Dharwad ; ಸಿಸಿಎಫ್ ವಿರುದ್ದ ತಿರುಗಿಬಿದ್ದ ಅರಣ್ಯ ಇಲಾಖೆಯ ಸಿಬ್ಬಂದಿಗಳು

ಧಾರವಾಡ ವಲಯದ ಅರಣ್ಯ ಇಲಾಖೆಯಲ್ಲಿ ಅರಣ್ಯ ರಕ್ಷಕರಾಗಿ ಕೆಲಸ ಮಾಡುತ್ತಿರುವ 15 ಜನರಿಗೆ ನೀಡಲಾಗಿದ್ದ ಮುಂಬಡ್ತಿ ಆದೇಶವನ್ನು ವಾಪಸ್ ಪಡೆದಿದ್ದು,  ಈ ಹಿನ್ನೆಲೆಯಲ್ಲಿ ಸಿಸಿಎಫ್ ವಿರುದ್ಧ ಎಸಿಬಿ ದೂರು  ಅರಣ್ಯ ರಕ್ಷಕರು ನೀಡಲು ಸಜ್ಜಾಗಿದ್ದಾರೆ.


ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್  

ಧಾರವಾಡ (ಆ.3): ಧಾರವಾಡ ವಲಯದ ಅರಣ್ಯ ಇಲಾಖೆಯಲ್ಲಿ ಅರಣ್ಯ ರಕ್ಷಕರಾಗಿ ಕೆಲಸ ಮಾಡುತ್ತಿರುವ 15 ಜನರಿಗೆ ನೀಡಲಾಗಿದ್ದ ಮುಂಬಡ್ತಿ ಆದೇಶವನ್ನು ವಾಪಸ್ ಪಡೆದಿದ್ದು, ಈ ಇಲಾಖೆಯಲ್ಲಿ ದೊಡ್ಡ ಗೋಲ್‌ಮಾಲ್ ನಡೆದಿದೆ . ಈ ಆದೇಶ ಹಿಂಪಡೆದಿದ್ದರಿಂದ ಅರಣ್ಯ ರಕ್ಷಕರು ಇದೀಗ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿರುದ್ಧ ಕಂಗಾಲಾಗಿದ್ದಾರೆ. ನಮಗೆ ನ್ಯಾಯ ಬೇಕು ಎಂದು ಅರಣ್ಯ ಇಲಾಖೆಯ ಸಿಬ್ಬಂದಿಗಳು ಸಿಸಿಎಫ್ ಕಚೇರಿ ಮುಂದೆ ದಲಿತ ಸಂಘಟನೆಯ ಕಾರ್ಯಕರ್ತರು ಹೋರಾಟ ನಡೆಸಿದ್ದಾರೆ.ಧಾರವಾಡದ ಸಿಸಿಎಪ್ ಕಚೇರಿ ಎದುರು 15 ಜನ ಅರಣ್ಯ ಇಲಾಖೆಯ ಸಿಬ್ಬಂದಿಗಳ ಪರವಾಗಿ ದಲಿತ ಸಂಘಟನೆಗಳು ಸಿಸಿಎಫ್ ವಿರುದ್ದ ಹೋರಾಟ ಮಾಡುತ್ತಿದ್ದಾರೆ. ಇನ್ನೂ ಸಿಸಿಎಪ್ ವಿರುದ್ದ ಎಸಿಬಿಗೆ ದೂರು ಕೊಡಲು ದಲಿತ ಸಂಘಟನೆಗಳು ಮುಂದಾಗಿದೆ. ಇದೇ  2022 ಮೇ ತಿಂಗಳ 23 ರಂದು 15 ಜನ ಅರಣ್ಯ ರಕ್ಷಕರಿಗೆ ಮುಂಬಡ್ತಿ ನೀಡಿ ಸಿಸಿಎಫ್ ಅವರು ಆದೇಶ ಹೊರಡಿಸಿದ್ದರು. ಈ ವೇಳೆ ಸಿಸಿಎಫ್ ಕಚೇರಿಯ ಪ್ರಥಮ ದರ್ಜೆ ಸಹಾಯಕ ಮೊಹ್ಮದ್ ಶರೀಫ್ ಬೂದಿಹಾಳ ಎಂಬಾತ 15 ಜನ ಅರಣ್ಯ ರಕ್ಷಕರಿಗೆ ಫೋನ್ ಮಾಡಿ ನೀವು 30 ಸಾವಿರ ಕೊಡಬೇಕು ಇಲ್ಲದೇ ಹೋದರೆ ನಿಮಗೆ ಮುಂಬಡ್ತಿ ನೀಡಲಾಗುವುದಿಲ್ಲ. ಅದನ್ನು ವಾಪಸ್ ಪಡೆಯಲಾಗುವುದು ಎಂದು ಬೆದರಿಕೆ ಹಾಕಿದ್ದಾನೆ.

