ಹೊಟೇಲ್‌ನಂತೆ ಪರ್ಫೆಕ್ಟ್‌ ಆಗಿ ಪನ್ನೀರ್‌ ಕಟ್‌ ಆಗ್ಬೇಕಾ? ಈ ಟ್ರಿಕ್ಸ್‌ ಫಾಲೋ ಮಾಡಿ

Published : Sep 17, 2026, 02:55 PM IST
Paneer Cutting Tips

ಸಾರಾಂಶ

Paneer Cutting Tips : ಚಾಕುವಿನಿಂದ ಪನ್ನೀರ್‌ ಕತ್ತರಿಸೋದು ಕಷ್ಟ. ಪುಡಿಯಾಗದೆ ಪನ್ನೀರ್‌ ಸುಂದರವಾಗಿ ಕಟ್‌ ಆಗ್ಬೇಕು ಅಂದ್ರೆ ನೀವು ಚಾಕು ಬದಲು ಇದನ್ನು ಬಳಸಿ.

ಪನ್ನೀರ್‌ ನಿಂದ ಮಾಡಿದ ಡಿಶ್‌ ತಿನ್ನೋಕೆ ಖುಷಿ. ಆದ್ರೆ ಅದನ್ನು ಸರಿಯಾಗಿ ಕತ್ತರಿಸೋದು ದೊಡ್ಡ ತಲೆಬಿಸಿ. ಚಾಕುವಿನಿಂದ ಪನ್ನೀರ್‌ ಕತ್ತರಿಸೋದು ಕಷ್ಟ. ಚಾಕು ಟಚ್‌ ಆಗ್ತಿದ್ದಂತೆ ಪನ್ನೀರ್‌ ಪುಡಿಯಾಗುತ್ತೆ. ಅದರಲ್ಲೂ ಪನೀರ್ ತುಂಬಾ ಸಾಫ್ಟ್ ಆಗಿದ್ದರೆ ಒಂದೇ ಗಾತ್ರದ ತುಂಡುಗಳನ್ನು ಮಾಡೋದು ಕಷ್ಟ. ಪನ್ನೀರ್‌ ಸುಲಭವಾಗಿ ಕಟ್‌ ಆಗ್ಬೇಕು ಅಂದ್ರೆ ಈ ಟ್ರಿಕ್ಸ್‌ ಫಾಲೋ ಮಾಡಿ.

ಚಾಕು ಬದಲು ದಾರ ಬಳಸಿ

ನೀವು ಪನ್ನೀರನ್ನು ಒಂದೇ ಶೇಪ್‌ ನಲ್ಲಿ ಕತ್ತರಿಸಲು ಪ್ರಯತ್ನಿಸುತ್ತಿದ್ದರೆ ಚಾಕು ಬದಲು ದಾರವನ್ನು ಬಳಸಿ. ಮೊದಲು ಪನೀರ್ ಅನ್ನು ಒಂದು ಪ್ಲೇಟ್ ಅಥವಾ ಚಾಪಿಂಗ್ ಬೋರ್ಡ್ ಮೇಲೆ ಇಟ್ಟುಕೊಳ್ಳಿ. ಈಗ ಒಂದು ಸ್ವಚ್ಛವಾದ, ಗಟ್ಟಿಯಾದ ದಾರ ತೆಗೆದುಕೊಳ್ಳಿ. ಎಲ್ಲಿ ಕಟ್ ಮಾಡಬೇಕು ಅಂದ್ಕೊಂಡಿದ್ದೀರೋ ಆ ಜಾಗದ ಕೆಳಗಿನಿಂದ ದಾರವನ್ನು ಹಾಯಿಸಿ. ನಂತರ ದಾರದ ಎರಡೂ ತುದಿಗಳನ್ನು ಮೇಲಕ್ಕೆ ತಂದು ಕ್ರಾಸ್ ಮಾಡಿ ನಿಧಾನವಾಗಿ ಎಳೆಯಿರಿ. ದಾರ ಪನೀರ್ನ ಮಧ್ಯದಿಂದ ಹಾದುಹೋಗಿ ಅದನ್ನು ಕಟ್ ಮಾಡುತ್ತೆ. ಚಾಕುವಿನಂತೆ ಹೆಚ್ಚು ಒತ್ತಡ ಹಾಕಬೇಕಾಗಿಲ್ಲ. ನಿಮಗೆ ಬೇಕಾದಷ್ಟು ದಪ್ಪದ ತುಂಡುಗಳನ್ನು ಇದೇ ರೀತಿ ಕತ್ತರಿಸಿಕೊಳ್ಳಬಹುದು.

