ಗಿನ್ನೆಸ್‌ ದಾಖಲೆ ಸೃಷ್ಟಿಸಿದ ಡೈಮೆಂಡ್‌ ವಾಚ್, ಇದರಲ್ಲಿವೆ ಬರೋಬ್ಬರಿ 17,524 ವಜ್ರಗಳು

By Suvarna News  |  First Published Jan 27, 2023, 5:44 PM IST

ವಜ್ರಗಳಿಂದ ವಿನ್ಯಾಸ ಮಾಡಿದ ಆಭರಣಗಳು ಅದ್ದೂರಿ ಎನಿಸುತ್ತವೆ. ಒಂದೆರಡು ವಜ್ರಗಳೇ ಕ್ಲಾಸಿ ಎನಿಸುವುದಾದರೆ ಸಾವಿರಾರು ವಜ್ರಗಳ ಹರಳುಗಳು ಒಂದೆಡೆ ಸೇರಿದರೆ ಹೇಗಿರಬಹುದು? ಇದಕ್ಕೆ ಉತ್ತರ ವಜ್ರಗಳ ವಾಚ್. 17 ಸಾವಿರಕ್ಕೂ ಅಧಿಕ ವಜ್ರದ ಹರಳುಗಳನ್ನು ಹೊಂದಿರುವ ವಾಚ್‌ ಈಗ ಗಿನ್ನೆಸ್‌ ದಾಖಲೆಗೂ ಸೇರ್ಪಡೆಯಾಗಿದೆ. 
 


ಡೈಮಂಡ್‌ ಅಥವಾ ವಜ್ರಗಳೆಂದರೆ ಎಲ್ಲರಿಗೂ ಒಮ್ಮೆ ಕಿವಿ ನೆಟ್ಟಗಾಗುತ್ತದೆ. ಉಳ್ಳವರಿಗೆ ವಜ್ರಗಳನ್ನು ಹೊಂದುವ ಬಯಕೆಯಾದರೆ, ಇಲ್ಲದವರಿಗೆ ಸುಮ್ಮನೆ ಅದರ ಸೌಂದರ್ಯವನ್ನು, ಹೊಳಪಿನ ವೈಭವನ್ನು ಕಣ್ತುಂಬಿಕೊಳ್ಳುವ ಬಯಕೆ. ಹೀಗಾಗಿ, ವಜ್ರಗಳು ಸಕಲರನ್ನೂ ತಮ್ಮೆಡೆ ಸೆಳೆಯುತ್ತವೆ. ಇನ್ನು, ಸಿಕ್ಕಾಪಟ್ಟೆ ಶ್ರೀಮಂತರಿಗೆ ವಿವಿಧ ರೀತಿಯಲ್ಲಿ ವಜ್ರಗಳನ್ನು ಸಂಗ್ರಹಿಸುವ ಖಯಾಲಿ ಇರುತ್ತದೆ. ವಜ್ರಗಳನ್ನು ಚಿನ್ನದೊಂದಿಗೆ ಹಾರ, ಉಂಗುರ ಅಥವಾ ಕಿವಿಯೋಲೆಗಳಲ್ಲಿ ಧರಿಸುವುದು ಸಾಮಾನ್ಯ. ಆದರೆ, ಸಿರಿವಂತರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ವಜ್ರದ ವಾಚ್‌, ಬ್ರೂಚ್‌ ಮುಂತಾದವುಗಳನ್ನು ಧರಿಸುತ್ತಾರೆ. ಇದೀಗ, ಮೀರತ್‌ ಮೂಲದ ಆಭರಣ ಸಂಸ್ಥೆಯೊಂದು ವಜ್ರದ ಮೂಲಕ ಗಿನ್ನೆಸ್‌ ದಾಖಲೆಯನ್ನೂ ಸೃಷ್ಟಿಸಿದೆ. ವಜ್ರದ ವಾಚ್‌ ವಿನ್ಯಾಸಗೊಳಿಸಿ ದಾಖಲೆ ನಿರ್ಮಿಸಿದೆ. ಇದರಲ್ಲಿ ದಾಖಲೆ ಸೃಷ್ಟಿಸುವಂಥದ್ದೇನಿದೆ ಎನಿಸಬಹುದು, ಈ ವಾಚ್‌ ನಲ್ಲಿ ಅವರು ಬರೋಬ್ಬರಿ 17,524 ವಜ್ರದ ಹರಳುಗಳನ್ನು ಅಳವಡಿಸಿದ್ದಾರೆ! ಇಷ್ಟೆಲ್ಲ ಸಂಖ್ಯೆಯ ಒಂದೇ ಅಳತೆ, ತೂಕ ಹಾಗೂ ಬಣ್ಣದ ವಜ್ರಗಳನ್ನು ವಿನ್ಯಾಸಗೊಳಿಸುವುದು ಅತ್ಯಂತ ಸವಾಲಿನ ಕೆಲಸ.

