ಆಯೋಧ್ಯೆಯಲ್ಲಿ ದೀಪೋತ್ಸವಕ್ಕೆ ಮೋದಿ ಚಾಲನೆ, 18 ಲಕ್ಷ ದೀಪಬೆಳಗಿ ದಾಖಲೆ!

Published : Oct 23, 2022, 07:14 PM ISTUpdated : Oct 23, 2022, 07:17 PM IST
ಆಯೋಧ್ಯೆಯಲ್ಲಿ ದೀಪೋತ್ಸವಕ್ಕೆ ಮೋದಿ ಚಾಲನೆ, 18 ಲಕ್ಷ ದೀಪಬೆಳಗಿ ದಾಖಲೆ!

ಸಾರಾಂಶ

ಸರಯೂ ನದಿ ತಟದಲ್ಲಿ ದೀಪಾವಳಿ ಹಬ್ಬ ಆಚರಣೆ ಹೊಸ ದಾಖಲೆ ಬರೆದಿದೆ. 18 ಲಕ್ಷ ದೀಪ ಬೆಳಗುವು ಮೂಲಕ ದಾಖಲೆ ಬರೆಯಲಾಗಿದೆ.. ಈ ದೀಪೋತ್ಸವಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ. ಬಳಿಕ 14 ವರ್ಷದ ವನವಾಸ ಮುಗಿಸಿ ಆಯೋಧ್ಯೆಗೆ ಆಗಮಿಸಿದ ಶ್ರೀರಾಮನಿಗೆ ಯಾವ ರೀತಿ ಸ್ವಾಗತ ಹಾಗೂ ದೀಪಾವಳಿ ಸಿಕ್ಕಿರಬಹುದು ಎಂದು ಮೋದಿ ತಮ್ಮ ಭಾಷಣದಲ್ಲಿ ಹೇಳಿದ್ದಾರೆ. ಮೋದಿ ದೀಪೋತ್ಸವ ಬೆಳಗಿ ಮಾತನಾಡಿದ ಭಾಷಣದ ಹೈಲೈಟ್ಸ್ ಇಲ್ಲಿದೆ.  

ಅಯೋಧ್ಯೆ(ಅ.23): ಆಯೋಧ್ಯೆ ದೀಪಾವಳಿ ಹೊಸ ದಾಖಲೆ ಬರೆದಿದೆ. ಪ್ರಧಾನಿ ನರೇಂದ್ರ ಮೋದಿ 18 ಲಕ್ಷ ದೀಪೋತ್ಸವಕ್ಕೆ ಚಾಲನೆ ನೀಡಿದ್ದಾರೆ. ದೀಪ ಬೆಳಗುವ ಮೂಲಕ ಪ್ರಧಾನಿ ಮೋದಿ ಈ ವಿಶೇಷ ದೀಪಾವಳಿ ಹಬ್ಬಕ್ಕೆ ಚಾಲನೆ ನೀಡಿದ್ದಾರೆ. ಬಳಿಕ ಮಾತನಾಡಿದ ಮೋದಿ ನಾವು ಲಕ್ಷ ಲಕ್ಷ ದೀಪ ಬೆಳಗಿದ್ದೇವೆ, ಆದರೆ 14 ವರ್ಷಗಳ ವನವಾಸ ಮುಗಿಸಿ ಆಯೋಧ್ಯೆಗೆ ಆಗಮಿಸಿದ ಶ್ರೀರಾಮನಿಗೆ ಯಾವ ರೀತಿ ಸ್ವಾಗತ ಸಿಕ್ಕಿರಬಹುದು ಎಂದು ನಾನು ಯೋಚಿಸುತ್ತಿದ್ದೆ. ನಾವು ರಾಮಯುಗ ನೋಡಿಲ್ಲ. ಆದರೆ ನಾವು ಅದ್ಧೂರಿ ದೀಪಾವಳಿ ಆಚರಿಸುತ್ತಿದ್ದೇವೆ. ಪ್ರಭು ಶ್ರೀ ರಾಮ, ರಾವಣನ ಅಂತ್ಯವನ್ನೂ ಸಾವಿರಾರು ವರ್ಷಗಳ ಹಿಂದೆ ಮಾಡಿದ್ದಾನೆ. ಆದರೆ ಈಗಲೂ ರಾವಣ ಹರ ಮಾಡುತ್ತೇವೆ. ಇಂದು ಬಳಗಿರುವ ಪ್ರತಿಯೊಂದು ದೀಪವೂ ಶ್ರೀರಾಮ ಆದರ್ಶಗಳನ್ನು ಹೇಳುತ್ತಿದೆ. ನಮಗೆ ಈ ದೀಪಾವಳಿ, ದೀಪ ಕೇವಲ ಒಂದು ವಸ್ತುವಲ್ಲ. ವಿಶ್ವವನ್ನೇ ಬೆಳಗುವ ಶಕ್ತಿ ಎಂದು ಮೋದಿ ಹೇಳಿದ್ದಾರೆ.

