Corona Vaccine:ಖಾಸಗಿ ಮಾರುಕಟ್ಟೆಯಲ್ಲಿ ವ್ಯಾಕ್ಸಿನ್ ಮಾರಾಟಕ್ಕೆ ಅನುಮತಿ, ಈ ಷರತ್ತು ಕಡ್ಡಾಯ

By Suvarna NewsFirst Published Jan 27, 2022, 9:08 PM IST
Highlights

 * ಖಾಸಗಿ ವಲಯಕ್ಕೂ ಕೊರೋನಾ ಲಸಿಕೆ ಹಂಚಿಕೆ
* ಖಾಸಗಿ ಮಾರುಕಟ್ಟೆಯಲ್ಲಿ ವ್ಯಾಕ್ಸಿನ್ ಮಾರಾಟಕ್ಕೆ ಅನುಮತಿ
* ಡಿಸಿಜಿಐಯಿಂದ ಷರತ್ತುಬದ್ಧ ಅನುಮೋದನೆ
* ಮಹತ್ವದ ಸಭೆ ಬಳಿಕ ಮಾರಾಟಕ್ಕೆ ಅನುಮತಿ

ನವದೆಹಲಿ(ಜ. 27) ಭಾರತದ ಡ್ರಗ್ಸ್ ರೆಗ್ಯೂಲೇಟರ್, ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ(DCGI) ಮಹತ್ವದ ಆದೇಶವೊಂದನ್ನು ನೀಡಿದೆ. ಖಾಸಗಿ ಮಾರುಕಟ್ಟೆಯಲ್ಲಿ ಷರತ್ತುಗಳನ್ನೊಳಗೊಂಡು ಲಸಿಕೆ (Covid Vaccine)ಮಾರಾಟಕ್ಕೆ ಅನುಮತಿ ನೀಡಲಾಗಿದೆ.  ವಯಸ್ಕರಿಗೆ ನೀಡಬಹುದಾದ ಕೋವೀಡ್ ಶೀಲ್ಡ್, ಕೋವಾಕ್ಸೀನ್ ಮಾರಾಟಕ್ಕೆ ಅನುಮತಿ ನೀಡಿದೆ.

ಆಸ್ಪತ್ರೆಗಳು ಮತ್ತು ಕ್ಲಿನಿಕ್ ಗಳು ಲಸಿಕೆ ಖರೀದಿ ಮಾಡಬಹುದು.  ಆದರೆ ಲಸಿಕೆ ನೀಡಿರುವ ಡೇಟಾವನ್ನು ಪ್ರತಿ ಆರು ತಿಂಗಳಿಗೆ ಸಲ್ಲಿಕೆ ಮಾಡಬೇಕಾಗುತ್ತದೆ.  ಈ ವ್ಯವಸ್ಥೆಯನ್ನು ಸರಿಯಾದ ರೀತಿ ನಿರ್ವಹಣೆ ಮಾಡಬೇಕು ಎಂದು ತಿಳಿಸಲಾಗಿದೆ. CoWIN ಆಪ್ ನಲ್ಲಿ ಅಪ್ ಡೇಟ್ ಮಾಡಬೇಕಾಗುತ್ತದೆ.

ಸದ್ಯ ನಡೆಯುತ್ತಿರುವ ಕ್ಲಿನಿಕಲ್ ಟ್ರಯಲ್ ಮತ್ತು ಸರ್ಕಾರ ಆಗಾಗ ನೀಡುವ ನಿರ್ದೇಶನಗಳನ್ನು ಪಾಲಿಸಬೇಕಾಗುತ್ತದೆ. ನ್ಯೂ ಡ್ರಗ್ಸ್ ಆಂಡ್ ಕ್ಲಿನಿಕಲ್ ಟ್ರಯಲ್ಸ್ 2019  ಅಡಿಯಲ್ಲಿ ಅನುಮತಿ ನೀಡಲಾಗಿದೆ.

Covid 19 Crisis Bengaluru:  ಸಾವಿರಕ್ಕೂ ಹೆಚ್ಚು ಬೆಡ್‌ ಖಾಲಿ ಇದ್ರೂ ಖಾಸಗಿ ಆಸ್ಪತ್ರೆಗಳಿಗೆ ಡಿಮ್ಯಾಂಡ್!

ಜನವರಿ 19  ರಂದು ಸೆಂಟ್ರಲ್ ಡ್ರಗ್ಸ್ ಸ್ಟಾಂಡರ್ಡ್ ಕಂಟ್ರೋಲ್ ಆರ್ಗನೈಜೇಶನ್ ನ ತಜ್ಞರ ಸಮಿತಿ ತನ್ನ ಶಿಫಾರಸುಗಳನ್ನು ಸಲ್ಲಿಕೆ ಮಾಡಿತ್ತು. ಸೇರಂ ಇಸ್ಟಿಟ್ಯೂಟ್ ನ  ಕೋವಿಡ್ ಶೀಲ್ಡ್ ಮತ್ತು ಭಾರತ್ ಬಯೋಟೆಕ್ ನ ಕೋವಾಕ್ಸೀನ್ ಗೆ ಅನುಮತಿ ನೀಡಲಾಗಿದೆ.  