ಒಂದೇ ವಾಚ್‌ (Watch) ನಲ್ಲಿ ಸಾವಿರಾರು ವಜ್ರದ (Diamond) ಹರಳುಗಳನ್ನು ಕೂರಿಸುವುದು ಸುಲಭಸಾಧ್ಯವಾದ ಕಾರ್ಯವಲ್ಲ. ಸುದೀರ್ಘ ಸಮಯ (Time) ಹಾಗೂ ತಪಸ್ಸಿನಂತಹ ಏಕಾಗ್ರತೆಯನ್ನು ಬಯಸುವ ಕೆಲಸ ಇದು. ಹೀಗಾಗಿ, ಈ ವಾಚ್‌ ತಯಾರಿಕೆಗೆ ಬರೋಬ್ಬರಿ 11 ತಿಂಗಳ ಕಾಲಾವಧಿ ತಗುಲಿದೆ. ಇದಕ್ಕೂ ಮುನ್ನ, 2018ರಲ್ಲಿ 15,858 ವಜ್ರದ ಹರಳುಗಳನ್ನು ಕೂರಿಸಿ ಗಿನ್ನೆಸ್‌ ದಾಖಲೆ ನಿರ್ಮಿಸಲಾಗಿತ್ತು. ಹಾಂಗ್‌ ಕಾಂಗ್‌ ನ ಆಭರಣ ತಯಾರಿಕಾ ಕಂಪೆನಿ ಆರೋ ಶುಮ್‌ ಜ್ಯುವೆಲರಿ ಲಿಮಿಟೆಡ್‌ ಈ ಸಾಧನೆ ಮಾಡಿತ್ತು. ಇದೀಗ, 17 ಸಾವಿರಕ್ಕೂ ಅಧಿಕ ಹರಳುಗಳನ್ನು ಕೂರಿಸಿ ದಾಖಲೆ ಮಾಡಲಾಗಿದೆ. “ಆಭರಣ (Jewellery) ತಯಾರಿಸಿದ ನಮ್ಮ ತಂಡಕ್ಕೆ ಈ ಸಾಧನೆಯಿಂದ ಭಾರೀ ಖುಷಿಯಾಗಿದೆ. ಭಾರತದ ಕಲೆ (Art) ಹಾಗೂ ಪ್ರತಿಭೆಯನ್ನು ಜಗತ್ತಿನ ಎದುರು ಅನಾವರಣಗೊಳಿಸಲು ಇದರಿಂದ ಸಾಧ್ಯವಾಗುತ್ತಿದೆʼ ಎಂದು ವಾಚ್‌ ತಯಾರಿಸಿದ ಮೀರತ್‌ ನ ರೆನಾನಿ ಜ್ಯುವೆಲ್ಸ್‌ ಸಿಇಒ ಹರ್ಷಿತ್‌ ಬನ್ಸಾಲ್‌ (Harshit Bansal) ಹೇಳಿದ್ದಾರೆ. 

Latest Videos

undefined

ಅನಂತ್‌ ಅಂಬಾನಿ ಕುರ್ತಾದಲ್ಲಿ ಕಾರ್ಟಿಯರ್‌ ಪ್ಯಾಂಥರ್‌ ಪದಕ: ಏನಿದರ ಇತಿಹಾಸ? ವಿಶೇಷತೆ?

