
ಚಳಿಗಾಲದಲ್ಲಿ ಕಬಾಬ್ ತಿನ್ನಲು ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ? ಅದರಲ್ಲೂ ಬಾಯಲ್ಲಿ ನೀರೂರಿಸುವ ಬಾಯಲ್ಲಿಟ್ಟರೆ ಕರಗುವಷ್ಟು ಗರಿಗರಿಯಾದ ಕಾಬಬ್ ಎಂದರೆ ಕೇಳಬೇಕೆ? ರೊಟ್ಟಿ, ಚಪಾತಿ, ಅಥವಾ ಪರಾಠ ಜೊತೆಗೆ ಬಿಸಿಬಿಸಿಯಾದ ಘಮ ಘಮಿಸುವ ಕಬಾಬ್ ತಿನ್ನುವುದೆಂದರೆ ಅದನ್ನ ತಿಂದೇ ಅನುಭವಿಸಬೇಕು. ಅಂತಹ ರುಚಿರುಚಿಯಾದ ಕಬಾಬ್‌ಗಳಲ್ಲಿ ಕಲೌಟಿ ಕಬಾಬ್ ಹೆಚ್ಚು ರುಚಿಕರ. ಗಲೌಟಿ ಕಬಾಬ್ ಎಂದಾದರೂ ತಿಂದಿದ್ದೀರಾ?
ಇದನ್ನೂ ಓದಿ: ಬಾಯಲ್ಲಿಟ್ಟರೆ ಕರಗುವ ಗರಿಗರಿ ಪಡ್ಡು ಮಾಡೋದು ಹೇಗೆ? ಇಲ್ಲಿದೆ ಹೊಸ ರೆಸಿಪಿ! ಇಂದೇ ಟ್ರೈ ಮಾಡಿ
ಗಲೌಟಿ ಕಬಾಬ್ ಇಂದು ನಿನ್ನೆಯದಲ್ಲ, ಅದಕ್ಕೆ ದೊಡ್ಡ ಇತಿಹಾಸವೇ ಇದೆ. ಇದರ ಹುಟ್ಟಿನ ಹಿನ್ನೆಲೆ ಹುಡುಕುತ್ತಾ ಹೋದರೆ ಅದು ಅವಧ್‌ನ ರಾಜಮನೆತನದ ಅಡುಗೆಮನೆಗೆ ಕರೆದೊಯ್ಯುತ್ತದೆ! ಹೌದು ಈ ಗಲೌಟಿ ಕಬಾಬ್‌ಗೆ ತನ್ನದೇ ಆದ ವಿಶೇಷ ಇತಿಹಾಸವಿದೆ, ರುಚಿಯಿದೆ, ಬಾಯಿಗೆ ಹಾಕಿದ ತಕ್ಷಣ ಕರಗುವ ಅದರ ವಿಶಿಷ್ಟ ಗುಣ, ರುಚಿಗೆ ಮನಸೋಲದವರೇ ಇಲ್ಲ. ಆದರೆ ಇಷ್ಟೊಂದು ಮೃದುವಾಗಿ ಕಬಾಬ್ ತಯಾರಿಸುವುದು ಎಲ್ಲರಿಗೂ ಬರುವುದಿಲ್ಲ. ಅದು ಎಲ್ಲರಿಗೂ ಸುಲಭದ ಕೆಲಸವಲ್ಲ. ಏಕೆಂದರೆ ಗಲೌಟಿ ಕಬಾಬ್ ತಯಾರಿಸುವಾಗ ಸಾಕಷ್ಟು ಶ್ರಮ, ತಾಳ್ಮೆ ಸರಿಯಾದ ರೆಸಿಪಿ, ಮಾಡುವ ವಿಧಾನ ತುಂಬಾ ಮುಖ್ಯ.
ಕಬಾಬ್‌ನಲ್ಲಿ ದೋಸೆಗಳಂತೆಯೇ ಸಾಕಷ್ಟು ವರೈಟಿಗಳಿವೆ. ಆದರೆ ಅವುಗಳೆಲ್ಲ ಒಂದು ರುಚಿಯಾದರೆ ಗಲೌಟಿ ಕಬಾಬ್ ರುಚಿಯೇ ಇನ್ನೊಂದು. ಇದರ ರುಚಿ ಮೃದುತ್ವಕ್ಕೆ ಸಾಟಿಯಿಲ್ಲ. ಗಲೌಟಿ ಕಬಾಬ್ ಮೃದುವಾಗುವಂತೆ, ಬಾಯಲಿಟ್ಟರೆ ಕರಗುವಂತೆ ಮಾಡುವುದು ಹೇಗೆ? ಅಂತೀರಾ? ಬನ್ನಿ, ಇಲ್ಲೊಬ್ಬ ವಿಶಿಷ್ಟ ಬಾಣಸಿಗರು ಅದರ ಬಗ್ಗೆ ವಿವರಿಸಿದ್ದಾರೆ ತಿಳಿದುಕೊಳ್ಳೋಣ.
