ಫ್ರೀಯಾಗಿದ್ದೇ ಫಿಟ್ ಆಗಿರ್ಬೇಕಾ? ಜಿಮ್, ಜುಂಬಾ ಬಿಟ್ಹಾಕಿ...

By Web Desk  |  First Published Jun 12, 2019, 5:34 PM IST

ಫಿಟ್ ಆಗಬೇಕು ಅಂದ್ರೆ ಜಿಮ್, ಯೋಗ, ಜುಂಬಾ ಇತ್ಯಾದಿ ಕ್ಲಾಸ್‌ಗಳಿಗೆ ಹೋಗಲೇಬೇಕೆಂದೇನಿಲ್ಲ. ಹಲವಾರು ಹೊರಾಂಗಣ ಚಟುವಟಿಕೆಗಳು ಕೂಡಾ ನಿಮ್ಮನ್ನು ಫಿಟ್ ಆಗಿಸುತ್ತವೆ. ಜೊತೆಗೆ ಹೊರಗಿನ ಗಾಳಿ ನಿಮ್ಮನ್ನು ಹೆಚ್ಚು ಉಲ್ಲಸಿತರಾಗಿಡುತ್ತದೆ. 


ಬೆಳಗಿನ ಹಾಗೂ ಸಂಜೆ ಹೊತ್ತಿನ ತಂಪಾದ ಗಾಳಿ, ಪ್ರಾಕೃತಿಕ ಬೆಳಕು, ದೈನಂದಿನ ಜನಜೀವನ ಇವೆಲ್ಲವೂ ನಿಮಗೆ ಹೊರಾಂಗಣ ಚಟುವಟಿಕೆಗಳಲ್ಲಿ ಸಿಗುವ ಬೋನಸ್ ಲಾಭಾಂಶಗಳು. ಹೀಗಾಗಿ, ಒಳಾಂಗಣ ಚಟುವಟಿಕೆಗಳು ಬೋರಾಗಿವೆ ಎನ್ನುವವರು ನೀವಾದಲ್ಲಿ ಸ್ವಲ್ಪ ಹೊರ ಬನ್ನಿ. ಇಲ್ಲಿ ನಿಮ್ಮ ಆಸಕ್ತಿಗಳಿಗನುಗುಣವಾಗಿ ವೈವಿಧ್ಯಮಯ ಚಟುವಟಿಕೆಗಳು ಕಾದು ಕುಳಿತಿವೆ. ಯಾವುವಪ್ಪಾ ಅವು ಅಂದ್ರಾ? ವಾಕಿಂಗ್, ಜಾಗಿಂಗ್, ಕಯಕಿಂಗ್, ಹೈಕಿಂಗ್, ಸ್ವಿಮ್ಮಿಂಗ್, ಪ್ಲೇಯಿಂಗ್... ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ತಾಪ್ಸಿಗಿದೆಯಂತೆ ಈ ವೀಕ್‌ನೆಸ್

Tap to resize

Latest Videos

ಬೀಚ್ ಬದಿಯ ವಾಕಿಂಗ್
ವಾಕ್ ಮಾಡುವುದು ದೈಹಿಕ ಸ್ಟ್ರೆಂತ್ ಹೆಚ್ಚಿಸಲು ಆರಂಭಿಕ ಕಸರತ್ತು. ಇದರ ಮಜವೆಂದರೆ ನೀವು ಯಾವ ಹಾದಿಯನ್ನು, ಪರಿಸರವನ್ನು ಬೇಕಿದ್ದರೂ ವಾಕಿಂಗ್‌ಗೆ ಆಯ್ಕೆ ಮಾಡಿಕೊಳ್ಳಬಹುದು. ವಾಕಿಂಗ್ ಶೂಸ್ ಹಾಕಿಕೊಂಡು ನಡೆಯುತ್ತಲೇ ಇರಿ ಅಷ್ಟೇ. ಬೀಚ್ ಬದಿಯ ನಡಿಗೆ ತಂಪಾದ ಗಾಳಿ, ಅಲೆಯ ಸದ್ದು, ವಿಶೇಷ ಪರಿಸರದಿಂದಾಗಿ ನಿಮ್ಮಲ್ಲಿ ನವಚೈತನ್ಯ ತುಂಬುತ್ತದೆ. ವಾಕಿಂಗ್‌ಗೆ ಸಂಗಾತಿ ಇದ್ದರೆ ಇದರ ಖುಷಿಯೇ ಬೇರೆ. ಆದರೆ ವೇಗವಾಗಿ, ನಿಯಮಿತವಾಗಿ ನಡೆಯುತ್ತಿರಬೇಕು. ನಿಮ್ಮ ಹೃದಯ ಬಡಿದ ಹೆಚ್ಚಾಗಬೇಕು. ವಾಕಿಂಗ್ ಪಾರ್ಟ್ನರ್ ಇಲ್ಲವೆಂದಲ್ಲಿ ಹೆಡ್‌ಫೋನ್ ಹಾಕಿಕೊಂಡು ನಿಮ್ಮ ಪಾಡಿಗೆ ಗಂಟೆಯ ಕಾಲ ನಡೆಯಿರಿ.

