
ಒಡಿಶಾ(ಜ. 21) ಕರಡಿಯೊಂದು ತನ್ನ ಮರಿಯೊಂದಿಗೆ ಗ್ರಾಮಕ್ಕೆ ಭೇಟಿ ನೀಡಿದ್ದು, ಇದರಿಂದ ಭಯಗೊಂಡ ಜನ ಬೊಬ್ಬೆ ಹಾಕುವುದರ ಜೊತೆ ದೊಂದಿ ಹಿಡಿದು ಅದನ್ನು ಓಡಿಸಿದ್ದಾರೆ. ಒಡಿಶಾದ ಬುರ್ಜಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸುತ್ತು ಹೊಡೆಯುತ್ತಿದೆ.
ನವರಂಗ್‌ಪುರ ಜಿಲ್ಲೆಯ (Nabrangpur)ಜಿಲ್ಲೆಯ ಉಮರ್‌ಕೋಟ್ (Umerkote) ವಿಭಾಗದ ಬುರ್ಜಾ ಗ್ರಾಮದಲ್ಲಿಈ ಘಟನೆ ನಡೆದಿದೆ. ಜೇನುತುಪ್ಪ ಕುಡಿಯುವ ಕಪ್ಪು ಕರಡಿಯೊಂದು ತನ್ನ ಮರಿಯೊಂದಿಗೆ ಆಹಾರಕ್ಕಾಗಿ ಈ ಬುರ್ಜಾ ಗ್ರಾಮಕ್ಕೆ ಭೇಟಿ ನೀಡಿದೆ. ಈ ಗ್ರಾಮವು ಕಾಡಂಚಿನಲ್ಲಿರುವ ಗ್ರಾಮವಾಗಿದೆ. ಹಾಗಾಗಿ ಆಹಾರ ಅರಸುತ್ತಾ ಕಾಡಿನಲ್ಲಿದ್ದ ಕರಡಿ ಮರಿಯೊಂದಿಗೆ ನಾಡಿಗೆ ಬಂದಿದೆ.
ಈ ವೇಳೆ ನಾಯಿಯೊಂದು ಅವಗಳನ್ನು ಓಡಿಸಲು ಯತ್ನಿಸುತ್ತಿರುವ ದೃಶ್ಯ ವಿಡಿಯೋದಲ್ಲಿ ವೈರಲ್ ಆಗಿದೆ. ಜೊತೆಗೆ ಹಿನ್ನೆಲೆಯಲ್ಲಿ ಜನ ಜೋರಾಗಿ ಬೊಬ್ಬೆ ಹಾಕುತ್ತಿರುವುದು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ. ಅಲ್ಲದೇ ಗ್ರಾಮದ ಜನ ಇವುಗಳನ್ನು ಕಾಡಿಗಟ್ಟಲು ಬೆಂಕಿಯ ದೊಂದಿಯನ್ನು ಹಿಡಿದು ಓಡಿಸುತ್ತಿರುವುದು ಕಂಡು ಬಂದಿದೆ. ನಂತರ ಕರಡಿಗಳು ಸಮೀಪದ ಮತುರಂ (Muturma)ಅರಣ್ಯ ಪ್ರದೇಶಕ್ಕೆ ತೆರಳಿವೆ. ಈ ಘಟನೆಯಲ್ಲಿ ಕರಡಿಗಳು ಗ್ರಾಮದ ಯಾರಿಗೂ ಹಾನಿ ಮಾಡಿಲ್ಲ.
ಹೊಸಪೇಟೆ: ದರೋಜಿ ಕರಡಿಧಾಮದಲ್ಲೀಗ ಸಫಾರಿ ಸೇವೆ..!
