ಮಹಿಳಾ ಐಎಎಫ್ ಅಧಿಕಾರಿಯೊಬ್ಬರು ತನ್ನ ಮೇಲಾಧಿಕಾರಿಯಾಗಿರುವ ವಿಂಗ್ ಕಮಾಂಡರ್‌ವೊಬ್ಬರ ವಿರುದ್ಧ ರೇಪ್ ಕೇಸ್ ದಾಖಲಿಸಿದ್ದಾರೆ. ಅತ್ಯಾಚಾರ ಆರೋಪ ಮಾಡಿರುವ ಮಹಿಳಾ ಅಧಿಕಾರಿ ಹಾಗೂ ವಿಂಗ್ ಕಮಾಂಡರ್ ಇಬ್ಬರು ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಪೋಸ್ಟಿಂಗ್‌ನಲ್ಲಿದ್ದಾರೆ.
ಮಹಿಳಾ ಐಎಎಫ್ ಅಧಿಕಾರಿಯೊಬ್ಬರು ತನ್ನ ಮೇಲಾಧಿಕಾರಿಯಾಗಿರುವ ವಿಂಗ್ ಕಮಾಂಡರ್‌ವೊಬ್ಬರ ವಿರುದ್ಧ ರೇಪ್ ಕೇಸ್ ದಾಖಲಿಸಿದ್ದಾರೆ. ಅತ್ಯಾಚಾರ ಆರೋಪ ಮಾಡಿರುವ ಮಹಿಳಾ ಅಧಿಕಾರಿ ಹಾಗೂ ವಿಂಗ್ ಕಮಾಂಡರ್ ಇಬ್ಬರು ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಪೋಸ್ಟಿಂಗ್‌ನಲ್ಲಿದ್ದಾರೆ. ಕಳೆದೊಂದು ವರ್ಷಗಳಿಂದ ನನಗೆ ಹಿರಿಯ ಅಧಿಕಾರಿ ವಿಂಗ್ ಕಮಾಂಡರ್ ಲೈಂಗಿಕ ಕಿರುಕುಳ ನೀಡುತ್ತಿದ್ದು, ಈ ಬಗ್ಗೆ ಬೇರೆ ಮೇಲಾಧಿಕಾರಿಗಳಿಗೆ ದೂರು ನೀಡಿದರು ವಿಚಾರಿಸಿದಂತೆ ಮಾಡಿ ಫೈಲ್ ಕ್ಲೋಸ್ ಮಾಡಿದ್ದಾರೆ ಎಂದು ಮಹಿಳಾ ಅದೀಕಾರಿ ಈಗ ಶ್ರೀನಗರದ ಬದ್ಗಾಮ್ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಭಾರತೀಯ ವಾಯುಸೇನೆಯ ವಿಭಾಗವನ್ನು ಮಾಧ್ಯಮವೊಂದು ಕೇಳಿದಾಗ, ಈ ಕೇಸ್ ಬಗ್ಗೆ ನಮಗೆ ಗೊತ್ತಿದೆ. ಬದ್ಗಾಮ್ ಲೋಕಲ್ ಪೊಲೀಸ್ ಸ್ಟೇಷನ್‌ನ ಅಧಿಕಾರಿಗಳು ಈ ವಿಚಾರಕ್ಕೆ ಸಂಬಂಧಿಸಿದಂತೆ ಶ್ರೀನಗರದ ವಾಯುಸೇನೆ ವಿಭಾಗವನ್ನು ಸಂಪರ್ಕಿಸಿದ್ದಾರೆ. ನಾವು ಸ್ಥಳೀಯ ಅಧಿಕಾರಿಗಳಿಗೆ ಈ ವಿಚಾರದಲ್ಲಿ ತನಿಖೆಗೆ ಸಂಪೂರ್ಣವಾಗಿ ಸಹಕರಿಸುತ್ತೇವೆ ಎಂದು ವಾಯುಸೇನಾ ವಿಭಾಗದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪೋಖ್ರಣ್ ಬಳಿ ಐಎಎಫ್ ಯುದ್ಧ ವಿಮಾನದಿಂದ ಹಠಾತ್ ಬಿದ್ದ ಮದ್ದುಗುಂಡುಗಳಿದ್ದ 'ಏರ್‌ಸ್ಟೋರ್'
ವಾಯುಸೇನೆಯ ಫ್ಲೈಯಿಂಗ್ ಆಫೀಸರ್ ನೀಡಿದ ದೂರಿನಲ್ಲಿ ಏನಿದೆ?
