ತಾಂತ್ರಿಕ ದೋಷದಿಂದ ಭೂಮಿಗೆ ಮರಳದೇ ಬಾಹ್ಯಾಕಾಶದಲ್ಲಿಯೇ ಇರುವ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಅಲ್ಲಿಯೇ ಎರಡನೆಯ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ತಿದ್ದಾರೆ. ಬಾಹ್ಯಾಕಾಶದ ಜೀವನದ ವಿಡಿಯೋ ವೈರಲ್ ಆಗಿದೆ.
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಅಧ್ಯನಯಕ್ಕೆ ಹೋಗಿರುವ ಖಗೋಳ ವಿಜ್ಞಾನಿ ಸುನೀತಾ ವಿಲಿಯಮ್ಸ್ ಕಳೆದ ಜೂನ್ 5ರಂದು ವಾಪಸಾಗಬೇಕಿತ್ತು. ಆದರೆ, ಅವರ ವಾಹನದಲ್ಲಿ ಹಲವಾರು ತಾಂತ್ರಿಕ ದೋಷಗಳು ಕಾಣಿಸಿಕೊಂಡಿರೋ ಹಿನ್ನೆಲೆಯಲ್ಲಿ ಅವರು ಮುಂದಿನ ವರ್ಷ ವಾಪಸಾಗಲಿದ್ದಾರೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ‘ನಾಸಾ’ ಹೇಳಿದೆ. ಆದರೆ ಇದುವರೆಗೂ ಅವರು ಬದುಕಿರುವುದೇ ಕಷ್ಟ ಎನ್ನುವ ಬಗ್ಗೆ ವಾದಗಳೂ ಹುಟ್ಟಿಕೊಂಡಿವೆ. ಇದರ ನಡುವೆಯೇ ಸುನೀತಾ, ಬಾಹ್ಯಾಕಾಶದಲ್ಲಿಯೇ ತಮ್ಮ 59ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ಈ ಹಿಂದೆ, 2003ರಲ್ಲಿ ಭಾರತ ಮೂಲದ ಕಲ್ಪನಾ ಚಾವ್ಲಾ ಅವರಂತೆಯೇ ಸುನೀತಾವಿಲಿಯಮ್ಸ್ ಅವರೂ ಭೂಮಿಗೆ ಹಿಂದಿರುಗದಂಥ ಪರಿಸ್ಥಿತಿ ಸುನೀತಾ ವಿಲಿಯಮ್ಸ್ ಅವರಿಗೂ ಬರಲಿದೆಯೇ ಎಂಬ ಆತಂಕವೂ ಎದುರಾಗಿದೆ. ಅಂದಹಾಗೆ, ‘ನಾಸಾ’ ಹಾಗೂ ದೈತ್ಯ ವಿಮಾನ ತಯಾರಿಕಾ ಸಂಸ್ಥೆಯಾದ ಬೋಯಿಂಗ್ ಸಂಸ್ಥೆಗಳ ಜಂಟಿ ಸಹಯೋಗದೊಂದಿಗೆ ಅವರು, ಬುಚ್ ವಿಲ್ಮೋರ್ ಎಂಬ ಮತ್ತೊಬ್ಬ ಖಗೋಳ ವಿಜ್ಞಾನಿಯೊಂದಿಗೆ ಇವರು ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣಿಸಿದ್ದಾರೆ.
ಇದೀಗ ಸುನೀತಾ ಅವರು ತಮ್ಮ 59ನೇ ಹುಟ್ಟುಹಬ್ಬವನ್ನು ಸೆಪ್ಟೆಂಬರ್ 19 ರಂದು ಬಾಹ್ಯಾಕಾಶದಲ್ಲಿಯೇ ಆಚರಿಸಿಕೊಳ್ಳಲಿದ್ದಾರೆ. ಸುನೀತಾ, ಸೆಪ್ಟೆಂಬರ್ 19, 1965 ರಂದು ಓಹಿಯೋದ ಯೂಕ್ಲಿಡ್‌ನಲ್ಲಿ ಡಾ. ದೀಪಕ್ ಮತ್ತು ಬೋನಿ ಪಾಂಡ್ಯ ದಂಪತಿಗೆ ಜನಿಸಿದರು. ಅವರು ನೀಧಮ್ ಹೈಸ್ಕೂಲ್, ನೀಧಮ್, ಮ್ಯಾಸಚೂಸೆಟ್ಸ್, 1983 ರಲ್ಲಿ ವ್ಯಾಸಂಗ ಮಾಡಿದರು ಮತ್ತು 1987 ರಲ್ಲಿ ಅಮೆರಿಕದ ನೇವಲ್ ಅಕಾಡೆಮಿಯ ಭೌತಿಕ ವಿಜ್ಞಾನದಲ್ಲಿ ಬ್ಯಾಚುಲರ್ ಆಫ್ ಸೈನ್ಸ್ ಅನ್ನು ಪಡೆದರು. ಅವರು ಫ್ಲೋರಿಡಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, 1995 ರಲ್ಲಿ ಎಂಜಿನಿಯರಿಂಗ್ ಮ್ಯಾನೇಜ್‌ಮೆಂಟ್‌ನಲ್ಲಿ ಮಾಸ್ಟರ್ ಆಫ್ ಸೈನ್ಸ್ ಅನ್ನು ಪೂರ್ಣಗೊಳಿಸಿದರು.
