ಕಲಬುರಗಿ ಪೊಲೀಸ್‌ ಬೇಕಾಬಿಟ್ಟಿ ಧೋರಣೆಗೆ ಅಲೋಕ್‌ ಕುಮಾರ್‌ ಕಿಡಿ..!

By Kannadaprabha News  |  First Published Jul 22, 2022, 1:30 AM IST

ಎಡಿಜಿಪಿ ಅಲೋಕ ಕುಮಾರ್‌ ಕ್ಲಾಸ್‌ನಿಂದ ಪಾಠ ಕಲಿಯುವುದೆ ಕಲಬುರಗಿ ಖಾಕಿ ಪಡೆ?


ಶೇಷಮೂರ್ತಿ ಅವಧಾನಿ

ಕಲಬುರಗಿ(ಜು.22):  ಖಾಕಿ ಫೈರ್‌ ಬ್ರ್ಯಾಂಡ್‌, ರಾಜ್ಯದ ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕ (ಕಾನೂನು- ಸುವ್ಯವಸ್ಥೆ) ಅಲೋಕ್‌ ಕುಮಾರ್‌ 2 ದಿನಗಳ ಭೇಟಿ ಕಲಬುರಗಿ ಪೊಲೀಸರಿಗೆ ಬಿಸಿಯಂತು ಮುಟ್ಟಿಸಿದೆ. ಇಲ್ಲಿನ ಆಯುಕ್ತರ ಕಚೇರಿ ಅಂಗಳದಲ್ಲೇ ನಡೆದ ಅಹವಾಲು ಆಲಿಕೆ ಸಭೆಯಲ್ಲಂತೂ ನಗರ ಪೊಲೀಸ್‌ ಕಮೀಷ್ನರ್‌ರಿಂದ ಹಿಡಿದು ಸಿಪಿಐ, ಪಿಎಸ್‌ಐಗಳ ಕಾರ್ಯವೈಖರಿ, ನೊಂದವರ ಪ್ರತಿ ಅವರ ಧೋರಣೆ, ಠಾಣೆಯಲ್ಲಿನ ಅವರ ನಡೆ ನುಡಿಗಳನ್ನೆಲ್ಲ ಒಂದೇ ಉಸಿರಿನಲ್ಲಿ ಹೇಳುತ್ತ ಅಲೋಕ ಕುಮಾರ್‌ ಮುಂದೆ ಕಲಬುರಗಿ ಪೊಲೀಸರ ’ಅಸಲಿ ಮುಖ’ ಸಮಾದ ಎಲ್ಲಾ ವರ್ಗದ ಜನರೇ ತೆರೆದಿಟ್ಟಿರೋದು ಗುಟ್ಟೇನಲ್ಲ.

Tap to resize

Latest Videos

ಭೂಗಳ್ಳರೊಂದಿಗೆ ಪೊಲೀಸರೇ ಕೈ ಜೋಡಿಸಿದ್ದಾರೆಂಬ ಕೊರಗು, ಕಳವಿನ ಪ್ರಕರಣ ಭೇದಿಸುವಲ್ಲಿ ಪೊಲೀಸರಿಗಿಲ್ಲ ಆಸಕ್ತಿ ಎಂಬ ಜನರ ನೋವು- ಯಾತನೆಗಳಿಗೆ ಕಿವಿಯಾಗಿರುವ ಅಲೋಕ ಕುಮಾರ್‌ ಕಲಬುರಗಿಯಲ್ಲಿ ಮೂಲ ಪೊಲೀಸಿಂಗ್‌ಗೇ ಎಳ್ಳು ನೀರಿ ಬಿಡಲಾಗಿದೆಯೋ ಹೇಗೆಂದು ಎಂದು 2 ದಿನಗಳಲ್ಲಿ ತಾವೇ ಖುದ್ದು ಪಾಲ್ಗೊಂಡಿದ್ದಂತಹ ಅದಿಕಾರಿ ಸಬೆ, ಅಹವಾಲು ಆಲಿಕೆ, ಸುದ್ದಿಗೋಷ್ಠಿಗಳಲ್ಲೆಲ್ಲಾ ಬೇಸರ ಹೊರಹಾಕಿದ್ದಾರೆ.

ಭೀಮಾತೀರದಲ್ಲಿ ರಿಯಲ್ ಸಿಂಗಂ ಅಲೋಕ್ ಕುಮಾರ್!‌

ಕಳ್ಳತನ ಕೇಸ್‌ ಭೇದಿಸೋದ್ರಲ್ಲೂ ಖಾಕಿ ಫೇಲ್‌:

