ಮೈಸೂರು ಸದ್ಯದಲ್ಲೇ ವಿಶ್ವ ದರ್ಜೆಯ ಉತ್ಕೃಷ್ಟಮಟ್ಟದ ತಾರಾಲಯ ಮತ್ತು ಸಂಶೋಧನಾ ಕೇಂದ್ರದ ನೆಲೆಯಾಗಲಿದ್ದು, ದೇಶದ ಇತರ ಸಂಶೋಧನಾ ಸಂಸ್ಥೆಯೊಂದಿಗೆ ಸಹಯೋಗ ಹೊಂದಲಿದೆ.
ಮೈಸೂರು: ಮೈಸೂರು ಸದ್ಯದಲ್ಲೇ ವಿಶ್ವ ದರ್ಜೆಯ ಉತ್ಕೃಷ್ಟಮಟ್ಟದ ತಾರಾಲಯ ಮತ್ತು ಸಂಶೋಧನಾ ಕೇಂದ್ರದ ನೆಲೆಯಾಗಲಿದ್ದು, ದೇಶದ ಇತರ ಸಂಶೋಧನಾ ಸಂಸ್ಥೆಯೊಂದಿಗೆ ಸಹಯೋಗ ಹೊಂದಲಿದೆ.
ಕಾಸ್ಮಾಲಜಿ ಮತ್ತು ಸಂಶೋಧನಾ ತರಬೇತಿ ಕೇಂದ್ರದ ಕಾಮಗಾರಿ ಚಾಮುಂಡಿಬೆಟ್ಟದ ತಪ್ಪಲಿನ ಮೈಸೂರು ವಿವಿ ಜಾಗದಲ್ಲಿ ನಡೆಯುತ್ತಿದೆ. ಇದರ ವಿಜ್ಞಾನ ಸಂವಹನೆ ಮತ್ತು ಸಾರ್ವಜನಿಕ ಶಿಕ್ಷಣ ಕಾರ್ಯಕ್ರಮ ಪ್ರಾರಂಭವಾಗಿದೆ. ಕಾಸ್ಮೋಸ್ ಭಾರತೀಯ ಖಭೌತ ಸಂಸ್ಥೆ ಮತ್ತು ಮೈಸೂರು ವಿವಿ ಒಪ್ಪಂದವಾಗಿದ್ದು, ಖಗೋಳ ವಿಜ್ಞಾನ ಪ್ರಿಯರಿಗೆ ವರದಾನವಾಗಿದೆ.
undefined
ನಗರದ ಎಕ್ಸೆಲ್ ಪಬ್ಲಿಕ್ ಶಾಲೆಯಲ್ಲಿ ಇತ್ತೀಚೆಗೆ ಇಸ್ರೋದ ಸ್ಪೇಸ್ ಟ್ಯೂಟರ್ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದು, ಮೈಸೂರಿನ ವಿದ್ಯಾರ್ಥಿಗಳಿಗೆ ಸ್ಯಾಟಲೈಟ್ ಟೆಕ್ನಾಲಜಿ ಮತ್ತು ಬಾಹ್ಯಾಕಾಶ ವಿಜ್ಞಾನದಲ್ಲಿ ಶಿಕ್ಷಣ ನೀಡಲು ಮುಂದಾಗಿದೆ. ಇದರ ಭಾಗವಾಗಿ ನಗರದ ಕಾಸ್ಮೋಸ್ ಮತ್ತು ಎಕ್ಸೆಲ್ ಪಬ್ಲಿಕ್ ಶಾಲೆ ಭಾರತೀಯ ಖಭೌತ ವಿಜ್ಞಾನ ಸಂಸ್ಥೆಯ ಸಹಯೋಗದಲ್ಲಿ ಮೇಲೇನಿದೆ- ಹೀಲಿಯಂ ಬಲೂನ್ ಪ್ರಯೋಗವನ್ನು ಆಯೋಜಿಸಿತ್ತು.
7 ರಿಂದ ದ್ವಿತೀಯ ಪಿಯುವರೆಗಿನ ಸುಮಾರು 200 ಮಂದಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು. ಕಾರ್ಯಕ್ರಮವು ಭಾರತೀಯ ಭೌತ ವಿಜ್ಞಾನ ಸಂಸ್ಥೆಗೆ ಸಂಬಂಧಿಸಿದ ದೂರದರ್ಶಕ ಮತ್ತು ಸಂಶೋಧನಾ ಚಟುವಟಿಕೆ ಕುರಿತು ಐಐಎ ಸ್ಕೂಪ್ ವಿಭಾಗದ ಮುಖ್ಯಸ್ಥ ಡಾ. ನೀರುಜ್ ಮೋಹನ್ ರಾಮಾನುಜಂ ಉಪನ್ಯಾಸ ನೀಡಿದರು.
ಬಳಿಕ ಮೈದಾನಕ್ಕೆ ತೆರಳಿ ಹೀಲಿಯಂ ತುಂಬಿದ ಬಲೂನ್ ಹಾರಿ ಬಿಡುವ ಮೂಲಕ ಬಲೂನ್‌ಗಳು ವಿಮಾನಕ್ಕಿಂತಲೂ ಎತ್ತರದಲ್ಲಿ ಹಾರಬಲ್ಲದು ಎಂಬುದನ್ನು 100 ಮೀ. ಎತ್ತರಕ್ಕೆ ಹಾರಿಸುವ ಮೂಲಕ ತೋರಿಸಿಕೊಡಲಾಯಿತು. ಅಲ್ಲದೆ ಎತ್ತರದಲ್ಲಿ ಹಾರಬಲ್ಲ ಬಲೂನ್ ಅನ್ನು ಹೇಗೆ ಬಳಸಬಹುದು ಎಂಬುದನ್ನು ಈ ಪ್ರಯೋಗ ಪ್ರದರ್ಶಿಸಿತು.
