Omicron Variant : ಮಲೆನಾಡಿಗೂ ಕಾಲಿಟ್ಟ ಒಮಿಕ್ರಾನ್

Kannadaprabha News   | Asianet News
Published : Dec 20, 2021, 09:33 AM ISTUpdated : Dec 20, 2021, 09:55 AM IST
Omicron Variant :  ಮಲೆನಾಡಿಗೂ ಕಾಲಿಟ್ಟ ಒಮಿಕ್ರಾನ್

ಸಾರಾಂಶ

ಮಲೆನಾಡಿಗೂ ಇದೀಗ ಒಮಿಕ್ರಾನ್ ಸೋಂಕು ಹರಡಿದೆ ಇಲ್ಲಿನ ಉಕ್ಕಿನ ನಗರಿಗೆ ಒಮಿಕ್ರಾನ್ ರೂಪಾಂತರಿ  ಕಾಲಿಟ್ಟಿದೆ

ಶಿವಮೊಗ್ಗ (ಡಿ.20):  ಮಲೆನಾಡಿಗೂ ಇದೀಗ ಒಮಿಕ್ರಾನ್ (Omicron) ಸೋಂಕು ಹರಡಿದೆ. ಇಲ್ಲಿನ ಉಕ್ಕಿನ ನಗರಿಗೆ ಒಮಿಕ್ರಾನ್ ರೂಪಾಂತರಿ  ಕಾಲಿಟ್ಟಿದೆ.  ಭದ್ರಾವತಿಯ ಖಾಸಗಿ ಅಸ್ಪತ್ರೆಯ (Hospital) ನರ್ಸಿಂಗ್ ಕಾಲೇಜ್ ವಿದ್ಯಾರ್ಥಿನಿಗೆ ಒಮಿಕ್ರಾನ್ ಸೋಂಕು ತಗುಲಿದೆ.  ನರ್ಸಿಂಗ್ ಕಾಲೇಜಿನ 27 ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು (Covid) ತಗುಲಿತ್ತು.  ಡಿ. 2 ರಂದು ಕೊರೊನಾ ಸೋಂಕು ದೃಢ ಪಟ್ಟ ಹಿನ್ನೆಲೆಯಲ್ಲಿ ನರ್ಸಿಂಗ್ ಕಾಲೇಜು ಸೀಲ್ ಡೌನ್ ಮಾಡಲಾಗಿತ್ತು.

ಶಿವಮೊಗ್ಗಕ್ಕೆ (Shivamogga) ಪರೀಕ್ಷೆ ಬರೆಯಲು ಹೋಗಿದ್ದ ವಿದ್ಯಾರ್ಥಿಗಳಲ್ಲಿ ಕೊರೋನಾ ಸೋಂಕು ಕಾಣಿಸಿತ್ತು. ಇದೀಗ 27 ಸೋಂಕಿತರಲ್ಲಿ ಒರ್ವ ಯುವತಿಗೆ ಒಮಿಕ್ರಾನ್ ರೂಪಾಂತರಿ ಸೋಂಕು ದೃಢಪಟ್ಟಿದೆ.   ಕೇರಳ (Kerala) ಮೂಲದ 20 ವರ್ಷದ ವಿದ್ಯಾರ್ಥಿನಿಗೆ ಒಮಿಕ್ರಾನ್ ಸೋಂಕು ತಗುಲಿದೆ. 

ಶಿವಮೊಗ್ಗ ಜಿಲ್ಲೆಯಲ್ಲಿ ಒಮಿಕ್ರಾನ್ ಸೋಂಕು ಪತ್ತೆಯಾಗಿರುವ ಬಗ್ಗೆ ಇಲ್ಲಿನ ಡಿಹೆಚ್ಒ ಡಾ. ರಾಜೇಶ್ ಸುರಗಿಹಳ್ಳಿ ಅಧಿಕೃತ ಮಾಹಿತಿ  ನೀಡಿದ್ದಾರೆ. 

