ರಕ್ತದಾನದಿಂದ ಆರೋಗ್ಯವಂತ ದೇಶ ನಿರ್ಮಾಣ

By Kannadaprabha NewsFirst Published Oct 8, 2022, 5:09 AM IST
Highlights

ರಕ್ತದಾನ ಮಹಾದಾನ, ಯುವ ತರುಣರೇ ತುಂಬಿರುವಂತಹ ಭಾರತೀಯ ಸಮಾಜದಲ್ಲಿ ಆರೋಗ್ಯವಂತ ಭಾರತೀಯ ಸಮಾಜದಲ್ಲಿ ಆರೋಗ್ಯವಂತ ಭಾರತ ನಿರ್ಮಾಣವಾಗಬೇಕಾದರೆ ರಕ್ತದಾನ ಮಾಡಬೇಕು.

ಮೈಸೂರು (ಅ.08): ರಕ್ತದಾನ ಮಹಾದಾನ, ಯುವ ತರುಣರೇ ತುಂಬಿರುವಂತಹ ಭಾರತೀಯ ಸಮಾಜದಲ್ಲಿ ಆರೋಗ್ಯವಂತ ಭಾರತೀಯ ಸಮಾಜದಲ್ಲಿ ಆರೋಗ್ಯವಂತ ಭಾರತ ನಿರ್ಮಾಣವಾಗಬೇಕಾದರೆ ರಕ್ತದಾನ ಮಾಡಬೇಕು. ನಮ್ಮ ಒಂದೊಂದು ಹನಿ ರಕ್ತವು ಒಂದೊಂದು ಜೀವವನ್ನು ಬದುಕಿಸುತ್ತದೆ. ಇದರಿಂದ ಆರೋಗ್ಯವಂತ ಭಾರತ ನಿರ್ಮಾಣವಾಗುತ್ತದೆ ಎಂದು ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ಸಿ. ನಾರಾಯಣ್‌ ಗೌಡ ತಿಳಿಸಿದರು.

ಬ್ಲಡ್‌ ಆನ್‌ ಕಾರ್ಡ್‌ ಕ್ಲಬ್‌ ವತಿಯಿಂದ ನ್ಯೂ ಸಯ್ಯಾಜಿರಾವ್‌ ರಸ್ತೆಯಲ್ಲಿರುವ ಜೀವಧಾರ ರಕ್ತನಿಧಿ  ಕೇಂದ್ರದ ಆವರಣದಲ್ಲಿ 40 ಹೆಚ್ಚು ಬಾರಿ ಸ್ವಯಂ ಪ್ರೇರಿತ ರಕ್ತದಾನ (Blood Donation) ಮಾಡಿದ್ದಂತಹ ರಕ್ತದಾನಿಗಳಿಗೆ ಜೀವ ರಕ್ಷಕ ಸೇವಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಕ್ತದಾನ ಮತ್ತೊಬ್ಬರ ಪ್ರಾಣ ಉಳಿಸುವ ಜತೆಗೆ ವ್ಯಕ್ತಿ ಆರೋಗ್ಯಯುತ ಜೀವನ ನಡೆಸಲು ಸಹಕಾರಿಯಾಗಿದೆ. ರಕ್ತಕ್ಕೆ ಪರ್ಯಾಯ ಇಲ್ಲ. ಆದ್ದರಿಂದ ಸಾವಿನ ಅಂಚಿನಲ್ಲಿರುವವರ ಜೀವ ಉಳಿಸಬೇಕಾದರೆ ರಕ್ತವೇ ನೀಡಬೇಕು. ನೀವು ಮಾಡುತ್ತಿರುವುದು ಶ್ರೇಷ್ಠ ಕೆಲಸ, ದಯವಿಟ್ಟು ಇದನ್ನು ಮುಂದುವರಿಸಬೇಕು. ಈ ಮೂಲಕ ನೀವು ಅನೇಕ ಜೀವಗಳನ್ನು (Life) ಉಳಿಸಬಹುದು ಎಂದು ಅವರು ಮನವಿ ಮಾಡಿದರು.