ಶ್ರಿಂಕಿಯಾ ಎಂದರೆ ಹೂವು: ಸಾವಿರಾರು ವಜ್ರದ ಹರಳುಗಳನ್ನು ಹೊಂದಿರುವ ಈ ವಾಚ್‌ ಹೆಸರು ಶ್ರಿಂಕಿಯಾ! “ಉತ್ತಮ ಹಣೆಬರಹಕ್ಕಾಗಿ ವಾಚ್‌ʼ ಎಂದು ಅಡಿಬರಹ ನೀಡಲಾಗಿದೆ. ಪುರಾತನ ಭಾರತೀಯ (Ancient India) ಪರಂಪರೆಯ ಪ್ರೇರಣೆಯಿಂದ ತಯಾರಿಸಲಾಗಿದೆ. ಶ್ರಿಂಕಿಯಾ (Shrinkia) ಎಂದರೆ ಹೂವು (Flower) ಎಂದರ್ಥ. ಹಾಗೂ ಇದು ಅಷ್ಟೈಶ್ವರ್ಯದ ಮಾತೆ ಲಕ್ಷ್ಮೀದೇವಿಯನ್ನು ಬಿಂಬಿಸುತ್ತದೆ. 
ಗಿನ್ನೆಸ್‌ ದಾಖಲೆ (Guinness Record) ಪ್ರಕಾರ, ಈ ವಿನ್ಯಾಸವನ್ನು ಕೈನಿಂದ (Hand Made) ಮಾಡಲಾಗಿದೆ. ಸ್ಕೆಚ್‌ (Skecth) ಗಳ ಮೂಲಕ ವಿನ್ಯಾಸಗೊಳಿಸಿ ಬಳಿಕ ಹರಳುಗಳನ್ನು ಫಿಕ್ಸ್‌ (Fix) ಮಾಡಲಾಗಿದೆ. ಈ ಮನಮೋಹಕ ವಾಚ್‌ ನಿರ್ಮಾಣಕ್ಕೆ 11 ತಿಂಗಳ ಸಮಯ ಬೇಕಾಗಿದೆ ಎನ್ನುವುದು ವಿಶೇಷ. ಇಷ್ಟು ಶ್ರಮ ಹಾಗೂ ಸಮಯ ವ್ಯಯಿಸಿದ್ದಕ್ಕೆ ಈಗ ಸಾರ್ಥಕತೆ ಲಭಿಸಿದಂತಾಗಿದೆ. 

'ಒಲವಿನ ಉಡುಗೊರೆ' ನೀಡಿದ ಅಂಬಿ ಪುತ್ರ: ಅವೀವಾ ಕೈಯಲ್ಲಿರುವ ಉಂಗುರದ ಬೆಲೆ ಎಷ್ಟು ಗೊತ್ತಾ?

12 ಕಪ್ಪು ಹರಳುಗಳು: ವಜ್ರದ ವಾಚ್‌ 373.030 ಗ್ರಾಮ್‌ ಭಾರವಿದ್ದು, 54.70 ಕ್ಯಾರಟ್‌ (Carrot) ನೈಸರ್ಗಿಕ (Natural) ಹ್ಯಾಂಡ್‌ ಕಟ್‌ ವಜ್ರಗಳನ್ನು ಹೊಂದಿದೆ. ವಾಚ್‌ ನಲ್ಲಿ 17,512 ಬಿಳಿ (White) ವಜ್ರಗಳ ಹರಳು ಮತ್ತು 12 ಕಪ್ಪು (Black) ವಜ್ರಗಳ ಹರಳುಗಳನ್ನು ಕೂರಿಸಲಾಗಿದೆ. ಎಲ್ಲ ಹರಳುಗಳಿಗೆ ಕಿಂಬರ್ಲಿ ಪ್ರೊಸೆಸ್‌ ಸರ್ಟಿಫಿಕೇಷನ್‌ ಸ್ಕೀಮ್‌ ಅಡಿ ಮಾನ್ಯತೆ (Certification) ಲಭಿಸಿದೆ. ಹೀಗಾಗಿ, ಎಲ್ಲ ಹರಳುಗಳಿಗೂ ದೃಢೀಕರಣವೂ ಇರುವುದರಿಂದ ಯಾವುದೇ ಸಮಸ್ಯೆ ಇಲ್ಲ. ಇಂಟರ್‌ ನ್ಯಾಷನಲ್‌ ಜೆಮಾಲಾಜಿಕಲ್‌ ಇನ್‌ಸ್ಟಿಟ್ಯೂಟ್‌ ಲ್ಯಾಬ್‌ ಈ ವಜ್ರಗಳು ನೈಜತೆ (Actual) ಹೊಂದಿರುವುದಾಗಿ ಪ್ರಮಾಣಪತ್ರವನ್ನೂ ನೀಡಿದೆ.

click me!