Hubballi| ಭಾರತ ಜಾಗತಿಕ ಆಹಾರ ಪೂರೈಕೆ ಕೇಂದ್ರವಾಗಲಿದೆ: ಕೇಂದ್ರ ಸಚಿವ ಗೋಯಲ್‌

By Kannadaprabha News  |  First Published Nov 16, 2021, 9:39 AM IST

*   ಆಹಾರ ಭದ್ರತೆ ಕಾಯ್ದೆಯನ್ನು ದೇಶದಲ್ಲಿ ಅನುಷ್ಠಾನ 
*   ಯಾವೊಬ್ಬ ವ್ಯಕ್ತಿಯೂ ಕೂಡ ಹಸಿವಿನಿಂದ ಬಳಲಬಾರದು
*   ರೈತರ ಆದಾಯ ದುಪ್ಪಟ್ಟು ಮಾಡುವಲ್ಲಿ ಶ್ರಮಿಸಲಾಗುತ್ತಿದೆ
 


ಹುಬ್ಬಳ್ಳಿ(ನ.16): ಮುಂಬರುವ ದಿನಗಳಲ್ಲಿ ಜಾಗತಿಕವಾಗಿ ಆಹಾರ ಧಾನ್ಯ ಪೂರೈಕೆಯಲ್ಲಿ ಭಾರತವು ದೊಡ್ಡ ಮಟ್ಟದ ಕೇಂದ್ರವಾಗಿ ಪರಿವರ್ತನೆಯಾಗಲಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸರಬರಾಜು ಸಚಿವ ಪಿಯುಷ್‌ ಗೋಯಲ್‌(Piyush Goyal) ಹೇಳಿದ್ದಾರೆ. 

ಹುಬ್ಬಳ್ಳಿಯ(Hubballi) ಬೈರಿದೇವರಕೊಪ್ಪದಲ್ಲಿನ ಭಾರತೀಯ ಆಹಾರ ನಿಗಮದ ಉಗ್ರಾಣಗಳ ಆವರಣದಲ್ಲಿ ನೂತನವಾಗಿ ನಿರ್ಮಿಸಲಾದ ವಿಭಾಗೀಯ ಕಚೇರಿಯ ನೂತನ ಕಟ್ಟಡ, ತಮಿಳುನಾಡಿನ(Tamil Nadu) ತಾಂಜಾವೂರಿನಲ್ಲಿನ ಆಹಾರ ವಸ್ತು ಸಂಗ್ರಹಾಲಯವನ್ನು ವರ್ಚುಯಲ್‌ ಆಗಿ ಉದ್ಘಾಟಿಸಿ ಮಾತನಾಡಿದರು.

Tap to resize

Latest Videos

ಕೋವಿಡ್‌(Covid19) ವೇಳೆ ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ ಯೋಜನೆಯಡಿ 15 ತಿಂಗಳು, ದೇಶದ 80 ಕೋಟಿ ಜನರಿಗೆ 5 ಕೆ.ಜಿ. ಆಹಾರ ಧಾನ್ಯವನ್ನು(Food Grain) ಉಚಿತವಾಗಿ ವಿತರಿಸಲಾಗಿದೆ. ಆಹಾರ ಭದ್ರತೆ ಕಾಯ್ದೆಯನ್ನು(Food Security Act) ದೇಶದಲ್ಲಿ ಅನುಷ್ಠಾನ ಮಾಡಲಾಗಿದೆ. ಯಾವೊಬ್ಬ ವ್ಯಕ್ತಿಯೂ ಕೂಡ ಹಸಿವಿನಿಂದ(Hunger) ಬಳಲಬಾರದು. ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸರ್ಕಾರ ಯೋಜನೆ ತಲುಪಿಸಲು ಅಧಿಕಾರಿಗಳು ಪ್ರಯತ್ನಿಸಬೇಕು. ಕಳೆದ ಸರ್ಕಾರದ ಅವಧಿಗೆ ಹೊಲಿಸಿದರೆ ಆಹಾರ ಧಾನ್ಯ ಖರೀದಿ ಹಾಗೂ ಸಂಗ್ರಹಣೆಯಲ್ಲಿ ಎರಡುಪಟ್ಟು ಹೆಚ್ಚಳವಾಗಿದೆ. ರೈತರ(Farmers) ಆದಾಯ(Income) ದುಪ್ಪಟ್ಟು ಮಾಡುವಲ್ಲಿ ಶ್ರಮಿಸಲಾಗುತ್ತಿದೆ ಎಂದರು.

