ಕುಬಟೂರು: ದ್ಯಾಮವ್ವದೇವಿಗೆ ನಟ ಶಿವರಾಜ್‌ಕುಮಾರ್‌ ದೇಣಿ​ಗೆ

By Kannadaprabha News  |  First Published Feb 11, 2023, 9:47 AM IST

ಆನವಟ್ಟಿಸಮೀಪದ ಕುಬಟೂರು ಗ್ರಾಮ​ದಲ್ಲಿ ದ್ಯಾಮವ್ವದೇವಿ ಜಾತ್ರೆ ಅದ್ಧೂ​ರಿ​ಯಾಗಿ ನಡೆ​ಯು​ತ್ತಿದ್ದು, ಶುಕ್ರವಾರ ನೆಚ್ಚಿನ ನಟ ಡಾ.ಶಿವಕುಮಾರ್‌ ಆಗಮಿಸಿದ್ದರು.


ಆನವಟ್ಟಿ (ಫೆ.11) : ಆನವಟ್ಟಿಸಮೀಪದ ಕುಬಟೂರು ಗ್ರಾಮ​ದಲ್ಲಿ ದ್ಯಾಮವ್ವದೇವಿ ಜಾತ್ರೆ ಅದ್ಧೂ​ರಿ​ಯಾಗಿ ನಡೆ​ಯು​ತ್ತಿದ್ದು, ಶುಕ್ರವಾರ ನೆಚ್ಚಿನ ನಟ ಡಾ.ಶಿವಕುಮಾರ್‌ ಆಗಮಿಸಿದ್ದರು.

ಶಿವಣ್ಣ(Shivarajakumar) ಮಾತ್ರ​ವ​ಲ್ಲದೇ, ಟಿಪಿಎಂಎಲ್‌(TPML) ಜಂಟಿ ವ್ಯವಸ್ಥಾಪಕ ನಿರ್ದೇಶಕ ತಿಲಕ್‌ಕುಮಾರ್‌(Tilak kumar), ಕೆಪಿಸಿಸಿ ರಾಜ್ಯ ಒಬಿಸಿ ಘಟಕ ಅಧ್ಯಕ್ಷ ಮಧು ಬಂಗಾರಪ್ಪ(Madhu bangarappa), ನಿರ್ಮಾಪಕಿ ಗೀತಾ ಶಿವರಾಜ್‌ಕುಮಾರ್‌, ಸುಜಾತ ತಿಲಕ್‌ಕುಮಾರ್‌, ಅನಿತಾ ಪವನ್‌ಕುಮಾರ್‌ ಆಗಮಿಸಿ ದೇವಿ ಆರ್ಶೀವಾದ ಪಡೆದರು. ಹ್ಯಾಟ್ರಿಕ್‌ ಹೀರೋ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಆಗಮಿಸಿ, ಸಂಭ್ರಮಿಸಿದರು.

Tap to resize

Latest Videos

Shiva Rajkumar: ಫಿಲಂ ಸಿಟಿಗೆ ಅಪ್ಪು ಹೆಸರಿಟ್ಟರೆ ಸಂತೋಷ, ಒತ್ತಾಯ ಮಾಡಲ್ಲ

‘ವೇದ’ ಚಿತ್ರದ 50ನೇ ದಿನ ಸಂಭ್ರಮವನ್ನು ನಿರ್ಮಾಪಕಿ ಗೀತಾ ಶಿವಕುಮಾರ್‌ ಅಭಿಮಾನಿಗಳೊಂದಿಗೆ ಹಂಚಿಕೊಂಡರು. ಇದೇ ಸಂದರ್ಭದಲ್ಲಿ ಅಭಿಮಾನಿಗಳಿಗಾಗಿ ಶಿವಕುಮಾರ್‌ ಅವರು ‘ಇವನು ಯಾರ ಮಗನೋ, ಹೀಗೌನಲ್ಲ’, ‘ಬೊಂಬೆ ಹೇಳುತೈತೆ, ಬೊಂಬೆ ಹೇಳುತೈತೆ ನೀನೆ ರಾಜಕುಮಾರ’, ‘ವೇದ’ ಚಿತ್ರದ ‘ಯಾವನೋ ಇವನು ಗಿಲಕ್ಕೋ’ ಗೀತೆಗಳನ್ನು ಹಾಡಿ ರಂಜಿಸಿದರು.