Latest Videos

ಎಲ್ಲಿ ತಮಗೆ ಮುಂಬಡ್ತಿ ಸಿಗುವುದಿಲ್ಲ ಎಂದು ತಿಳಿದ ಅರಣ್ಯ ರಕ್ಷಕರು ಆತನಿಗೆ ತಲಾ 30 ಸಾವಿರ ಹಣ ಕೊಟ್ಟಿದ್ದಾರೆ. ಇದಾದ ಬಳಿಕ ಅರಣ್ಯ ರಕ್ಷಕರಿಗೆ ಮುಂಬಡ್ತಿಯನ್ನೇ ನೀಡದೇ ಸಿಸಿಎಫ್ ಅವರು ಬಡ್ತಿ ಆದೇಶವನ್ನು ವಾಪಸ್ ಪಡೆದುಕೊಂಡಿದ್ದಾರೆ. ಇದರಿಂದ ಕಂಗಾಲಾದ ಅರಣ್ಯ ರಕ್ಷಕರು, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಮುಂದೆ ಸಿಸಿಎಪ್ ವಿರುದ್ದ ದಿಕ್ಕಾರ ಕೂಗಿ ಪ್ರತಿಭಟನೆ ನಡೆಸಿ, ಸಿಸಿಎಫ್ ಅವರ ಮೆಲೆ‌ ಕ್ರಮ ಆಗಬೇಕು ಎಂದು ಹೋರಾಟ ಮಾಡುತ್ತಿದ್ದಾರೆ.

ಅರಣ್ಯ ರಕ್ಷಕರಿಗೆ ಮುಂಬಡ್ತಿ ನೀಡಲಾಗುವುದು ಎಂದು ಮೇ.23 ರಂದು ಆದೇಶ ಹೊರಡಿಸಲಾಗಿತ್ತು. ಸಿಸಿಎಪ್ ಕಚೇರಿಯ ಪ್ರಥಮ ದರ್ಜೆ ಸಹಾಯಕ ಮೊಹ್ಮದ್ ಶರೀಪ್ ಬೂದಿಹಾಳ ಎಂಬುವರು ಹಣ ವಸೂಲಿ ಮಾಡಿದ ನಂತರ ಜುಲೈ 18 ರಂದು ತಮ್ಮ ಆದೇಶವನ್ನು ಸಿಸಿಎಫ್ ಅವರು ವಾಪಸ್ ಪಡೆದುಕೊಂಡಿದ್ದಾರೆ. ನಾವೇ ಸ್ವತಃ ಮೊಹ್ಮದ್ ಬೂದಿಹಾಳ ಅವರಿಗೆ 30 ಸಾವಿರ ಹಣ ಕೊಟ್ಟು ಬಂದಿದ್ದೇವೆ. ಮೊಹ್ಮದ್ ನಮಗೆ ಫೋನ್ ಮಾಡಿ ಹಣ ಕೊಡುವಂತೆ ಬೇಡಿಕೆ ಇಟ್ಟಿದ್ದ ಎಂದು ಚಮನ್ ಅಲಿ ಆರೋಪಿಸಿದರು.ನಾವು ಕೂಡಾ ಅವನಿಗೆ 15 ಜನರಿಂದ ತಲಾ 30 ಸಾವಿರದಂತೆ ವಸೂಲಿ ಮಾಡಿಕೊಟ್ಟಿದ್ದೆನೆ.. ನಮ್ಮ‌ ಹತ್ರ ಎಲ್ಲ ಆಡಿಯೋಗಳಿವೆ ಎಂದು ನೊಂದ ಸಿಬ್ಬಂದಿ ಅಳಲು ತೋಡಿಕ್ಕೊಂಡಿದ್ದಾರೆ..

