
ಉದ್ಯೋಗದಲ್ಲಿರುವವರಿಗೆ ಅಥವಾ ಬ್ಯಾಚುಲರ್ಸ್‌ಗಳಿಗೆ ಪ್ರತಿದಿನ ಅಡುಗೆ ಮಾಡುವುದು ದೊಡ್ಡ ಕೆಲಸ. ಅದರಲ್ಲೂ ಭಾನುವಾರ ಅಥವಾ ರಜಾದಿನಗಳಲ್ಲಿ ರುಚಿಯಾದ ಚಿಕನ್ ಗ್ರೇವಿ ತಿನ್ನಬೇಕು ಎನಿಸಿದಾಗ ಮಸಾಲೆ ರುಬ್ಬುವ ಕೆಲಸವೇ ದೊಡ್ಡ ಕಿರಿಕಿರಿ. ಆದರೆ, ಇನ್ಮುಂದೆ ಮಸಾಲೆ ರುಬ್ಬದೇ ಕೇವಲ 10 ನಿಮಿಷಗಳಲ್ಲಿ ಹೋಟೆಲ್ ಶೈಲಿಯ ಅದ್ಭುತ ರುಚಿಯ ಚಿಕನ್ ಗ್ರೇವಿ ತಯಾರಿಸಬಹುದು. ಅತ್ಯಂತ ಕಡಿಮೆ ಸಮಯದಲ್ಲಿ ಕುಕ್ಕರ್‌ನಲ್ಲಿ ಸುಲಭವಾಗಿ ಮಾಡುವ ಈ ಸಿಂಪಲ್ ರೆಸಿಪಿ ವಿವರ ಇಲ್ಲಿದೆ.
ಚಿಕನ್: ಅರ್ಧ ಕೆ.ಜಿ (ಚೆನ್ನಾಗಿ ತೊಳೆಯಿರಿ)
ಈರುಳ್ಳಿ: 2 (ಸಣ್ಣಗೆ ಹೆಚ್ಚಿದ್ದು)
ಟೊಮೆಟೊ: 2 (ಸಣ್ಣಗೆ ಹೆಚ್ಚಿದ್ದು)
ಶುಂಠಿ-ಬೆಳ್ಳುಳ್ಳಿ ಪೇಸ್ಟ್: 1 ದೊಡ್ಡ ಚಮಚ
ಅರಿಶಿನ ಪುಡಿ: ಅರ್ಧ ಚಮಚ
ಅಚ್ಚ ಖಾರದ ಪುಡಿ: 1 ರಿಂದ 2 ಚಮಚ (ಖಾರಕ್ಕೆ ತಕ್ಕಂತೆ)
ಧನಿಯಾ ಪುಡಿ: 1 ಚಮಚ
ಗರಂ ಮಸಾಲ: ಅರ್ಧ ಚಮಚ
ಎಣ್ಣೆ ಹಾಗೂ ಉಪ್ಪು: ರುಚಿಗೆ ತಕ್ಕಷ್ಟು
ಒಗ್ಗರಣೆ ಮತ್ತು ಫ್ರೈ: ಮೊದಲು ಪ್ರೆಶರ್ ಕುಕ್ಕರ್‌ನಲ್ಲಿ 2 ಚಮಚ ಎಣ್ಣೆ ಹಾಕಿ ಕಾಯಿಸಿ. ಎಣ್ಣೆ ಕಾದ ನಂತರ ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಗೂ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ, ಈರುಳ್ಳಿ ಗೋಲ್ಡನ್ ಬ್ರೌನ್ ಬಣ್ಣಕ್ಕೆ ಬರುವವರೆಗೆ ಚೆನ್ನಾಗಿ ಬಾಡಿಸಿ. ಬಳಿಕ ಸಣ್ಣಗೆ ಹೆಚ್ಚಿದ ಟೊಮೆಟೊ ಸೇರಿಸಿ ಅದು ಮೆತ್ತಗಾಗುವವರೆಗೂ ಬೇಯಿಸಿ.
ಚಿಕನ್ ಮತ್ತು ಮಸಾಲೆ ಸೇರ್ಪಡೆ: ಈಗ ತೊಳೆದು ಇಟ್ಟುಕೊಂಡ ಚಿಕನ್ ತುಂಡುಗಳನ್ನು ಕುಕ್ಕರ್‌ಗೆ ಹಾಕಿ. ನಂತರ ಅರಿಶಿನ ಪುಡಿ, ಅಚ್ಚ ಖಾರದ ಪುಡಿ, ಧನಿಯಾ ಪುಡಿ, ಗರಂ ಮಸಾಲ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. 2 ನಿಮಿಷಗಳ ಕಾಲ ಎಣ್ಣೆಯಲ್ಲೇ ಮಸಾಲೆಗಳ ಜೊತೆ ಚಿಕನ್ ಅನ್ನು ಫ್ರೈ ಮಾಡಿ.
ಎಣ್ಣೆಯಲ್ಲಿ ಫ್ರೈ ಆದ ನಂತರ ಅರ್ಧ ಗ್ಲಾಸ್ ನೀರು ಸೇರಿಸಿ ಚೆನ್ನಾಗಿ ಕಲಸಿ. ಕುಕ್ಕರ್ ಮುಚ್ಚಳ ಮುಚ್ಚಿ ಮಧ್ಯಮ ಉರಿಯಲ್ಲಿ 2 ವಿಸಿಲ್ ಕೂಗಿಸಿ. ಕುಕ್ಕರ್ ಪ್ರೆಶರ್ ಪೂರ್ತಿ ಹೋದ ಮೇಲೆ ಮುಚ್ಚಳ ತೆಗೆದರೆ, ಘಮಘಮಿಸುವ, ಮಸಾಲೆಯುಕ್ತ ಹೋಟೆಲ್ ಶೈಲಿಯ ಚಿಕನ್ ಗ್ರೇವಿ ಸಿದ್ಧವಾಗಿರುತ್ತದೆ! ಇದನ್ನು ಬಿಸಿಬಿಸಿ ಅನ್ನ, ಚಪಾತಿ, ಪರೋಟ ಅಥವಾ ದೋಸೆ ಜೊತೆ ಸವಿಯಲು ಅತ್ಯಂತ ರುಚಿಕರವಾಗಿರುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.