ಇನ್ನು ದಾರದಿಂದ ಕತ್ತರಿಸಿದಾಗ ಪನೀರ್ ಯಾಕೆ ಕಡಿಮೆ ಪುಡಿಯಾಗುತ್ತೆ ಅಂದ್ರೆ ಚಾಕುವಿನಿಂದ ಕತ್ತರಿಸುವಾಗ ಪನೀರ್ ಮೇಲೆ ಒತ್ತಡ ಬೀಳುತ್ತೆ. ಅದರಲ್ಲೂ ಮೃದುವಾದ ಪನೀರ್ ಅನ್ನು ಚಾಕುವಿನಿಂದ ಮುಂದೆ-ಹಿಂದೆ ಆಡಿಸಿ ಕತ್ತರಿಸಿದಾಗ ಅದು ಒತ್ತಡಕ್ಕೆ ಸಿಕ್ಕಿ ಪುಡಿಯಾಗುತ್ತದೆ. ಆದರೆ ದಾರದಿಂದ ಕತ್ತರಿಸುವಾಗ ಒಂದೇ ಜಾಗದಲ್ಲಿ ನಿಧಾನವಾಗಿ ಕಟ್ ಆಗುವುದರಿಂದ ಪನೀರ್ ಮೇಲೆ ಹೆಚ್ಚಿನ ಒತ್ತಡ ಬೀಳೋದಿಲ್ಲ.

ಆದ್ರೆ ಪನೀರ್ ಪುಡಿಪುಡಿಯಾಗೋದಕ್ಕೆ ಕತ್ತರಿಸುವ ವಿಧಾನ ಮಾತ್ರ ಕಾರಣ ಅಲ್ಲ. ಪನೀರ್ ಎಷ್ಟು ಸಾಫ್ಟ್ ಇದೆ, ಅದರಲ್ಲಿ ಎಷ್ಟು ನೀರಿದೆ ಅನ್ನೋದೂ ಮುಖ್ಯ. ಪನೀರ್ ತುಂಬಾ ಸಾಫ್ಟ್ ಆಗಿದ್ದರೆ ಕತ್ತರಿಸುವ ಮೊದಲು ಸ್ವಲ್ಪ ಹೊತ್ತು ಫ್ರಿಜ್ನಲ್ಲಿ ಇಡಬಹುದು. ಇದರಿಂದ ಪನೀರ್ ಸ್ವಲ್ಪ ಸೆಟ್ ಆಗಿ ಕತ್ತರಿಸಲು ಸುಲಭವಾಗುತ್ತೆ. ಪನೀರ್ ಮೇಲಿರುವ ಹೆಚ್ಚುವರಿ ನೀರನ್ನು ಕಿಚನ್ ಪೇಪರ್ ಅಥವಾ ಸ್ವಚ್ಛವಾದ ಬಟ್ಟೆಯಿಂದ ನಿಧಾನವಾಗಿ ಒರೆಸಿಕೊಳ್ಳಬಹುದು.

ಇನ್ನು ದಾರ ಬಳಸುವಾಗ ಅದು ಸ್ವಚ್ಛವಾಗಿರಬೇಕು ಮತ್ತು ಗಟ್ಟಿಯಾಗಿರಬೇಕು. ಕತ್ತರಿಸುವಾಗ ದಾರ ತುಂಡಾಗದಂತೆ ನೋಡಿಕೊಳ್ಳಿ. ಪನೀರ್ ಟಿಕ್ಕಾ, ಫ್ರೈ ಪನೀರ್ ಅಥವಾ ಗ್ರಿಲ್ ಮಾಡಲು ಒಂದೇ ಗಾತ್ರದ ತುಂಡುಗಳು ಬೇಕಾದಾಗ ಈ ವಿಧಾನ ಉಪಯೋಗಕ್ಕೆ ಬರುತ್ತದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಗಲೀಜಾಗಿರುವ ಮಿಕ್ಸರ್, ಸ್ವಿಚ್ ಬೋರ್ಡ್, ಸ್ಟೌವ್, ಫ್ರಿಡ್ಜ್ ಕ್ಲೀನಿಂಗ್‌ನಿಂದ ಹಿಡಿದು ಜಿರಳೆ ಕಾಟಕ್ಕೆ ಬ್ರೇಕ್ ಹಾಕಲು ವ್ಯಾಸಲೀನ್ ಸಾಕು
ಪಕ್ಕಾ ದಾವಣಗೆರೆ ಸ್ಟೈಲ್ ಬೆಣ್ಣೆ ದೋಸೆ ಮನೆಯಲ್ಲೇ ಮಾಡ್ಬೇಕಾ? ಮರಿದೇ ಈ ಪದಾರ್ಥ ಹಾಕಿ