ಬಿಜೆಪಿ ಉಪಾಧ್ಯಕ್ಷರಿಗೆ ಒದ್ದರು: ಹಾರಿ ಪೊದೆಯೊಳಗೆ ಬಿದ್ದರು!

Published : Nov 25, 2019, 03:10 PM ISTUpdated : Nov 27, 2019, 07:11 PM IST
ಬಿಜೆಪಿ ಉಪಾಧ್ಯಕ್ಷರಿಗೆ ಒದ್ದರು: ಹಾರಿ ಪೊದೆಯೊಳಗೆ ಬಿದ್ದರು!

ಸಾರಾಂಶ

ಬಿಜೆಪಿ ಉಪಾಧ್ಯಕ್ಷರ ಮೇಲೆ ಅಮಾನವೀಯ ಹಲ್ಲೆ| ನಾಯಕನನ್ನು ಕಾಲಿನಿಂದ ಒದ್ದು ಮೃಗೀಯ ವರ್ತನೆ| ಪ.ಬಂಗಾಳ ಬಿಜೆಪಿ ಘಟಕದ ಉಪಧ್ಯಕ್ಷ ಜಾಯ್ ಪ್ರಕಾಶ್ ಮಜುಂದಾರ್| ಜಾಯ್ ಪ್ರಕಾಶ್ ಅವರನ್ನು ಒದ್ದು ದರ್ಪ ಮೆರೆದ ಟಿಎಂಸಿ ಕಾರ್ಯಕರ್ತರು| ಕರೀಂಪುರ್ ಉಪಚುನಾವಣೆಯಲ್ಲಿ ಪ್ರಚಾರಕಾರ್ಯದಲ್ಲಿ ನಿರತರಾಗಿದ್ದ ಜಾಯ್ ಪ್ರಕಾಶ್| 

"

ಕೋಲ್ಕತ್ತಾ(ನ.25): ಪ.ಬಂಗಾಳ ಬಿಜೆಪಿ ಘಟಕದ ಉಪಾಧ್ಯಕ್ಷ ಜಾಯ್ ಪ್ರಕಾಶ್ ಮಜುಂದಾರ್ ಮೇಲೆ ಟಿಎಂಸಿ ಕಾರ್ಯಕರ್ತರು ಹಲ್ಲೆ ನಡೆಸಿದ ಘಟನೆ ನಡೆದಿದೆ.

ಕರೀಂಪುರ್ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಜಾಯ್ ಪ್ರಕಾಶ್, ಪ್ರಚಾರ ಮಾಡುತ್ತಿದ್ದ ವೇಳೆ ಟಿಎಂಸಿ ಕಾರ್ಯಕರ್ತರು ಏಕಾಏಕಿ ದಾಳಿ ಮಾಡಿದ್ದಾರೆ.

ಮತ್ತೆ ಹರಿಯಿತು ನೆತ್ತರು : ಮತ್ತೋರ್ವ ಬಿಜೆಪಿ ಮುಖಂಡನ ಹತ್ಯೆ
 

ಜಾಯ್ ಪ್ರಕಾಶ್ ಅವರನ್ನು ಸುತ್ತುವರೆದ ಟಿಎಂಸಿ ಕಾರ್ಯಕರ್ತರು, ಅವರನ್ನು ತಳ್ಳಾಡಿದಲ್ಲದೇ ಕಾಲಿನಿಂದ ಒದ್ದು ಅಮಾನವೀಯ ವರ್ತನೆ ತೋರಿದ್ದಾರೆ.

ಜಾಯ್ ಪ್ರಕಾಶ್ ಅವರನ್ನು ಟಿಎಂಸಿ ಕಾರ್ಯಕರ್ತನೋರ್ವ ಒದ್ದಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಜಾಯ್ ಪ್ರಕಾಶ್ ಪೊದೆಯೊಳಗೆ ಹೋಗಿ ಬಿದ್ದಿದ್ದಾರೆ.

ಬಂಗಾಳದಲ್ಲಿ ಮತ್ತೆ ಹಿಂಸೆ: ನಾಡಬಾಂಬ್‌ ತೂರಾಟ!

ಕೂಡಲೇ ಜಾಯ್ ಪ್ರಕಾಶ್ ನೆರವಿಗೆ ಧಾವಿಸಿದ ಪೊಲೀಸರು, ಟಿಎಂಸಿ ಕಾರ್ಯಕರ್ತರನ್ನು ಚದುರಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಪ.ಬಂಗಾಳದಲ್ಲಿ ಬಿಜೆಪಿ-ಟಿಎಂಸಿ ನಡುವಿನ ಜಗಳಕ್ಕೆ ಕೊನೆಯೇ ಇಲ್ಲದಂತಾಗಿದೆ. ಚುನಾವಣೆ ಸಂದರ್ಭದಲ್ಲಿ ಪರಸ್ಪರ ಕಿತ್ತಾಡುವ ಎರಡೂ ಪಕ್ಷಗಳ ಕಾರ್ಯಕರ್ತರು, ಹತ್ಯೆಯಂತಹ ಕೀಳು ಮಟ್ಟದ ರಾಜಕಾರಣಕ್ಕೂ ಇಳಿಯುವುದು ದುರದೃಷ್ಟಕರ.

ಕಳೆದ ಲೋಕಸಭೆ ಚುನಾವಣೆ ವೇಳೆ ಹಲವು ಬಿಜೆಪಿ-ಟಿಎಂಸಿ ಕಾರ್ಯಕರ್ತರು ಹತ್ಯೆಗೊಳಗಾಗಿದ್ದು, ಬಿಜೆಪಿ ಕಾರ್ಯಕರ್ತರ ಹಾಗೂ ನಾಯಕರು ಸರಣಿ ಹತ್ಯೆಗಳು ಇಡೀ ದೇಶವನ್ನು ಬೆಚ್ಚಿ ಬೀಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು. 

ನವೆಂಬರ್ 25ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸಿದ್ದೇಶ್ವರ್‌ ಎಕ್ಸ್‌ಪ್ರೆಸ್‌ನಲ್ಲಿ ನಿದ್ದೆಗೆ ಜಾರಿದ ಚಿನ್ನದ ವ್ಯಾಪಾರಿಗೆ ಆಘಾತ: 5.53 ಕೋಟಿ ಮೊತ್ತದ ಚಿನ್ನ ಮಾಯ
ಭೂರೂಪ ಬದಲಾಯಿಸಿದ ಪ್ರವಾಹ.. ವಿಶ್ವದ ಅತಿದೊಡ್ಡ ನದಿ ಮಜುಲಿ ದ್ವೀಪ ಬಗ್ಗೆ ನಿಮಗೆ ಗೊತ್ತೇ?