ಉಡುಪಿ ಇಬ್ಬರಲ್ಲಿ  ಒಮಿಕ್ರಾನ್ :   ಉಡುಪಿ :  ಉಡುಪಿಯ ಇಬ್ಬರಲ್ಲಿ ಒಮಿಕ್ರಾನ್ ವೈರಸ್ ಪತ್ತೆಯಾಗಿದೆ.  ಉಡುಪಿಯ 82 ವರ್ಷದ ಪುರುಷ ಮತ್ತು 73 ವರ್ಷದ ಮಹಿಳೆಗೆ ಓಮಿಕ್ರಾನ್ ಸೋಂಕು ತಗುಲಿದೆ.  ನವೆಂಬರ್ 30 ರಂದು ಇಬ್ಬರಿಗೂ ಪಾಸಿಟಿವ್ ಆಗಿತ್ತು. ಬೆಂಗಳೂರಿಗೆ ಗಂಟಲ ಮಾದರಿ ಪರೀಕ್ಷೆಗೆ ರವಾನಿಸಲಾಗಿತ್ತು.  ಒಂದೇ ಕುಟುಂಬದ ಇಬ್ಬರು ವ್ಯಕ್ತಿಗಳಿಗೆ ಒಮಿಕ್ರಾನ್ ಸೋಂಕು ತಗುಲಿದೆ.
 
ಸೋಂಕಿತ ಇಬ್ಬರೂ ಆರೋಗ್ಯಯುತರಾಗಿದ್ದಾರೆ. ಇಬ್ಬರಿಗೂ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲ. ಪ್ರಾಥಮಿಕ ಸಂಪರ್ಕದಿಂದ ನಾಲ್ವರಿಗೆ ಪಾಸಿಟಿವ್ ಬಂದಿತ್ತು.  ನಾಲ್ವರ ಗಂಟಲ ದ್ರವ ಟೆಸ್ಟ್ ಗೆ ರವಾನಿಸಲಾಗಿದೆ. ಎಲ್ಲರಿಗೂ ಸೂಕ್ತ ಚಿಕಿತ್ಸೆ ಕೊಡಲಾಗಿದೆ. ಆರು ಮಂದಿ ಕೊರೋನಾ ಸೋಂಕಿತರು ಆರೋಗ್ಯವಾಗಿದ್ದಾರೆ ಎಂದು ಉಡುಪಿ ಜಿಲ್ಲಾ ಆರೋಗ್ಯ ಅಧಿಕಾರಿ ಮಾಹಿತಿ ನೀಡಿದ್ದಾರೆ. 

ಒಮಿಕ್ರಾನ್ ಸೋಂಕು ಏರಿಕೆ :  ಕರ್ನಾಟಕದಲ್ಲಿ (Karnataka) ಇಂದು (ಶನಿವಾರ) ಕೊರೋನಾ (Coronavirus) ಹಾಗೂ ಅದರ ರೂಪಾಂತರಿ ಒಮಿಕ್ರಾನ್ (Omicron) ಸೋಂಕಿನ ಸಂಖ್ಯೆ ಏರಿಕೆಯಾಗಿದ್ದು, ಆತಂಕಕ್ಕೆ ಕಾರಣವಾಗಿದೆ.

ರಾಜ್ಯದಲ್ಲಿ ಇಂದು ಒಟ್ಟು 335 ಕೊರೋನಾ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, 5 ಮರಣ ಪ್ರಕರಣ ದಾಖಲಾಗಿದೆ. ಇನ್ನು ಕೊರೋನಾ ರೂಪಾಂತರಿ ತಳಿ ಒಮಿಕ್ರಾನ್ ಪಾಸಿಟಿವ್ ಪ್ರಕರಣಗಳ ಒಟ್ಟು ಸಂಖ್ಯೆ 14ಕ್ಕೆ ಏರಿಕೆಯಾಗಿದೆ. 

Covid 19 Variant: ಕ್ರಿಸ್‌ಮಸ್‌, ಹೊಸ ವರ್ಷಾಚರಣೆಗೆ ಬೀಳುತ್ತಾ ಬ್ರೇಕ್‌?