ರನ್ನಿಂಗ್
ಹೃದಯದ ಫಿಟ್ನೆಸ್ ಕಾಪಾಡಲು, ದೇಹದ ಸ್ಟ್ರೆಂತ್ ಹೆಚ್ಚಿಸಲು ರನ್ನಿಂಗ್ ಉತ್ತಮ ಆಯ್ಕೆ. ನೀವು ನಿಯಮಿತವಾಗಿ ಓಡಲಾರಂಭಿಸಿದ ಕೆಲವೇ ವಾರಗಳಲ್ಲಿ ರನ್ನಿಂಗ್ ನಿಮ್ಮ ಹೆಚ್ಚಿನ ಕ್ಯಾಲೋರಿಗಳನ್ನು ತೆಗೆದು, ನಿಮ್ಮನ್ನು ಫಿಟ್ ಆಗಿಸುತ್ತದೆ. ವಾಕಿಂಗ್‌ಗಿಂತ ವೇಗವಾಗಿ ನೀವು ಕ್ಯಾಲೋರಿ ಕಳೆದುಕೊಳ್ಳುವುದರಿಂದ ಇದಕ್ಕಾಗಿ ನೀವು ನೀಡುವ ಸಮಯವನ್ನೂ ಮಿತಿಗೊಳಿಸಬಹುದು. ಹಾಗಿದ್ದರೆ ತಡವೇಕೆ? ಫಿಟ್ನೆಸ್‌ಗಾಗಿ ಓಡಲಾರಂಭಿಸಿ. ಜಾಗಿಂಗ್‌ನಿಂದ ಆರಂಭಿಸಿ, ಹಂತಹಂತವಾಗಿ ರನ್ನಿಂಗ್ ಶುರು ಮಾಡಿ. 

ಫಿಟ್‌ನೆಸ್ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಕ್ರೀಡೆ
ಇದೇನು ತರಬೇತಿ ಪಡೆದ ಕ್ರೀಡೆ ಬಗ್ಗೆ ಮಾತನಾಡುತ್ತಿಲ್ಲ. ನಿಮ್ಮ ಗೆಳೆಯರೊಂದಿಗೆ ಖುಷಿಗಾಗಿ ಆಡುವ ಆಟವೇ ಸಾಕು. ಬ್ಯಾಡ್ಮಿಂಟನ್, ಫ್ರಿಸ್ಬೀ, ವಾಲಿಬಾಲ್, ಫುಟ್‌ಬಾಲ್ ಯಾವುದಾದರೂ ಸರಿ, ನಿಮ್ಮಿಷ್ಟದ್ದನ್ನು ಆಯ್ಕೆ ಮಾಡಿಕೊಳ್ಳಿ. ಎಲ್ಲೀವರೆಗೆ ಹೃದಯ ಬಡಿತ ಜೋರಾಗಿರುತ್ತದೆಯೋ, ಅಲ್ಲೀವರೆಗೆ ನೀವು ಫಿಟ್ನೆಸ್ ಹಾದಿಯಲ್ಲಿದ್ದೀರಾ ಎಂಬುದು ಖಚಿತ. ಆಟ ತಪ್ಪಿಸದಂತೆ ಸ್ಫೂರ್ತಿಯಾಗಲು ಗೆಳೆಯರಂತೂ ಇದ್ದೇ ಇರುತ್ತಾರೆ. 