ನೀಲ್ ಆರ್ಮ್ಸ್ಟ್ರಾಂಗ್ ಚಂದ್ರನಲ್ಲಿ ಹೋಗಿದ್ದೇ ಸುಳ್ಳು ಎನ್ನೋದು ಮತ್ತೆ ಸಾಬೀತಾಗೋಯ್ತಾ? ಏನಿದು ಬಿಸಿಬಿಸಿ ಚರ್ಚೆ?
ಈ ಮೊದಲು ಕೂಡ ಸುನೀತಾ ಬಾಹ್ಯಾಕಾಶದಲ್ಲಿಯೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇವರು ಮೊದಲ ಬಾರಿಗೆ ಅಂದರೆ ಡಿಸೆಂಬರ್ 2006 ರಿಂದ ಜೂನ್ 2007 ರವರೆಗೆ ಎಕ್ಸ್‌ಪೆಡಿಶನ್ 14/15 ರ ಸಮಯದಲ್ಲಿ ವಿಸ್ತೃತ ಬಾಹ್ಯಾಕಾಶ ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಆಗ ಅವರು ಫ್ಲೈಟ್ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಅವರ ಎರಡನೇ ಮಿಷನ್, ಎಕ್ಸ್‌ಪೆಡಿಶನ್ 32/33, ಜುಲೈನಿಂದ ನವೆಂಬರ್ 2012 ರವರೆಗೆ ನಡೆಯಿತು, ಈ ಸಮಯದಲ್ಲಿ ಅವರು ತಮ್ಮ ಜನ್ಮದಿನವನ್ನು ಮೊದಲ ಬಾರಿಗೆ ಬಾಹ್ಯಾಕಾಶದಲ್ಲಿ ಆಚರಿಸಿಕೊಂಡಿದ್ದರು, ಇದೀಗ ಎರಡನೆಯ ಬಾರಿ ಅನಿವಾರ್ಯ ಕಾರಣಗಳಿಂದಾಗಿ ಆಚರಿಸಿಕೊಳ್ಳುವಂತಾಗಿದೆ. ಕುತೂಹಲದ ವಿಷಯ ಏನೆಂದರೆ ಸುನೀತಾ ಅವರು, ಅಮೆರಿಕದ ನಿವಾಸಿಯಾಗಿದ್ದರೂ ಭಾರತ ಮತ್ತುಇಲ್ಲಿಯ ಸಂಸ್ಕೃತಿಯನ್ನು ಅಪಾರವಾಗಿ ಪ್ರೀತಿಸುತ್ತಾರೆ. ಅವರು ಬಾಹ್ಯಾಕಾಶ ಯಾತ್ರೆಯ ಸಮಯದಲ್ಲಿ, ಭಗವದ್ಗೀತೆಯ ಪ್ರತಿ ಮತ್ತು ಗಣೇಶನ ಮೂರ್ತಿಯನ್ನೂ ಕೊಂಡೊಯ್ದಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಸಂದರ್ಭದಲ್ಲಿ ಬಾಹ್ಯಾಕಾಶದಲ್ಲಿ ಜೀವನ ಹೇಗಿರುತ್ತೆ? ನಿತ್ಯಕರ್ಮಗಳನ್ನು ಅವರು ಹೇಗೆ ಮಾಡುತ್ತಾರೆ? ಆಕಾಶದಲ್ಲಿ ತೇಲಾಡುತ್ತಲೇ ಇರುವ ಸಂದರ್ಭ ಹೇಗಿರುತ್ತೆ ಇತ್ಯಾದಿ ಇರುವ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಖುದ್ದು ಸುನೀತಾ ಅವರೇ ವಿವರಣೆ ನೀಡಿದ್ದು, ಇದೀಗ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಂದಹಾಗೆ, ಸುನೀತಾ ಫೆಬ್ರವರಿ 2025 ರಲ್ಲಿ ಸ್ಪೇಸ್‌ಎಕ್ಸ್‌ನ ಡ್ರ್ಯಾಗನ್ ಕ್ರ್ಯೂ ಸ್ಪೇಸ್ ಕ್ಯಾಪ್ಸುಲ್‌ನಲ್ಲಿ ಭೂಮಿಗೆ ಮರಳಲು ಸಿದ್ಧರಾಗಿದ್ದಾರೆ. ಈ ಬಾರಿ ಅವರು 8 ತಿಂಗಳ ಕಾಲ ಬಾಹ್ಯಾಕಾಶದಲ್ಲಿ ಇರಲಿದ್ದಾರೆ. ಗಮನಾರ್ಹವಾಗಿ, ವಿಲಿಯಮ್ಸ್ ಒಟ್ಟು 322 ದಿನಗಳನ್ನು ಬಾಹ್ಯಾಕಾಶದಲ್ಲಿ ಕಳೆದಿದ್ದಾರೆ. ಅವರು ಸುರಕ್ಷಿತವಾಗಿ ಭೂಮಿಗೆ ತಲುಪಲಿ ಎನ್ನುವುದೇ ಎಲ್ಲರ ಆಶಯ.
ಬಹುತೇಕ ಹೆಣ್ಣುಮಕ್ಕಳಿಗೆ ಗಂಡನ ಬಗ್ಗೆ ಇಂಥ ವಿಚಿತ್ರ ಬಯಕೆ ಇರುತ್ತಂತೆ! ನಿಮಗೇನಾದ್ರೂ ಹೀಗೆ ಅನ್ನಿಸಿದ್ಯಾ?