ಬಾಣಸಿಗ, ಲೇಖಕಿ ಶೀಬಾ ಡಿ ಸೋಜಾ ಹೇಳುವಂತೆ, ಗಲೌಟಿ ಮೃದುವಾಗಿ, ಗರಿಗರಿಯಾಗಿ ಇರಲು ಮುಖ್ಯ ಕಾರಣವೇ ಅದನ್ನು ತಯಾರಿಸಲು ಬಳಸುವ ಮಾಂಸ. ಸಾಮಾನ್ಯವಾಗಿ ಮಟನ್ ಅಥವಾ ಕುರಿ ಮಾಂಸದಿಂದ ಇದನ್ನ ಮಾಡಲಾಗುತ್ತೆ. ಮೊದಲಿಗೆ ಮಾಂಸವನ್ನು ನುಣ್ಣಗೆ ರುಬ್ಬಿಕೊಂಡು ಪೇಸ್ಟ್ ನಂತೆ ತಯಾರಿಸಿಕೊಳ್ಳಬೇಕು. ಮಾಂಸವನ್ನು ಅತಿ ನುಣ್ಣಗೆ ರುಬ್ಬುವುದರಿಂದ ಅದನ್ನು ಅಗಿಯಲು ಹೆಚ್ಚು ಶ್ರಮ ಬೇಕಾಗುವುದಿಲ್ಲ. ಹೀಗಾಗಿ ಕಬಾಬ್ ಮೃದುವಾಗುತ್ತದೆ ಎಂದು ಹೇಳುತ್ತಾರೆ.
ಇದನ್ನೂ ಓದಿ: Almonds: ದಿನಕ್ಕೆ 22 ಬಾದಾಮಿ ಏಕೆ ತಿನ್ನಬೇಕು? ವಿಶ್ವದಲ್ಲಿ ಅತಿ ಹೆಚ್ಚು ಬೆಳೆಯುವ, ತಿನ್ನುವ ದೇಶ ಯಾವುದು? ಇಲ್ಲಿದೆ ಉತ್ತರ
ಗಲೌಟಿ ಕಬಾಬ್ ಮೃದುವಾಗಿ ಗರಿಗರಿಯಾಗಿರಲು ಮಾಂಸ ಆಯ್ಕೆ ಮುಖ್ಯ. ಇದಕ್ಕಾಗಿ ಕೊಬ್ಬಿನ ಅಂಶ ಹೆಚ್ಚಿರುವ ಮಾಂಸ ಬೇಕು. ಏಕೆಂದರೆ ಇದು ಕಬಾಬ್‌ನ ತೇವಾಂಶ ಜೊತೆಗೆ ಬೆಣ್ಣೆಯಂತೆ ಮೃದುವಾಗಿರುತ್ತದೆ. ಕೊಬ್ಬಿನ ಅಂಶ ಕಡಿಮೆ ಇರುವ ಮಾಂಸ ಬಳಸಿದರೆ ಕಬಾಬ್ ಒಣಗಬಹುದು. ಇದರಿಂದ ಅದರ ರುಚಿ ಮತ್ತು ಮೃದುತ್ವ ಕಡಿಮೆಯಾಗುತ್ತದೆ ಎಂದು ಅವರು ವಿವರಿಸಿದ್ದಾರೆ.
ಗಲೌಟಿ ಕಬಾಬ್ ಗೆ ಹಾಕುವ ಮಸಾಲೆ ಪದಾರ್ಥಗಳ ಮೇಲೆ ಅದರ ರುಚಿ ಅವಲಂಬಿಸಿರುತ್ತದೆ. ಹೀಗಾಗಿ ಗಲೌಟಿ ಕಬಾಬ್‌ಗೆ ಅದರದ್ದೆ ಆದ ವಿಶೇಷ ಪರಿಮಳ ನೀಡುವ ವಿವಿಧ ಮಸಾಲೆಗಳಿವೆ. ಮಸಾಲೆ ಮಾಂಸದ ರುಚಿಗೆ ತಕ್ಕಂತೆ ಸೇರಿಸಬೇಕು. ಹೆಚ್ಚು ಹಾಕಿದರೂ ಕಬಾಬ್‌ನ ರುಚಿ ಕೆಡುತ್ತದೆ. ಕಡಿಮೆಯೂ ಹಾಕಬಾರದು. ಅದಕ್ಕೆ ಹೇಳಿದ್ದು. ಕಬಾಬ್ ಮೃದುತ್ವದ ಅದರ ರುಚಿ ಎಲ್ಲರಿಗೂ ಸಿದ್ಧಿಸುವ ಕಲೆಯಲ್ಲಿ ಇದಕ್ಕಾಗಿ ತುಂಬಾ ಶ್ರಮ, ತಾಳ್ಮೆ ಬೇಕು.
