Hubballi: ಚಲಿಸುತ್ತಿದ್ದ ರೈಲಿನಿಂದ ಬಿದ್ದು BBMP ಎಂಜಿನಿಯರ್‌ ಸಾವು

By Suvarna News  |  First Published Dec 20, 2021, 9:14 AM IST

*  ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ನಡೆದ ಘಟನೆ
*  ಸೂಪರಿಂಟೆಂಡೆಂಟ್ ಎಂಜಿನಿಯರ್‌ ಆಗಿ ಕೆಲಸ ನಿರ್ವಹಿಸುತ್ತಿದ್ದ ಮೃತ ರಂಗರಾಜು
*  ಸ್ಕೂಟರ್‌ಗೆ ಹಿಂಬದಿಯಿಂದ ಟಿಪ್ಪರ್‌ ಡಿಕ್ಕಿ: ಮಹಿಳೆ ಸಾವು
 


ಹುಬ್ಬಳ್ಳಿ(ಡಿ.20): ಚಲಿಸುತ್ತಿದ್ದ ರೈಲಿನಿಂದ ಬಿದ್ದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ(BBMP)ಸುಪರಿಟೆಂಡೆಂಟ್ ಎಂಜಿನಿಯರ್‌ವೊಬ್ಬರು ಸಾವನ್ನಪ್ಪಿದ ಘಟನೆ ನಿನ್ನೆ(ಭಾನುವಾರ) ರಾತ್ರಿ 11:30 ರ ಸುಮಾರಿಗೆ ಹುಬ್ಬಳ್ಳಿ(Hubballi) ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಮೃತರನ್ನ ರಂಗರಾಜು ಎಸ್.ಎ (59) ಎಂದು ಗುರುತಿಸಲಾಗಿದೆ.  ಹುಬ್ಬಳ್ಳಿ–ಬೆಂಗಳೂರು(Hubballi-Bengaluru) ರೈಲಿಗೆ ಹತ್ತಬೇಕಿದ್ದ ರಂಗರಾಜು ಅವರು ಬೆಳಗಾವಿ-ಬೆಂಗಳೂರು(Belagavi-Bengaluru) ರೈಲಿಗೆ(Train) ಹತ್ತಿದ್ದರು ಎಂದು ತಿಳಿದು ಬಂದಿದೆ. ರೈಲು ಚಲಿಸುತ್ತಿರುವಾಗ ರೈಲಿನಿಂದ ಇಳಿಯುವ ಸಂದರ್ಭದಲ್ಲಿ ಪ್ಲಾಟ್ ಫಾರಂನಲ್ಲಿ ಬಿದ್ದ ಪರಿಣಾಮ ರಂಗರಾಜು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ(Death). 

ಮೃತ ರಂಗರಾಜು ಎಸ್.ಎ ಬಿಬಿಎಂಪಿಯ ಕೆಆರ್‌ಐಡಿಎಲ್(KRIDL) ವಿಭಾಗದಲ್ಲಿ ಸೂಪರಿಂಟೆಂಡೆಂಟ್ ಎಂಜಿನಿಯರ್‌ ಆಗಿ ಕೆಲಸ ನಿರ್ವಹಿಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. 

Tap to resize

Latest Videos

Bus And Car Accident: ಕಾರಿನಲ್ಲಿ ಮದ್ವೆಗೆ ಹೊರಟಿದ್ದ ನಾಲ್ವರು ಮಸಣ ಸೇರಿದ್ರು

ಸ್ಕೂಟರ್‌ಗೆ ಹಿಂಬದಿಯಿಂದ ಟಿಪ್ಪರ್‌ ಡಿಕ್ಕಿ: ಮಹಿಳೆ ಸಾವು

ಬೆಂಗಳೂರು: ಸ್ಕೂಟರ್‌ಗೆ ಟಿಪ್ಪರ್‌ ಲಾರಿ ಡಿಕ್ಕಿಯಾಗಿ(Collision) ಮಹಿಳೆಯೊಬ್ಬರು(Woman) ಮೃತಪಟ್ಟಿರುವ ಘಟನೆ ಯಶವಂತಪುರದ ದೀನ್‌ ದಯಾಳ್‌ ಉಪಾಧ್ಯಾಯ ಮೇಲ್ಸೇತುವೆಯಲ್ಲಿ ನಡೆದಿದೆ.