ದೂರಿನಲ್ಲಿ ತಿಳಿಸಿರುವಂತೆ ಕಳೆದೆರಡು ವರ್ಷಗಳಿಂದ ಮಹಿಳಾ ಅಧಿಕಾರಿಗೆ ವಿಂಗ್ ಕಮಾಂಡರ್ ಲೈಂಗಿಂಕ ಕಿರುಕುಳ ನೀಡಿದ್ದಾರೆ. ಡಿಸೆಂಬರ್ 32ರ ರಾತ್ರಿ ಅಧಿಕಾರಿಗಳ ಮೆಸ್‌ನಲ್ಲಿ ನಡೆದ ನ್ಯೂ ಇಯರ್ ಪಾರ್ಟಿಯಲ್ಲಿ ಹಿರಿಯ ಅಧಿಕಾರಿ ಆಕೆಯ ಬಳಿ ನೀವು ಗಿಫ್ಟ್ ಸ್ವೀಕರಿಸಿದಿರೆ ಎಂದು ಕೇಳಿದ್ದಾರೆ. ಇಲ್ಲ ಎಂದುತ್ತರಿಸಿದ ಆಕೆಗೆ ಗಿಫ್ಟ್ ನಮ್ಮ ಮನೆಯಲ್ಲಿದೆ ಅಲ್ಲಿಗೆ ಬಂದು ಗಿಫ್ಟ್ ಪಡೆಯುವಂತೆ ವಿಂಗ್ ಕಮಾಂಡರ್ ಹೇಳಿದ್ದಾರೆ. ಆದರೆ ಅಲ್ಲಿಗೆ ಹೋದಾಗ ಮನೆಯಲ್ಲಿ ಯಾರು ಇರಲಿಲ್ಲ, ಎಲ್ಲರೂ ಎಲ್ಲಿದ್ದಾರೆ ಎಂದು ಕೇಳಿದಾಗ ಎಲ್ಲೋ ಹೋಗಿದ್ದಾರೆ ಎಂಬ ಉತ್ತರ ಸಿಕ್ಕಿದೆ.
ಇದಾದ ನಂತರ ವಿಂಗ್ ಕಮಾಂಡರ್ ಅಲ್ಲಿ ಮಹಿಳಾ ಫ್ಲೈಯಿಂಗ್ ಅಧಿಕಾರಿಗೆ ಮೌಖಿಕ ಸೆಕ್ಸ್‌ಗೆ (oral sex) ಒತ್ತಾಯಿಸಿದ್ದಾನೆ. ಆದರೆ ಇದೆಲ್ಲವನ್ನು ನಿಲ್ಲಿಸುವಂತೆ ಆತನಿಗೆ ಹಲವು ಬಾರಿ ಹೇಳಿದರು ಆತ ಕೇಳಲಿಲ್ಲ. ನಾನು ಆತನಿಂದ ಪಾರಾಗುವ ಎಲ್ಲಾ ಪ್ರಯತ್ನವನ್ನು ಮಾಡಿ ಕಡೆಗೆ ಆತನನ್ನು ದೂರ ತಳ್ಳಿ ಓಡಿ ಬಂದಿದ್ದೇನೆ. ಇದಾದ ನಂತರ ಆತ ನಾವು ಮತ್ತೆ ಶುಕ್ರವಾರ ನನ್ನ ಕುಟುಂಬವೂ ಇಲ್ಲದೇ ಇದ್ದಾಗ ಭೇಟಿ ಮಾಡುವ ಎಂದು ಹೇಳಿದ್ದ.