ಈ ಮೂಲಕ ಕೊರೋನಾ ಸೋಂಕಿತರ ಒಟ್ಟು ಸಂಖ್ಯೆ  30,02,127ಕ್ಕೆ ಏರಿಕೆಯಾಗಿದ್ರೆ, ಈ ಪೈಕಿ 29,56,691 ಮಂದಿ ಈವರೆಗೆ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ 7,120 ಸಕ್ರಿಯ ಪ್ರಕರಣಗಳಿವೆ. ಕೋವಿಡ್-19 ಮರಣ ಪ್ರಮಾಣ ಶೇ.1.49 ರಷ್ಟಿದ್ದರೇ, ಪಾಸಿಟಿವಿಟಿ ರೇಟ್ ಶೇ.0.28 ರಷ್ಟಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ರಾಜ್ಯದಲ್ಲಿ ಇಂದು(ಡಿ.18) ಒಟ್ಟು 2,38,442 ಮಂದಿಗೆ ಕೊರೋನಾ ಲಸಿಕೆ ನೀಡಲಾಗಿದೆ. ಒಟ್ಟು 1,18,032 ಸ್ಯಾಂಪಲ್ (ಆರ್‌ಟಿಪಿಸಿಆರ್ 97,541 + 20,491 ರ್‍ಯಾಪಿಡ್ ಆಂಟಿಜನ್)ಗಳನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿದೆ. 

ಜಿಲ್ಲಾವಾರು ಕೊರೋನಾ ಸಂಖ್ಯೆ 
ಬಾಗಲಕೋಟೆ 0, ಬಳ್ಳಾರಿ 1, ಬೆಳಗಾವಿ 2, ಬೆಂಗಳೂರು ಗ್ರಾಮಾಂತರ 0, ಬೆಂಗಳೂರು ನಗರ 225, ಬೀದರ್ 0, ಚಾಮರಾಜನಗರ 0, ಚಿಕ್ಕಬಳ್ಳಾಪುರ 0, ಚಿಕ್ಕಮಗಳೂರು 6, ಚಿತ್ರದುರ್ಗ 0, ದಕ್ಷಿಣ ಕನ್ನಡ 19, ದಾವಣಗೆರೆ 0, ಧಾರವಾಡ 5, ಗದಗ 0, ಹಾಸನ 8, ಹಾವೇರಿ 0, ಕಲಬುರಗಿ 1, ಕೊಡಗು 25, ಕೋಲಾರ 5, ಕೊಪ್ಪಳ 0, ಮಂಡ್ಯ 2, ಮೈಸೂರು 14, ರಾಯಚೂರು 1, ರಾಮನಗರ 2, ಶಿವಮೊಗ್ಗ 2, ತುಮಕೂರು 2, ಉಡುಪಿ 6, ಉತ್ತರ ಕನ್ನಡ 9, ವಿಜಯಪುರ ಮತ್ತು ಯಾದಗಿರಿಯಲ್ಲಿ ಶೂನ್ಯ ಪಾಸಿಟಿವ್ ಪ್ರಕರಣ ದಾಖಲಾಗಿದೆ.

ಮೂರನೇ ಅಲೆ ಮುಂಜಾಗ್ರತಾ ಕ್ರಮವಾಗಿ ಅಕ್ಟೋಬರ್‌ನಲ್ಲಿ ರಾಜ್ಯ ಸರ್ಕಾರ(Government of Karnataka) ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆ ಆವರಣದಲ್ಲಿ ನಿರ್ಮಿಸಿದ್ದ ತಾತ್ಕಾಲಿಕ (MakeShift Model) ಆಸ್ಪತ್ರೆಯನ್ನು ವಿದೇಶದಿಂದ(Foreign) ಬಂದ ಕೊರೋನಾ ಸೋಂಕಿತರು ಮತ್ತು ಒಮಿಕ್ರೋನ್‌ ಸೋಂಕಿತರ ಚಿಕಿತ್ಸೆಗೆ ಬಳಸಿಕೊಳ್ಳಲು ಆರೋಗ್ಯ ಇಲಾಖೆ ಮುಂದಾಗಿದೆ.

