ಭೀಮಾತೀರದ ಮರ್ಡರ್​​ ರಹಸ್ಯ! : ಜಮೀನಿಗಾಗಿ ನಡೆದಿಲ್ಲ 6 ಜನರ ಕೊಲೆ, ಆ ದಂಧೆಯೇ ಕಾರಣವಂತೆ!

ಭೀಮಾತೀರದ ಮರ್ಡರ್​​ ರಹಸ್ಯ! : ಜಮೀನಿಗಾಗಿ ನಡೆದಿಲ್ಲ 6 ಜನರ ಕೊಲೆ, ಆ ದಂಧೆಯೇ ಕಾರಣವಂತೆ!

Published : Jun 03, 2026, 10:58 AM IST
ವಿಜಯಪುರದ ಭೀಮಾತೀರದಲ್ಲಿ ನಡೆದ ನಿರಾಳೆ ಕುಟುಂಬದ ಆರು ಜನರ ಹತ್ಯಾಕಾಂಡಕ್ಕೆ ಜಮೀನು ವ್ಯಾಜ್ಯ ಕಾರಣವೆಂದು ಭಾವಿಸಲಾಗಿತ್ತು. ಆದರೆ, ಈ ಕೊಲೆಗಳ ಹಿಂದೆ ಭೀಮಾ ನದಿಯ ಮರಳು ದಂಧೆಯ ಹಿಡಿತ ಸಾಧಿಸುವ ಕೋಟಿ ಕೋಟಿ ಹಣದ ದುರಾಸೆ ಇದೆ ಎಂಬ ಹೊಸ ಸತ್ಯ ಇದೀಗ ಚರ್ಚೆಯಾಗುತ್ತಿದೆ.

ವಿಜಯಪುರ ಜಿಲ್ಲೆಯಲ್ಲಿ ಜಮೀನು ವ್ಯಾಜ್ಯಕ್ಕೆ ಬರೊಬ್ಬರಿ ಅರ್ಧ ಡಜನ್‌ ಹೆಣಬಿದ್ದಿದ್ದ ಕಥೆಯನ್ನ ನಾವು ಈ ಹಿಂದೆ ಹೇಳಿದ್ವಿ.. ಭೀಮಾತೀರದಲ್ಲಿ ನಡೆದಿದ್ದ ಹತ್ಯಾಕಾಂಡವನ್ನ ಕಂಡು ಆವತ್ತು ಇಡೀ ರಾಜ್ಯವೇ ಬೆಚ್ಚಿಬಿದ್ದಿತ್ತು. ಚಡಚಣ ಪಟ್ಟಣದ ಪ್ರತಿಷ್ಟಿತ ನಿರಾಳೆ ಕುಟುಂಬದ ಸದಸ್ಯರನ್ನ ಅಟ್ಟಾಡಿಸಿ ಕೊಚ್ಚಿಹಾಕಿದ್ದ ಹಂತಕರು ಇವತ್ತು ಖಾಕಿ ಬಲೆಗೆ ಬಿದ್ದಿದ್ದಾರೆ. ಆದ್ರೆ 25 ಎಕರೆ ಜಮೀನಿಗೆ ಈ ಕೊಲೆಗಳು ನಡೆದಿದ್ವು ಅಂತ ಎಲ್ಲರೂ ಅಂದುಕೊಂಡಿದ್ರು.. ಆದ್ರೆ ಈಗ ಕೇಳಿ ಬರ್ತಿರೋ ಅದೊಂದು ಕಾರಣ ಮಾತ್ರ ಮತ್ತೆ ಭೀಮಾತೀರದ ಮಂದಿಯನ್ನ ಕಕ್ಕಾಬಿಕ್ಕಿಯಾಗೋ ಹಾಗೇ ಮಾಡಿದೆ. ಅಷ್ಟಕ್ಕೂ ಆ ಕಾರಣವೇನು..? ಭೀಮಾತೀರದ ಗ್ಯಾಂಗ್​ಸ್ಟರ್​​ಗಳ ಕಣ್ಣು ಕುಕ್ಕುತ್ತಿರುವ ಆ ಹೊಸ ದಂಧೆ ಯಾವುದು..? ನಿರಾಳೆ ಕುಟುಂಬದ ಸಾವುಗಳ ಹಿಂದಿನ ಅಸಲಿ ಕಥೆಯೇ ಇವತ್ತಿನ ಎಫ್​​.ಐ.ಆರ್