ವಿಳಂಬವಾಗಿ ದೂರು ದಾಖಲಿಸಿದ ಬಗ್ಗೆಯೂ ವಿವರ ನೀಡಿರುವ ಆಕೆ ಕೇಸ್ ದಾಖಲಿಸಿದರೆ ನನಗೇನಾಗಬಹುದು ಎಂಬ ಭಯ ಕಾಡಿತ್ತು. ಜೊತೆಗೆ ಏನು ಮಾಡಬೇಕು ಎಂಬ ಬಗ್ಗೆ ನನಗೆ ತಿಳಿದಿರಲಿಲ್ಲ, ಹೀಗಾಗಿ ವರದಿ ಮಾಡಲು ಭಯಗೊಂಡಿದೆ. ಈ ಘಟನೆಯ ನಂತರ ಆ ಅಧಿಕಾರಿ ನನ್ನ ಕಚೇರಿಗೆ ಬಂದಿದ್ದರು ಹಾಗೂ ಅವರು ಏನು ಆಗದಂತೆ ನಡೆದುಕೊಂಡರು ಹಾಗೂ ತಮ್ಮ ಕೃತ್ಯದ ಬಗ್ಗೆ ಅವರ ಕಣ್ಣುಗಳಲ್ಲಿ ಯಾವುದೇ ಪಾಶ್ಚಾತಾಪವಿರಲಿಲ್ಲ, ಎಂದು ಮಹಿಳೆ ಹೇಳಿಕೊಂಡಿದ್ದಾರೆ.
ಎಂಟು ವರ್ಷಗಳ ಬಳಿಕ ಪತ್ತೆಯಾದ ಭಾರತೀಯ ವಾಯುಸೇನೆ ವಿಮಾನದ ಅವಶೇಷ!
ಇದಾದ ನಂತರ ಇಬ್ಬರು ಮಹಿಳಾ ಅಧಿಕಾರಿಗಳ ಬಳಿ ಹೋಗಿ ನಾನು ಈ ವಿಚಾರವನ್ನು ತಿಳಿಸಿದೆ ಅವರು ನನಗೆ ದೂರು ನೀಡುವಂತೆ ಮಾರ್ಗದರ್ಶನ ಮಾಡಿದರು. ರಕ್ಷಣಾ ಪಡೆಗೆ ಸೇರ್ಪಡೆಯಾದ ನನ್ನನ್ನು ನಡೆಸಿಕೊಂಡ ರೀತಿ ಹಾಗೂ ಓರ್ವ ಅವಿವಾಹಿತ ಹುಡುಗಿಯಾಗಿ ನನಗಾದ ಈ ಮಾನಸಿಕ ಕಿರುಕುಳವನ್ನು ವಿವರಿಸಲು ಸಾಧ್ಯವಿಲ್ಲ ಎಂದು ಅವರು ದೂರಿನಲ್ಲಿ ಹೇಳಿಕೊಂಡಿದ್ದಾರೆ.
ತಮ್ಮ ಈ ದೂರಿನ ನಂತರ ಕಲೋನಿಯಲ್ ದರ್ಜೆಯ ಅಧಿಕಾರಿಯೊಬ್ಬರು ಪ್ರಕರಣದ ಬಗ್ಗೆ ತನಿಖೆ ಮಾಡಲು ಆದೇಶಿಸಿದರು. ಹೀಗಾಗಿ ವಿಂಗ್ ಕಮಾಂಡರ್ ತನ್ನ ಹೇಳಿಕೆಗಳನ್ನು ದಾಖಲಿಸಲು ಈ ವರ್ಷದ ಜನವರಿಯಲ್ಲಿ ಎರಡು ಬಾರಿ ತನ್ನೊಂದಿಗೆ ಆತ ಕುಳಿತುಕೊಳ್ಳುವಂತೆ ಮಾಡಲಾಗಿತ್ತು. ನನ್ನ ಹೇಳಿಕೆ ಪಡೆಯುವ ವೇಳೆ ಕಿರುಕುಳ ನೀಡಿದ ಹಿರಿಯ ಅಧಿಕಾರಿಯೂ ಅಲ್ಲಿರುವುದಕ್ಕೆ ನಾನ ಆಕ್ಷೇಪಿಸಿದ್ದೇನೆ ಇದಾದ ನಂತರ ಆಡಳಿತದ ತಪ್ಪುಗಳನ್ನು ಮುಚ್ಚಿ ಹಾಕಲು ಪ್ರಕರಣದ ತನಿಖೆಯನ್ನೇ ಮುಚ್ಚಲಾಯಿತು ಎಂದು ಮಹಿಳಾ ಅಧಿಕಾರಿ ದೂರಿನಲ್ಲಿ ಹೇಳಿದ್ದಾರೆ.
