ಚಿಂತಾಮಣಿ ವಿಷ ಪ್ರಸಾದದಲ್ಲೂ ವಿಷಕನ್ಯೆ ಕೈವಾಡ?

Jan 26, 2019, 6:00 PM IST

ಚಿಕ್ಕಬಳ್ಳಾಪುರ ಚಿಂತಾಮಣಿ ನಗರದ ನರಸಿಂಹ ಪೇಟೆಯಲ್ಲಿರುವ ಗಂಗಮ್ಮ ದೇಗುಲದಲ್ಲಿ ಪ್ರಸಾದ ಸೇವಿಸಿ ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ. ಪ್ರಸಾದ ತಿಂದ ಇನ್ನೂ ಹಲವು ಮಂದಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೇವಸ್ಥಾನದ ಅರ್ಚಕ ಮತ್ತು ಟ್ರಸ್ಟಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ದೇಗುಲಕ್ಕೆ ಬೀಗ ಹಾಕಿದ್ದಾರೆ. ವಿಷಾಹಾರ ಸೇವನೆಯಿಂದಲೇ ಮಹಿಳೆ ಮೃತಪಟ್ಟಿರುವುದು ಖಚಿತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜೊತೆಗೆ, ಪ್ರತ್ಯಕ್ಷದರ್ಶಿಗಳು ಸ್ಥಳೀಯ ಮಹಿಳೆಯೊಬ್ಬಳ ಕಡೆ ಬೊಟ್ಟು ಮಾಡಿದ್ದಾರೆ.  ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್...