ಪ್ರತಿಯೊಬ್ಬರೂ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಲು ಮುಂದೆ ಬರಬೇಕು. 18 ರಿಂದ 60 ವಯಸ್ಸಿನ ಆರೋಗ್ಯವಂತ ಪುರುಷರು ಹಾಗೂ ಮಹಿಳೆಯರು ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬೇಕು. ಒಂದು ಯುನಿಟ್‌ ರಕ್ತದಿಂದ ನಾಲ್ಕು ಜನರ ಪ್ರಾಣ ಉಳಿಸಬಹುದಾಗಿದೆ. ಯುವಕರು ರಕ್ತದಾನದ ಕುರಿತು ಇರುವ ಮೌಢ್ಯಗಳನ್ನು ತೊಡೆಯುವ ಕೆಲಸ ಮಾಡಬೇಕು ಎಂದು ಅವರು ಹೇಳಿದರು.

40 ಹೆಚ್ಚು ಬಾರಿ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದ್ದಂತಹ ಚಿರಂಜಿಲಾಲ್‌ ಕುಮವತ್‌, ಸುಮ, ಸಪ್ನಾ ಮಂಡೋತ್‌, ಎಸ್‌. ಜ್ಯೋತಿ, ಎಂ. ಮಹಾದೇವಸ್ವಾಮಿ, ಎ. ಅಕ್ಷಯ್‌ ಕುಮಾರ್‌, ಕೈಲಾಶ್‌ ವೈಷ್ಣವ್‌, ಎಂ. ಅದ್ವಿತ್‌, ಆದಿತ್ಯ ಗುಮ್ಮಾರಾಜು, ಎಚ್‌.ಎಂ. ಶಿವಕುಮಾರ್‌, ಮಮತಾದೇವಿ ರಾಠೋರ್‌, ಅಭಿಮನ್ಯು ಸಿಂಗ್‌, ವಿಕಾಸ್‌ ರಾಠೋರ್‌ ಮೋದಿ, ಪ್ರಕಾಶ್‌ ರಾಠೋರ್‌, ಕೈಲಾಶ್‌ ರಾಠೋರ್‌ ಅವರಿಗೆ ಜೀವ ರಕ್ಷಕ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಮಾಜ ಸೇವಕರಾದ ಚೇತನಾ ಭೂಷಣ್‌, ಸೀಮಂತಿನಿ ಬಿ. ಶರ್ಮಾ, ಬಿಜೆಪಿ ಮಹಿಳಾ ಮೋರ್ಚಾ ನಗರಾಧ್ಯಕ್ಷೆ ಹೇಮಾ ನಂದೀಶ್‌, ಯುವ ಮೋರ್ಚಾ ನಗರ ಉಪಾಧ್ಯಕ್ಷ ಕೆ.ಎಂ. ನಿಶಾಂತ್‌, ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕರಾದ ಗಿರೀಶ್‌, ಮುತ್ತಣ್ಣ, ಬ್ಲಡ್‌ ಆನ್‌ ಕಾಲ್‌ ಕ್ಲಬ್‌ನ ದೇವೇಂದ್ರ ಪರಿಹಾರಿಯ, ಆನಂದ್‌ ಮಂಡೂತ್‌ ಇದ್ದರು.

ಆರೋಗ್ಯಕ್ಕೆ ಮದ್ದು : 

ರಕ್ತದಾನ ಮಹಾದಾನವಾಗಿದ್ದು, ಇದರಿಂದ ಒಂದು ಜೀವ ಉಳಿಸಿದ ಪುಣ್ಯ ನಮಗೆ ಸಿಗುತ್ತದೆ, ಬಹಳಷ್ಟು ಜನರು ರಕ್ತದ ಕೊರತೆಯನ್ನು ಎದುರಿಸುತ್ತಿದ್ದಾರೆ. ಗರ್ಭಧಾರಣೆ, ಹೆರಿಗೆ, ಅಪಘಾತ, ಶಸ್ತ್ರಚಿಕಿತ್ಸೆಗೆ ಒಳಗಾಗುವ ರೋಗಿಗಳು ಸೇರಿದಂತೆ ನಾನಾ ಸಂದರ್ಭಗಳಲ್ಲಿ ಬಹಳಷ್ಟು ಮಂದಿಗೆ ರಕ್ತ ಬಹಳ ಅತ್ಯಗತ್ಯವಾಗಿದೆ. ಆದರೆ ಇಂದು ಅಗತ್ಯ ಇರುವ ಎಲ್ಲರಿಗೂ ರಕ್ತ ದೊರೆಯುತ್ತಿಲ್ಲ.

