ಶಿಕ್ಷಕರ ಸಂಕಷ್ಟಗಳಿಗೆ ನೆರವಾಗುವ ಸಲುವಾಗಿ ಆರಂಭಗೊಂಡಿರುವ ಸಹಕಾರಿಯ ಈ ಸಂಸ್ಥೆ ವತಿಯಿಂದ ಆರಂಭಗೊಂಡಿರುವ ಟಿಎಸ್‌ಟಿ ಹೈಪರ್ ಮಾರ್ಟ್ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರಶಂಸೆ ವ್ಯಕ್ತಪಡಿಸಿದರು.
ತೀರ್ಥಹಳ್ಳಿ (ಆ.03): ಶಿಕ್ಷಕರ ಸಂಕಷ್ಟಗಳಿಗೆ ನೆರವಾಗುವ ಸಲುವಾಗಿ ಆರಂಭಗೊಂಡಿರುವ ಸಹಕಾರಿಯ ಈ ಸಂಸ್ಥೆ ವತಿಯಿಂದ ಆರಂಭಗೊಂಡಿರುವ ಟಿಎಸ್‌ಟಿ ಹೈಪರ್ ಮಾರ್ಟ್ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರಶಂಸೆ ವ್ಯಕ್ತಪಡಿಸಿದರು. ಪಟ್ಟಣದ ಆಗುಂಬೆ ವೃತ್ತದಲ್ಲಿ ಸೋಮವಾರ ಪ್ರಾಥಮಿಕ ಶಾಲಾ ಶಿಕ್ಷಕರ ಸೌಹಾರ್ದ ಸಹಕಾರಿ ವತಿಯಿಂದ ಆರಂಭವಾದ ಟಿಎಸ್‌ಟಿ ಹೈಪರ್ ಮಾರ್ಟ್ ಉದ್ಘಾಟಿಸಿ, ಬೋಧನಾ ವೃತ್ತಿಯಲ್ಲಿ ತೊಡಗಿರುವ ಶಿಕ್ಷಕರೇ ಸೇರಿ ಗ್ರಾಹಕರ ಅಗತ್ಯಕ್ಕೆ ಅನುಗುಣವಾಗಿ ಪಾಶ್ಚಿಮಾತ್ಯ ರಾಷ್ಟ್ರಗಳ ಮಾದರಿಯಲ್ಲಿ ಎಲ್ಲ ವಸ್ತುಗಳೂ ಒಂದೆಡೆ ಸಿಗುವಂತೆ ಆರಂಭಿಸಿರುವ ಉತ್ತಮವಾದ ಈ ಸಂಸ್ಥೆಯಲ್ಲಿ ಗ್ರಾಹಕರಿಗೆ ಗುಣಮಟ್ಟದ ವಸ್ತುಗಳು ಲಭ್ಯ.
ಆ ಮೂಲಕ ಈ ಊರಿನ ಹೆಮ್ಮೆಯ ಗರಿಯಾಗಿ ಈ ಸಂಸ್ಥೆ ಜನಪರವಾಗಿ ಕಾರ್ಯನಿರ್ವಹಿಸುವಂತಾಗಲಿ ಎಂದು ಶುಭ ಹಾರೈಸಿದರು. ಸಾನ್ನಿಧ್ಯ ವಹಿಸಿದ್ದ ಗೌರಿಗದ್ದೆ ವಿನಯ ಗುರೂಜಿ ಮಾತನಾಡಿ, ಸಾಮಾಜಿಕ ಕಳಕಳಿ ಮತ್ತು ಜನರಿಗೆ ಏನಾದರೂ ಸಾಧಿಸಬೇಕೆಂಬ ಹಂಬಲ ಉಳ್ಳವರಿಂದ ಮಾತ್ರ ಇಂತಹ ಸಂಸ್ಥೆಗಳನ್ನು ಹುಟ್ಟುಹಾಕಲು ಸಾಧ್ಯ. ದೇವಸ್ಥಾನ ಕಟ್ಟೊದಕ್ಕಿಂತ ಜನರಿಗೆ ಅನ್ನ ಉದ್ಯೋಗ ಕೊಡುವ ಸಂಸ್ಥೆಗಳ ಸ್ಥಾಪನೆಗೆ ಹೆಚ್ಚು ಮಹತ್ವವಿದೆ. ಸಂಘಟನೆಯಿಂದ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೂ ಶಿಕ್ಷಕರು ಸೇರಿ ಆರಂಭಿಸಿರುವ ಈ ಸಂಸ್ಥೆ ಉದಾಹರಣೆಯೂ ಆಗಿದೆ.
