ಹೊಟ್ಟೆ, ಸೊಂಟದ ಸುತ್ತಲಿನ ಕೊಬ್ಬು ಕರಗಿಸುತ್ತವೆ ಈ 5 ಹಣ್ಣುಗಳು!

By Web DeskFirst Published Feb 17, 2019, 3:48 PM IST
Highlights

ದೇಹದ ತೂಕ ಹಾಗೂ ಹೊಟ್ಟೆ ಸುತ್ತಲಿನ ಕೊಬ್ಬು ಕಿರಿ ಕಿರಿಯುಂಟು ಮಾಡುತ್ತದೆ. ಇದನ್ನು ಕರಗಿಸಲು ವ್ಯಾಯಾಮ, ಡಯಟ್ ಹೀಗೆ ನಾನಾ ಕ್ರಮಗಳನ್ನು ಅನುಸರಿಸುತ್ತಾರೆ. ಹೀಗಿರುವಾಗ ಸುಲಭ ಗಹಾಗೂ ನೈಸರ್ಗಿಕವಾಗಿ ಕೊಬ್ಬು ಕರಗಿಸುವ 5 ಹಣ್ಣುಗಳ ಮಾಹಿತಿ

ದೇಹದ ಕೊಬ್ಬು ಕರಗಿಸುವುದು ಪ್ರತಿಯೊಬ್ಬರ ದೇಹವು ತನ್ನದೇ ಆದ ಸಮಯ ತೆಗೆದುಕೊಳ್ಳುತ್ತದೆ. ಆದರೆ ಇಲ್ಲಿ ನೀಡಿರುವ ಟಿಪ್ಸ್ ಗಳಲ್ಲಿ ಹಣ್ಣುಗಳ ಸೇವನೆ ನಿಮ್ಮ ದೇಹದ ಕೊಬ್ಬು ಕರಗಿಸಲು ಸಹಾಯ ಮಾಡುತ್ತದೆ. ಈ ಹಣ್ಣುಗಳಲ್ಲಿ ಹೆಚ್ಚಿನ ಪ್ರಮಾಣದ ಆ್ಯಂಟಿಆಕ್ಸೈಡ್ಸ್ ಹಾಗೂ ಖನಿಜಾಂಶ ಇರುವುದರಿಂದ ಇವು ನೈಸರ್ಗಿಕವಾಗಿ ಹೊಟ್ಟೆಯ ಕೊಬ್ಬು ಕರಗಿಸಲು ಸಹಾಯ ಮಾಡುತ್ತವೆ.

1 ಸೇಬುಹಣ್ಣು: ಸಂಯುಕ್ತ ರಾಷ್ಟ್ರ ಅಮೆರಿಕಾದ ಕೃಷಿ ವಿಭಾಗದ ಅನ್ವಯ ಸೇಬು ಹಣ್ಣಿನಲ್ಲಿ ಅಧಿಕ ಪ್ರಮಾಣದ ಫೈಬರ್ ಅಂಶ ಅವುಗಳ ಸಿಪ್ಪೆಯಲ್ಲಿರುತ್ತದೆ. ಫೈಬರ್ ಅಂಶದ ಸೇವನೆಯಿಂದ ಹಸಿವು ಕೂಡಾ ಹೆಚ್ಚು ಕಾಣಿಸಿಕೊಳ್ಳುವುದಿಲ್ಲ ಹೀಗಾಗಿ ಹೆಚ್ಚು ಆಹಾರ ಸೇವಿಸುವ ಅವಶ್ಯಕತೆ ಇರುವುದಿಲ್ಲ. ದೇಹದ ಮೂಳೆ ಹಾಗೂ ಯಕೃತ್ ಕೂಡಾ ಫೈಬರ್ ಅಂಶದಿಂದ ಆರೋಗ್ಯವಾಗಿರುತ್ತದೆ. ಜೀರ್ಣ ಕ್ರಿಯೆಯನ್ನೂ ವೃದ್ಧಿಸುತ್ತದೆ, ಇದರ ಪರಿಣಾಮ ನೀವು ಕಡಿಮೆ ಕ್ಯಾಲೊರಿಯುಳ್ಳ ಆಹಾರವನ್ನು ಸೇವಿಸಬಹುದು. ಇಷ್ಟೇ ಅಲ್ಲದೇ, ಸೇಬು ಹಣ್ಣಿನ ಸಿಪ್ಪೆಯಲ್ಲಿ ಪಾಲಿಫಿನಾಲ್ ಕೂಡಾ ಇರುತ್ತದೆ, ಇದು ದೇಹದಲ್ಲಿರುವ ಕೊಬ್ಬು ಹೀರಿಕೊಳ್ಳುತ್ತದೆ. ಸೇಬಿನಲ್ಲಿರುವ ಗ್ಲೈಸೆಮಿಕ್ ಬ್ಲಡ್ ಶುಗರ್ ಕೂಡಾ ಕಂಟ್ರೋಲ್ ಮಾಡಲು ಸಹಾಯಕ.