ಕುಬಟೂರು ಗ್ರಾಮ(Kubaturu village)ದ ದ್ಯಾಮವ್ವದೇವಿ ಜಾತ್ರೆ(Dyamavva devi jatre)ಗೆ ಮಾಜಿ ಮುಖ್ಯಮಂತ್ರಿ ಎಸ್‌.ಬಂಗಾರಪ್ಪ ಅವರ ಅಳಿಯಂದಿರಾದ ಚಿತ್ರನಟ ಡಾ.ಶಿವರಾಜ್‌ಕುಮಾರ್‌ ಹಾಗೂ ಟಿಪಿಎಂಎಲ್‌ ಜಂಟಿ ವ್ಯವಸ್ಥಾಪಕ ನಿರ್ದೇಶಕ ತಿಲಕ್‌ಕುಮಾರ್‌ ಅವರು ದಂಪತಿ ಸಮೇತ ದೇವಿಗೆ ಭಕ್ತಿ ಸಮರ್ಪಿಸಿ, ತಲಾ 5 ಲಕ್ಷ ದೇಣಿಗೆಯನ್ನು ದೇವಸ್ಥಾನ ಸಮಿತಿಗೆ ನೀಡಿದರು.

ಜಾತ್ರೆ ಮೊದಲ ದಿನವೇ ಬರಲು ಸಾಧ್ಯವಾಗಲಿಲ್ಲ. ಪತ್ನಿ ಗೀತಾ ಅವರ ಕಾಲು ಆಕಸ್ಮಿಕವಾಗಿ ಮುರಿದಿರುವುದರಿಂದ, ನಡೆದಾಡಲು ಸಾಧ್ಯವಾಗದ ಸ್ಥಿತಿ ಆಗಿತ್ತು. ಇನ್ನೂ ಕಾಲು ನೋವು ಇದೆ. ಆದರೆ ದೇವಿ ದರ್ಶನ ಪಡೆಯುವ ಸಲುವಾಗಿ ನೋವನ್ನು ಸಹಿಸಿಕೊಂಡು ಬಂದಿರುವುದಾಗಿ ಶಿವಣ್ಣ ಅಭಿಮಾನಿಗಳಿಗೆ ತಿಳಿಸಿದರು.

ಫೆಬ್ರವರಿ ಫೆಸ್ಟಿವಲ್‌ಗೆ ಸಜ್ಜಾಗಿದೆ ಸ್ಯಾಂಡಲ್‌ವುಡ್: ವೇದ ಬಳಿಕ ಬಹುದೊಡ್ಡ ಸಂಭ್ರಮದಲ್ಲಿ ಚಿತ್ರರಂಗ!

ಸುಜಾತ ತಿಲಕ್‌ಕುಮಾರ್‌ ಮಾತನಾಡಿ, ತಂದೆಯ ಗುಣಗಳನ್ನೇ ಹೊಂದಿರುವ ತಮ್ಮ ಮಧು ಬಂಗಾರಪ್ಪ ಅವರು ಗುರುವಾರ 30 ಸಾವಿರಕ್ಕೂ ಹೆಚ್ಚು ಜನರಿಗೆ ಊಟ ವ್ಯವಸ್ಥೆ ಮಾಡಿ ದೇವಿಗೆ ಭಕ್ತಿ ಸಮರ್ಪಿದ್ದಾರೆ. ತಂದೆ ಕಾಲದಿಂದಲ್ಲೂ ಕುಟುಂಬದವರು ದೇವಿ ಜಾತ್ರೆಯಲ್ಲಿ ಪಾಲ್ಗೊಂಡು ಸಂಭ್ರಮ ಆಚರಿಸುತ್ತಿವೆ. ಗ್ರಾಮಸ್ಥರು ನಮ್ಮ ಮೇಲೆ ಇಟ್ಟಿರುವ ಅಭಿಮಾನಕ್ಕೆ ಹೃದಯ ಪೂರ್ವಕ ಅಭಿನಂದನೆಗಳನ್ನು ತಿಳಿಸಿದರು.

ಕೆಪಿಸಿಸಿ ರಾಜ್ಯ ಒಬಿಸಿ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಮಾತನಾಡಿ, ನಮ್ಮ ಕುಟುಂಬದ ಮೇಲೆ ಈ ಮಣ್ಣಿನ ಋುಣವಿದೆ. ಜಾತ್ಯತೀತವಾಗಿ ತಾಲೂಕಿನ ಜನರ ಅರ್ಶೀವಾದ ಇರುವುದರಿಂದ ಎಷ್ಟೇ ನೋವು ಇದ್ದರೂ, ಗೀತಕ್ಕ ದೇವಿಯ ದರ್ಶನಕ್ಕೆ ಆಗಮಿಸಿದ್ದಾರೆ. ತಾಲೂಕಿನ ಜನರ ಅರ್ಶೀವಾದ ಸದಾ ನಮ್ಮ ಕುಟುಂಬದ ಮೇಲೆ ಇರಲಿ ಎಂದರು.

click me!