ಕಳವಿನ ಪ್ರಕರಣಗಳನ್ನು ಭೇದಿಸುವಲ್ಲಿಯೂ ನಗರ ಖಾಕಿ ಫೇಲ್‌ ಆಗಿದೆ, ಎಫ್‌ಐಆರ್‌ ದಾಖಲೆಯೇ ಇವರ ಸಾಧನೆ, ಪ್ರಕರಣದಲ್ಲಿ ಖದೀಮರ ಹಿಡಿದು ಹೆಡಮುರಿ ಕಟ್ಟೋದಂದ್ರೆ ಕಲಬುರಗಿ ಪೊಲೀಸರಿಗೆ ಅಲರ್ಜಿ ಎಂದು ಜನರನೇಕರು ಪೊಲೀಸರ ಮುಖಕ್ಕೆ ನೇರವಾಗಿ ಹೇಳೋ ಮೂಲಕ ಪೊಲೀಸಿಂಗ್‌ ಹದಗೆಟ್ಟಿದೆ, ರಿಪೇರಿ ಜರೂರತ್ತಿದೆ ಎಂದು ಸಾರಿ ಹೇಳಿರೋದು ಗಮನ ಸೆಳೆದಿದೆ. ಆರ್‌ಜಿ ನಗರದಲ್ಲಂತೂ ಕಳವಾಗಿ ಆರೂವರೆ ವರ್ಷವಾದರೂ ಪ್ರಕರಣ ಭೇದಿಸಿಲ್ಲವೆಂದು ನೊಂದವರು ಪೊಲೀಸ್‌ ಮುಖದ ಮೇಲೆ ಹೇಳಿದ್ದು ಪೊಲೀಸರ ಕಾರ್ಯಕ್ಷಮತೆಯತ್ತಲೇ ಬೆರಳು ಮಾಡಿದಂತಿತ್ತು.

ಸಂಚಾರ ವ್ಯವಸ್ಥೆ ಅಧೋಗತಿ:

ರಾಮ ಮಂದಿರ, ಆಳಂದ ನಾಕಾ, ಖರ್ಗೆ ಪೆಟ್ರೋಲ್‌ ಬಂಕ್‌ ಸರ್ಕಲ್‌ಗಳಲ್ಲಿ ಸಂಕೇತ ದೀಪವಿದ್ದರೂ ಅಪಘಾತಗಳಾಗಿ ಜನ ಸಾಯುತ್ತಿದ್ದಾರೆಂಬಂಶವನ್ನು ಗಂಭೀರವಾಗಿ ಪರಿಗಣಿಸಿರುವ ಎಡಿಜಿಪಿ ಸಂಚಾರ ವಿಭಾಗದ ಡಿಸಿಪಿ, ಎಸಿಪಿಗಳನ್ನುತರಾಟೆಗೆ ತೆಗೆದುಕೊಂಡದ್ದಲ್ಲದೆ ನಿಮ್ಮ ಸಂಸಾರ ಸುಖಕ್ಕೋಸ್ಕರ ಇಲ್ಲಿರೋದು ಬೇಡ, ಇಲಾಖೆಗೋಸ್ಕರ ಕೆಲಸ ಮಾಡಿರಿ, ಇಷ್ಟುದಿನ ಸುಖ ಕಂಡದ್ದಾಯು, ಇನ್ನು ಇಲಾಖೆಯ ಹೆಸರು ಬೆಳೆಸಲು ಕೆಲಸಕ್ಕೆ ಬನ್ನಿರೆಂದು ಹೇಳಿದ ಮಾತುಗಳು ಇಲ್ಲಿರುವ ಪೊಲೀಸ್‌ ವ್ಯವಸ್ಥೆ ಬಗ್ಗೆ ಎಡಿಜಿಪಿ ಅದೆಷ್ಟುರೋಸಿ ಹೋಗಿದ್ದಾರೆಂಬುದಕ್ಕೆ ಕನ್ನಡಿ ಹಿಡಿದಿತ್ತು. ನೋ ಪಾರ್ಕಿಂಗ್‌, ಏಕಮುಖ ರಸ್ತೆ, ಹಾಕರ್‌ ಝೋನ್‌ ಇಂತಹ ಪರಿಕ್ರಮಗಳ ಮೂಲಕ ಸಂಚಾರ ಸಮಸ್ಯೆಗೆ ಪರಿಹಾರ ಹುಡುಕುವಂತೆ ಹೇಳಿದ್ದಲ್ಲದೆ ಆಗಸ್ಟ್‌ ಒಳಗಾಗಿ ಸುಧಾರಣೆ ಕಾಣದೆ ಹೋದಲ್ಲಿ, ಜನ ಯಾರಾದೂರ ಟ್ವೀಟ್‌ ಮೂಲಕವಾಗಲಿ, ದೂರು ನೀಡಿಯಾಗಲಿ ಅವ್ಯವಸ್ಥೆ ಎತ್ತಿ ಓರಿಸಿದರೆ ಪರಿಣಾಮ ನೆಟ್ಟಿಗರೋದಿಲ್ಲವೆಂದೂ ತಾಕೀತು ಮಾಡಿರೋದು ಇಲ್ಲಿನ ಟ್ರಾಫಿಕ್‌ ಪೊಲೀಸರಿಗೆ ನುಂಗಲಾರದ ತುತ್ತಾಗಿದೆ.

