ಮರಗಳನ್ನೇ ಮಕ್ಕಳೆಂದು ಭಾವಿಸಿರುವ ಸಾಲುಮರದ ತಿಮ್ಮಕ್ಕ

By Kannadaprabha News  |  First Published Oct 8, 2022, 4:52 AM IST

ಜಗತ್ತಿನ ಇತಿಹಾಸದಲ್ಲಿ ಮರಗಳನ್ನೇ ತಮ್ಮ ಮಕ್ಕಳು ಎಂದು ಭಾವಿಸಿ ಗಿಡಗಳನ್ನು ನೆಟ್ಟಿಪೋಷಿಸಿ ಬೆಳೆಸಿದವರಲ್ಲಿ ಸಾಲುಮರದ ತಿಮ್ಮಕ್ಕ ಅವರು ಮೊದಲಿಗರು ಎಂದು ದತ್ತು ಪುತ್ರ ಉಮೇಶ್‌ ಹೇಳಿದರು.


ಎಚ್‌.ಡಿ. ಕೋಟೆ(ಅ.08):  ಜಗತ್ತಿನ ಇತಿಹಾಸದಲ್ಲಿ ಮರಗಳನ್ನೇ ತಮ್ಮ ಮಕ್ಕಳು ಎಂದು ಭಾವಿಸಿ ಗಿಡಗಳನ್ನು ನೆಟ್ಟಿಪೋಷಿಸಿ ಬೆಳೆಸಿದವರಲ್ಲಿ ಸಾಲುಮರದ ತಿಮ್ಮಕ್ಕ ಅವರು ಮೊದಲಿಗರು ಎಂದು ದತ್ತು ಪುತ್ರ ಉಮೇಶ್‌ ಹೇಳಿದರು.

ತಾಲೂಕಿನ ನಾಗರಹೊಳೆ (Nagarahole)  ಅರಣ್ಯ ವ್ಯಾಪ್ತಿಯ ಅಂತರಸಂತೆ ವನ್ಯಜೀವಿ ವಲಯದ ಕಾಕನಕೋಟೆ ಸಫಾರಿ ಕೇಂದ್ರದಲ್ಲಿ ನಡೆದ 68ನೇ ವನ್ಯಜೀವಿ ಸಪ್ತಹದ ಸಮಾರೋಪ ಸಮಾರಂಭವನ್ನು ವೃಕ್ಷ ಮಾತೆ ನಾಡೋಜ ಡಾ. ಸಾಲುಮರದ ತಿಮ್ಮಕ್ಕ ಗಿಡ ನೆಟ್ಟು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

Tap to resize

Latest Videos

ಬಳಿಕ ಅವರ ಪರವಾಗಿ ಮಾತನಾಡಿದ ಉಮೇಶ್‌, ಕಡು ಬಡತನದಲ್ಲಿ ಹುಟ್ಟಿದ ಸಾಲುಮರದ ತಿಮ್ಮಕ್ಕ (Saalu Marada Thimmakka)  ಅವರು ಅರ್ಧ ದಿನ ಕೂಲಿ ಮಾಡಿ ಉಳಿದ ಸಮಯದಲ್ಲಿ ಮರಗಳನ್ನು ತಮ್ಮ ಮಕ್ಕಳಂತೆ ಪೋಷಿಸಿ ಸಲಹಿವರು. ಸಾಲುಮರದ ತಿಮ್ಮಕ್ಕ ಅವರು ಸಾಕಷ್ಟುವರ್ಷಗಳಿಂದ ಲಕ್ಷಾಂತರ ಸಸಿಗಳನ್ನು ನೆಟ್ಟು ಮರವಾಗಿಸಿದ್ದಾರೆ. ಇಂದಿಗೂ ಅವರ ನರ್ಸರಿಯ ಮೂಲಕ ಪ್ರತಿ ವರ್ಷ ಸುಮಾರು 25 ಸಾವಿರಕ್ಕೂ ಅಧಿಕ ಸಸಿಗಳನ್ನು ಬೆಳೆಸಿ ನೆಡುವವರಿಗೆ ಹಂಚಲಾಗುತ್ತಿದೆ. ಅವರು ಸಹ ವಿವಿಧ ಭಾಗಗಳಲ್ಲಿ ನೆಟ್ಟು ಪೋಷಿಸುತ್ತಿದ್ದಾರೆ. ಇವರ ಸೇವೆಯನ್ನು ಗುರುತಿಸಿ ಸಾಕಷ್ಟುಪ್ರಶಸ್ತಿಗಳು ಇವರನ್ನು ಹರಸಿ ಬಂದಿವೆ. ಹಾಗೂ ಮುಖ್ಯಮಂತ್ರಿಗಳು ಸಹ ಸಾಲುಮರದ ತಿಮ್ಮಕ್ಕ ಅವರಿಗೆ ಪರಿಸರದ ರಾಯಭಾರಿಯನ್ನಾಗಿಸಿ ಸಚಿವ ಸಂಪುಟ ದರ್ಜೆಯ ಸ್ಥಾನಮಾನವನ್ನು ನೀಡಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು.