ರಕ್ತದಾನ ಮಾಡುವುದರಿಂದ ನಮ್ಮ ದೇಹದಲ್ಲಿ ರಕ್ತ ಕಡಿಮೆಯಾಗುತ್ತದೆ ಎಂದು ಅನೇಕರು ರಕ್ತ ನೀಡುತ್ತಿಲ್ಲ. ಇದು ತಪ್ಪು ಕಲ್ಪನೆ. ರಕ್ತದಾನ ಮಾಡುವುದರಿಂದ ನಮಗೆ ಸಾಕಷ್ಟು ಪ್ರಯೋಜನಗಳಿವೆ.  ರಕ್ತದಾನದಿಂದ ಹೃದಯಾಘಾತ, ಕ್ಯಾನ್ಸರ್ ಸೇರಿ ಹಲವು ಮಾರಾಣಾಂತಿಕ ಕಾಯಿಲೆಗಳು ಕಾಡುವ ಸಾಧ್ಯತೆ ಬಹಳ ಕಡಿಮೆ. ರಕ್ತದಾನ ಮಾಡುವುದರಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಅನೇಕ ಪ್ರಯೋಜನಗಳಿವೆ. ರಕ್ತದಾನದಿಂದ ನಮ್ಮ ಒತ್ತಡ ಕಡಿಮೆ ಆಗುತ್ತದೆ. ನಮ್ಮ ದೇಹಕ್ಕೆ ಉತ್ತಮ ಆರೋಗ್ಯ ಸಿಗಲಿದೆ. ಆದ್ದರಿಂದ ಆರೋಗ್ಯವಂತರು ರಕ್ತವನ್ನು ನಿಯಮಿತವಾಗಿ ದಾನ ಮಾಡಬೇಕು. ರಕ್ತದಾನ ಮಾಡುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬ ಮಾಹಿತಿ ಇಲ್ಲಿದೆ. 

ಹೃದಯರೋಗದ ಅಪಾಯ ಕಡಿಮೆ ಮಾಡುತ್ತದೆ
ರಕ್ತದಾನ ಮಾಡುವುದರಿಂದ ನಮ್ಮ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಏಕೆಂದರೆ ನಿಯಮಿತವಾಗಿ ರಕ್ತದಾನ (Blood Donate) ಮಾಡುವುದರಿಂದ ನಿಮ್ಮ ರಕ್ತದ ಸ್ನಿಗ್ಧತೆ (ವಿಸ್ಕಾಸಿಟಿ) ಯನ್ನು ಕಡಿಮೆ ಮಾಡುತ್ತದೆ. ನಿಜ ಹೇಳಬೇಕೆಂದರೆ ಹೆಚ್ಚಿನ ಸ್ನಿಗ್ಧತೆಯು ಹೃದಯಕ್ಕೆ (Heart) ರಕ್ತದ ಹರಿವನ್ನು ಮಿತಿಗೊಳಿಸುತ್ತದೆ ಮತ್ತು ಅಂಗಾಂಗ ವೈಫಲ್ಯ ಅಥವಾ ಹೃದಯಾಘಾತಕ್ಕೆ ಕಾರಣವಾಗಬಹುದು. ಆದರೆ ರಕ್ತದಾನ ಮಾಡುವುದರಿಂದ ನಿಮ್ಮ ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ. ನಿಮ್ಮ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ, ಕಬ್ಬಿಣದ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಹೆಚ್ಚು ಕಬ್ಬಿಣದ ಶೇಖರಣೆ ಹೃದಯಾಘಾತಕ್ಕೆ (Heart attack) ಕಾರಣವಾಗಬಹುದು. ಆದ್ದರಿಂದ ನಿಯಮಿತವಾಗಿ ರಕ್ತದಾನ ಮಾಡುವುದರಿಂದ ದೇಹದಲ್ಲಿನ ಕಬ್ಬಿಣದ ಅಂಶ ಹತೋಟಿಯಲ್ಲಿರುತ್ತದೆ. ಇದರಿಂದ ಹೃದ್ರೋಗದ ಅಪಾಯವನ್ನು ತಡೆಹಿಡಿಯಬಹುದಾಗಿದೆ. ದೇಹದಲ್ಲಿನ ಹೆಚ್ಚಿನ ಕಬ್ಬಿಣದ ಅಂಶವು ವಯಸ್ಕರಲ್ಲಿ ಹೃದಯಾಘಾತ, ಪಾರ್ಶ್ವವಾಯುಗಳಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಆದ್ದರಿಂದ ರಕ್ತದಾನದಿಂದ ಈ ಸಮಸ್ಯೆಗಳು ಬರುವ ಸಾಧ್ಯತೆ ಕಡಿಮೆ.