ಸದ್ಯ ಬೌರಿಂಗ್‌ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಚಿಕಿತ್ಸೆ(Treatment) ನೀಡಲಾಗುತ್ತಿದೆ. ಆದರೆ, ಕಳೆದ ಎರಡು ದಿನಗಳಿಂದ ವಿದೇಶದಿಂದ ಬಂದವರಲ್ಲಿ ಸೋಂಕು ಹೆಚ್ಚಳವಾಗಿರುವುದು ಮತ್ತು ಒಮಿಕ್ರೋನ್‌(Omicron) ಹೊಸ ಪ್ರಕರಣಗಳು ಪತ್ತೆಯಾಗಿರುವ ಹಿನ್ನೆಲೆ ಹೆಚ್ಚುವರಿಯಾಗಿ ರಾಜೀವ್‌ಗಾಂಧಿ ಆಸ್ಪತ್ರೆಯನ್ನು(Hospital) ನಿಗದಿಪಡಿಸಲಾಗಿದೆ. ಸದ್ಯ ಬೌರಿಂಗ್‌ನಲ್ಲಿ 120 ಹಾಸಿಗೆಗಳನ್ನು ಚಿಕಿತ್ಸೆಗೆಂದು ಮೀಸಲಿಟ್ಟಿದ್ದು, 20 ಹಾಸಿಗೆ ಭರ್ತಿಯಾಗಿವೆ. ಎಲ್ಲಾ ಹಾಸಿಗೆಗಳು ಭರ್ತಿಯಾದ ಬಳಿಕ ಗಾಜೀವ್‌ಗಾಂಧಿ ಆಸ್ಪತ್ರೆಗೆ ಸೋಂಕಿತರನ್ನು ಕಳುಹಿಸಲಾಗುತ್ತದೆ ಎಂದು ಆರೋಗ್ಯ ಇಲಾಖೆ(Department of Health) ಅಧಿಕಾರಿಗಳು ತಿಳಿಸಿದ್ದಾರೆ.

ಇಡೀ ಜಗತ್ತಿನಾದ್ಯಂತ ತಲ್ಲಣಕ್ಕೆ ಕಾರಣವಾಗಿರುವ ‘ಒಮಿಕ್ರೋನ್‌’(Omicron) ಕೋವಿಡ್‌ ರೂಪಾಂತರಿ ತಳಿ ಬ್ರಿಟನ್‌ನಲ್ಲಿ(Britain) ವ್ಯಾಪಿಸುತ್ತಿರುವಂತೆ ಭಾರತದಲ್ಲಿ(India) ಸಮುದಾಯಕ್ಕೆ ಹರಡಿದರೆ ನಿತ್ಯ 14 ಲಕ್ಷ ಪ್ರಕರಣಗಳು ದೃಢಪಡುವ ಸಾಧ್ಯತೆ ಇದೆ. ಅದೇ ರೀತಿ ಫ್ರಾನ್ಸ್‌(France) ಮಾದರಿಯಲ್ಲಿ ಹರಡಿದರೆ ದೇಶದಲ್ಲಿ ನಿತ್ಯ 13 ಲಕ್ಷ ಜನರಿಗೆ ಸೋಂಕು ತಗುಲುವ ಅಪಾಯವಿದೆ ಎಂದು ಕೇಂದ್ರ ಸರ್ಕಾರ(Central Government) ಎಚ್ಚರಿಸಿದೆ.

ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಅನಗತ್ಯ ಓಡಾಟ ಮತ್ತು ಹೊಸ ವರ್ಷಾಚರಣೆ, ಸಭೆ-ಸಮಾರಂಭಗಳಲ್ಲಿ ಸೇರುವುದಕ್ಕೆ ಕಡಿವಾಣ ಹಾಕಬೇಕಾದ ಅಗತ್ಯವಿದೆ ಎಂದು ಸರ್ಕಾರ ಶುಕ್ರವಾರ ಜನರಿಗೆ ಮನವಿ ಮಾಡಿದೆ. ಮಾಸ್ಕ್‌(Mask) ಮತ್ತು ಸಾಮಾಜಿಕ ಅಂತರ(Social Distance) ಸೇರಿ ಕೋವಿಡ್‌ ಮಾರ್ಗಸೂಚಿ(Covid Guidelines) ಕಡ್ಡಾಯ ಪಾಲನೆಗೆ ಕೋರಿದೆ.

PREV
Read more Articles on
click me!

Recommended Stories

ಗಡುವು ಮೀರಿಸಿದರೆ ಮುಂದೆ ಕೆಲಸವಿಲ್ಲ: ಮೆಟ್ರೋ ಗುತ್ತಿಗೆದಾರರಿಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ
ನಾನು ಲಂಚ ಪಡೆದಿದ್ದು ಸಾಬೀತಾದರೆ ರಾಜೀನಾಮೆ: ಗೃಹ ಸಚಿವ ಪರಮೇಶ್ವರ್‌