ವರ್ಕ್‌ಔಟ್ ಮಾಡುವಾಗಿ ಈ ಆಹಾವರನ್ನು ಅವೈಡ್ಯ್ ಮಾಡಿ

ಸ್ವಿಮ್ಮಿಂಗ್
ಸ್ವಿಮ್ಮಿಂಗ್ ನಿಮ್ಮ ಇಡೀ ದೇಹಕ್ಕೆ ವ್ಯಾಯಾಮವೊದಗಿಸುತ್ತದೆಯಾದರೂ ಎಲ್ಲಿಯೂ ಹೆಚ್ಚು ಪ್ರೆಶರ್ ಬೀಳುವುದಿಲ್ಲ. ನೆಲದಲ್ಲಿ ವ್ಯಾಯಾಮ ಮಾಡುವುದಕ್ಕಿಂತ ಹೆಚ್ಚಿನ ಸಮಯ ನೀರಿನಲ್ಲಿ ಆಡಬಹುದು. ಆರಂಭದಲ್ಲಿ ಮಧ್ಯೆ ಮಧ್ಯೆ ವಿರಾಮ ತೆಗೆದುಕೊಳ್ಳಿ. ನಿಧಾನವಾಗಿ ಒಂದು ಗಂಟೆಯ ಕಾಲ ವಿರಾಮವಿಲ್ಲದೆ ಈಜುವುದನ್ನು ಅಭ್ಯಾಸ ಮಾಡಿಕೊಳ್ಳಿ. ಈಜು ಸಲೀಸಾದ ಮೇಲೆ ವಾಟರ್ ಏರೋಬಿಕ್ಸ್, ವಾಟರ್ ಯೋಗ ಎಂದು ವೈವಿಧ್ಯಮಯ ಫಿಟ್ನೆಸ್ ಕ್ರೀಡೆಗಳನ್ನು ಟ್ರೈ ಮಾಡಿ ಮಜಾ ಅನುಭವಿಸಬಹುದು.

 

ಸೈಕ್ಲಿಂಗ್
ಫಿಟ್ ಆಗುತ್ತಲೇ ನಿಮ್ಮ ಸಿಟಿ ರೌಂಡ್ ಹಾಕುವುದು ಎಷ್ಟು ಚೆನ್ನಾಗಿರುತ್ತದಲ್ಲವೇ? ಇದಕ್ಕೆ ಸೈಕ್ಲಿಂಗಿಗಿಂತ ಉತ್ತಮ ಆಯ್ಕೆ ಇನ್ನೊಂದಿಲ್ಲ. ಪ್ರತಿ ದಿನ ಹೊಸ ಹೊಸ ಹಾದಿ ಟ್ರೈ ಮಾಡಬಹುದು. ದಿನಕ್ಕೆ ಕನಿಷ್ಠ ಒಂದು ಗಂಟೆ ಸೈಕಲ್ ಓಡಿಸಿ, ಫಿಟ್ ಆಗಿರಿ. ಇದು ಅತ್ಯುತ್ತಮ ಕಾರ್ಡಿಯೋ ಎಕ್ಸರ್ಸೈಸ್ ಆಗಿದೆ. 

ಹೈಕಿಂಗ್
ನಿಮ್ಮೂರಿನಿಂದ ಹಿಡಿದು ಪಕ್ಕದ ರಾಜ್ಯ, ಪರದೇಶ ಎಲ್ಲಿ ಬೇಕೆಂದಲ್ಲಿನ ಬೆಟ್ಟ ಗುಡ್ಡಗಳನ್ನು, ಪ್ರಾಕೃತಿಕ ಸೌಂದರ್ಯವನ್ನು ಹುಡುಕಿಕೊಂಡು ಹತ್ತಿ ಹೋಗುವುದು ಯಾರಿಗೆ ಕೂಡಾ ಬೋರೆನಿಸಲು ಸಾಧ್ಯವೇ ಇಲ್ಲ. ಪ್ರಕೃತಿ ಮಡಿಲು ಸೇರೋಕೆ ಹೈಕಿಂಗ್‌ಗಿಂತ ಉತ್ತಮ ಫಿಟ್ನೆಸ್ ತಂತ್ರ ಮತ್ತೊಂದಿಲ್ಲ. ಅಲ್ಲದೆ, ಬೇರೆ ಬೇರೆ ಊರುಗಳನ್ನು ಕೂಡಾ ನೋಡಬಹುದು. ಹೀಗಾಗಿ, ವಿವಿಧ ಸಂಸ್ಕೃತಿಗಳಿಗೆ, ಜನಜೀವನಗಳಿಗೆ, ಪ್ರಕೃತಿಗೆ ಅಡ್ಜಸ್ಟ್ ಆಗುವುದನ್ನು ಕಲಿಸುತ್ತಲೇ ಹೈಕಿಂಗ್ ನಿಮ್ಮನ್ನು ಫಿಟ್ ಆಗಿರಿಸುತ್ತದೆ. ತಿಂಗಳಲ್ಲಿ ಕನಿಷ್ಠ ಎರಡು ಬಾರಿಯಾದರೂ ಹೈಕ್ ಹೋಗಿ. 


 

click me!