ವಿಜಯವೂ ಯಾವಗಲೂ ಶ್ರೀರಾಮ ರೂಪಿ ಸದಾಚಾರನಿಗೆ ಒಲಿಯುತ್ತದೆ. ಇದು ರಾಣವನ ರೂಪಿಗಲ್ಲ. ದೀಪವೂ ಜ್ಯೋತಿ ಬ್ರಹ್ಮನ ಸ್ವರೂಪವಾಗಿದೆ. ಆ ಆಧ್ಯಾತ್ಮಿಕ ಹಬ್ಬ ಭಾರತವನ್ನು ಪ್ರಕಾಶಮಾನ ಮಾಡಲಿದೆ. ಈ ಸಂದರ್ಭದಲ್ಲಿ ಎಲ್ಲರಿಗೂ ಗೋಸ್ವಾಮಿ ತುಳುಸಿದಾಸ ಹೇಳಿದ ಮಾತನ್ನು ಹೇಳುತ್ತೇನೆ. ಶ್ರೀರಾಮ ಇಡೀ ವಿಶ್ವಕ್ಕೆ ಬೆಳಕು ನೀಡುತ್ತಾನೆ. ಈ ಪ್ರಕಾಶ ದಯಾ ಹಾಗೂ ಕರುಣೆ ಎಂದುಮೋದಿ ಹೇಳಿದ್ದಾರೆ.

 

 

ಆಯೋಧ್ಯ ಶ್ರೀರಾಮ ಜನ್ಮಭೂಮಿಯಿಂದ ದೇಶದ ಜನತೆಗೆ ಮೋದಿ ವಿಶೇಷ ಮನವಿ!

