ನವದೆಹಲಿ: ಆನೆಗಳ ಸಾಕಷ್ಟು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಕೆಲ ದಿನಗಳ ಹಿಂದೆ ಆನೆಯೊಂದು ರಸ್ತೆ ಬದಿ ಪಾನಿಪುರಿ ತಿನ್ನುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ಅದೇ ರೀತಿ ಈಗ ಆನೆಯೊಂದು ರಸ್ತೆಯಲ್ಲಿ ಸಾಗುತ್ತಿದ್ದ ಬಸ್ಸೊಂದನ್ನು ಅಡ್ಡಹಾಕಿ ನಿಲ್ಲಿಸಿ ಬಸ್ ಏರಲು ಬಾಗಿಲ ಬಳಿ ಬಂದು ಪ್ರಯತ್ನಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.
ಈ ವಿಡಿಯೋವನ್ನು ಉಮಾಶಂಕರ್ ಸಿಂಗ್ ಎನ್ನುವವರು ಸಾಮಾಜಿಕ ಜಾಲತಾಣದಲ್ಲಿ(Social Media) ಪೋಸ್ಟ್ ಮಾಡಿದ್ದು, ಈ ವಿಡಿಯೋದಲ್ಲಿ ಕಾಣಿಸುವಂತೆ ಆನೆಯೊಂದು ರಸ್ತೆಲ್ಲಿ ಬರುವ ಟಾಟಾ (Tata Bus) ಮಿನಿಬಸ್‌ಗೆ ಸೊಂಡಿಲನ್ನು ಅಡ್ಡ ಹಿಡಿದು ನಿಲ್ಲಿಸುತ್ತದೆ. ಈ ವೇಳೆ ಬಸ್ ನಿಲ್ಲಿಸಿದ ಚಾಲಕನಿಗೆ ಸೊಂಡಿಲೆತ್ತಿ ನಿಲ್ಲು ಎಂದು ಹೇಳುವಂತೆ ಮಾಡುವ ಆನೆ ಸೀದಾ ಬಾಗಿಲಿನ ಬಳಿ ಹೋಗಿ ಸೊಂಡಿಲು (Trunk) ತೂರಿಸಿ ಒಂದು ಕಾಲು ಮೇಲೆತ್ತಿಕೊಂಡು ಮೇಲೆರಲು ನೋಡುತ್ತದೆ. ಈ ವೇಳೆ ಬಸ್ ಚಾಲಕ ಬುದ್ಧಿವಂತಿಕೆ ತೋರಿಸಿ ನಿಧಾನಕ್ಕೆ ಬಸ್ ಚಲಾಯಿಸಿ ಮುಂದೆ ಹೋದಾಗ ಆನೆ ಪಕ್ಕಕ್ಕೆ ಸರಿಯುತ್ತದೆ. ಆದರೆ ಈ ಘಟನೆಯಲ್ಲಿ ಆನೆ ಯಾರಿಗೂ ಹಾನಿ ಮಾಡಿಲ್ಲ.
ಮೆರವಣಿಗೆ ವೇಳೆ ಕರೆಂಟ್ ಶಾಕ್: ತನ್ನ ಮೇಲಿದ್ದವರ ಕೆಳಗುರುಳಿಸಿ ಆನೆ ಎಸ್ಕೇಪ್
ಟಾಟಾ ವಾಹನದ ಬಾಗಿಲು (Door) ತುಂಬಾ ಸಣ್ಣ ಇದೆ. ದೊಡ್ಡ ದೇಹದವರು ಪ್ರಯಾಣಿಸುವುದಿರಲಿ ಕನಿಷ್ಠ ಏರುವುದು ಕೂಡ ಅಸಾಧ್ಯ ಎಂದು ಬರೆದು ಈ ವಿಡಿಯೋವನ್ನು ಉಮಾಶಂಕರ್ ಸಿಂಗ್ ಪೋಸ್ಟ್ ಮಾಡಿದ್ದಾರೆ. 14 ಸೆಕೆಂಡ್‌ಗಳ ಈ ವಿಡಿಯೋವನ್ನು ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದು, 3 ಸಾವಿರಕ್ಕೂ ಹೆಚ್ಚು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಈ ಘಟನೆ ಎಲ್ಲಿ ನಡೆದಿದೆ ಎಂಬ ಬಗ್ಗೆ ಯಾವುದೇ ಡಿಟೇಲ್ ಈ ವಿಡಿಯೋದಲ್ಲಿ ಇಲ್ಲ.
ಆಹಾ ಆಹಾ... ಪಾನಿಪುರಿ ಸವಿಯುತ್ತಿರುವ ಆನೆ... ವಿಡಿಯೋ ಸಖತ್ ವೈರಲ್
ಆನೆಗಳು ಹಾಗೂ ಮಾನವನ ನಡುವಿನ ಒಡನಾಟದ ಕೆಲವೊಮ್ಮೆ ಸಂಘರ್ಷದ ವಿಡಿಯೋಗಳು ಆಗಾಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಕೆಲ ದಿನಗಳ ಹಿಂದೆ ಆನೆಗಳ ಗುಂಪು ಕಾಡಿನ ಮಧ್ಯೆ ಸಾಗುವ ಕಬ್ಬಿನ ಲಾರಿಯನ್ನು ಅಡ್ಡಹಾಕಿ ನಿಲ್ಲಿಸಿ ಸುಂಕದ ರೂಪದಲ್ಲಿ ಕಬ್ಬು ವಸೂಲಿ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಲ್ಲಿ ಸಾಕಷ್ಟು ವೈರಲ್ ಆಗಿತ್ತು. ಈ ವಿಡಿಯೋನ್ನು ಭಾರತೀಯ ಅರಣ್ಯ ಸೇವೆ ಅಧಿಕಾರಿ ಪ್ರವೀಣ್ ಕಸ್ವಾನ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ವಿಡಿಯೋದಲ್ಲಿ ಕಾಣಿಸುವಂತೆ ಆನೆಗಳು ಕಾಡಿನ ಮಧ್ಯೆ ಸಾಗುವ ಕಬ್ಬಿನ ಜಲ್ಲೆ ತುಂಬಿದ ಲಾರಿಯನ್ನು ಅಡ್ಡ ಹಾಕಿ ನಿಲ್ಲಿಸಿ ಒಂದೊಂದೇ ಕಬ್ಬನ್ನು ಹೊರಗೆಳೆದು ತಿನ್ನುತ್ತಿವೆ. ಈ ವಿಡಿಯೋ ಪೋಸ್ಟ್ ಮಾಡಿದ ಅಧಿಕಾರಿ ಆನೆಗಳು ಟ್ಯಾಕ್ಸ್ ವಸೂಲಿ ಮಾಡುತ್ತಿವೆ ಎಂದು ಬರೆದುಕೊಂಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