Punjab Elections : ಪಂಜಾಬ್ ಮುಖ್ಯಮಂತ್ರಿಯನ್ನ ನಮ್ಮ ಕಾರ್ಯಕರ್ತರು ಆಯ್ಕೆ ಮಾಡ್ತಾರೆ!

Suvarna News   | Asianet News
Published : Jan 27, 2022, 10:47 PM ISTUpdated : Jan 27, 2022, 10:51 PM IST
Punjab Elections : ಪಂಜಾಬ್ ಮುಖ್ಯಮಂತ್ರಿಯನ್ನ ನಮ್ಮ ಕಾರ್ಯಕರ್ತರು ಆಯ್ಕೆ ಮಾಡ್ತಾರೆ!

ಸಾರಾಂಶ

ಶೀಘ್ರದಲ್ಲೇ ಪಂಜಾಬ್ ಚುನಾವಣೆಗೆ ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ನವಜೋತ್ ಸಿಂಗ್ ಸಿಧು ಹಾಗೂ ಚರಂಜಿತ್ ಸಿಂಗ್ ಚನ್ನಿ ನಡುವೆ ಪೈಪೋಟಿ ಚುನಾವಣೆಗೂ ಮುನ್ನವೇ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಮಾಡಲಿದೆ ಕಾಂಗ್ರೆಸ್

ನವದೆಹಲಿ (ಜ. 27): ಮುಂಬರುವ ಪಂಜಾಬ್ ಚುನಾವಣೆಗೆ (Punjab Election)ಕಾಂಗ್ರೆಸ್ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು (Chief Ministerial Candidate) ಶೀಘ್ರದಲ್ಲಿಯೇ ಘೋಷಣೆ ಮಾಡಲಿದ್ದು, ಕಾರ್ಯಕರ್ತರು ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದ್ದಾರೆ ಎಂದು ರಾಹುಲ್ ಗಾಂಧಿ (Rahul Gandhi) ಹೇಳಿದ್ದಾರೆ. ಪಂಜಾಬ್ ಕಾಂಗ್ರೆಸ್ ನಲ್ಲಿ ಈಗಾಗಲೇ ನವಜೋತ್ ಸಿಂಗ್ ಸಿಧು (Navjot Sidhu) ಹಾಗೂ ಹಾಲಿ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ (Charanjit Singh Channi) ಬಣಗಳಿದ್ದು, ಇವರಿಬ್ಬರ ನಡುವಿನ ಪೈಪೋಟಿ ಮುಂಬರುವ ಚುನಾವಣೆಯಲ್ಲಿ ಪಕ್ಷಕ್ಕೆ ಹಾನಿ ಉಂಟು ಮಾಡಬಹುದು ಎನ್ನುವ ಎಚ್ಚರಿಕೆಯಲ್ಲಿರುವ ರಾಹುಲ್ ಗಾಂಧಿ, "ಒಂದು ರಾಜ್ಯದಲ್ಲಿ ಪಕ್ಷಕ್ಕೆ ಇಬ್ಬರು ನಾಯಕರಾಗಲು ಸಾಧ್ಯವಿಲ್ಲ. ಒಬ್ಬನೇ ನಾಯಕನಾಗಬಹುದು' ಎನ್ನುವ ಮೂಲಕ ಸಿಧು ಹಾಗೂ ಚನ್ನಿ ನಡುವೆ ಇಬ್ಬರಲ್ಲಿ ಒಬ್ಬರನ್ನು ಪಕ್ಷ ಆಯ್ಕೆ ಮಾಡಲಿದೆ ಎಂದು ಸೂಚನೆ ನೀಡಿದ್ದಾರೆ.

