದೆ. ಜೊತೆಗೆ ಸ್ಕಿನ್ ಸಂಬಂಧಿ ಸಮಸ್ಯೆಯನ್ನೂ ನಿವಾರಿಸುತ್ತದೆ.
ಸ್ಕಿನ್ ಮೇಲಿನ ಕಲೆ ನಿವಾರಿಸಲು ಎರಡು ಚಮಚ ಹಾಗಲ ಜ್ಯೂಸ್, ಎರಡು ಚಮಚ ಕಿತ್ತಳೆ ಹಣ್ಣಿನ ರಸ ಮಿಕ್ಸ್ ಮಾಡಿ. ಮುಖಕ್ಕೆ ಹಚ್ಚಿ. ಅದು ಒಣಗಿದ ಮೇಲೆ ಮುಖವನ್ನು ತೊಳೆಯಿರಿ. ಇದರಿಂದ ಮುಖದ ಕಲೆ ನಿವಾರಣೆಯಾಗುತ್ತದೆ.
ನಿಮ್ಮ ಮುಖದಲ್ಲಿ ಪಿಂಪಲ್, ಕೆಂಪು ಚುಕ್ಕೆ ಇದ್ದರೆ ಹಾಗಲಕಾಯಿ ರಸವನ್ನು ಬೇರೆ ಹಣ್ಣಿನ ರಸದೊಂದಿಗೆ ಮಿಕ್ಸ್ ಮಾಡಿ ಸೇವಿಸಿ. ಇದರಲ್ಲಿರುವ ಆ್ಯಂಟಿ ಮೈಕ್ರೋಬಿಯಲ್ ಗುಣ ತ್ವಚಾ ಸಂಬಂಧಿ ಸಮಸ್ಯೆಗಳನ್ನು ದೂರವಾಗಿಸುತ್ತದೆ.
ಇತ್ತೀಚೆಗೆ ಮಾರ್ಕೆಟ್‌ನಲ್ಲಿ ಹಾಗಲಕಾಯಿ ಫೇಸ್ ಪ್ಯಾಕ್ ಸಹ ಸಿಗುತ್ತದೆ. ನಿಮ್ಮ ಸ್ಕಿನ್ ಇನ್ನಷ್ಟು ಗ್ಲೋ ಆಗಬೇಕು, ಚೆನ್ನಾಗಿ ಕಾಣಬೇಕೆಂದರೆಹಾಗಲಕಾಯಿ ಫೇಸ್ ಪ್ಯಾಕ್ ಬಳಸಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.