Hubballi| ರೈತರಿಗೆ ‘ಗಂಧ’ ಹಚ್ಚಿದ MSP Agrotech?

ಪ್ರಪಂಚದಲ್ಲಿ(World) ಕೋವಿಡ್‌ಗಿಂತ ಆಹಾರ ಕೊರತೆಯಿಂದ ಹೆಚ್ಚು ಜನರು ಮೃತರಾಗಿದ್ದಾರೆ(Death). ಈ ವೇಳೆ ಭಾರತ(India) ವಿಶ್ವದ ಬಡ ರಾಷ್ಟ್ರಗಳಿಗೆ(Poorest Countries) ಸಹಾಯದ ಹಸ್ತ(Help) ಚಾಚಿದೆ. ವಿಶ್ವದ ಹಲವು ರಾಷ್ಟ್ರಗಳಲ್ಲಿ ಆಹಾರ ಭದ್ರತೆ ಕಾಯ್ದೆ ರಚನೆ ಬಗ್ಗೆ ಚರ್ಚಿಸಲಾಗುತ್ತಿದೆ. ಭಾರತ ಆಹಾರ ಧಾನ್ಯಗಳ ರಫ್ತಿನಲ್ಲಿ ಹೆಚ್ಚಿನ ಪಾಲು ಹೊಂದಲಿದೆ ಎಂಬ ಆಶಯ ವ್ಯಕ್ತಪಡಿಸಿದರು.

ಆಹಾರ ಮತ್ತು ಸರಬರಾಜು ಇಲಾಖೆ ರಾಜ್ಯ ಖಾತೆ ಸಚಿವೆ ಸಾಧ್ವಿ ನಿರಂಜನ್‌ ಜ್ಯೋತಿ ಮಾತನಾಡಿ, ಆಹಾರ ಸಂಗ್ರಹಣೆ ಹಾಗೂ ವಿತರಣೆಯಲ್ಲಿನ ಲೋಪಗಳನ್ನು ಸರಿಪಡಿಸಿ ಜನರಿಗೆ ಆಹಾರ ವಿತರಣೆ ಮಾಡಲಾಗುತ್ತಿದೆ. ಆಹಾರ ಸಂಗ್ರಹಣೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮಾಡಲಾಗುತ್ತಿದೆ. ಆಹಾರ ನಿಗಮದಿಂದ ಬ್ಲಾಕ್‌ (ತಾಲೂಕು) ಮಟ್ಟದಲ್ಲಿ ಸಂಗ್ರಹಾಲಯ ನಿರ್ಮಾಣ ಮಾಡಿದರೆ ಸಬರಾಜಿನಲ್ಲಿ ಸೋರಿಕೆ ತಡೆಗಟ್ಟಬಹುದು ಎಂದರು.

ಸಚಿವ ಅಶ್ವಿನಿ ಕುಮಾರ್‌ ಚೌಬೇ ಮಾತನಾಡಿ, ಜನರು ಸೇವಿಸುವ ಆಹಾರ ಪೌಷ್ಟಿಕವಾಗಿದ್ದು ಆರೋಗ್ಯ(Health) ವೃದ್ಧಿಸುವ ಹಾಗಿರಬೇಕು. ಹುಬ್ಬಳ್ಳಿ ವಿಭಾಗೀಯ ಕಾರ್ಯಾಲಯವನ್ನು 16 ತಿಂಗಳ ಕಾಲ ಮಿತಿಯೊಳಗೆ ನಿರ್ಮಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಆಹಾರ ನಿಗಮದ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಅತೀಶ್‌ ಚಂದ್ರ, ಕಾರ್ಯನಿರ್ವಾಹಕ ನಿರ್ದೇಶಕ ರವೀಂದ್ರ ಅಗರವಾಲ್‌, ಕರ್ನಾಟಕ ರಾಜ್ಯ ಪ್ರಧಾನ ವ್ಯಸ್ಥಾಪಕ ಜಿ.ನರಸಿಂಹರಾಜು ಸೇರಿ ಮತ್ತಿತರರು ಉಪಸ್ಥಿತರಿದ್ದರು.