ಇದಾದ ನಂತರ ಆಂತರಿಕ ಸಮಿತಿಗೆ ಈ ಬಗ್ಗೆ ತನಿಖೆ ನಡೆಸಲು ಹೊಸ ಅರ್ಜಿಯನ್ನು ಹಾಕಿದೆ ಇದರ ಬಗ್ಗೆ ಗಮನಿಸಲು ಅವರು ಎರಡು ತಿಂಗಳು ತೆಗೆದುಕೊಂಡರು. ಅಲ್ಲದೇ ಲೈಂಗಿಕ ಕಿರುಕುಳದ ಅಪರಾಧಿಗೆ ಸಹಾಯ ಮಾಡಲು ಹಿರಿಯ ಅಧಿಕಾರಿಗಳ ಪಕ್ಷಪಾತವು ನನ್ನ ಹೃದಯ ಒಡೆಯುವಂತೆ ಮಾಡಿತು. ಅಲ್ಲದೇ ಹಲವು ಬಾರಿ ಒತ್ತಾಯಿಸುವವರೆಗೂ ವೈದ್ಯಕೀಯ ಪರೀಕ್ಷೆಯನ್ನು ಮಾಡಲಿಲ್ಲ. ಅಂತರಿಕ ಸಮಿತಿಯೂ ತನ್ನ ಕೆಲಸವನ್ನು ಸರಿಯಾಗಿ ಮಾಡಲಿಲ್ಲ, ಏಕೆಂದರೆ ಇದರ ಫಲಿತಾಂಶವನ್ನು ತಟಸ್ಥವಾಗಿರಿಸಲು ಹಿರಿಯ ಅಧಿಕಾರಿಗಳಿಂದ ಸೂಚನೆ ಬಂದಿತ್ತು. ಅಲ್ಲಿ ಎಲ್ಲರೂ ಲೈಂಗಿಕ ಕಿರುಕುಳದ ಅಪರಾಧಿಗೆ ಸಹಾಯ ಮಾಡುತ್ತಿದ್ದರು ಎಂದು ಮಹಿಳಾ ಅಧಿಕಾರಿ ದೂರಿದ್ದಾರೆ.
ಇದಾದ ನಂತರ ನಾನು ಮಧ್ಯಂತರ ಪರಿಹಾರಕ್ಕಾಗಿ ವಿನಂತಿಸಿದೆ ಮತ್ತು ರಜೆಗಾಗಿ ಹಲವಾರು ಬಾರಿ ವಿನಂತಿಸಿದೆ ಆದರೆ ಪ್ರತಿ ಬಾರಿಯೂ ನನಗೆ ರಜೆ ನಿರಾಕರಿಸಲಾಗಿದೆ. ತನ್ನನ್ನು ಅಥವಾ ವಿಂಗ್ ಕಮಾಂಡರ್‌ನನ್ನು ಬೇರೆ ಪೋಸ್ಟಿಂಗ್‌ಗೆ ಹಾಕುವಂತೆ ಮನವಿ ಮಾಡಿದರು ಅದನ್ನು ಕೇಳಲಿಲಲ್ಲ ಎಂದು ಅವರು ಆರೋಪಿಸಿದ್ದಾರೆ. ನಾನು ನನಗೆ ಕಿರುಕುಳ ನೀಡಿದ ವ್ಯಕ್ತಿಯ ಜೊತೆಯೇ ಬೇರೆಯಲು ಹಾಗೂ ಆತನೊಂದಿಗೆಯೇ ಕಾರ್ಯಕ್ರಮಗಳಿಗೆ ಹಾಜರಾಗಲು ಒತ್ತಾಯಿಸಲ್ಪಟ್ಟಿದ್ದೇನೆ. ಅವರು ಆನಂದಿಸುತ್ತಿದ್ದರೆ ನಾನು ಕಿರುಕುಳಕ್ಕೊಳಗಾಗಿದ್ದೇನೆ ಎಂದು ಅವರು ದೂರಿದ್ದಾರೆ.