ದೀಪ ಆತ್ಮವಿಶ್ವಾಸವನ್ನು ನೀಡುತ್ತದೆ. ದೀಪ ಕತ್ತಲನ್ನು ಹೋಗಲಾಡಿಸುತ್ತದೆ. ದೀಪ ಮನುಷ್ಯನ ಮನಸ್ಸಿನಲ್ಲಿ ಸಮರ್ಪಣೆ ಬಾವ ತರುತ್ತದೆ.  ದೀಪದಿಂದ ದೀಪಾವಳಿ ಭಾರತದ ಸಂಸ್ಕೃತಿಯಾಗಿದೆ. ಅದೆಷ್ಟೋ ದೀಪಾವಳಿ ಮೇಲೆ ದಾಳಿಗಳಾಗಿದೆ. ಭಾರತದ ಮೇಲೆ ಸತತ ದಾಳಿಗಳು ನಡೆದಿದೆ. ಆದರೆ ನಮ್ಮ ದೀಪಾವಳಿ, ದೀಪ ಬೆಳುಗತ್ತಲೇ ಇದೆ. ನಾವು ದೀಪವನ್ನು ಅಳಿಸಲಿಲ್ಲ. ಇತ್ತೀಚೆಗೆ ಕೊರೋನಾ ಕೂಡ ದಾಳಿ ಮಾಡಿತ್ತು. ಆದರೆ ಭಾರತದ ದೀಪ ಬೆಳಗುತ್ತಲೇ ಇತ್ತು. ಇದೀಗ ನೀವೆಲ್ಲೂ ಈ ಅಭಿವೃದ್ಧಿಯನ್ನು ನೋಡುತ್ತಿದ್ದೀರಿ ಎಂದು ಮೋದಿ ಹೇಳಿದ್ದಾರೆ. ದೀಪ ಹೊಸತನಕ್ಕೆ ಆರಂಭವಾಗಿದೆ. ದೀಪ ನಮ್ಮ ಆತ್ಮಿವಿಶ್ವಾಸದ ಸಂಕೇತವಾಗಿದೆ. ದೀಪ ನಮ್ಮ ಅಂಧಕಾರವನ್ನು ಹೋಗಲಾಡಿಸುವ ಶಕ್ತಿಯಾಗಿದೆ ಎಂದು ಮೋದಿ ಹೇಳಿದರು.  

ಪ್ರಧಾನಿ ಮೋದಿ ಆಯೋಧ್ಯೆಯಲ್ಲಿ 18 ಲಕ್ಷ ದೀಪಗಳ ಉತ್ಸವಕ್ಕೆ ಚಾಲನೆ ನೀಡಿದ್ದಾರೆ. ಇದೀಗ ಆಯೋಧ್ಯೆ 5 ದಿನಗಳ ಕಾಲ 18 ಲಕ್ಷ ದೀಪಗಳಿಂದ ಕಂಗೊಳಿಸಲಿದೆ.  ಇಡೀ ಆಯೋಧ್ಯೆಯಲ್ಲಿ ದೀಪಾವಳಿ ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಎಲ್ಲೆಡೆ ದೀಪಗಳಿಂದ ಆಯೋಧ್ಯೆ ಕಂಗೊಳಿಸುತ್ತಿದೆ. ಇದೀಗ ಆಯೋಧ್ಯೆ ರಾಮಯುಗದ ಗತವೈಭವನ್ನು ಮರುಕಳಿಸುತ್ತಿದೆ. ದೀಪೋತ್ಸವಕ್ಕೆ ಚಾಲನೆ ನೀಡಿದ ಬಳಿಕ ಲೇಸರ್ ಲೈಟಿಂಗ್ಸ್ ಮೂಲಕ ರಾಮಕಥಾ ಪ್ರಸ್ತುತಪಡಿಸಲಾಯಿತು. 

ರಾಮಲಲ್ಲಾ ದರ್ಶನ ಪಡೆದ ಪ್ರಧಾನಿ ಮೋದಿ, ಮಂದಿರ ನಿರ್ಮಾಣ ಕಾರ್ಯ ಪರಿಶೀಲನೆ!
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಂಬಾನಿ ಅಳಿಯನಿಗೆ ಯಾಕೆ ಬಂತು ಇಂಥಾ ಸ್ಥಿತಿ, ಶ್ರೀರಾಮ್‌ ಲೈಫ್‌ ಇನ್ಶುರೆನ್ಸ್‌ ಪಾಲು ಮಾರಾಟಕ್ಕೆ ನಿರ್ಧಾರ!
ಟಾಟಾದ ತಾಜ್‌, ಐಟಿಸಿಗೆ ಅದಾನಿ ಗ್ರೂಪ್ ಟಕ್ಕರ್, ಐಷಾರಾಮಿ ಹೋಟೆಲ್‌ ಉದ್ಯಮಕ್ಕೆ ಎಂಟ್ರಿ, ಏರ್ಪೋರ್ಟ್‌ಗಳೇ ಟಾರ್ಗೆಟ್!