ಹುಬ್ಬಳ್ಳಿ ವಿಭಾಗೀಯ ಕಚೇರಿ

1971ರಲ್ಲಿ ಭಾರತೀಯ ಆಹಾರ ನಿಗಮದ(Indian Food Corporation) ವಿಭಾಗೀಯ ಕಚೇರಿಯನ್ನು ಹುಬ್ಬಳ್ಳಿಯಲ್ಲಿ ಆರಂಭಿಸಲಾಯಿತು. ಬಾಡಿಗೆ ಕಟ್ಟಡದಲ್ಲಿ ವಿಭಾಗೀಯ ಕಚೇರಿ ಕಾರ್ಯಾಚರಣೆ ನಡೆಸುತ್ತಿತ್ತು. ಹುಬ್ಬಳ್ಳಿ ಉಣಕಲ್‌ ಬಳಿ ಇರುವ ಭಾರತೀಯ ಆಹಾರ ನಿಗಮದ ಉಗ್ರಾಣಗಳ ಆವರಣದಲ್ಲಿ ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ 1.8 ಕೋಟಿ ವೆಚ್ಚದಲ್ಲಿ ಕಳೆದ ವರ್ಷ ಜೂನ 18ರಂದು ಭೂಮಿಪೂಜೆ ನೆರವೇರಿಸಲಾಗಿತ್ತು.

Hubballi| ಕನ್ನಡಪ್ರಭ ಚಿತ್ರಕಲಾ ಸ್ಪರ್ಧೆಗೆ ಭರ್ಜರಿ ಸ್ಪಂದನೆ

ನೂತನ ಕಟ್ಟದ ವಿಶೇಷತೆ:

ನೂತನವಾಗಿ ನಿರ್ಮಿಸಲಾಗಿರುವ ಕಟ್ಟಡವು ಅಗತ್ಯ ಸಿಬ್ಬಂದಿ ಕಾರ್ಯ ನಿರ್ವಹಿಸಲು ಸ್ಥಳಾವಕಾಶ ಹೊಂದಿದೆ. ವಿದ್ಯುತ್‌ ಉಳಿತಾಯಕ್ಕೆ ಅನುಕೂಲವಾಗುವಂತೆ ಎಲ್‌ಇಡಿ ದೀಪ ಅಳವಡಿಸಲಾಗಿದೆ. ಗುಣಮಟ್ಟದ ನಿಯಂತ್ರಣ ಪ್ರಯೋಗಾಲಯ, ರೆಕಾರ್ಡ್‌ ರೂಮ್‌, ಕ್ಯಾಂಟೀನ್‌, ಪವರ್‌ ಬ್ಯಾಕಪ್‌ ಸೌಲಭ್ಯ, ಸಾಂಸ್ಕೃತಿಕ ಚಟುವಟಿಕೆಗಳಿಗಾಗಿ ಆಡಿಟೋರಿಯಂ ಒಳಗೊಂಡಿದೆ.

ಕಾರ್ಯವ್ಯಾಪ್ತಿ:

ಹುಬ್ಬಳ್ಳಿಯ ವಿಭಾಗೀಯ ಕಚೇರಿ ಉತ್ತರ ಕರ್ನಾಟಕ(North Karnataka) ಭಾಗದ 7 ಕಂದಾಯ ಜಿಲ್ಲೆಗಳಲ್ಲಿ ಕಾರ್ಯವ್ಯಾಪ್ತಿಯನ್ನು ಹೊಂದಿದೆ. 2.6 ಲಕ್ಷ ಮೆಟ್ರಿಕ್‌ ಟನ್‌ ಸಾಮರ್ಥ್ಯದ ಉಗ್ರಾಣ ಜಾಲದ ಮೂಲಕ ಆಹಾರ ಪೂರೈಕೆಯನ್ನು ಮೇಲ್ವಿಚಾರಣೆ ನಿರ್ವಹಿಸುತ್ತಿದೆ. ರಾಜ್ಯದ(Karnataka) ಶೇ. 30ರಷ್ಟು ಪಡಿತರ ಚೀಟಿದಾರರು ಮತ್ತು ಶೇ. 25ರಷ್ಟು ಪಡಿತರ ಅಂಗಡಿಗಳಿಗೆ ಆಹಾರ ಧಾನ್ಯಗಳನ್ನು ಪೂರೈಸುತ್ತಿದೆ.
 

click me!