ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಹಾಗೂ ರಮೇಶ್ ಕುಮಾರ್ ವಿರುದ್ಧ ವರ್ತೂರ್ ಪ್ರಕಾಶ್ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.
ಕೋಲಾರ: ನಿನ್ನನ್ನು ಮುಗಿಸಲು ಕೋಲಾರಕ್ಕೆ ಕರೆಯುತ್ತಿದ್ದಾರೆ. ಕೋಲಾರ ನನ್ನ ಕ್ಷೇತ್ರ. ಇಲ್ಲಿ ನಿನ್ನನ್ನು ಎದುರಿಸಲು ನಾನು ಸಿದ್ಧನಾಗಿದ್ದೇನೆ. ಇಲ್ಲಿ ಯಾವ ಊರಲ್ಲೂ ಕಾಂಗ್ರೆಸ್ ಪಕ್ಷ ಇಲ್ಲ, ಹುಷಾರು. ನಿಮಗೆ ಟೋಪಿ ಹಾಕೋದಕ್ಕೆ ಕೋಲಾರಕ್ಕೆ ಕರೆಯುತ್ತಿದ್ದಾರೆ. ಆದ್ರೆ ನೀನು ನಮ್ಮವನು ಅಂತ ಈ ಸೀಕ್ರೆಟ್ ಹೇಳ್ತಿದೀನಿ ಅರ್ಥ ಮಾಡ್ಕೊ ಸಿದ್ದರಾಮಯ್ಯ ಎಂದು ಏಕವಚನದಲ್ಲೇ ಮಾಜಿ ಸಿಎಂ ಸಿದ್ದರಾಮಯ್ಯಗೆ ವರ್ತೂರು ಪ್ರಕಾಶ್ ಎಚ್ಚರಿಕೆ ನೀಡಿದ್ದಾರೆ.ನೀನು ನಮ್ಮ ಸಮಾಜದವನು,ನಮ್ಮ ಸಮಾಜಕ್ಕೆ ಅವಮಾನ ಹಾಗಬಾರದು ಅಂತ ಕಿವಿಮಾತು ಹೇಳ್ತಾ ಇದೀನಿ. ನಿನ್ನನ್ನು ಮುಗಿಸಲು ರಮೇಶ್ ಕುಮಾರ್ ಕೋಲಾರ ಜಿಲ್ಲೆಗೆ ಕರೆಯುತ್ತಿದ್ದಾನೆ. ನಿನ್ನನು ಭೇಟಿ ಮಾಡಲು ಅವತ್ತು 64 ಜನ ಬಂದಿದ್ರು ಅಷ್ಟೇ ಅದರಲ್ಲಿ 20 ಜನ ಮಾತ್ರ ಕಾಂಗ್ರೆಸ್ ನವ್ರು ಇದ್ರು.ಉಳಿದವರೆಲ್ಲಾ ಬೇರೆ ಭಾಗದವರು.ಈ ಬಾರಿ ರಮೇಶ್ ಕುಮಾರ್ ಸೋಲುತ್ತಾರೆ ಎಂದು ನಿಮ್ಮನ್ನು ಕೋಲಾರಕ್ಕೆ ಕರೆಯುತ್ತಿದ್ದಾರೆ ಎಂದು
ಸಿದ್ದು ವಿರುದ್ಧ ಪಕ್ಷದಲ್ಲೇ ಒಳಸಂಚು
ಇನ್ನೊಂದೆಡೆ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ 1 ವರ್ಷ ಪೂರೈಸುತ್ತಿರುವ ಹಿನ್ನೆಲೆ ಜುಲೈ 28 ರಂದು ದೊಡ್ಡಬಳ್ಳಾಪುರದಲ್ಲಿ ಸಾಧನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಕೋಲಾರದಲ್ಲಿ ವರ್ತೂರು ಪ್ರಕಾಶ್ ನಿವಾಸದ ಬಳಿ ಸಾಧನಾ ಸಮಾವೇಶದ ಪೂರ್ವಭಾವಿ ಸಮಾವೇಶ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ತೋಟಗಾರಿಕೆ ಇಲಾಖೆ ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಸೋಲಿಸಲು ಅವರಲ್ಲೇ ಒಳಸಂಚು ನಡೆಯುತ್ತಿದೆ, ಸಿದ್ದರಾಮಯ್ಯ ಅವರ ವಿರುದ್ಧ ಒಳಸಂಚು ಮಾಡುತ್ತಿರುವವರು ಬಹಳಷ್ಟು ಜನ ಕಾಂಗ್ರೇಸ್ ನಲ್ಲಿ ಇದ್ದಾರೆ. ಸಿದ್ದರಾಮಯ್ಯನವರು ಸ್ವಂತ ತಿಳುವಳಿಕೆಯಿಂದ ಯೋಚನೆ ಮಾಡಬೇಕು, ಏಕೆಂದರೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಪಟ್ಟು ಹಿಡಿದವರನ್ನೆಲ್ಲಾ ಮುಗಿಸಿದ್ದಾರೆ. ಕೆಹೆಚ್ ಮುನಿಯಪ್ಪರನ್ನು ಸಹ ಪಟ್ಟು ಹಿಡಿದು ಮುಗಿಸಿದ್ದಾರೆ ಎಂದು ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಹೇಳಿದರು.
ಇಷ್ಟು ವರ್ಷದ ಬಳಿಕ ರಮೇಶ್‌ಕುಮಾರ್ ಸತ್ಯ ಹೇಳಿದ್ದಾರೆ.
ಸೋನಿಯಾ ಗಾಂಧಿಗೆ ಇಡಿ ನೋಟಿಸ್ ನೀಡಿರುವುದಕ್ಕೆ ಕಾಂಗ್ರೆಸ್ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದ ಅವರು, ತಪ್ಪು ಮಾಡಿದ್ರೆ ಶಿಕ್ಷೆ ಇದ್ದೇ ಇರುತ್ತೆ. ಸಂವಿಧಾನ, ಕಾನೂನು ಏಕೆ ಇರೋದು, ಮಾಡಬಾರದು ಮಾಡಿದ್ರೆ ಸುಮ್ನೆ ಇರಬೇಕಾ? ತನಿಖಾ ಸಂಸ್ಥೆ ದುರುಪಯೋಗ ಮಾಡಿಕೊಳ್ತಿದ್ದಾರೆ ಅನ್ನೋ ದಾಖಲೆ ಇದೆಯಾ? ಗಾಂಧಿ ಕುಟುಂಬದವರು ಎರಡು ತಲೆಮಾರಿಗೆ ಆಗುವಷ್ಟು ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ರಮೇಶ್ ಕುಮಾರ್ ಹೇಳಿದ್ದಾರೆ. ರಮೇಶ್ ಕುಮಾರ್ ಸರಿಯಾಗಿಯೇ ಹೇಳಿದ್ದಾರೆ, ಅದರಲ್ಲಿ ತಪ್ಪೇನು ಇಲ್ಲ. ಇಷ್ಟು ವರ್ಷ ಆದ್ಮೇಲೆ ಸತ್ಯ ಹೇಳಿದ್ದಾರೆ. ರಾಜೀವ್ ಗಾಂಧಿ ಯಿಂದ ಹಿಡಿದು ರಾಹುಲ್ ಗಾಂಧಿವರೆಗೂ ರಮೇಶ್ ಕುಮಾರ್ ಇದ್ದಾರೆ ಅಲ್ವಾ ಎಂದು ಪ್ರಶ್ನಿಸಿದರು.