
ಅಡುಗೆ ಮನೆ (Kitchen) ಸ್ವಚ್ಛವಾಗಿದ್ರೆ ಮನೆಯಲ್ಲಿರುವ ಪ್ರತಿಯೊಬ್ಬರೂ ಆರೋಗ್ಯವಾಗಿರ್ತಾರೆ. ಒಂದು ಗ್ಲಾಸ್ ನಲ್ಲಿ ನೀರಿಟ್ಟಾಗ, ಆ ಗ್ಲಾಸ್ ಕ್ಲೀನ್ ಇದ್ರೆ ಮಾತ್ರ ನೀರು ಕುಡಿಯೋ ಮನಸ್ಸಾಗುತ್ತೆ. ಅದೇ ಗ್ಲಾಸ್ ಕೊಳಕಾಗಿದ್ರೆ ಬಾಯಾರಿಕೆಯಾದ್ರೂ ನೀರು ಕುಡಿಯೋಕೆ ಮನಸ್ಸು ಬರೋದಿಲ್ಲ. ಅಡುಗೆ ಮನೆಯಲ್ಲಿ ಬಳಸುವ ಪ್ರತಿಯೊಂದು ಪಾತ್ರೆ ಬಳಸ್ತಾ ಬಳಸ್ತಾ ಸವೆಯೋದು ಸಾಮಾನ್ಯ. ಹಾಗೆಯೇ ಕೆಲವೊಬ್ಬರ ಮನೆ ಪಾತ್ರೆಗಳಲ್ಲಿ ಕಲೆಗಳಿರುತ್ವೆ. ವಿಶೇಷವಾಗಿ ತವಾ ಮೇಲೆ ಕಪ್ಪು ಕಲೆ. ಮನೆಗೆ ತಂದ ಹೊಸ ಆಲ್ಯೂಮಿನಿಯಂ ತವಾ, ನಿಧಾನಕ್ಕೆ ಬಣ್ಣ ಬದಲಿಸುತ್ತದೆ. ಅದ್ರ ಮೂಲ ಬಣ್ಣ ಮರೆತು ಹೋಗುವಷ್ಟು ಅದು ಕಪ್ಪಾಗಿರುತ್ತೆ. ಎಣ್ಣೆ ಜಡ್ಡಿನಿಂದ ಕೂಡಿರುವ ತವಾವನ್ನು ಕಸಕ್ಕೆ ಹಾಕಿ ಹೊಸದನ್ನು ತರೋದು ದುಬಾರಿ. ಅದೇ ಹಳೇ ತವಾ ಬಳಸೋಕೆ ಅನೇಕರಿಗೆ ಮನಸ್ಸು ಬರೋದಿಲ್ಲ. ನಿಮ್ಮ ಮನೆ ತವಾ ಕೂಡ ಬಣ್ಣ ಕಳೆದುಕೊಂಡಿದೆ ಅಂತಾದ್ರೆ ಚಿಂತೆ ಮಾಡ್ಬೇಡಿ. ಕೆಲ ಸಿಂಪಲ್ ಟ್ರಿಕ್ಸ್ ಪ್ರಯೋಗ ಮಾಡಿ, ತವಾ ಹಳೆ ಬಣ್ಣಕ್ಕೆ ಮರುಳುವಂತೆ ಮಾಡ್ಬಹುದು.
ಇದಕ್ಕೆ ನೀವು ಗಂಟೆಗಟ್ಟಲೆ ಕುಳಿತು ಉಜ್ಜಬೇಕಾಗಿಲ್ಲ. ಮೈ – ಕೈ ನೋಯಿಸಿ ಕೊಳ್ಬೇಕಾಗಿಲ್ಲ. ಅಡುಗೆ ಮನೆಯಲ್ಲಿರುವ ಕೆಲ ಪದಾರ್ಥ ಬಳಸಿಯೇ ನೀವು ಅಲ್ಯೂಮಿನಿಯಂ (aluminum) ತವಾಕ್ಕೆ ಹೊಳಪು ನೀಡ್ಬಹುದು. ಆಗಾಗ ನೀವು ತವಾ (pan) ಕ್ಲೀನ್ ಮಾಡ್ತಿದ್ದರೆ ಅದು ಹೆಚ್ಚು ಜಿಡ್ಡುಗಟ್ಟೋದಿಲ್ಲ.
ಕಪ್ಪಾದ ಅಲ್ಯೂಮಿನಿಯಂ ತವಾವನ್ನು 10 ನಿಮಿಷದಲ್ಲಿ ಕ್ಲೀನ್ ಮಾಡೋದು ಹೇಗೆ? :
ಬೇಕಾಗುವ ಪದಾರ್ಥ: 1 ಚಮಚ ಡಿಟರ್ಜೆಂಟ್ ಪೌಡರ್, 1 ಚಮಚ ಅಡಿಗೆ ಸೋಡಾ. ಒಂದು ನಿಂಬೆ ಹಣ್ಣು ಮತ್ತೆ ನೀರು.