ಪರಿಸರ ವನ್ಯಜೀವಿಗಳಿಲ್ಲವಾದರೆ ಮನುಷ್ಯನ ಬದುಕಿಲ್ಲ. ವನ್ಯಜೀವಿಗಳಿದ್ದರೆ ಮಾತ್ರ ಜೀವನಚಕ್ರ ಸುಗಮವಾಗಿ ಸಾಗಲು ಸಾಧ್ಯ. ಈಗಾಗಲೇ ಆ ಚಕ್ರವನ್ನು ನಾವು ಕಳೆದುಕೊಂಡಿದ್ದೇವೆ. ಆದ್ದರಿಂದ ಅವುಗಳ ಸಂರಕ್ಷಣೆ ನಮ್ಮೆಲ್ಲರ ಸಿದ್ಧವಾಗಬೇಕು. ಆದ್ದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಜಾಗೃತ ವಹಿಸಿ ಯಾವುದೇ ರೀತಿಯ ತಪ್ಪು ಮಾಡದೆ ಅರಣ್ಯವನ್ನು ಸಂರಕ್ಷಣೆ ಸಂರಕ್ಷಿಸಬೇಕಾಗಿದೆ. ಒಂದು ವೇಳೆ ಅರಣ್ಯ ಇಲಾಖೆಯ ಅಧಿಕಾರಿಗಳು ತಪ್ಪು ಮಾಡಿದ್ದಲ್ಲಿ ಇಡೀ ದೇಶ ನಾಶವಾಗುವ ಸಾಧ್ಯತೆ ಇದೆ ಎಂದರು.

ಇದೆ ವೇಳೆ ವನ್ಯಜೀವಿ ಸಪ್ತಾಹದ ಅಂಗವಾಗಿ ವಿವಿಧ ಕ್ರೀಡೆ ಹಾಗೂ ರಸಪ್ರಶ್ನೆ ಕಾರ್ಯಕ್ರಮವನ್ನು ನಡೆಸಿದ್ದು, ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜಗತ್‌ರಾಮ…, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಹರ್ಷಕುಮಾರ್‌ ಚಿಕ್ಕನರಗುಂದ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ರಂಗಸ್ವಾಮಿ, ಗೋಪಾಲ…, ಗೌರವ ವನ್ಯಜೀವಿ ಪರಿಪಾಲಕಿ ಕೃತಿಕಾ ಆಲನಹಳ್ಳಿ, ಅಂತರಸಂತೆ ಗ್ರಾಪಂ ಅಧ್ಯಕ್ಷ ಸುಬ್ರಮಣ್ಯ, ಎನ್‌. ಬೆಳ್ತೂರು ಗ್ರಾಪಂ ಅಧ್ಯಕ್ಷರು ಮಹದೇವಮ್ಮ ನರಸಿಂಹೇಗೌಡ, ಪಶುವೈದ್ಯ ರಮೇಶ್‌, ವಲಯ ಅರಣ್ಯ ಅಧಿಕಾರಿಗಳಾದ ಸಿದ್ದರಾಜು, ಮಧು, ಗಿರೀಶ್‌ ಪಿ. ಚೌಕಲೆ, ಹರ್ಷಿತ್‌ಗೌಡ ಇದ್ದರು.

ಸಾಲುಮರದ ತಿಮ್ಮಕ್ಕ ಅವರನ್ನು ನಾನು ಮೊದಲ ಬಾರಿಗೆ ಮೈಸೂರು ಮೃಗಾಲಯದಲ್ಲಿ ಭೇಟಿಯಾಗಿದ್ದೆ, ಅವರ ಸೇವೆಯ ಬಗ್ಗೆ ನನಗೆ ಅಪಾರ ಗೌರವವಿದೆ. ಇಂದು ದೇಶದಲ್ಲಿ ನಾವು ಹೆಚ್ಚಿನ ಸಂಖ್ಯೆಯಲ್ಲಿ ಹುಲಿಗಳು ಹಾಗೂ ಆನೆಗಳನ್ನು ಹೊಂದಿದ್ದೇವೆ ಎಂದರೆ ಅದಕ್ಕೆ ಸಾಲುಮರದ ತಿಮ್ಮಕ್ಕ ಅವರಂತಹ ಪರಿಸರ ಪ್ರೇಮಿಗಳ ಸೇವೆ ಅಂತ್ಯಮೂಲ್ಯವಾಗಿದೆ. ಇಂದು ಅವರು ನಮ್ಮ ಪರಿಸರದ ರಾಯಭಾರಿಯಾಗಿರುವುದು ತಮಗೆಲ್ಲರಿಗೂ ಸಂತಸದ ವಿಚಾರವಾಗಿದೆ. ಅವರ ಸೇವೆಯನ್ನು ನಾವು ಗೌರವಿಸಬೇಕು.