140 ಲೀಟರ್ ಹಾಲು ಕೊಡುವ ಹಸು
ನವದೆಹಲಿ (ಫೆ.5): ಜಗತ್ತಲ್ಲಿ ಚೀನಾ ಏನ್ ಮಾಡೋದಿಲ್ಲ ಹೇಳಿ. ಎರಡು ವರ್ಷಗಳ ಹಿಂದೆ ಇಡೀ ವಿಶ್ವಕ್ಕೆ ಕೊರೋನಾ ವೈರಸ್‌ಅನ್ನು ಕೊಟ್ಟ ಚೀನಾ ಈಗ ಅದೇ ವೈರಸ್‌ನಿಂದ ಹೈರಾಣಾಗಿ ಹೋಗಿದೆ. ದೇಶ ವೈರಸ್‌ನಿಂದ ತಾಪತ್ರಯ ಎದುರಿಸುವ ವೇಳೆಗಾಗಲೇ ಅಮೆರಿಕದತ್ತ ಗುಪ್ತಚರ ಬಲೂನ್ ಬಿಟ್ಟು ಭದ್ರತಾ ಆತಂಕವನ್ನೂ ಹುಟ್ಟುಹಾಕಿದೆ. ಇಂತಿರುವ ಚೀನಾ ವಿಜ್ಞಾನ ಕ್ಷೇತ್ರದಲ್ಲೂ ಏನಾದರೊಂದು ಮಾಡುತ್ತಲೇ ಇರುತ್ತದೆ. ಅದು ಎಡವಟ್ಟಾದಾಗ ಜಗತ್ತಿನ ಮೇಲೆ ಹಾಕಿಬಿಟ್ಟು ಸುಮ್ಮನಾಗುತ್ತದೆ. ಅದೇನೇ ಇರಲಿ,ಕೆಲವೊಂದು ಯೋಚನೆಗಳು ಚೀನಾ ದೇಶದ ವಿಜ್ಞಾನಿಗಳಿಗೆ ಬರೋದು ಅಚ್ಚರಿ ಹುಟ್ಟಿಸುವ ಸತ್ಯ. ಪ್ರಾಣಿಗಳ ಮೇಲೆ ದಿನಕ್ಕೊಂದು ಪ್ರಯೋಗ ಮಾಡುವ ಚೀನಾ, ಶೀಘ್ರದಲ್ಲೇ ದಿನಕ್ಕೆ ಬರೋಬ್ಬರಿ 140 ಲೀಟರ್ ಹಾಲು ಕೊಡಬಲ್ಲ ಸೂಪರ್ ಹಸು (ಸೂಪರ್ ಕೌ) ಸಿದ್ಧ ಮಾಡಿದ್ದಾರಂತೆ. ಕ್ಲೋನಿಂಗ್ ಅಥವಾ ಅಬೀಜ ಸಂತಾನೋತ್ಪತ್ತಿ ಮೂಲಕ ಈಗಾಗಲೇ ಮೂರು ಸೂಪರ್ ಹಸುಗಳನ್ನು ಸಿದ್ಧ ಮಾಡಿರುವುದಾಗಿ ಚೀನಾದ ವಿಜ್ಞಾನಿಗಳು ತಿಳಿಸಿದ್ದು, ಈ ದನಗಳು ದಿನಕ್ಕೆ ಕನಿಷ್ಠ 140 ಲೀಟರ್ ಹಾಲು ಕೊಡುತ್ತವೆಯಂತೆ!
ಚೀನಾದ ವಿಜ್ಞಾನಿಗಳು ಹೇಳುವ ಪ್ರಕಾರ ಅವರ ಸಿದ್ದ ಮಾಡಿರುವ ಈ ತಳಿಯ ದನಗಳು (ಸೂಪರ್ ಕೌ), ತಮ್ಮ ಇಡೀ ಜೀವಿತಾವಧಿಯಲ್ಲಿ 100 ಟನ್ ಹಾಲು ಕೊಡಲು ಶಕ್ತವಾಗಿರಲಿದೆಯಂತೆ. 100 ಟನ್ ಹಾಲು ಎಂದರೆ, 2 ಲಕ್ಷದ 83 ಸಾವಿರ ಲೀಟರ್ ಹಾಲು ಅನ್ನೋದು ನಿಮ್ಮ ಗಮನಕ್ಕಿರಲಿ.ಮಾಧ್ಯಮ ವರದಿಗಳ ಪ್ರಕಾರ, ಚೀನಾದ ವಿಜ್ಞಾನಿಗಳು ತಮ್ಮ 'ಸೂಪರ್ ಹಸು' ಸಂತಾನೋತ್ಪತ್ತಿಯನ್ನು ವಾಯುವ್ಯ ವಿಶ್ವವಿದ್ಯಾಲಯದಲ್ಲಿ ಮಾಡಿದ್ದಾರೆ. ಅವರು ಕಳೆದ ಎರಡು ತಿಂಗಳ ಹಿಂದೆ ನಿಂಗ್ಕ್ಸಿಯಾ ಪ್ರದೇಶದಲ್ಲಿ ಈ ಸೂಪರ್ ಕೌಗಳು ಜನಿಸಿವೆ ಎಂದು ಹೇಳಲಾಗುತ್ತಿದೆ. ಮತ್ತು, ಈಗ ಅಲ್ಲಿನ ವಿಜ್ಞಾನಿಗಳ ಗಮನ ಮುಂದಿನ 2 ವರ್ಷಗಳಲ್ಲಿ ಇಂತಹ 1000 ಹಸುಗಳನ್ನು ಉತ್ಪಾದನೆ ಮಾಡುವುದಾಗಿದೆ.