ಗೃಹ ಸಚಿವರ ಮನೆಗೆ ಮುತ್ತಿಗೆ ಪ್ರಕರಣ; ಜೆ.ಸಿ.ನಗರ ಠಾಣೆಯ ಇಬ್ಬರು ಸಸ್ಪೆಂಡ್
ಪ್ರಾಮಾಣಿಕ ನಿರ್ವಹಣೆ ಅತಿ ಮುಖ್ಯವಾಗಿದೆ. ಧರ್ಮಸ್ಥಳ ಗ್ರಾಮೀಣ ಯೋಜನೆಯಂತೆ ಕಾರ್ಯನಿರ್ವಹಿಸಬೇಕು. ಮಧ್ಯಮ ವರ್ಗದವರಿಂದಲೇ ನಡೆಯುವ ವ್ಯವಹಾರದಲ್ಲಿ ಪ್ರಾಮಾಣಿಕತೆ ಇರಲಿ ಎಂದು ಶುಭ ಕೋರಿದರು. ಮಾಜಿ ಸಚಿವ ರತ್ನಾಕರ್ ಮಾತನಾಡಿ, ಸಂಸ್ಥೆಯಲ್ಲಿ ಸಾಕಷ್ಟು ಜನರಿಗೆ ಉದ್ಯೋಗ ಕಲ್ಪಿಸಿರುವುದು ಪ್ರಶಂಸನೀಯ. ಈ ಸಂಘಟನೆಯಿಂದ ಮಾದರಿಯಾಗಿ ಆರಂಭಗೊಂಡಿರುವ ಹೈಪರ್ ಮಾರ್ಟ್ ಜನಪರ ನಿರ್ವಹಣೆಯೊಂದಿಗೆ ಪಾರದರ್ಶಕವಾಗಿ ಕಾರ್ಯನಿರ್ವಹಿಸುವಂತಾಗಲಿ ಎಂದರು.
ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ಎಂ ಮಂಜುನಾಥಗೌಡ ಮಾತನಾಡಿ, ಈಗಾಗಲೇ 27 ಜಿಲ್ಲಾ ವ್ಯಾಪ್ತಿಗೆ ತನ್ನ ಕಾರ್ಯವನ್ನು ವಿಸ್ತರಿಸಿಕೊಂಡಿರುವ ಈ ಸಂಘಟನೆ ಶಿಕ್ಷಕರಿಗೆ ರಿಯಾಯಿತಿ ದರದಲ್ಲಿ ನಿವೇಶನವನ್ನು ಒದಗಿಸಿದೆ. ಷೇರುದಾರರ ಹಿತವನ್ನು ಕಾಯುವಂತಾಗಲಿ ಎಂದು ಹೇಳಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸೌಹಾರ್ದ ಸಹಕಾರಿಯ ಅಧ್ಯಕ್ಷ ಮಹಾಬಲೇಶ್ವರ ಹೆಗ್ಡೆ, ಸಂಸ್ಥೆ ಬೆಳೆದು ಬಂದ ಬಗ್ಗೆ ವಿವರಿಸಿ, 2008 ರಲ್ಲಿ 5.40 ಲಕ್ಷಗಳಲ್ಲಿ ಆರಂಭಗೊಂಡ ಸಂಘ ಪ್ರಸ್ತುತ 100ಕ್ಕೂ ಅಧಿಕ ತಾಲೂಕಿನಲ್ಲಿ ಕಾರ್ಯ ಚಟುವಟಿಕೆ ನಡೆಸುತ್ತಿದೆ.
ಗೃಹ ಸಚಿವರ ಮನೆ ಮೇಲಿನ ದಾಳಿ ಕಾನೂನು ಕುಸಿತಕ್ಕೆ ಸಾಕ್ಷಿ: ಪ್ರಿಯಾಂಕ್ ಖರ್ಗೆ
400 ಕೋಟಿಗೂ ಅಧಿಕ ಮೊತ್ತದ ವ್ಯವಹಾರ ನಡೆಸುತ್ತಿದೆ. ಸಹಕಾರ ನೀಡಿದವರಿಗೆ ಅಭಿನಂದನೆಯನ್ನು ಸಲ್ಲಿಸಿದರು. ಪಪಂ ಅಧ್ಯಕ್ಷೆ ಶಬನಂ, ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಎಂ.ಬಿ.ಚೆನ್ನವೀರಪ್ಪ, ರಾಜ್ಯ ಸೌಹಾರ್ದ ಸಹಕಾರಿ ನಿರ್ದೆಶಕ ಪ್ರಸನ್ನಕುಮಾರ್, ರಾಜ್ಯ ಅಪೆಕ್ಸ್ ಬ್ಯಾಂಕಿನ ನಿರ್ದೇಶಕ ಎಚ್.ಎನ್. ವಿಜಯದೇವ್, ಪಪಂ ಸದಸ್ಯರು ಆಹ್ವಾನಿತರು ವೇದಿಕೆಯಲ್ಲಿ ಇದ್ದರು.