2. ಟೊಮಾಟೋ ಹಣ್ಣು: ಈ ಹುಳಿ ಹಾಗೂ ಸ್ವಾದಿಷ್ಟ ಹಣ್ಣು ಹೊಟ್ಟೆ ಸುತ್ತಲು ಶೇಖರಣೆಯಾಗಿರುವ ಕೊಬ್ಬು ಕರಗಿಸುತ್ತದೆ. ಟೊಮಾಟೋನಲ್ಲಿ ಎಮೀನೋ ಆ್ಯಸಿಡ್ ಆಗಿರುವ ಕಾರ್ನಿಟೈನ್ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದು ಕೊಬ್ಬು ಕರಗಿಸುವುದರೊಂದಿಗೆ ಮೆಟಬಾಲಿಸಂ ಕೂಡಾ ವೃದ್ಧಿಸುತ್ತದೆ ಅತ್ಯಂತ ಹೆಚ್ಚು ಸಹಾಯಕವಾಗಿದೆ. ಇಷ್ಟೇ ಅಲ್ಲದೇ ಟೊಮಾಟೋನಲ್ಲಿ 9-oxo-ODA ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದು ರಕ್ತದಲ್ಲಿರುವ ಲಿಪಿಡ್ಸ್ ಪ್ರಮಾಣ ಹೆಚ್ಚಿಸುತ್ತದೆ ಹಾಗೂ ನೈಸರ್ಗಿಕವಾಗಿ ಕೊಬ್ಬು ಕರಗಿಸುತ್ತದೆ. 

3. ಸೀಬೆ ಹಣ್ಣು: ಸೇವಿಸುವ ಆಹಾರದಲ್ಲಿರುವ ಪ್ರೋಟಿನ್, ವಿಟಮಿನ್ ಹಾಗೂ ಫೈಬರ್ ಪ್ರಮಾಣ ಕಡಿಮೆಗೊಳಿಸದೆ ಕೊಬ್ಬು ಕರಗಿಸಲು ಸೀಬೆ ಹಣ್ಣು ಅತ್ಯಂತ ಸೂಕ್ತ. ಪ್ರತಿದಿನ ಒಂದು ಸೀಬೆ ಹಣ್ಣು ಸೇವನೆನ್ಮಿಮ ಮೆಟಬಾಲಿಸಂನ್ನು ನಿಯಂತ್ರಣದಲ್ಲಿಟ್ಟುಕೊಂಡು, ಹೆಚ್ಚುತ್ತಿರುವ ತೂಕಕ್ಕೆ ಬ್ರೇಕ್ ಹಾಕುತ್ತದೆ. ಈ ಹಣ್ಣಿನಲ್ಲಿ ಅತ್ಯಂತ ಕಡಿಮೆ ಪ್ರಮಾಣದ ಸಕ್ಕರೆ ಅಂಶ ಇರುವುದೇ ಇದಕ್ಕೆ ಕಾರಣ

4. ಸ್ಟ್ರಾಬೆರಿ: ರಸಭರಿತ ಹಾಗೂ ಸ್ವಾದಿಷ್ಟ ಸ್ಟ್ರಾಬೆರಿ ಹಣ್ಣುಗಳಲ್ಲಿ ಕ್ಯಾಲೋರಿ ಅತ್ಯಂತ ಕಡಿಮೆ ಪ್ರಮಾಣದಲ್ಲಿರುತ್ತದೆ. ಪ್ರತಿ 100 ಗ್ರಾಂ ಸ್ಟ್ರಾಬೆರಿಯಲ್ಲಿ ಕೇವಲ 33 ಕ್ಯಾಲೊರಿ ಇರುತ್ತದೆ. ಸ್ಟ್ರಾಬೆರಿ ಹಣ್ಣನ್ನು ತಾಜಾವಾಗಿ ಸೇವಿಸಬಹುದು. ಇಲ್ಲವೇ ಜ್ಯೂಸ್ ಅಥವಾ ಸಲಾಡ್ ಮಾಡಿಯೂ ತಿನ್ನಬಹುದು.

5. ಕಿವಿ ಹಣ್ಣು: ಖಾರ ಹಾಗೂ ಹುಳಿಯಾಗಿರುವ ಹಣ್ಣುಗಳು ಸ್ವಾಭಾವಿಕವಾಗಿ ಜೀರ್ಣ ಕ್ರಿಯೆಯನ್ನು ವೃದ್ಧಿಸುತ್ತವೆ. ಕಿವಿ ಹಣ್ಣು ಆಕ್ಟಿನೈಡೆನ್ ಎಂಬ ಕಿಣ್ವ ಹೊಂದಿರುತ್ತದೆ. ಇದು ಪ್ರೋಟೀನ್ ಜೀರ್ಣಿಸಲು ಸಹಾಯಕ. ಜೀರ್ಣ ಕ್ರಿಯೆ ದೇಹದ ತೂಕ ಹಾಗೂ ಕೊಬ್ಬು ಇಳಿಸಲು ಅತ್ಯಂತ ಅವಶ್ಯಕ.

ಇವುಗಳ ಸೇವನೆಯಿಂದ ಆರೋಗ್ಯದಲ್ಲಿ ಏರುಪೇರಾದಲ್ಲಿ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.

 

click me!