Gadag News: ಮೂರು ದಿನಗಳ ಲಕ್ಕುಂಡಿ ಉತ್ಸವಕ್ಕೆ ಸಿಎಂ ಚಾಲನೆ

Published : Feb 11, 2023, 06:18 AM IST
Gadag News: ಮೂರು ದಿನಗಳ ಲಕ್ಕುಂಡಿ ಉತ್ಸವಕ್ಕೆ ಸಿಎಂ ಚಾಲನೆ

ಸಾರಾಂಶ

ಶಿಲ್ಪಕಲೆಗಳ ತವರು, ನೂರೊಂದು ದೇವಸ್ಥಾನ ಹಾಗೂ ನೂರೊಂದು ಬಾವಿಗಳನ್ನು ಹೊಂದಿರುವ ಐತಿಹಾಸಿಕ ಊರು ಲಕ್ಕುಂಡಿಯಲ್ಲಿ, ಮೂರು ದಿನಗಳ ಕಾಲ ಆಯೋಜಿಸಿರುವ ಸಾಂಸ್ಕೃತಿಕ ಉತ್ಸವಕ್ಕೆ ಶುಕ್ರವಾರ ಅದ್ಧೂರಿ ಚಾಲನೆ ದೊರೆಯಿತು.

ಗದಗ (ಫೆ.11) : ಶಿಲ್ಪಕಲೆಗಳ ತವರು, ನೂರೊಂದು ದೇವಸ್ಥಾನ ಹಾಗೂ ನೂರೊಂದು ಬಾವಿಗಳನ್ನು ಹೊಂದಿರುವ ಐತಿಹಾಸಿಕ ಊರು ಲಕ್ಕುಂಡಿಯಲ್ಲಿ, ಮೂರು ದಿನಗಳ ಕಾಲ ಆಯೋಜಿಸಿರುವ ಸಾಂಸ್ಕೃತಿಕ ಉತ್ಸವಕ್ಕೆ ಶುಕ್ರವಾರ ಅದ್ಧೂರಿ ಚಾಲನೆ ದೊರೆಯಿತು.

ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(CM Basavaraj bommai), ಪ್ರಸ್ತುತ ಮೈಸೂರು ಹಾಗೂ ಹಂಪಿಯನ್ನು ಪ್ರವಾಸೋದ್ಯಮ ಸಕ್ರ್ಯೂಟ್‌ ಮಾಡಲಾಗುತ್ತಿದೆ. ಹಂಪಿ ಪ್ರವಾಸೋದ್ಯಮ(Hampi Tourism) ಸಕ್ರ್ಯೂಟ್‌ ವ್ಯಾಪ್ತಿಯಲ್ಲಿ ಲಕ್ಕುಂಡಿಯನ್ನು ಸಹ ಸೇರಿಸುವ ಮೂಲಕ ಈ ಊರನ್ನು ಜಗತ್ೊ್ರಸಿದ್ಧ ಮಾಡುವ ಇಚ್ಛೆ ಹೊಂದಲಾಗಿದೆ. ಲಕ್ಕುಂಡಿ, ತನ್ನ ಗತ ವೈಭವ ಮರುಕಳುಹಿಸುವಂತೆ ಮಾಸ್ಟರ್‌ ಪ್ಲ್ಯಾನ್‌ ಮಾಡಲಾಗುವುದು ಎಂದು ಭರವಸೆ ನೀಡಿದರು.

ಐತಿಹಾಸಿಕ ಲಕ್ಕುಂಡಿ ಉತ್ಸವಕ್ಕೆ 10ರಂದು ಸಿಎಂ ಚಾಲನೆ

ಮೂರು ದಿನಗಳ ಉತ್ಸವ(Lakkundi Utsav)ದಲ್ಲಿ ಪ್ರತಿ ದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಇದರೊಂದಿಗೆ ತೋಟಗಾರಿಕೆ ಇಲಾಖೆಯಿಂದ ಫಲಪುಷ್ಪ ಪ್ರದರ್ಶನ, ಕುಸ್ತಿ, ಕಬಡ್ಡಿ ಸ್ಪರ್ಧೆ, ವಿಚಾರಗೋಷ್ಠಿ, ಕವಿಗೋಷ್ಠಿ, ಮಹಿಳಾ ಗೋಷ್ಠಿಗಳು ನಡೆಯಲಿವೆ. ಮೊದಲ ದಿನ ಹೈಸ್ಕೂಲ್‌ ಮೈದಾನದಲ್ಲಿ ಧಾರವಾಡ ರಂಗಾಯಣದ ವತಿಯಿಂದ ವೀರರಾಣಿ ಕಿತ್ತೂರು ಚೆನ್ನಮ್ಮನ ಸಾಹಸ, ಜೀವನ ಕುರಿತ ಮೂರು ಗಂಟೆಗಳ ಮೆಗಾ ನಾಟಕ ಪ್ರದರ್ಶನಗೊಂಡಿತು. ವೇದಿಕೆ ಬಳಿ ನೈಜ ಆನೆ, ಒಂಟಿ ಹಾಗೂ ಕುದುರೆಗಳನ್ನು ಕರೆ ತಂದಿರುವುದು ನಾಟಕದ ವಿಶೇಷ.

