ಕಲಾವಿದರ ಬದುಕು ಸಂಕೀರ್ಣತೆ, ಸಂದಿಗ್ಧತೆಯಲ್ಲಿ ಸಾಗಿದೆ: ಸುಚೇಂದ್ರ ಪ್ರಸಾದ್‌

By Govindaraj SFirst Published Aug 9, 2022, 12:25 AM IST
Highlights

ಕಲೆ ಒಂದು ತಪಸ್ಸು ಇದ್ದಂತೆ, ಕಲಾಯಾನ ಅಷ್ಟು ಸುಲಭವಲ್ಲ ಕಲಾವಿದರನ್ನೂ ಹೆಕ್ಕಿ ತೆಗೆಯುವುದೂ ಸುಲಭವಲ್ಲ ಎಂದು ಸಂಸ್ಕಾರ ಭಾರತಿ ಅಧ್ಯಕ್ಷರು ಹಾಗೂ ಚಿತ್ರನಟ ಸುಚೇಂದ್ರ ಪ್ರಸಾದ್‌ ಹೇಳಿದರು. 

ದಾವಣಗೆರೆ (ಆ.09): ಕಲೆ ಒಂದು ತಪಸ್ಸು ಇದ್ದಂತೆ, ಕಲಾಯಾನ ಅಷ್ಟು ಸುಲಭವಲ್ಲ ಕಲಾವಿದರನ್ನೂ ಹೆಕ್ಕಿ ತೆಗೆಯುವುದೂ ಸುಲಭವಲ್ಲ ಎಂದು ಸಂಸ್ಕಾರ ಭಾರತಿ ಅಧ್ಯಕ್ಷರು ಹಾಗೂ ಚಿತ್ರನಟ ಸುಚೇಂದ್ರ ಪ್ರಸಾದ್‌ ಹೇಳಿದರು. ನಗರದ ಹೈಸ್ಕೂಲ್‌ ಮೈದಾನದಲ್ಲಿನ ಜಿಲ್ಲಾ ಶಿಕ್ಷಣ ತರಬೇತಿ ಕೇಂದ್ರದ ಆವರಣದಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿ, ಜಿಲ್ಲಾ ಸಂಸ್ಕಾರ ಭಾರತಿ ವತಿಯಿಂದ ಆಯೋಜಿಸಿದ ಫೆಲೋಶಿಪ್‌ ಪ್ರದಾನ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿ ಕಲಾವಿದರು ಆನಂದ ಪಡುವುದು ಕಷ್ಟವಾಗಿದೆ. 

ಪ್ರತಿ ಹಂತದ ಎಡರು ತೊಡರನ್ನು ಸ್ವೀಕರಿಸಿ ಬದುಕು ಸಾಗಿಸುತ್ತಾ ಬಂದಿದ್ದಾರೆ ಎಂದರು. ಮೋಕ್ಷಕ್ಕೆ ಕಾರಣವಾಗಿದ್ದೇ ನಿಜವಾದ ವಿದ್ಯೆ.ಕಲೆ ವಿದ್ಯೆ ಇಲ್ಲದವರು ಪಶುವಿಗೆ ಸಮಾನ ಎಂದು ಹಿರಿಯರು ಹೇಳುತ್ತಿದ್ದರು. ಸಂಕೀರ್ಣತೆ, ಸಂದಿಗ್ಧತೆಯಲ್ಲಿಯೂ ಕಲಾವಿದರು ಬದುಕು ಸಾಗಿಸುತ್ತಾರೆ. ಅಕಾಡೆಮಿ ಕಲಾವಿದರನ್ನು ಗುರುತಿಸಿರುವುದು ಉತ್ತಮ ಕಾರ್ಯ ಈ ಉಪಕ್ರಮ ನಿರಂತರತೆ ಪಡೆಯಲಿ ಕನಸು ಸಾಕಾರಗೊಳ್ಳಲಿ ಎಂದು ಹಾರೈಸಿದರು.

Davanagere; ಅಧಿಕಾರಿಗಳ ದಾಳಿ, ಕಾಳಸಂತೆಗೆ ಮಾರಾಲು ಇಟ್ಟಿದ್ದ ಅಕ್ರಮ ಪಡಿತರ ಪತ್ತೆ!

ಮಕ್ಕಳಿಗೆ ಕಲೆ ಮನನ ಮಾಡಿಸಿ: ದಾವಣಗೆರೆ ವಿವಿ ಕುಲಪತಿ ಪ್ರೊ.ಬಿ.ಡಿ.ಕುಂಬಾರ ಮಾತನಾಡಿ, ರಾಜ್ಯದ ಪ್ರತಿ ಭಾಗದಿಂದ ಹಿರಿಯ ಕಲಾವಿದರನ್ನು ಗುರುತಿಸಿ ಫೆಲೋಶಿಪ್‌ ನೀಡಲಾಗಿದೆ. ರಾಜ್ಯದ ವಿವಿಧ ವಿಭಾಗದಿಂದ ಕಲಾವಿದರನ್ನು ಪರಿಗಣಿಸಿರುವುದು ಉತ್ತಮ ಕಾರ್ಯ. ಇಂದು ಫೆಲೋಶಿಪ್‌ ಪಡೆದವರು ಚಿತ್ರಕಲಾವಿದರಿಗೆ ಮಾದರಿಯಾಗಿದ್ದಾರೆ. ಶಾಲೆ, ಕಾಲೇಜು ವಿವಿಗಳಲ್ಲಿ ಇಂದು ರೋಲ್‌ ಮಾಡೆಲ್‌ ಆಗುವಂತಹ ಸಾಧನೆ ಮಾಡಬೇಕು ಎಂದರು. ದಾವಣಗೆರೆ ದೃಶ್ಯಕಲಾ ಕಾಲೇಜಿನಲ್ಲಿ ಸಾವಿರಾರು ಜನ ಕಲಾವಿದರು ಹೊರಬಂದಿದ್ದಾರೆ. ದೇಶ ವಿದೇಶಗಳಲ್ಲಿ ಕಲಾವಿದರು ಹೆಸರು ಪಡೆದಿದ್ದಾರೆ. ಕಲಾವಿದರಿಗೆ ಆಸಕ್ತಿ ಅಷ್ಟೇ ಅಲ್ಲ ಮಕ್ಕಳಿಗೆ ಆ ಕಲೆ ಮನನ ಮಾಡಿಸಿದರೆ ನೆನಪಿನಲ್ಲಿ ಉಳಿಯಲು ಸಾಧ್ಯ ಎಂದರು.