ತಿಮ್ಮಕ್ಕ ರಾಯಭಾರಿ : 

ಮರಗಳನ್ನು ಬೆಳೆಸಿ ವೃಕ್ಷ ಮಾತೆ ಎಂದು ಖ್ಯಾತಿ ಹೊಂದಿರುವ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತೆ ಸಾಲು ಮರದ ತಿಮ್ಮಕ್ಕ ಅವರಿಗೆ ಪರಿಸರ ರಾಯಭಾರಿಯಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಅಲ್ಲದೇ ರಾಜ್ಯ ಸಂಪುಟ ದರ್ಜೆಯ ಸ್ಥಾನಮಾನ ನೀಡಿ ಆದೇಶಿಸಿದೆ. ಇತ್ತೀಚೆಗಷ್ಟೇ ಧಾರವಾಡ ಜಿಲ್ಲೆಯ ನವಲೂರಿನಲ್ಲಿ ಸಾಲು ಮರದ ತಿಮ್ಮಕ್ಕ ಹೆಸರಿನ ವನ ಉದ್ಘಾಟನೆಯಾಗಿತ್ತು.

ಸರ್ಕಾರದಿಂದಲೇ ತಿಮ್ಮಕ್ಕಗೆ ಮನೆ ನಿರ್ಮಾಣ: ತಿಮ್ಮಕ್ಕ ಪರಿಸರ ರಾಯಭಾರಿಯಾಗಿರುವುದರಿಂದ ರಾಜ್ಯ, ಅಂತಾರಾಜ್ಯ ಪ್ರವಾಸ ಕೈಗೊಂಡಾಗ ಅದರ ಸಂಪೂರ್ಣ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಲಿದೆ. ಅವರಿಗೆ ಈಗಾಗಲೇ ನೀಡಿರುವ ಬಿಡಿಎ ನಿವೇಶನದಲ್ಲಿ ಸರ್ಕಾರವೇ ಮನೆ ಕಟ್ಟಿಸಿಕೊಡಲಿದೆ. ಜತೆಗೆ ಸರ್ಕಾರ ಹತ್ತು ಎಕರೆ ಜಮೀನು ನೀಡಲಿದೆ ಎಂದು ಪ್ರಕಟಿಸಿಲಾಗಿದೆ. ತಿಮ್ಮಕ್ಕ ಅವರ ಬಗ್ಗೆ ವೆಬ್‌ಸೈಟ್‌ ಮತ್ತು ತಿಮ್ಮಕ್ಕ ಸೇರಿದಂತೆ ರಾಜ್ಯದಲ್ಲಿರುವ ಇಂತಹ ಮಹಾನ್‌ ಸಾಧಕರನ್ನು ಪರಿಚಯಿಸುವ ವೆಬ್‌ ಸೀರಿಸ್‌ ರೂಪಿಸುವಂತೆ ಈಗಾಗಲೇ ವಾರ್ತಾ ಇಲಾಖೆಗೆ ಸೂಚಿಸಿರುವುದಾಗಿ ಮುಖ್ಯಮಂತ್ರಿ ಬೊಮ್ಮಾಯಿ ಸಾಲುಮರದ ತಿಮ್ಮಕ್ಕ ಅವರ 111ರ ಜನುಮದಿನದ ಸಂಭ್ರಮ ಮತ್ತು ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಹೇಳಿದ್ದರು.

ಸಾಧನೆ ಮಾಡಲು ಯಾವುದೇ ಪದವಿ, ನೆರವು, ಅವಕಾಶದ ಅಗತ್ಯವಿಲ್ಲ. ಕಾಯಕನಿಷ್ಠೆ ಇಟ್ಟುಕೊಂಡು ಎಲ್ಲರಿಗೂ ಒಳ್ಳೆಯದು ಮಾಡಬೇಕು ಎಂಬ ಧ್ಯೇಯ ಇದ್ದರೆ ಜಗತ್ತನ್ನೆ ಬದಲಾವಣೆ ಮಾಡುವ ಶಕ್ತಿ ಆಗಬಹುದು ಎಂಬುದಕ್ಕೆ ತಿಮ್ಮಕ್ಕ ನಿದರ್ಶನ. ಅವರು ತಾವೇ ಅವಕಾಶ ಮಾಡಿಕೊಂಡು ಸಾಧನೆ ಮಾಡಿದವರು. ಅವರ ಸಾಧನೆ ಚಿರಸ್ಥಾಯಿ ಆಗಿರುತ್ತದೆ ಎಂದು ತಿಳಿಸಿದ್ದರು. ಸಾಲುಮರದ ತಿಮ್ಮಕ್ಕ ಅವರ ಬಗ್ಗೆ ಹೆಚ್ಚು ಹೆಚ್ಚು ಪ್ರಚಾರವಾಗಬೇಕು. ಅವರ ಬಗ್ಗೆ ಪ್ರಚಾರ ಎಂದರೆ ಅದು ಹಸಿರಿನ ಪ್ರಚಾರ. ಯುವಕರಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಹೆಚ್ಚೆಚ್ಚು ಹೆಚ್ಚು ಜಾಗೃತಿ ಮೂಡಿಸಬೇಕು. 

click me!