ಉತ್ಸವದ ನಿಮಿತ್ತ ಇಡೀ ಲಕ್ಕುಂಡಿ(Lakkundi) ಊರು ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ. ಮನೆ ಮನೆಗಳು, ಊರಿನ ಓಣಿಗಳೆಲ್ಲ ತಳಿರು ತೋರಣಗಳಿಂದ, ವಿದ್ಯುತ್‌ ಅಲಂಕಾರದಿಂದ ಕಂಗೊಳಿಸುತ್ತಿವೆ.

ನಾಳೆ ಸಮಾರೋಪ ಸಮಾರಂಭ

ಫೆ. 12 ರಂದು ಸಂಜೆ 5.30ಕ್ಕೆ ಲಕ್ಕುಂಡಿಯ ದಾನ ಚಿಂತಾಮಣಿ ಅತ್ತಿಮಬ್ಬೆ ವೇದಿಕೆಯಲ್ಲಿ ಲಕ್ಕುಂಡಿ ಉತ್ಸವದ ಸಮಾರೋಪ ಸಮಾರಂಭ ಜರುಗಲಿದ್ದು, ಕೇಂದ್ರ ಸಚಿವ ಪ್ರಹ್ಲಾದ ಜೋಶಿ(Pralhad joshi), ವಿಪ ಸಭಾಪತಿ ಬಸವರಾಜ ಹೊರಟ್ಟಿ(Basavaraj horatti)ಘನ ಉಪಸ್ಥಿತಿ ವಹಿಸುವರು. ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ, ಬೃಹತ್‌ ಮತ್ತು ಮಧ್ಯಮ ನೀರಾವರಿ ಸಚಿವ ಗೋವಿಂದ ಕಾರಜೋಳ, ಸಾರಿಗೆ ಮತ್ತು ಪರಿಶಿಷ್ಟಪಂಗಡ ಕಲ್ಯಾಣ ಸಚಿವ ಬಿ.ಶ್ರೀರಾಮುಲು, ನಗರಾಬಿವೃದ್ಧಿ ಸಚಿವ ಬಿ.ಎ. ಬಸವರಾಜ ಅವರುಗಳ ಗೌರವ ಉಪಸ್ಥಿತಿಯಲ್ಲಿ ಜರುಗುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ. ಪಾಟೀಲ ವಹಿಸುವರು.

ಮುಖ್ಯ ಅತಿಥಿಗಳಾಗಿ ರೋಣ ಶಾಸಕ ಕಳಕಪ್ಪ ಬಂಡಿ, ಸಂಸದರಾದ ಶಿವಕುಮಾರ ಉದಾಸಿ, ಪಿ.ಸಿ.ಗದ್ದಿಗೌಡರ, ಶಾಸಕ ಎಚ್‌.ಕೆ.ಪಾಟೀಲ, ವಿಪ ಸದಸ್ಯರಾದ ಎಸ್‌.ವಿ.ಸಂಕನೂರ, ಪ್ರದೀಪ ಶೆಟ್ಟರ್‌, ಸಲೀಂ ಅಹ್ಮದ್‌, ಶಿರಹಟ್ಟಿಶಾಸಕ ರಾಮಣ್ಣ ಲಮಾಣಿ, ಮಾರ್ಕೆಟಿಂಗ್‌ ಕಮ್ಯುನಿಕೇಷನ್‌ ಆಂಡ್‌ ಅಡ್ವರ್ಟೈಸಿಂಗ್‌ ಲಿಮಿಟೆಡ್‌ನ ಅಧ್ಯಕ್ಷ ಎಂ.ಎಸ್‌.ಕರಿಗೌಡ್ರ, ಲಕ್ಕುಂಡಿ ಗ್ರಾಪಂ ಅಧ್ಯಕ್ಷೆ ಲಲಿತಾ ಅಶೋಕ ಗದಗಿನ, ಉಪಾಧ್ಯಕ್ಷ ರೇವಣಸಿದ್ಧಪ್ಪ ಮುಳಗುಂದ, ನಗರಸಭೆ ಅಧ್ಯಕ್ಷೆ ಉಷಾ ದಾಸರ, ಉಪಾಧ್ಯಕ್ಷೆ ಸುನಂದಾ ಬಾಕಳೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿದ್ಧಪ್ಪ ಪಲ್ಲೇದ್‌ ಆಗಮಿಸುವರು ಎಂದು ಪ್ರಕ​ಟ​ಣೆ​ಯಲ್ಲಿ ತಿಳಿಸಿ​ದೆ.

PREV
Read more Articles on
click me!

Recommended Stories

ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮುಗಿಸಿ ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿಗೆ ಲಾರಿ ಡಿಕ್ಕಿ, ಸ್ಥಳದಲ್ಲೇ ಸಾವು
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