Chamarajnagara : ಜಿಲ್ಲೆಯಲ್ಲೀಗ ಮಹಿಳಾ ಅಧಿಕಾರಿಗಳದ್ದೇ ದರ್ಬಾರ್‌

By Contributor AsianetFirst Published Nov 16, 2021, 10:11 AM IST
Highlights
  • ಚಾಮರಾಜನಗರ ಜಿಲ್ಲಾಧಿ​ಕಾರಿ ಡಾ.ಎಂ.ಆರ್‌.ರವಿ ವರ್ಗಾವಣೆಯಾಗಿದ್ದು, ನೂತನ ಜಿಲ್ಲಾಧಿಕಾರಿಯಾಗಿ 2012ನೇ ಬ್ಯಾಚಿನ ಅಧಿ​ಕಾರಿ ಚಾರುಲತಾ ಸೋಮಲ್‌ ಅವರು ನೇಮಕ
  • ಚಾಮರಾಜನಗರ ಜಿಲ್ಲೆಯ ಮೂರು ಪ್ರಮುಖ ಹುದ್ದೆಗಳಲ್ಲಿ ಮಹಿಳೆಯರು ಅಧಿಕಾರ 

  ಚಾಮರಾಜನಗರ (ನ.16):  ಚಾಮರಾಜನಗರ (Chamarajanagar) ಜಿಲ್ಲಾಧಿ​ಕಾರಿ ಡಾ.ಎಂ.ಆರ್‌.ರವಿ (MR Ravi) ವರ್ಗಾವಣೆಯಾಗಿದ್ದು, ನೂತನ ಜಿಲ್ಲಾಧಿಕಾರಿಯಾಗಿ (DC) 2012ನೇ ಬ್ಯಾಚಿನ ಅಧಿ​ಕಾರಿ ಚಾರುಲತಾ ಸೋಮಲ್‌ (Charulatha somal) ಅವರು ನೇಮಕವಾಗಿದ್ದಾರೆ. ಈ ಮೂಲಕ ಚಾಮರಾಜನಗರ ಜಿಲ್ಲೆಯ ಮೂರು ಪ್ರಮುಖ ಹುದ್ದೆಗಳಲ್ಲಿ ಮಹಿಳೆಯರು ಅಧಿಕಾರ (Lady officers) ನಡೆಸುವಂತಾಗಿದೆ.

ಈಗಾಗಲೇ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಕಾತ್ಯಾಯಿನಿ ದೇವಿ (kathyayini Devi), ಎಸ್ಪಿಯಾಗಿ ದಿವ್ಯಾ ಸಾರಾ ಥಾಮಸ್‌ (Divya sara Thomas), ಜಿಪಂ ಸಿಇಒ (ZP CEO) ಆಗಿ ಕೆ.ಎಂ.ಗಾಯತ್ರಿ (KM Gayatri) ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದೀಗ ಚಾರುಲತಾ ಸೋಮಲ್‌ ಅವರು ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಈ ಹಿಂದೆ ಚಾರುಲತಾ ಸೋಮಲ್‌ ಅವರು ಶಿವಮೊಗ್ಗ ನಗರಪಾಲಿಕೆ (Shivamogga) ಆಯುಕ್ತರಾಗಿ, ಕೊಡಗು ಜಿಪಂ ಸಿಇಒ ಮತ್ತು ಜಿಲ್ಲಾಧಿಕಾರಿಯಾಗಿ ನಂತರ ರಾಯಚೂರು (Raichur) ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.