ಚಿಕ್ಕಮಾರನಹಳ್ಳಿ ನಿವಾಸಿ ಲಕ್ಷ್ಮೀ(42) ಮೃತ ದುರ್ದೈವಿ. ತಮ್ಮ ಸೋದರನ ಮನೆಯಿಂದ ಶನಿವಾರ ರಾತ್ರಿ ಲಕ್ಷ್ಮೇ ಮನೆಗೆ ಮರಳುವಾಗ ಮಾರ್ಗ ಮಧ್ಯೆ ಈ ಅವಘಡ ಸಂಭವಿಸಿದೆ. ಘಟನೆ ಬಳಿಕ ಸ್ಥಳದಲ್ಲೇ ವಾಹನ ಬಿಟ್ಟು ಪರಾರಿಯಾಗಿರುವ ಟಿಪ್ಪರ್‌ ಚಾಲಕನ ಪತ್ತೆಗೆ ತನಿಖೆ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ರಾಜರಾಜೇಶ್ವರಿ ನಗರದಲ್ಲಿ ಲಕ್ಷ್ಮೀ ಅವರ ಅಣ್ಣ ವಾಸವಾಗಿದ್ದಾರೆ. ತಮ್ಮ ಸೋದರನ ಮನೆಗೆ ಸ್ಕೂಟರ್‌ನಲ್ಲಿ ಬಂದಿದ್ದ ಲಕ್ಷ್ಮೀ, ರಾತ್ರಿ 10 ಗಂಟೆ ಸುಮಾರಿಗೆ ಮನೆಗೆ ಮರಳುತ್ತಿದ್ದರು. ಯಶವಂತಪುರದ ದೀನ್‌ ದಯಾಳ್‌ ಉಪಾಧ್ಯಾಯ ಮೇಲ್ಸೇತುವೆಯಿಂದ ಮೇಖ್ರಿ ಸರ್ಕಲ್‌ಗೆ ಕಡೆಗೆ ತೆರಳುವಾಗ ಇಳಿಜಾರಿನಲ್ಲಿ ಅವರ ಸ್ಕೂಟರ್‌ಗೆ ಹಿಂದಿನಿಂದ ಟಿಪ್ಪರ್‌ ಲಾರಿ ಡಿಕ್ಕಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಯಶವಂತಪುರ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ(Case) ದಾಖಲಾಗಿದೆ.

ವೃದ್ಧ ಸಾವು:

ಪೀಣ್ಯ ಮೇಲ್ಸೇತುವೆಯಲ್ಲಿ ಭಾನುವಾರ ಸಂಭವಿಸಿದ ಮತ್ತೊಂದು ಅಪಘಾತದಲ್ಲಿ ವೃದ್ಧರೊಬ್ಬರು ಕೊನೆಯುಸಿರೆಳೆದಿದ್ದಾರೆ. ನೆಲಮಂಗಲ ನಗರದ ರಾಘವೇಂದ್ರ ಲೇಔಟ್‌ ನಿವಾಸಿ ಗಂಗಯ್ಯ(75) ಮೃತ ದುರ್ದೈವಿ. ಕೆಲಸದ ನಿಮಿತ್ತ ಬೈಕ್‌ನಲ್ಲಿ ನಗರಕ್ಕೆ ಅವರು ಬರುವಾಗ ಮಾರ್ಗ ಮಧ್ಯೆ ಟ್ಯಾಂಕರ್‌ ಡಿಕ್ಕಿಯಾಗಿದೆ. ಘಟನೆ ಬಳಿಕ ತಪ್ಪಿಸಿಕೊಂಡಿರುವ ಟ್ಯಾಂಕರ್‌ ಚಾಲಕನ ಪತ್ತೆಗೆ ಹುಡುಕಾಟ ನಡೆದಿದೆ ಎಂದು ಪೀಣ್ಯ ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ.

