Singatalur Lift Irrigation Scheme: ಬ್ಯಾರೇಜ್‌ ಗೇಟ್‌ ದುರಸ್ತಿಗಿಲ್ಲ ಅನುದಾನ

By Kannadaprabha News  |  First Published Dec 20, 2021, 8:51 AM IST

*  ನಿತ್ಯ ನೀರು ಪೋಲು
*  ತಾತ್ಕಾಲಿಕ ದುರಸ್ತಿಗೆ ಮುಂದಾದ ಅಧಿಕಾರಿಗಳು 
*  ಬ್ಯಾರೇಜ್‌ ಗೇಟ್‌ ನಿರ್ವಹಣೆಗೆ ನಯಾ ಪೈಸೆ ಅನುದಾನ ನೀಡದ ಕರ್ನಾಟಕ ನೀರಾವರಿ ನಿಗಮ 


ಚಂದ್ರು ಕೊಂಚಿಗೇರಿ

ಹೂವಿನಹಡಗಲಿ(ಡಿ.20): ಮೂರು ಜಿಲ್ಲೆಗಳ ರೈತರ ಜೀವನಾಡಿ ಸಿಂಗಟಾಲೂರು ಏತನೀರಾವರಿ(Singatalur Lift Irrigation) ಯೋಜನೆಯ ಬ್ಯಾರೇಜ್‌ ಗೇಟ್‌(Barrage Gate) ದುರಸ್ತಿಗೆ ಅನುದಾನ ಬಿಡುಗಡೆ ಮಾಡಲು ಸರ್ಕಾರ ಮೀನಮೇಷ ಎಣಿಸುತ್ತಿದೆ. ಏತನೀರಾವರಿ ಯೋಜನೆಯ ಬ್ಯಾರೇಜ್‌ಗೆ 28 ಗೇಟುಗಳನ್ನು ಅಳವಡಿಸಿದ್ದು, ಇದರಲ್ಲಿ 13 ಮತ್ತು 25ನೇ ಗೇಟ್‌ಗಳಿಂದ ನಿತ್ಯ ನೀರು(Water) ಪೋಲಾಗುತ್ತಿದೆ. ಇದನ್ನು ತಡೆಯಲು ತಾತ್ಕಾಲಿಕವಾಗಿ ಸಣ್ಣ ಪ್ರಮಾಣದ ದುರಸ್ತಿ ಮಾಡಿದ್ದರೂ ನೀರು ಪೋಲಾಗುತ್ತಿರುವುದನ್ನು ತಡೆಯಲು ಸಾಧ್ಯವಾಗಿಲ್ಲ.

Tap to resize

Latest Videos

undefined

ವಿಜಯನಗರ(Vijayanagara), ಗದಗ(Gadag) ಮತ್ತು ಕೊಪ್ಪಳ(Koppal) ಜಿಲ್ಲೆಗಳ ಲಕ್ಷಾಂತರ ರೈತರ(Farmers) ಬರಡು ಭೂಮಿಗೆ, ನೀರುಣಿಸುವ ಮಹತ್ವದ ಈ ಯೋಜನೆಯ ಬ್ಯಾರೇಜ್‌ ಗೇಟ್‌ ನಿರ್ವಹಣೆಗೆ ಕಳೆದ 2012ರಿಂದ ಈವರೆಗೂ ಕರ್ನಾಟಕ ನೀರಾವರಿ ನಿಗಮ(Karnataka Irrigation Corporation) ನಯಾ ಪೈಸೆ ಅನುದಾನ ನೀಡಿಲ್ಲ. ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳು 92 ಲಕ್ಷ ಕ್ರಿಯಾ ಯೋಜನೆ ಸಲ್ಲಿಸಿ ತಿಂಗಳು ಕಳೆದರೂ, ಇನ್ನು ಅನುದಾನ ಬಿಡುಗಡೆಯಾಗಿಲ್ಲ. ಸದ್ಯ ದುರಸ್ತಿ ಸಣ್ಣ ಪ್ರಮಾಣದಲ್ಲಿದೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಾಗುವ ಸಾಧ್ಯತೆಗಳಿವೆ.

Koppal| ಸಿಂಗಟಾಲೂರು ಹನಿ ನೀರಾವರಿ ಕೈಬಿಟ್ಟ ಸರ್ಕಾರ?

ಸಿಂಗಟಾಲೂರು ಏತನೀರಾವರಿ ಯೋಜನೆಯ ಹಿನ್ನೀರಿನಲ್ಲಿ ಹೂವಿನಹಡಗಲಿಯ 2ನೇ ಹಂತದ ಕುಡಿಯುವ ನೀರಿನ ಯೋಜನೆ, ಗದಗ ಮಹಾನಗರಕ್ಕೆ 24 ಗಂಟೆ ನಿರಂತರ ನೀರಿನ ಯೋಜನೆ, ಗದಗ ಇತರ 352 ಹಳ್ಳಿಗಳ ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಮುಂಡರಗಿ, ಶಿರಹಟ್ಟಿ ಹಾಗೂ ಹೂವಿನಹಡಗಲಿ ತಾಲೂಕಿನ ಬಹುತೇಕ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸೇರಿದಂತೆ ನದಿ ತೀರದ 500ಕ್ಕೂ ಹೆಚ್ಚು ಗ್ರಾಮಗಳಿಗೆ ಜಲ ಮೂಲವಾಗಿದೆ.