ಅರಣ್ಯ ಇಲಾಖೆ ಕಚೇರಿಯ ಮೊಹ್ಮದ್ ಬೂದಿಹಾಳ ಅರಣ್ಯ ರಕ್ಷಕರಿಂದ ತಲಾ 30 ಸಾವಿರ ಹಣ ಪಡೆದಿದ್ದರೂ ಸಿಸಿಎಫ್ ಅವರು ಈ ಬಗ್ಗೆ ಯಾವುದೇ ಗಂಭೀರ ಕ್ರಮ ಜರುಗಿಸಿಲ್ಲ. ಈ ಎಲ್ಲ ವಿಷಯವನ್ನು ಸಿಬ್ಬಂದಿ ಸಿಸಿಎಫ್ ಅವರ ಗಮನಕ್ಕೂ ತಂದಿದ್ದಾರೆ. ಇದು ಸಿಸಿಎಫ್ ಅವರಿಗೆ ಗೊತ್ತಾಗದಂತೆ ನಡೆದಿದೆಯೋ ಅಥವಾ ಗೊತ್ತಿದ್ದೂ ನಡೆದಿದೆಯೋ ಗೊತ್ತಿಲ್ಲ. ಆದರೆ, ಅವರು ಮಾತ್ರ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರು, ಮುಂಬಡ್ತಿ ಆದೇಶವನ್ನು ಪರಿಷ್ಕರಿಸಲು ಕೋರಿದ್ದರ ಮೇರೆಗೆ ಮುಂಬಡ್ತಿ ಆದೇಶವನ್ನು ಹಿಂಪಡೆಯಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ. ಇದೀಗ ನೊಂದ ಅರಣ್ಯ ರಕ್ಷಕರು ನ್ಯಾಯ ದೊರಕಿಸಿಕೊಡುವಂತೆ ಮಾಧ್ಯಮಗಳ ಮೊರೆ ಹೊಗಿದ್ದಾರೆ.

ನಾಗರಹೊಳೆ ಅರಣ್ಯದಲ್ಲಿ 8 ವರ್ಷದ ಹುಲಿ ಶವ ಪತ್ತೆ

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಹುದ್ದೆಗೆ ಮುಂಬಡ್ತಿ ನೀಡುವಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನೌಕರರಿಗೆ ಮೀಸಲಾತಿ, ಒದಗಿಸದೇ ಅನ್ಯಾಯವನ್ನು ಹಾಗೂ ಜಾತಿ ನಿಂದನೆ ಮಾಡಿರುತ್ತಾರೆ. ಅರಣ್ಯ ಇಲಾಖೆಯ ಬೇರೆ ಬೇರೆ ವೃತ್ತದಲ್ಲಿ ನೌಕರರಿಗೆ ಮೀಸಲಾತಿ ಅನ್ವಯ ಬಡ್ತಿ ನೀಡುತ್ತಿದ್ದು ಧಾರವಾಡ ವೃತ್ತದಲ್ಲಿನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು, ಜಾತೀಯತೆಯನ್ನು ಮಾಡಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯವರು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ನೌಕರರಿಗೆ ಅನ್ಯಾಯವಾಗಿದ್ದರ ಬಗ್ಗೆ ತಿಳಿಸಿದರೂ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಧಾರವಾಡ ಇವರು ಉದ್ದೇಶಪೂರ್ವಕವಾಗಿ ನೌಕರರಿಗೆ ಅನ್ಯಾಯ ಮಾಡಿದ್ದು,ಕಂಡುಬಂದಿರುತ್ತದೆ. 

ಗಣಿ ಸ್ಫೋಟಕ್ಕೆ ಪ್ರಾಣಿ-ಪಕ್ಷಿ ಸಂಕುಲವೇ ನಾಶ: ಕಣ್ಮುಚ್ಚಿ ಕುಳಿತ ಅರಣ್ಯ ಇಲಾಖೆ

ಧಾರವಾಡ ವೃತ್ತದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ನೌಕರರಿಗೆ ಮಾಡಿರುವ ಅನ್ಯಾಯವನ್ನು ದಿನಾಂಕ:14-08-2022 ರ ಒಳಗೆ ಸರಿಪಡಿಸಿ ಕೋಡದೇ ಇದ್ದ ಪಕ್ಷದಲ್ಲಿ ದಿನಾಂಕ 15-08-2022 ಸ್ವಾತಂತ್ರೋತ್ಸವ ದಿನವನ್ನು ಕರಾಳ ದಿನವನ್ನಾಗಿ ಆಚರಿಸಲು ಸಂಘವು ನಿರ್ಧರಿಸಿರುತ್ತದೆ. ಆದ ಕಾರಣ ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಪರಿಶಿಷ್ಟ ಜಾತಿ ಸಿಬ್ಬಂದಿಗಳಿಗೆ ನ್ಯಾಯ ಕೊಡಿಸಬೇಕು ಎಂದು ಎಚ್ಚರಿಕೆ ನೀಡಿದರು.

click me!