ತವಾ ಕ್ಲೀನ್ ಮಾಡುವ ವಿಧಾನ : ಮೊದಲು ಗ್ಯಾಸ್ ಹಚ್ಚಿ ಅದರ ಮೇಲೆ ತವಾ ಇಡಿ. ತವಾ ಬಿಸಿಯಾಗ್ಲಿ. ತವಾ ಬಿಸಿ ಆಗ್ತಿದ್ದಂತೆ ಅದಕ್ಕೆ ನೀರನ್ನು ಹಾಕಿ. ಡಿಟರ್ಜೆಂಟ್ ಪೌಡರ್, ಅಡುಗೆ ಸೋಡಾವನ್ನು ಹಾಕಿ. ಕತ್ತರಿಸಿದ ನಿಂಬೆ ಹಣ್ಣನ್ನು ಅದಕ್ಕೆ ಹಾಕಿ. ತವಾ ಮೇಲಿರುವ ಮಿಶ್ರಣವನ್ನು ಕುದಿಯಲು ಬಿಡಿ. ನಿಧಾನವಾಗಿ ಇದು ಬಣ್ಣ ಬಿಡೋದನ್ನು ನೀವು ಕಾಣ್ಬಹುದು. ಸ್ಪೂನ್ ಸಹಾಯದಿಂದ ನಿಂಬೆ ಹಣ್ಣನ್ನು ತವಾ ಮೇಲೆ ಸರಿಯಾಗಿ ಉಜ್ಜಬೇಕು. ಕೆಲ ನಿಮಿಷದ ನಂತ್ರ ಗ್ಯಾಸ್ ಬಂದ್ ಮಾಡಿ. ಈಗ ಅಡುಗೆ ಸೋಡಾ ಮಿಶ್ರಣದ ನೀರನ್ನು ಕ್ಲೀನ್ ಮಾಡಿ ಶುದ್ಧ ನೀರನ್ನು ಹಾಕಿ ಸ್ಟೀಲ್ ಸ್ಕ್ರಬ್ಬರ್ ನಲ್ಲಿ ತವಾವನ್ನು ಸ್ಕ್ರಬ್ ಮಾಡಿ. ನೀವು ಬಳಸುವ ಯಾವುದೇ ಡಿಶ್ ವಾಶ್ ಬಳಸಿ ಸ್ಕ್ರಬ್ ಮಾಡ್ಬಹುದು. ಐದರಿಂದ ಹತ್ತು ನಿಮಿಷದಲ್ಲಿ ನಿಮ್ಮ ತವಾ ಹಳೆ ಬಣ್ಣಕ್ಕೆ ಮರಳುತ್ತದೆ.
ಈ ಮ್ಯಾಜಿಕ್ ಹೇಗೆ ನಡೆಯುತ್ತೆ? : ಅಡುಗೆ ಸೋಡಾವನ್ನು ಕ್ಲೀನಿಂಗ್ ರಾಜ ಅಂತಾನೇ ಕರೆಯಲಾಗುತ್ತದೆ. ಯಾವುದೇ ಪಾತ್ರೆಯನ್ನು ಸ್ವಚ್ಛಗೊಳಿಸಲು ಅಡುಗೆ ಸೋಡಾ ಉತ್ತಮ ಆಯ್ಕೆ. ಇದು ತವಾ ಮೇಲಿರುವ ಸಣ್ಣ ಕಲೆಗಳನ್ನು ಸಡಿಲಗೊಳಿಸುತ್ತದೆ. ಇನ್ನು ನಿಂಬೆಹಣ್ಣು ನೈಸರ್ಗಿಕ ಆಮ್ಲವಾದ ಸಿಟ್ರಿಕ್ ಆಮ್ಲವನ್ನು ಹೊಂದಿರುತ್ತದೆ. ಇದು ಗ್ರೀಸ್ ಮತ್ತು ಎಣ್ಣೆಯನ್ನು ಒಡೆಯುವಲ್ಲಿ ಸಹ ಬಹಳ ಪರಿಣಾಮಕಾರಿಯಾಗಿದೆ. ಬಿಸಿ ಪ್ಯಾನ್ ಮೇಲೆ ಅಡಿಗೆ ಸೋಡಾ ಮತ್ತು ಡಿಟರ್ಜೆಂಟ್ ಸೇರಿದಾಗ ಪರಿಣಾಮ ಹೆಚ್ಚಾಗಿರುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.