ಬ್ಯಾರೇಜ್‌ಗೆ ಅಳವಡಿಸಿರುವ ಗೇಟ್‌ಗಳ ನಿರ್ವಹಣೆ ಇಲ್ಲದೇ ರಬ್ಬರ್‌ ಸೀಲ್‌ ಮತ್ತು ರೋಲರುಗಳು ದುರಸ್ತಿಗೆ(Repair) ಬಂದಿವೆ. ಬೇಸಿಗೆಯಲ್ಲಿ ಸಂಗ್ರಹಿಸಬೇಕಿದ್ದ 1.9 ಟಿಎಂಸಿ ಕುಡಿಯುವ ನೀರಿನ ಬದಲು ನಿರ್ವಹಣೆ ಕೊರತೆ ಹಾಗೂ ಸೋರಿಕೆಯಿಂದಾಗಿ 0.52 ಟಿಎಂಸಿ ಡೆಡ್‌ ಸ್ಟೋರೇಜ್‌ ನೀರು ಮಾತ್ರ ಉಳಿಯುವ ಅಪಾಯವಿದೆ. ಬ್ಯಾರೇಜ್‌ ನೀರು ಎಲ್ಲ ಖಾಲಿಯಾಗುವ ಮುನ್ನವೇ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ಗೇಟ್‌ ನಿರ್ವಹಣೆಗೆ ಅಗತ್ಯವಿರುವ ಅನುದಾನ ಒದಗಿಸಿ ನೀರು ಪೋಲಾಗುವುದನ್ನು ತಡೆದರೆ, ನೀರಿನ ಸಮಸ್ಯೆ ಎದುರಾಗುವುದಿಲ್ಲ, ಅಧಿಕಾರಿಗಳ ನಿರ್ಲಕ್ಷ್ಯ ಮುಂದುವರಿದರೆ ನದಿ ನೀರನ್ನೇ ನಂಬಿಕೊಂಡ ಹಳ್ಳಿಗಳಲ್ಲಿ ಕುಡಿಯುವ ನೀರಿನ ಹಾಹಾಕಾರ ಎದುರಾಗುವ ಸಾಧ್ಯತೆ ಇದೆ.

ಬಳ್ಳಾರಿ: ಕಿತ್ತು ಹೋದ ಸಿಂಗಟಾಲೂರು ಏತ ನೀರಾವರಿ ಕಾಲುವೆಗಳಿಗೆ ಮುಕ್ತಿ ಎಂದು?

ಸಿಂಗಟಾಲೂರು ಏತನೀರಾವರಿ ಯೋಜನೆಯ ಬ್ಯಾರೇಜ್‌ನ 13, 25 ನಂಬರಿನ ಗೇಟ್‌ಗಳಲ್ಲಿನ ಸಣ್ಣ ಪುಟ್ಟ ದುರಸ್ತಿ ಮಾಡಿ ನೀರು ಪೋಲಾಗುವುದನ್ನು ತಡೆಗಟ್ಟಲಾಗಿದೆ. ಗೇಟ್‌ ನಿರ್ವಹಣೆಗಾಗಿ ನಿಗಮಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುದಾನ ಬಂದ ಬಳಿಕ ಸಂಪೂರ್ಣ ದುರಸ್ತಿಗೊಳಿಸಲಾಗುವುದು ಅಂತ ಹೂವಿನಹಡಗಲಿಯ ಸಿಂಗಟಾಲೂರು ಏತನೀರಾವರಿ ಯೋಜನೆ ವಿಭಾಗ-1 ಇಂಜಿನಿಯರ್‌ ಐಗೋಳ್‌ ಪ್ರಕಾಶ ತಿಳಿಸಿದ್ದಾರೆ.  
ಸಿಂಗಟಾಲೂರು ಏತನೀರಾವರಿ ಯೋಜನೆ ನೂರಾರು ಹಳ್ಳಿಗಳಿಗೆ ಕುಡಿಯುವ ನೀರಿನ ಕೊರತೆ ನೀಗಿಸುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಗೇಟ್‌ ನಿರ್ವಹಣೆಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಅಂತ ನದಿ ತೀರದ ಗ್ರಾಮಸ್ಥರು ಒತ್ತಾಯಿಸಿದ್ದಾರೆ. 

ಒಂಬತ್ತು ವರ್ಷದಿಂದ 90 ಟಿಎಂಸಿ ನೀರು ಪೋಲು..!

ಲಾಶಯ ನಿರ್ಮಾಣವಾಗದೇ ನದಿ ನೀರು ಪೋಲಾಗುವುದು ಸಾಮಾನ್ಯ. ಆದರೆ, ಇಲ್ಲಿ ನೀರು ಸಂಗ್ರಹ ಮಾಡಿ, ಏತ ನೀರಾವರಿ ಯೋಜನೆ(Irrigation Project) ಲೋಕಾರ್ಪಣೆ ಮಾಡಿಯೂ ನೀರು ಪೋಲಾಗುತ್ತಿದೆ. ಕಾಲುವೆ(Canal) ಇಲ್ಲದಿರುವುದಕ್ಕೆ 9 ವರ್ಷದಲ್ಲಿ 90 ಟಿಎಂಸಿ ನೀರು ಪೋಲಾಗಿದೆ! ಇದು, ಅಚ್ಚರಿಯಾದರೂ ಸತ್ಯ. ಜಿಲ್ಲೆಯ ಜನಪ್ರತಿನಿಧಿಗಳು ತಲೆ ತಗ್ಗಿಸಬೇಕಾದ, ಸರ್ಕಾರಕ್ಕೂ(Government of Karnataka) ನಾಚಿಕೆಯಾಗುವ ವಿಷಯ. ಕೊಪ್ಪಳ, ಗದಗ ಜಿಲ್ಲೆಯ ಜನರಿಗೆ ವರವಾಗಬೇಕಾಗಿದ್ದ ಸಿಂಗಟಾಲೂರು ಏತ ನೀರಾವರಿ ಯೋಜನೆಯ ದುರ್ಗತಿ ಇದು.
 

click me!