ಒಬ್ಬ ಮನುಷ್ಯನ ರಕ್ತದಿಂದ ಮೂರು ಜೀವ ಉಳಿಸಲು ಸಾಧ್ಯ

ಕ್ಯಾನ್ಸರ್ ಸಾಧ್ಯತೆ ಕಡಿಮೆ
ರಕ್ತದಾನದಿಂದ ಕ್ಯಾನ್ಸರ್ ಬರುವ ಸಾಧ್ಯತೆ ಕಡಿಮೆ ಇದೆ. ದೇಹದಲ್ಲಿನ ಹೆಚ್ಚಿನ ಮಟ್ಟದ ಕಬ್ಬಿಣವು ಕ್ಯಾನ್ಸರ್ ಗೆ (Cancer) ಕಾರಣವಾಗುತ್ತದೆ. ರಕ್ತದಾನ ಮಾಡುವ ಮೂಲಕ ನಿಮ್ಮ ದೇಹದಲ್ಲಿನ ಕಬ್ಬಣದ  ಅಂಶವನ್ನು ಹತೊಟಿಯಲ್ಲಿ ಇಟ್ಟುಕೊಳ್ಳಬಹುದಾಗಿದೆ. ಇದರಿಂದ ಕ್ಯಾನ್ಸರ್ ಬರುವ ಅಪಾಯವನ್ನು ಕಡಿಮೆ ಮಾಡಬಹುದು. ಇತ್ತೀಚಿನ ಅಧ್ಯಯನಗಳು ರಕ್ತದಲ್ಲಿನ (Blood) ಕಬ್ಬಿಣದ ಮಟ್ಟವನ್ನು ಕಡಿಮೆ ಮಾಡುವುದರಿಂದ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಬಹುದು ಎಂದು ತೋರಿಸಿದೆ.

ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು
ರಕ್ತದಾನದಿಂದ ಮಾನಸಿಕ ಆರೋಗ್ಯ (Mental Health) ಸಿಗಲಿದೆ. ಜೀವವನ್ನು ಉಳಿಸಲು ವೈದ್ಯರೇ ಆಗಬೇಕೆಂದಿಲ್ಲ, ರಕ್ತದಾನಿಯಾದರೂ ಸಾಕು. ಈ ಮನೋಭಾವನೆಯಿಂದ ನೀವು ಉತ್ತಮ ಸೇವೆಯನ್ನು ಮಾಡಿದ ಬಗ್ಗೆ ನಿಮಗೆ ಹರ್ಷವೆನಿಸುತ್ತದೆ. ಯಾರಾದರೂ ಸಂಕಷ್ಟದಲ್ಲಿದ್ದಾಗ ರಕ್ತದ ಅವಶ್ಯಕತೆ ಇದೆ. ಅಂತಹ ತುರ್ತು ಸಂದರ್ಭಗಳಲ್ಲಿ ನೀವು ರಕ್ತದಾನ ಮಾಡುವ ಮೂಲಕ ಇನ್ನೊಬ್ಬರ ಜೀವವನ್ನು ಉಳಿಸಬಹುದು. ಇದರಿಂದ ಉಂಟಾಗುವ ಸಂತೋಷವು ನಿಮ್ಮ ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ. ಮಾನಸಿಕವಾಗಿ (Mentally) ನೀವು ಬಹಳ ಬಲಶಾಲಿಯಾಗುತ್ತೀರಿ.

click me!