11 ಹೆಣ್ಣುಮಕ್ಕಳಾದ ಮೇಲೆ ಗಂಡು ಮಗು ಜನನ| ಗಂಡು ಮಗುವಿಗಾಗಿ ಪರಿತಪಿಸುತ್ತಿದ್ದ ಮಹಿಳೆಗೆ 12ನೇ ಮಗು| ರಾಜಸ್ಥಾನದ ಚುರು ಜಿಲ್ಲೆಯ ಜಾಡ್ಸರ್’ನಲ್ಲಿ ಅಪರೂಪದ ಘಟನೆ| ಕೊನೆಗೂ ಗಂಡುಮಗುವಿಗೆ ಜನ್ಮ ನೀಡಿದ 42 ವರ್ಷದ ಗುಡ್ಡಿ| ಗುಡ್ಡಿಯ ಹಿರಿಯ ಮಗಳಿಗೆ ಈಗಾಗಲೇ 22 ವರ್ಷ|
ಜೈಪುರ್(ನ.25): ಆಧುನಿಕ ಭಾರತ, ಬದಲಾದ ಭಾರತ ಹೀಗೆ ದೇಶದ ಬದಲಾದ ರಾಜಕೀಯ ಸನ್ನಿವೇಶವನ್ನು ಹೇಗೆ ಬೇಕಾದರೂ ವ್ಯಾಖ್ಯಾನಿಸಬಹುದು. ಆದರೆ ಭಾರತದ ಸಾಮಾಜಿಕ ಸನ್ನಿವೇಶ ಮಾತ್ರ ಇನ್ನೂ ಶತಮಾನಗಳಷ್ಟು ಹಿಂದಿರುವುದು ಸುಳ್ಳಲ್ಲ.
ಗಂಡು ಮಗುವಿನ ಹಂಬಲ, ಹೆಣ್ಣು ಮಗುವಿಗೆ ತಾತ್ಸಾರ ಇದು ಭಾರತೀಯ ಸಮಾಜದ ಡಿಎನ್’ಎಯಲ್ಲಿ ಹಾಸು ಹೊಕ್ಕಾಗಿರುವ ಸಮಸ್ಯೆ. ಗಂಡು ಮಗುವಿಗಾಗಿ ಮಾಡಬಾರದ್ದನ್ನೂ ಮಾಡಲು ಹೇಸದ ಸಮಾಜ ನಮ್ಮದು.
undefined
ಮದುವೆಯಾಗದೇ ಗಂಡು ಮಗುವಿಗೆ ಜನ್ಮ ನೀಡಿದ ಅರ್ಜುನ್ ರಾಂಪಾಲ್ ಗೆಳತಿ
ಗಂಡು ಮಗುವಿಗೆ ಜನ್ಮ ನೀಡಲಿಲ್ಲ ಎಂಬ ಕಾರಣಕ್ಕೆ ಪತ್ನಿಯನ್ನು ಕೊಂದ, ಗಂಡು ಮಗು ನೀಡದ ಸೊಸೆಗೆ ಬೆಂಕಿ ಹಚ್ಚಿದ, ಹೆಣ್ಣು ಮಗುವಿಗೆ ಜನ್ಮ ನೀಡಿದ್ದಕ್ಕೆ ವಿಚ್ಛೇದನ ನೀಡಿದಂತಹ ಅನೇಕ ಅನಿಷ್ಟ ಉದಾಹರಣೆಗಳು ನಮ್ಮ ಮುಂದಿದೆ.
ಅದರಂತೆ ಗಂಡು ಮಗುವಿನ ಹಂಬಲ ಮಹಿಳೆಯೋರ್ವಳನ್ನು 12 ಮಕ್ಕಳನ್ನು ಹೆರುವಂತೆ ಮಾಡಿದ ಘಟನೆ ರಾಜಸ್ಥಾನದ ಚುರು ಜಿಲ್ಲೆಯ ಜಾಡ್ಸರ್’ನಲ್ಲಿ ನಡೆದಿದೆ.
ಬ್ರಿಟನ್ ರಾಜಕುಮಾರ ಹ್ಯಾರಿ - ಮೇಘನ್ ಗೆ ಮಗು ಜನನ
ಇಲ್ಲಿನ ಗುಡ್ಡಿ ಎಂಬ 42 ವರ್ಷದ ಮಹಿಳೆ ಗಂಡು ಮಗುವಿಗಾಗಿ ಪರಿತಪಿಸುತ್ತಿದ್ದು, 11 ಹೆಣ್ಣುಮಕ್ಕಳಿಗೆ ಜನ್ಮ ನೀಡಿದ ಬಳಿಕ ಇದೀಗ 12ನೇ ಮಗುವಾಗಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.
ವಿಚಿತ್ರ ಎಂದರೆ 11 ಹೆಣ್ಣುಮಕ್ಕಳ ಪೈಕಿ ಈಗಾಗಲೇ ಇಬ್ಬರಿಗೆ ಮದುವೆಯಾಗಿದ್ದು, ಹಿರಿಯ ಮಗಳಿಗೆ ಈಗಾಗಲೇ 22 ವರ್ಷ ವಯಸ್ಸು.
ಪ್ರಣವಾನಂದ ಸ್ವಾಮೀಜಿಗೆ ಗಂಡು ಮಗು: ನೀ ಮಠದ ಉತ್ತರಾಧಿಕಾರಿ ಆಗು!
ಇನ್ನು ಗುಡ್ಡಿ ಕೊನೆಗೂ ಗಂಡು ಮಗುವಿಗೆ ಜನ್ಮ ನೀಡಿದ ಕಾರಣಕ್ಕೆ ಗ್ರಾಮಸ್ಥರೆಲ್ಲಾ ಸಂತುಷ್ಟಗೊಂಡಿದ್ದು, ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.