ಈ ಬಗ್ಗೆ ತನಿಖೆಗೆ ಮುಂದಾದ ಆಂತರಿಕ ಸಮಿತಿಯೂ ಈ ಘಟನೆ ನಿಜವಾಗಿಯೂ ನಡೆದಿದೆಯೋ ಇಲ್ಲವೋ ಎಂಬುವುದಕ್ಕೆ ಯಾವುದೇ ಪ್ರತ್ಯಕ್ಷದರ್ಶಿಯ ಸಾಕ್ಷ್ಯ ಇಲ್ಲ ಎಂದು ಮೇ ತಿಂಗಳಲ್ಲಿ ಪ್ರಕರಣವನ್ನು ಕ್ಲೋಸ್ ಮಾಡಿತು. ಆದರೆ ಯಾರು ಕೂಡ ಎಲ್ಲರ ಎದುರು ಲೈಂಗಿಕ ಕಿರುಕುಳ ನೀಡುವುದಿಲ್ಲ ಎಂಬುವುದು ಸಾಮಾನ್ಯ ಜ್ಞಾನ ಅಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ. ಅಲ್ಲದೇ ಈ ನಿರಂತರ ಕಿರುಕುಳದಿಂದ ತಾನು ಮಾನಸಿಕ ಕಿರುಕುಳಕ್ಕೆ ಒಳಗಾಗಿದ್ದೇನೆ, ನನಗೆ ದೈನಂದಿನ ಕಾರ್ಯಗಳಲ್ಲಿ ಗಮನಹರಿಸಲು ಆಗುತ್ತಿಲ್ಲ, ಸದಾ ಭಯದಿಂದಲೇ ಓಡಾಡುವಂತಾಗಿದೆ. ಸಾವಿಗೆ ಶರಣಾಗಬೇಕು ಎಂಬ ಯೋಚನೆ ಬಂದಿದೆ ಎಂದು ಅವರು ದೂರಿದ್ದಾರೆ. ಒಟ್ಟಿನಲ್ಲಿ ಈ ಪ್ರಕರಣದಿಂದ ಹೆಣ್ಣು ತಾಯಿಯ ಗರ್ಭವೂ ಸೇರಿದಂತೆ ಎಲ್ಲೂ ಸುರಕ್ಷಿತವಲ್ಲ ಎಂಬುದಂತೂ ಸಾಬೀತಾಗಿದೆ. ವಾಯುಸೇನೆಯ ಫ್ಲೈಯಿಂಗ್ ಸ್ಕ್ವಾಡ್ ಆಗುವುದು ಸಣ್ಣ ವಿಚಾರವೇನಲ್ಲ. ಹೀಗಾಗಿ ಅಷ್ಟೊಂದು ಉನ್ನತ ಹುದ್ದೆಯಲ್ಲಿರುವ ಮಹಿಳೆಗೆ ಸುರಕ್ಷತೆ ಇಲ್ಲವೆಂದಾದರೆ ಇನ್ನು ಸಾಮಾನ್ಯ ಜನರ ಪಾಡೇನು ಅಲ್ಲವೇ?.