ಪ್ರತ್ಯೇಕ ಅಪಘಾತದಲ್ಲಿ ಮೂವರು ಸಾವು

ಚಿತ್ರದುರ್ಗ/ಮೊಳಕಾಲ್ಮೂರು: ಜಿಲ್ಲೆಯಲ್ಲಿ ಸಂಭವಿಸಿದ ಪ್ರತ್ಯೇಕ ಅಪಘಾತದಲ್ಲಿ(Accident) ಮೂವರು ಮೃತಪಟ್ಟಿದ್ದಾರೆ. ಮೊಳಕಾಲ್ಮೂರಿನಲ್ಲಿ ಲಾರಿ ಹರಿದು ಇಬ್ಬರ ರೈತರು(Farmers) ಮೃತಪಟ್ಟಿದ್ದರೆ, ಚಿತ್ರದುರ್ಗದ(chitradurga) ಬೀರಾವರ ಗೇಟ್‌ ಬಳಿ ರಸ್ತೆ ತಡೆಗೋಡೆಗೆ ಬೈಕ್‌ ಡಿಕ್ಕಿಯಾಗಿ ಒರ್ವ ಮೃತಪಟ್ಟಿದ್ದಾನೆ.

Road accident : ಹಾವೇರಿ, ಲಾರಿ ಡಿಕ್ಕಿ,  ತಂದೆ ಕಣ್ಣೆದುರೇ ಪ್ರಾಣ ಬಿಟ್ಟ ಮಗಳು!

ಮೊಳಕಾಲ್ಮೂರು ತಾಲೂಕಿನ ರಾಂಪುರ ಗ್ರಾಮದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯ ಜೆಬಿಹಳ್ಳಿ ಅಂಡರ್‌ ಪಾಸ್‌ನಲ್ಲಿ ಲಾರಿಯೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲಿ ಮೃತ ಪಟ್ಟಿರುವ ಘಟನೆ ಭಾನುವಾರ ಮುಂಜಾನೆ ಜರುಗಿದೆ.

ಮೃತರನ್ನು ರಾಂಪುರ ಅಂಜಿನಪ್ಪ (55) ಹಾಗೂ ಬಸಾಪುರ ಬಸವರಾಜ(45) ಎಂದು ಗುರುತಿಸಲಾಗಿದೆ. ಹೂ ವ್ಯಾಪಾರ ಮಾಡುತ್ತಿದ್ದ ರೈತ ಬಸವರಾಜ ರಾಂಪುರದಲ್ಲಿ ಹೂಗಳನ್ನು ಮಾರಾಟ ಮಾಡಿ ಟಿವಿಎಸ್‌ ಬೈಕ್‌ನಲ್ಲಿ(TVS Bike) ಅಂಜಿನಪ್ಪನ ಜತೆ ಬಸಾಪುರ ಗ್ರಾಮಕ್ಕೆ ಪ್ರಯಾಣಿಸುತ್ತಿರುವಾಗ ಬೆಂಗಳೂರು ಕಡೆಯಿಂದ ಬರುತ್ತಿದ್ದ ತಮಿಳುನಾಡು ಮೂಲದ ಲಾರಿ ಏಕಾಏಕಿ ಡಿಕ್ಕಿ ಹೊಡೆದಿದೆ. ಇದರಿಂದ ಬೈಕ್‌ ಸವಾರರಿಬ್ಬರೂ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಸಿಪಿಐ ಉಮೇಶ ಕುಮಾರ್‌, ಡಿವೈಎಸ್ಪಿ ಶ್ರೀಧರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 
 

click me!