ಕಲೆಯ ಸಮಗ್ರ ಮಾಹಿತಿ: ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಡಿ.ಮಹೇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿ, ಶಿಕ್ಷಣ ಹಾಗೂ ಪ್ರತಿಭೆಯ ಆಧಾರದಲ್ಲಿ ಮಾನವನಿಗೆ ಬೆಲೆ ಸಿಗುತ್ತಿದೆ. ಸಾಧನೆಗಾಗಿ ಕೆಲವರು ತಮ್ಮ ಜೀವನ ಮುಡಿಪಾಗಿಡುತ್ತಾರೆ. ದೈವದತ್ತವಾಗಿ ಬಂದ ನೈಪುಣ್ಯತೆ ಇರುತ್ತದೆ. ಕಲೆ ಕೇವಲ ಗೋಡೆ ಮೇಲೆ ಕಲೆ ರಚನೆ ಮಾಡುವುದಲ್ಲ. ಈ ವಿಚಾರ ಸಂಕಿರಣದಲ್ಲಿ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿ ಕಲೆಯ ಸಮಗ್ರ ಮಾಹಿತಿ ನೀಡಲಾಗುವುದು ಇದನ್ನು ಬಳಕೆ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ಜಮಖಂಡಿಯ ಹಿರಿಯ ಕಲಾವಿದ ವಿಜಯ ಸಿಂಧೂರ, ಕಾಸರಗೋಡಿನ ಪಿ.ಎಸ್‌ ಪುಂಚಿತ್ತಾಯ, ಕಲಬುರ್ಗಿಯ ಪ್ರೊ.ವಿ.ಜಿ ಅಂದಾನಿ, ರಾಯಚೂರಿನ ಎಚ್‌.ಎಚ್‌ ಮ್ಯಾದಾರ, ಧಾರವಾಡದ ಎನ್‌.ಆರ್‌ ನಾಯ್ಕರ್‌, ತುಮಕೂರಿನ ಪ್ರಭು ಹರಸೂರು, ಮೈಸೂರಿನ ಶ್ರೀಹರಿ ಅವರುಗಳಿಗೆ ಫೆಲೋಶಿಪ್‌ ಪ್ರದಾನ ಮಾಡಲಾಯಿತು. ಸಮಾರಂಭದಲ್ಲಿ ಸಂಸ್ಕಾರ ಭಾರತಿ ಜಿಲ್ಲಾಧ್ಯಕ್ಷ ಮಹಾಲಿಂಗಪ್ಪ, ಡಯಟ್‌ ಕಾಲೇಜು ಉಪನಿರ್ದೇಶಕ ಎಚ್‌.ಕೆ.ಲಿಂಗರಾಜ್‌ ಇತರರು ಪಾಲ್ಗೊಂಡಿದ್ದರು.

ಸಿದ್ದರಾಮೋತ್ಸವದ ಬಳಿಕ ಮಠಗಳಿಗೆ ಭೇಟಿ ನೀಡಿ ಸಿದ್ದರಾಮಯ್ಯ ಚುನಾವಣೆಗೆ ಸಜ್ಜಾದರಾ?

ಶಿಲ್ಪಕಲಾ ಅಕಾಡೆಮಿಗೆ ಸರ್ಕಾರ ಅನುದಾನ ನೀಡುತ್ತದೆ. ಕೊರೊನಾ ಕಾಲದಲ್ಲಿ ಬಳಕೆಯಾಗದ ಅನುದಾನ ಮರಳಿ ನೀಡಬೇಕೆಂದು ಸರ್ಕಾರ ತಿಳಿಸಿತ್ತು. ಆದರೆ ಅಕಾಡೆಮಿಯ ಕಾರ್ಯಯೋಜನೆ ಬಗ್ಗೆ ಸುಧೀರ್ಘ ಪತ್ರ ಬರೆದು ತಿಳಿಸಲಾಗಿತ್ತು ನಮ್ಮ ಮನವಿಗೆ ಸ್ಪಂದಿಸಿದ ಸರ್ಕಾರ ಅನುದಾನ ಮರಳಿಸಿತ್ತು. ಅದನ್ನು ಸಮರ್ಪಕವಾಗಿ ಬಳಸಿದ್ದೇವೆ.
-ಡಿ.ಮಹೇಂದ್ರ, ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ

click me!