‘ಮುಖ್ಯಮಂತ್ರಿ ಅಭ್ಯರ್ಥಿ ಬೇಕು ಎಂಬ ನಿಮ್ಮ ಬೇಡಿಕೆಯನ್ನು ಆದಷ್ಟು ಬೇಗ ಈಡೇರಿಸುತ್ತೇವೆ. ಸಾಮಾನ್ಯವಾಗಿ ಪಕ್ಷ ಚುನಾವಣೆಗೂ ಮುನ್ನ ಮುಖ್ಯಮಂತ್ರಿ ಘೋಷಣೆ ಮಾಡುವುದಿಲ್ಲ ಆದರೆ ಕಾಂಗ್ರೆಸ್ ಕಾರ್ಯಕರ್ತರಿಗೆ ಇದು ಅಗತ್ಯವಿದ್ದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತೇವೆ.  ಕಾಂಗ್ರೆಸ್ ಕಾರ್ಯಕರ್ತರನ್ನು ಈ ವಿಚಾರದಲ್ಲಿ ಸಂಪರ್ಕಿಸಲಿದ್ದು ಅವರೇ ಇದನ್ನು ನಿರ್ಧರಿಸುತ್ತಾರೆ. ," ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಮುಂದಿನ ತಿಂಗಳು ಪಂಜಾಬ್ ನಲ್ಲಿ ನಡೆಯುಲಿರುವ ಚುನಾವಣೆಗೆ ಪಕ್ಷದ ಪ್ರಚಾರವನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಜಲಂಧರ್ ಗೆ (Jalandhar ) ತೆರಳಿರುವ ರಾಹುಲ್ ಗಾಂಧಿ ಇಡೀ ದಿನ ಪಂಜಾಬ್ ನಲ್ಲಿಯೇ ಬೀಡುಬಿಟ್ಟಿದ್ದರು.

ಪಂಜಾಬ್ ನಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷ ಇದಕ್ಕೂ ಮುನ್ನ ಫೆಬ್ರವರಿ 14 ರಂದು ನಡೆಯಲಿರುವ ಚುನಾವಣೆಯ ಬಳಿಕವೇ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡುವುದಾಗಿ ತಿಳಿಸಿತ್ತು.

ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಹಾಗೂ ನವಜೋತ್ ಸಿಂಗ್ ಸಿಧು ಇಬ್ಬರೂ ವೇದಿಕೆಯಲ್ಲಿದ್ದ ಸಮಯದಲ್ಲಿಯೇ ರಾಹುಲ್ ಗಾಂಧಿ ಈ ಮಾತನ್ನು ಹೇಳಿದ್ದಾರೆ. ಪ್ರಸ್ತುತ ಪಂಜಾಬ್ ನಲ್ಲಿ ಪ್ರತಿ ದಿನ ಚರಂಜಿತ್ ಸಿಂಗ್ ಚನ್ನಿ ಹಾಗೂ ನವಜೋತ್ ಸಿಂಗ್ ಸಿಧು ಪರಸ್ಪರ ಟೀಕಾಪ್ರಹಾರಗಳನ್ನು ನಡೆಸುತ್ತಿರುವುದು ರಾಜ್ಯದಲ್ಲಿ ಪಂಜಾಬ್ ಪಕ್ಷಕ್ಕೆ ಮುಜುಗರವನ್ನು ತಂದಿದೆ.

ರಾಜ್ಯದಲ್ಲಿ ಪಕ್ಷವನ್ನು ಇಬ್ಬರು ಮುನ್ನಡೆಸಲು ಸಾಧ್ಯವಿಲ್ಲ. ಒಬ್ಬರು ಮಾತ್ರವೇ ಮುನ್ನಡೆಸಬಹುದು. ಒಬ್ಬ ವ್ಯಕ್ತಿ ಮುನ್ನಡೆಸಿದರೆ, ಇನ್ನೊಬ್ಬ ವ್ಯಕ್ತಿ ಸಂಪೂರ್ಣ ಬೆಂಬಲ ನೀಡುವ ಭರವಸೆ ನೀಡಬೇಕು. ಯಾಕೆಂದರೆ, ಇಬ್ಬರ ಹೃದಯದಲ್ಲೂ ಕಾಂಗ್ರೆಸ್ ಇರಬೇಕು ಎಂದು ರಾಹುಲ್ ಗಾಂಧಿ ಹೇಳಿದರು.

