12-18 ವರ್ಷ​ದ​ವ​ರಿ​ಗೂ ದೇಶೀ ಕೋವಿಡ್‌ ಲಸಿಕೆ ಸುರಕ್ಷಿತ

By Kannadaprabha NewsFirst Published May 28, 2021, 11:52 AM IST
Highlights
  • ಅಹಮದಾಬಾದ್‌ ಮೂಲದ ಝೈಡಸ್‌ ಕ್ಯಾಡಿಲಾದ ಕೋವಿಡ್‌ ಲಸಿಕೆ 12 ವರ್ಷದ ಮಕ್ಕಲಿಗೂ ಸೇಫ್
  •  ‘12-18 ವರ್ಷದ ಮಕ್ಕಳ ಮೇಲಿನ ಲಸಿಕೆ ಪ್ರಯೋಗ ಯಶಸ್ವಿ
  • ಕಿರಿಯ ವಯಸ್ಸಿನವರ ಮೇಲೆ ಲಸಿಕೆ ಬಳಕೆಗೆ ಶೀಘ್ರದಲ್ಲೇ ಅರ್ಜಿ 

ಅಹ್ಮದಾಬಾದ್‌ (ಮೇ.28): ಗುಜರಾತ್‌ನ ಅಹಮದಾಬಾದ್‌ ಮೂಲದ ಝೈಡಸ್‌ ಕ್ಯಾಡಿಲಾದ ಕೋವಿಡ್‌ ಲಸಿಕೆ 12 ವರ್ಷ ಮಕ್ಕಳೂ ಸೇರಿದಂತೆ ಎಲ್ಲರಿಗೂ ಸುರಕ್ಷಿತ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಶಾರ್ವಿಲ್‌ ಪಟೇಲ್‌ ತಿಳಿಸಿದ್ದಾರೆ.

 ‘12-18 ವರ್ಷದ ಮಕ್ಕಳ ಮೇಲಿನ ಲಸಿಕೆ ಪ್ರಯೋಗ ಯಶಸ್ವಿಯಾಗಿದೆ. ಕಿರಿಯ ವಯಸ್ಸಿನವರ ಮೇಲೆ ಕೊರೋನಾ ಲಸಿಕೆ ಬಳಕೆಗೆ ಶೀಘ್ರದಲ್ಲೇ ಅರ್ಜಿ ಸಲ್ಲಿಸುತ್ತೇವೆ. 

ದೇಶದಲ್ಲಿ ಲಸಿಕೆ ಅಭಿಯಾನ; ಭಾರತ ಸೋಲ್ತಾ, ಗೆಲ್ತಾ? ...

ಲಸಿಕೆಯು ಯಾವುದೇ ಅಡ್ಡ ಪಡಿಣಾಮ ಬೀರಿದ ಬಗ್ಗೆ ಈವರೆಗೆ ವರದಿಯಾಗಿಲ್ಲ’ ಎಂದು ಅವರು ತಿಳಿಸಿದ್ದಾರೆ. ಝೈಡಸ್‌ ಸುಮಾರು 1000 ಮಕ್ಕಳ ಮೇಲೆ ಲಸಿಕೆ ಪ್ರಯೋ​ಗ ನಡೆ​ಸಿದೆ.

ಈಗಾಗಲೇ ಭಾರತದಲ್ಲಿ 18 ವರ್ಷದ ಒಳಗಿನವರ ಮೇಲೆ ಲಸಿಕೆ ಪ್ರಯೋಗಗಳು ನಡೆಯುತ್ತಲಿದೆ. ಅನೇಕ ಲಸಿಕೆಗಲ ಪ್ರಯೋಗವನ್ನು ಮಾಡಲಾಗಿತ್ತು ಇದೀಗ ದೇಸಿ ಲಸಿಕೆ  ಸೇಫ್ ಎನ್ನಲಾಗಿದೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!