Kerur Riot: ಗುಂಪು ಘರ್ಷಣೆಯಲ್ಲಿನ ಗಾಯಾಳುಗಳಿಗೆ ಬಸವಣ್ಣನ ವಚನ ಹೇಳಿದ ಎಡಿಜಿಪಿ ಅಲೋಕ್ ಕುಮಾರ್

ಸಾಧಕ ಪೊಲೀಸರಿಗೆ ಶಹಬಾಸ್‌ಗಿರಿ:

ತಮ್ಮ 2 ದಿನಗಳ ಕಲಬುರಗಿ ಭೇಟಿಯಲ್ಲಿ ಎಡಿಜಿಪಿ ಅಲೋಕ ಕುಮಾರ್‌ ಪೊಲೀಸರನ್ನು ಬರೀ ಟೀಕಿಸಿ ಸುಮ್ಮನಾಗಿಲ್ಲ, ನಗರ ಹಾಗೂ ಜಿಲ್ಲೆಯ ಠಾಣೆಗಳಲ್ಲಿದ್ದು ಅನೇಕ ಅಪರಾಧ ಪ್ರಕರಣಗಳ ತನಿಖೆ, ಖದೀಮರ ಪತ್ತೆಯಲ್ಲಿ ವೃತ್ತಿ ಜಾಣ್ಮೆ ಮೆರೆದು ಇಲಾಖೆಗೇ ಹೆಸರು ತಂದುಕೊಟ್ಟಂತಹ ಅನೇಕ ಅಧಿಕಾರಿಗಳಿಗೂ ಅಲೋಕ ಕುಮಾರ್‌ ಬಹುಮಾನ, ಪ್ರಶಂಸನಾ ಪತ್ರ ನೀಡಿ ಹುರಿದುಂಬಿಸಿದ್ದಾರೆ. ಪ್ರೋತ್ಸಾಹದ ಜೊತೆಗೇ ಅಲೋಕ ಕುಮಾರ್‌ ನಗರ ಹಾಗೂ ಜಿಲ್ಲೆಯ ಪೊಲೀಸ್‌ ಇಲಾಖೆಯ ಹಲವು ಧೋರಣೆಗಳನ್ನು ನೇರವಾಗಿಯೇ ಎತ್ತಿ ತೋರಿಸಿ ಸುಆರಣೆಗೆ ಗಡವು ಸಹ ನೀಡಿದ್ದಾರೆ, ಎಡಿಜಿಪಿ ಗಡವಿನಂತೆ ಇಲ್ಲಿನ ಪೊಲೀಸಿಂಗ್‌ನಲ್ಲಿ ಸುಧಾರಣೆ ಕಾಣಬಹುದೆ ಎಂಬುದಕ್ಕೆ ಕಾಲವೇ ಉತ್ತರಿಸಬೇಕಷ್ಟೆ.

ಪೊಲೀಸರಿಗೆ ಅಲೋಕ್‌ ಕುಮಾರ್‌ ಎಚ್ಚರಿಕೆ ಮಾತುಗಳಿವು

1) ರೌಡಿಸಂ ಮಟ್ಟ ಹಾಕಲೇಬೇಕು, ರೌಡಿಗಳಿಗೆ ಬಾಲ ಬಿಚ್ಚಲು ಬಿಟ್ಟರೆ ಪೊಲೀಸರೆ ಅದಕ್ಕೆ ಹೊಣೆ

2) ನಗರದಲ್ಲಿ ನೋ ಪಾರ್ಕಿಂಗ್‌, ಪಾರ್ಕಿಂಗ್‌ ವಲಯಗಳನ್ನು ಅಧಿಕೃತಗೊಳಿಸಿರಿ

3) ಪಿಎಸ್‌ಐ, ಸಿಪಿಐಗಳು ನಿತ್ಯ ಸಂಜೆ 5 ರಿಂದ 6 ಗಂಟೆ ಕಡ್ಡಾಯವಾಗಿ ಠಾಣೆಯಲ್ಲಿದದು ಜನರನ್ನು ಭೇಟಿ ಮಾಡಬೇಕು

4) ನೊಂದವರು ಠಾಣೆಗೆ ಬಂದರೆ ಪಂಚಾಯ್ತಿ ಮಾಡಬೇಡಿ, ಕೇಸ್‌ ನೋಂದಣಿ ಮಾಡಿ ಕಾನೂನು ಕ್ರಮ ಜರುಗಿಸಿರಿ

5) ಮಹಿಳೆಯರು, ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಖಡಕ್‌ ಕಾನೂನು ಕ್ರಮ ಕೈಗೊಳ್ಳಿ

6) ರೌಡಿಗಳನ್ನ ಗಡಿಪಾರು ಮಾಡೋ ಪ್ರಕ್ರಿಯೆ ಸದಾ ಜೀವಂತವಾಗಿರಲಿ

7) ರಾತ್ರಿ ಗಸ್ತು ಇರುವ ಎಎಸ್‌ಐ, ಎಚ್‌ಸಿಗಳಿಗೆ ಬಂದೂಕು ನೀಡಿರಿ
 

click me!