ಒಂದು ಜಮೀನಿಗಾಗಿ ಒಂದು ಇಡೀ ಕುಟುಂಬವನ್ನೆ ಮುಗಿಸಿದ್ರು ಅಂದ್ರೆ ಅದು ಸುಮ್ಮನೆನಾ? ಅಷ್ಟಕ್ಕು ೬ ಹೆಣಗಳನ್ನ ಕೆಡವುವಂತ ಕರಾಳತೆ ಆ ಜಮೀನಿನಲ್ಲಿ ಏನಿತ್ತು.? ಅನ್ನೋ ಪ್ರಶ್ನೆಗಳ ನಡುವೆಯೇ ಈಗ ಭೀಮಾತೀರದ ಜನ ಮರಳು ದಂಧೆಯ ವಾಸನೆ ಬರ್ತಿದೆ ಎನ್ತಿದ್ದಾರೆ. ಹಾಗಾದ್ರೆ ಏನದು ಮರಳು ದಂಧೆ..? ಒಂದು ಪ್ರತಿಷ್ಟಿತ ಮನೆತನದ ೬ ಜನರನ್ನ ಅನಾಯಾಸವಾಗಿ ಕೊಂದು ಹಾಕ್ತಾರೆ ಅಂದ್ರೆ ಇದರಲ್ಲೀ ಏನೋ ಮಸಲತ್ತಿದೆ ಅನ್ನೋದನ್ನ ಸಾಮಾನ್ಯರಿಗೂ ಅರ್ಥವಾಗುತ್ತೆ. ಭಯಾನಕ ಹತ್ಯೆಯ ಹಿಂದೆ ಹೆಣ್ಣು-ಮಣ್ಣು ಬಿಟ್ಟು ಮರಳು ದಂಧೆಯ ಒಡೆತನದ ಮಾತುಗಳು ಕೇಳಿ ಬರ್ತಿವೆ. ಹೌದು.. ಇದೇ ಭೀಮಾ ನದಿಯ ಮಹರಾಷ್ಟ್ರದ ಭಾಗದಲ್ಲಿ ಮರಳು ಗಣಿಗಾರಿಕೆ ನಡೆಯುತ್ತಿದೆ.. ಆದ್ರೆ ಕರ್ನಾಟಕ ಭಾಗದಲ್ಲಿ ಇನ್ನೂ ಸಹ ಸರ್ಕಾರ ಒಪ್ಪಿಗೆ ನೀಡಿಲ್ಲ.. ಆದ್ರೆ ಇಲ್ಲಿ ಒಂದಿಲ್ಲೊಂದು ದಿನ ಗಣಿಗಾರಿಕೆ ನಡೆಯುತ್ತೆ ಅನ್ನೋದು ಭೀಮಾತೀರದ ಗ್ಯಾಂಗ್​​ಸ್ಟರ್​ಗಳ ನಂಬಿಕೆ.. ಹೀಗಾಗೇ ಕೋಟಿ ಕೋಟಿ ಹಣದ ದುರಾಸೆಯೆ ಈ ದುರಂತಕ್ಕೆ ಕಾರಣ ಅಂತಾ ಭೀಮಾತೀರದ ಮಂದಿ ಮಾತನಾಡ್ತಿದ್ದಾರೆ

25:48ಕ್ರೈಸ್ ಸಂಸ್ಥೆ ಅಧಿಕಾರಿಗಳ ಕರ್ಮಕಾಂಡ ಬಟಾಬಯಲು; ಸುವರ್ಣನ್ಯೂಸ್​ ಕವರ್ ಸ್ಟೋರಿ ತಂಡದ ಮೆಗಾ ಬೇಟೆ
26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
Read more