Punjab Elections 2022: ನಿಮಗೆಲ್ಲಾ ಸ್ವಾಗತ ಅಂತಾ ED ಅಧಿಕಾರಿಗಳಿಗೆ ಅರವಿಂದ್ ಕೇಜ್ರಿವಾಲ್ ಹೇಳಿದ್ದೇಕೆ?
ನೂರಾರು ಕಾಂಗ್ರೆಸ್ ಕಾರ್ಯಕರ್ತರು ತಮ್ಮ ರಕ್ತವನ್ನು ಇಲ್ಲಿ ಚೆಲ್ಲಿದ್ದಾರೆ. ಏನೇ ಆಗಲಿ ರಾಜ್ಯದಲ್ಲಿ ಶಾಂತಿ ಕದಡಲು ಯಾವ ಅವಕಾಶವನ್ನೂ ನಾವು ನೀಡುವುದಿಲ್ಲ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವುದು ನಮಗೆ ತಿಳಿಸಿದೆ. ನಿಮ್ಮೆಲ್ಲರಿಂದ ಹಾಗೂ ಮನಮೋಹನ್ ಸಿಂಗ್ ಅವರಿಂದ ಈ ವಿಚಾರದಲ್ಲಿ ಸಾಕಷ್ಟು ಕಲಿತಿದ್ದೇನೆ ಎಂದು ತಿಳಿಸಿದರು.
ರಾಹುಲ್ ಗಾಂಧಿ ಮಾತನಾಡುವ ಮುನ್ನ ಪಂಜಾಬ್ ಕಾಂಗ್ರೆಸ್ ನ ಇಬ್ಬರೂ ನಾಯಕರು, ರಾಜ್ಯದಲ್ಲಿ ನಾವು ಹುದ್ದೆಗಾಗಿ ಹಾತೊರೆಯುವುದಿಲ್ಲ ಹಾಗೂ ಯಾವುದೇ ಕಾರಣಕ್ಕೂ ಪಕ್ಷವನ್ನು ಧಿಕ್ಕರಿಸಿ ಹೋಗುವುದಿಲ್ಲ ಎಂದು ಘೋಷಿಸಿದರು. ಏನೇ ಆಗಲಿ ರಾಹುಲ್ ಗಾಂಧಿ ಅವರ ನಿರ್ಧಾರವನ್ನು ಒಪ್ಪಿಕೊಳ್ಳುತ್ತೇನೆ ಎಂದು ನವಜೋತ್ ಸಿಧು ಭರವಸೆ ನೀಡಿದ್ದಾರೆ.

Punjab Elections: ಸಿಧು ದುರಹಂಕಾರ ಕೊನೆಗಾಣಿಸಲು ಪ್ರಮುಖ ಅಭ್ಯರ್ಥಿ ಕಣಕ್ಕಿಳಿಸಿದ ಅಕಾಲಿ ದಳ!
ಪಂಜಾಬ್ ನಲ್ಲಿ ಇರುವ ಈ ಸಂಕಷ್ಟವನ್ನು ಯಾರು ಪಾರು ಮಾಡುತ್ತಾರೆ ಎನ್ನುವ ಪ್ರಶ್ನೆ ಎಲ್ಲರಲ್ಲಿಯೂ ಇದೆ. ನಿಷ್ಠಾವಂತ ಸೈನಿಕನಾಗಿ ನಾನು ರಾಹುಲ್ ಗಾಂಧಿಗೆ ಈ ವಿಶ್ವಾಸವನ್ನು ನೀಡುತ್ತಿದ್ದು, ಪಕ್ಷ ಯಾವ ನಿರ್ಧಾರ ತೆಗೆದಕೊಳ್ಳುವುದೋ ಅದಕ್ಕೆ ನಾನು ಬದ್ಧನಾಗಿರುತ್ತೇನೆ ಎಂದಿದ್ದಾರೆ. ಅದೇ ಸಮಯದಲ್ಲಿ, ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಸಿಧು, ಕೇವಲ ನಾವು "ಶೋಪೀಸ್"ಆಗಿ ಇರಬಾರದು ಎಂದು ಹೇಳುವ ಮೂಲಕ ಪಕ್ಷ ಹೆಚ್ಚು ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ನೀಡಬೇಕು ಎನ್ನುವ ಸೂಕ್ಷ್ಮ ಸುಳಿವನ್ನೂ ನೀಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂಡಿಗೋದ ಭಾರೀ ಕುಸಿತ: ಒಂದೇ ವಿಮಾನಯಾನ ಸಂಸ್ಥೆಯ ಏಕಸ್ವಾಮ್ಯವಾದಾಗ
ರಿಪೇರಿಗೆ 5 ಗಂಟೆ ಬೇಕೆಂದ ರೈಲ್ವೆ ಅಧಿಕಾರಿಗಳು; ಸುತ್ತಿಗೆಯಿಂದ 10 ನಿಮಿಷದಲ್ಲಿ ಸರಿ ಮಾಡಿದ ಅಂಕಲ್