ಜಿಲ್ಲಾಧಿಕಾರಿಯಾಗಿದ್ದ ಡಾ.ಎಂ.ಆರ್‌.ರವಿ ಆಮ್ಲಜನಕ ದುರಂತ (Oxyzen tragedy), ನೋ ವ್ಯಾಕ್ಸಿನ್‌ - ನೋ ರೇಷನ್‌, ಗಣಪತಿ ಮೆರವಣಿಗೆಗೆ ಅವಕಾಶ ಕೊಡದಿರುವುದು ಸೇರಿ ಕೆಲ ಚರ್ಚಿತ ವಿಚಾರಗಳ ಕೇಂದ್ರ ಬಿಂದುವಾಗಿದ್ದರು. ಇದಲ್ಲದೆ ಚೆಲುವ ಚಾಮರಾಜನಗರ ಯೋಜನೆ, ಸಾಕ್ಷರತಾ ಯೋಜನೆ, ಪುನೀತ್‌ (Puneeth Rajkumar) ಅವರನ್ನು ರಾಯಭಾರಿಯನ್ನಾಗಿಸಿದ್ದು, ಕೊರೋನಾ (Corona) ಮೊದಲನೇ ಅಲೆಯಲ್ಲಿ ಮೂರು ತಿಂಗಳು ಹಸಿರು ವಲಯದಲ್ಲಿ ಜಿಲ್ಲೆಯನ್ನು ಉಳಿಸಿಕೊಂಡಿದ್ದು ಸೇರಿ ಹಲವು ವಿಚಾರಗಳಿಗಾಗಿ ಮೆಚ್ಚುಗೆಗೂ ಪಾತ್ರವಾಗಿದ್ದರು.

IPS ಅಧಿಕಾರಿಗಲ ಎತ್ತಂಗಡಿ : 

5 ಐಪಿಎಸ್ (IPS) ಅಧಿಕಾರಿಗಳನ್ನು ವರ್ಗವಾಣೆ ಮಾಡಿ ಕರ್ನಾಟಕ ಸರ್ಕಾರ 9Karnataka Government) ಇಂದು (ಅ.30) ಆದೇಶ ಹೊರಡಿಸಿದೆ.

ಸುಮನ್ ಡಿ. ಪನ್ನೇಕರ್, ಇಷಾ ಪಂತ್, ಯತೀಶ್​ ಎನ್. ಸೇರಿದಂತೆ ಐವರು ಖಡಕ್ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ (Transffer) ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ನೇಮಕ ಮಾಡಿದ್ದ ಸರ್ಕಾರದಿಂದಲೇ ತಡೆ: ಖಡಕ್ ಅಧಿಕಾರಿಗೆ ಬೆದರಿದ್ರಾ ಮಂಡ್ಯ ರಾಜಕೀಯ ನಾಯಕರು?

ತೀವ್ರ ವಿವಾದಕ್ಕೀಡಾಗಿದ್ದ ಮಂಡ್ಯ (mandya) ಎಸ್​ಪಿ ಸ್ಥಾನಕ್ಕೆ ಸುಮನ್ ಡಿ. ಪನ್ನೇಕರ್ ಅವರ ಬದಲು ಯತೀಶ್ ಎನ್. ಅವರನ್ನು ನೇಮಕ ಮಾಡಲಾಗಿದೆ. ಮಂಡ್ಯ ಎಸ್​ಪಿಯಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲೇ ಸುಮನ್ ಡಿ. ಪನ್ನೇಕರ್ ಅವರನ್ನು ಉತ್ತರ ಕನ್ನಡದ ಎಸ್​ಪಿಯಾಗಿ ಎತ್ತಂಗಡಿ ಮಾಡಲಾಗಿದೆ. 

ಮಂಡ್ಯ ನೂತನ ಎಸ್‌ಪಿಯಾಗಿ ಎನ್. ಯತೀಶ್, ಉತ್ತರ ಕನ್ನಡ ಎಸ್‌ಪಿಯಾಗಿ ಸುಮನ್ ಡಿ. ಪನ್ನೇಕರ್, ಕಲಬುರಗಿ ಎಸ್​ಪಿಯಾಗಿ ಇಷಾ ಪಂತ್, ಗದಗದ ಎಸ್​ಪಿಯಾಗಿ ಎಸ್.ಪಿ. ದೇವರಾಜ್, ಮೈಸೂರಿನ ಪೊಲೀಸ್ ಅಕಾಡೆಮಿ ಉಪ ನಿರ್ದೇಶಕಿಯಾಗಿ ಡಾ. ಸಿಮಿ ಮರಿಯಮ್ ಜಾರ್ಜ್ ಅವರನ್ನು ವರ್ಗಾವಣೆ ಮಾಡಲಾಗಿದೆ.