ಕೋವಾಕ್ಸಿನ್, ಕೋವಿಶೀಲ್ಡ್ ಬೆಲೆ ಕಡಿತಕ್ಕೆ ಮುಂದಾದ ಕೇಂದ್ರ:  ಭಾರತದ ಕೊರೋನಾ ವೈರಸ್ ವಿರುದ್ಧದ ಹೋರಾಟ ಇತರ ದೇಶಗಳಿಗೆ ಹೋಲಿಕೆ ಮಾಡಿದರೆ ಮುಂದಕ್ಕೆ ಇದೆ.   ಖಾಸಗಿ ಆಸ್ಪತ್ರೆಗಳಲ್ಲಿ ಸರಿಸುಮಾರು 1,000 ರೂಪಾಯಿ ಬೆಲೆಯ ಕೋವಿಡ್ ಲಸಿಕೆ  75 ರೂಪಾಯಿಗೆ ಸಿಗಲಿದೆ.

ಭಾರತದಲ್ಲಿ ಕೋವಾಕ್ಸಿನ್(Covaxin) ಹಾಗೂ ಕೋವಿಶೀಲ್ಡ್ ಲಸಿಕೆ(Covishield) ನೀಡಲಾಗುತ್ತಿದೆ. ಈಗಾಗಲೇ ಶೇಕಡಾ 100 ರಷ್ಟು ಅರ್ಹರು ಮೊದಲ ಡೋಸ್(Dose) ಲಸಿಕೆ ಪಡೆದಿದ್ದಾರೆ. ಸರ್ಕಾರ ಎರಡೂ ಲಸಿಕೆಯನ್ನು ಉಚಿತವಾಗಿ ನೀಡುತ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ, ಸರ್ಕಾರಿ ಲಸಿಕಾ ಕೇಂದ್ರಗಳಲ್ಲಿ ಎರಡೂ ಡೋಸ್ ಲಸಿಕೆ ಉಚಿತವಾಗಿ(Free Vaccine) ಸಿಗಲಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಈ ಲಸಿಕೆಗೆ ಈಗಾಗಲೇ ದರ ನಿಗದಿಪಡಿಸಿದ್ದು ದರ ಕಡಿತ ಮಾಡಲಾಗುತ್ತಿದೆ.

ಖಾಸಗಿ ಆಸ್ಪತ್ರೆಗಳಲ್ಲಿ ಕೋವಾಕ್ಸಿನ್ ಲಸಿಕೆ ಬೆಲೆ 1,200 ರೂಪಾಯಿ. ಇದರಲ್ಲಿ ಆಸ್ಪತ್ರೆಯ ಸರ್ವೀಸ್ ಚಾರ್ಜ್ ಕೂಡ ಸೇರಿದೆ. ಇನ್ನು ಕೋವಿಶೀಲ್ಡ್ ಲಸಿಕೆ ಬೆಲೆ 780 ರೂಪಾಯಿ. ಇದೀಗ ಈ ಬೆಲೆಯನ್ನು 275 ರೂಪಾಯಿಗೆ ಕಡಿತಗೊಳಿಸಲಾಗುತ್ತಿದೆ. ಇದರಲ್ಲಿ ಖಾಸಗಿ ಆಸ್ಪತ್ರೆ ಹಾಕುವ 150 ರೂ. ಸೇರಿಕೊಳ್ಳಲಿದೆ.

ಡ್ರಗ್ಸ್ ಕಂಟ್ರೋಲರ್ ಇಂಡಿಯಾ, ರಾಷ್ಟ್ರೀಯ ಫಾರ್ಮಾ ಬೆಲೆ ನಿಗದಿ ಕೇಂದ್ರ (NPPA) ಇದೀಗ ಈ ಬೆಲೆಯನ್ನು ಸರ್ಕಾರದ ಸೂಚನೆಯಂತೆ ಕಡಿತಗೊಳಿಸಲು ಮುಂದಾಗಿದೆ. ಇದರಿಂದ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕಾ ಅಭಿಯಾನಕ್ಕೆ ಹೆಚ್ಚಿನ ವೇಗ ನೀಡಲು ಸರ್ಕಾರ ಮುಂದಾಗಿದೆ.  ಈಗಾಗಲೇ ಖಾಸಗಿ ಆಸ್ಪತ್ರೆಗಳಲ್ಲಿರುವ ಲಸಿಕೆ ಬಾಕಿದೆ. ಹೀಗಾಗಿ ಸರ್ಕಾರ ಬೆಲೆ ಕಡಿತಗೊಳಿಸಿ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಪಡೆಯುವವರಿಗೆ ಹೆಚ್ಚಿನ ಹೊರೆಯಾಗದಂತೆ ನೋಡಿಕೊಳ್ಳಲು ಮುಂದಾಗಿದೆ.

ಡಿಸೆಂಬರ್ ನಂತರದಲ್ಲಿ ಶುರುವಾದ ಕೊರೋನಾ ಮೂರನೇ ಅಲೆ ನಿಯಂತ್ರಣಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡವು. ಕೆಲವು ರಾಜ್ಯಗಳು ಶಾಲಾ ಕಾಲೇಜುಗಳನ್ನು ಬಂದ್ ಮಾಡಿದವು. ಕರ್ನಾಟಕದಲ್ಲಿ ವೀಕೆಂಡ್ ಲಾಕ್ ಡೌನ್ ಜಾರಿ ಮಾಡಲಾಗಿತ್ತು.  ಮೊದಲು ಮತ್ತು ಎರಡನೇ ಅಲೆಗೆ ಹೋಲಿಕೆ ಮಾಡಿದರೆ ಮೂರನೆ ಅಲೆ ಹರಡುವ ವೇಗ ಜಾಸ್ತಿಯಿದ್ದರೂ ಆಸ್ಪತ್ರೆ ಸೇರುವವರ ಸಂಖ್ಯೆ ಕಡಿಮೆ ಇದೆ. 

 

 

 

 

click me!