ಇದನ್ನೂ ಓದಿ: Achari Chicken Recipe: ವಿಶಿಷ್ಟ ರುಚಿಯ ಚಿಕನ್ ಸವಿಬೇಕು ಅನಿಸಿದ್ರೆ ಇದನ್ನ ಟ್ರೈ ಮಾಡಿ, ಇಲ್ಲಿದೆ ರೆಸಿಪಿ
ಮಾಂಸ ಇನ್ನಷ್ಟು ಮೃದುವಾಗಿಸಬೇಕೆಂದರೆ ಬೇರೆ ಬೇರೆ ಪದಾರ್ಥಗಳನ್ನ ಬಳಸಲಾಗುತ್ತೆ. ಅವುಗಳಲ್ಲಿ ಹಸಿ ಪಪ್ಪಾಯಿ ಮುಖ್ಯವಾದುದು. ಹಸಿ ಪಪ್ಪಾಯಿಯಲ್ಲಿ ನೈಸರ್ಗಿಕ ಕಿಣ್ವಗಳು ಮಾಂಸದಲ್ಲಿನ ಪ್ರೊಟೀನ್ ಒಡೆದು ಮಾಂಸ ಬೇಗ ಮೃದುವಾಗುವಂತೆ ಮಾಡುತ್ತೆ. ಆದರೆ ಹಸಿ ಪಪ್ಪಾಯಿ ಅತಿಯಾಗಿ ಬಳಸಬಾರದು ಎನ್ನುತ್ತಾರೆ ಶೀಬಾ ಡಿ ಸೋಜಾ.
ಗಲೌಟಿ ಕಬಾಬ್ ಮಾಡುವಾಗ ಅದನ್ನ ಬೇಯಿಸುವುದು ವಿಧಾನವು ಬಹಳ ಮುಖ್ಯ. ಬಾಣಲೆಯಲ್ಲಿ ಅಡುಗೆ ಎಣ್ಣೆಯ ಬದಲು ಸ್ವಲ್ಪ ಶುದ್ಧವಾದ ತುಪ್ಪ ಹಾಕಿ, ಹೆಚ್ಚಿನ ಉರಿಯಲ್ಲಿ ಕಬಾಬ್ ಅನ್ನು ಬೇಯಿಸಲಾಗುತ್ತೆ. ಕಬಾಬ್‌ನ ಹೊರಭಾಗ ಸ್ವಲ್ಪ ಕಂದು ಬಣ್ಣಕ್ಕೆ ತಿರುಗುವವರೆಗೆ ಬೇಯಿಸಬೇಕು. ಹೆಚ್ಚು ಹೊತ್ತು ಬೇಯಿಸಿದರೂ ಕಬಾಬ್ ಒಣಗಿ ಕೆಡುತ್ತದೆ. ಒಳಭಾಗ ಹಸಿಯಾಗಿ, ಮೃದುವಾಗಿಯೇ ಉಳಿಯಬೇಕು.
ಸರಿಯಾದ ವಿಧಾನದಲ್ಲಿ ತಯಾರಿಸಿದ ಗಲೌಟಿ ಕಬಾಬ್ ತನ್ನ ಆಕಾರ, ಬಣ್ಣ, ರುಚಿ, ಸ್ವಾದ, ತುಪ್ಪದ ಪರಿಮಳ ಉಳಿಸಿಕೊಂಡಿರಬೇಕು. ಇವೆಲ್ಲವೂ ಒಟ್ಟಾಗಿ ಸೇರಿ ಅದಕ್ಕೆ ವಿಶೇಷ ರುಚಿ ನೀಡುತ್ತವೆ. ಕಬಾಬ್ ತಿನ್ನುವಾಗ ಈ ಎಲ್ಲಾ ರುಚಿಗಳು ನಿಧಾನವಾಗಿ ನಾಲಿಗೆಗೆ ತಲುಪುತ್ತವೆ. ಇದೇ ಪರ್ಫೆಕ್ಟ್ ಗಲೌಟಿ ಕಬಾಬ್‌ನ ನಿಜವಾದ ವಿಶೇಷತೆ ಎಂದು ಹೇಳಿದ್ದಾರೆ. ಇಷ್ಟೆಲ್ಲ ತಿಳಿದ ಮೇಲೂ ನೀವು ಸುಮ್ಮನಿರಲು ಸಾಧ್ಯವೇ? ಇಂದೇ ಟ್ರೈ ಮಾಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.