ಚರ್ಚೆಗೆ ಗ್ರಾಸವಾಗಿದ್ದ ಮಂಡ್ಯ ಎಸ್ಪಿ
ಅ. 20ರಂದು ಮಂಡ್ಯ ಎಸ್​ಪಿ ಡಾ.ಎಂ. ಅಶ್ವಿನಿ ಅವರನ್ನು ವರ್ಗಾವಣೆಗೊಳಿಸಿದ್ದ ಸರ್ಕಾರ ಆ ಜಾಗಕ್ಕೆ ಸುಮನ್ ಡಿ. ಪನ್ನೇಕರ್​ ಅವರನ್ನು ನೇಮಕ ಮಾಡಿತ್ತು. ಆದರೆ, ಸುಮನ್ ಡಿ. ಪನ್ನೇಕರ್​ ಅವರಿಗೆ ಎಸ್​ಪಿ ಆಗಿ ಚಾರ್ಜ್​ ತೆಗೆದುಕೊಳ್ಳದಂತೆ ಪೊಲೀಸ್ ಇಲಾಖೆ ಅಧಿಕಾರಿಗಳು ಮೌಖಿಕ ಆದೇಶ ನೀಡಿದ್ದರು. 

ಇದರಿಂದ ಸುಮಾರು 10 ದಿನಗಳಿಂದ ಮಂಡ್ಯ ಎಸ್​ಪಿ ಸ್ಥಾನ ಖಾಲಿಯಿತ್ತು.  ಈ ಹಿನ್ನೆಲೆಯಲ್ಲಿ ಈ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಸರ್ಕಾರವೇ ವರ್ಗಾವಣೆ ಮಾಡಿ ಬಳಿಕ ಅಧಿಕಾರ ವಹಿಸಿಕೊಳ್ಳುವುದನ್ನ ತಡೆಹಿಡಿದಿದ್ಯಾಕೆ ಎನ್ನುವ ಪ್ರಶ್ನೆಗಳು ಉದ್ಭವಿಸಿದ್ದವು.

ಅಲ್ಲದೇ  ರಾಜಕೀಯ ಒತ್ತಡದಿಂದ ಮಂಡ್ಯದ ನೂತನ ಮಹಿಳಾ ಎಸ್​ಪಿ ಸುಮನ್ ಡಿ. ಪನ್ನೇಕರ್ ಅಧಿಕಾರ ವಹಿಸಿಕೊಳ್ಳದಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ ಎಂಬ ಆರೋಪವೂ ಕೇಳಿಬಂದಿತ್ತು.

 ಇದೇ ವಿಚಾರವಾಗಿ ಪ್ರತಿಕ್ರಿಯಿಸಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ. ಮಂಡ್ಯ ಎಸ್​ಪಿ ನೇಮಕ ವಿಚಾರದಲ್ಲಿ ಯಾವುದೇ ಒತ್ತಡವಿಲ್ಲ. ಅನೇಕ ಪೊಲೀಸ್ ಅಧಿಕಾರಿಗಳನ್ನ ವರ್ಗಾವಣೆ ಮಾಡಲಾಗಿದೆ. ಅವರಿಗೆ ಡ್ಯೂಟಿಗೆ ರಿಪೋರ್ಟ್ ಮಾಡಿಕೊಳ್ಳುವುದಕ್ಕೆ ಸಮಯ ಇರುತ್ತದೆ ಸ್ಪಷ್ಟನೆ ಕೊಟ್ಟಿದ್ದರು.

click me!