ಹವಾಮಾನ ಬದಲಾವಣೆ ಹಾಗೂ ತಾಪಮಾನದ ಹೆಚ್ಚಳದಿಂದಾಗಿ ಅಲಾಸ್ಕಾದಿಂದ ರಷ್ಯಾಕ್ಕೆ ಹಿಮಕರಡಿಗಳು ಗಣನೀಯ ಸಂಖ್ಯೆಯಲ್ಲಿ ವಲಸೆ ಹೋಗುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಪರಿಣಾಮ 2001 ರಿಂದ 2010 ರ ನಡುವೆ, ಅಲಾಸ್ಕಾದ ಹಿಮಕರಡಿಗಳ ಸಂಖ್ಯೆಯಲ್ಲಿ 40 ಪ್ರತಿಶತದಷ್ಟು ಇಳಿಕೆ ಕಂಡು ಬಂದಿದೆ ಎಂದು ವರದಿಯಾಗಿದೆ. ಜಾಗತಿಕ ತಾಪಮಾನ ಏರಿಕೆಯಾಗುತ್ತಿದೆ ಎನ್ನುವುದನ್ನು ತೋರಿಸುವ ಹಲವು ಚಿಹ್ನೆಗಳಲ್ಲಿ ಪ್ರಾಣಿಗಳ ಜನಸಂಖ್ಯೆ ಮತ್ತು ವಾಸಸ್ಥಳದಲ್ಲಿನ ಬದಲಾವಣೆ ಕೂಡ ಒಂದಾಗಿದೆ. ಅಲಾಸ್ಕಾದ ಹಿಮಕರಡಿಗಳ ಜನಸಂಖ್ಯೆಯು ವೇಗವಾಗಿ ಕ್ಷೀಣಿಸುತ್ತಿರುವುದು ಇತ್ತೀಚೆಗೆ ಕಂಡು ಬರುತ್ತಿದೆ.
Polar Bear: ಹಲ್ಲು ನೋವೆಂದು ಬಂದ ಹಿಮಕರಡಿಗೆ ರೂಟ್ ಕೆನಲ್ ಸರ್ಜರಿ ಮಾಡಿದ ಡೆಂಟಿಸ್ಟ್
2001 ರಿಂದ 2010 ರ ನಡುವೆ, ಅಲಾಸ್ಕಾ( Alaska) ದ ಹಿಮಕರಡಿ ಜನಸಂಖ್ಯೆಯಲ್ಲಿ 40 ಪ್ರತಿಶತದಷ್ಟು ಇಳಿಕೆ ಕಂಡು ಬಂದಿದೆ ಎಂದು ವರದಿಯಾಗಿದೆ. ಅಲಾಸ್ಕಾದಲ್ಲಿ ಹೆಚ್ಚುತ್ತಿರುವ ತಾಪಮಾನದಿಂದಾಗಿ ಅಲಾಸ್ಕಾದಿಂದ ರಷ್ಯಾ (Russia) ಕ್ಕೆ ಹಿಮಕರಡಿ (polar bear) ಗಳು ವಲಸೆ ಹೋಗುತ್ತಿರುವುದೇ ಇಲ್ಲಿ ಹಿಮ ಕರಡಿಗಳ ಸಂಖ್ಯೆ ಇಳಿಮುಖ ಆಗಲು ಕಾರಣವಾಗಿದೆ.
ಕಳೆದ 50 ವರ್ಷಗಳಲ್ಲಿ, ಅಲಾಸ್ಕಾದ ವಾರ್ಷಿಕ ಸರಾಸರಿ ತಾಪಮಾನದಲ್ಲಿ 4.8 ಡಿಗ್ರಿ ಸೆಲ್ಸಿಯಸ್ ಏರಿಕೆ ಕಂಡು ಬಂದಿದೆ. ಈ ಏರಿಕೆಯು ಸಮುದ್ರದ ಮಂಜುಗಡ್ಡೆ (sea ice)ಯ ಕರಗುವಿಕೆಗೆ ಕಾರಣವಾಯಿತು, ಇದು ಕರಡಿಗಳ ಬೇಟೆಯ ಸ್ಥಳದ ಮರುವಿಂಗಡಣೆ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಅಲಾಸ್ಕಾದಿಂದ ರಷ್ಯಾಕ್ಕೆ ಹಿಮ ಕರಡಿಗಳ ವಲಸೆಯಿಂದಾಗಿ ರಷ್ಯಾದ ರಾಂಗೆಲ್ ದ್ವೀಪ ( Wrangel Island) ದಲ್ಲಿ ಹಿಮಕರಡಿಗಳ ಸಂಖ್ಯೆಯಲ್ಲಿ ಭಾರಿ ಹೆಚ್ಚಳಕ್ಕೆ ಕಾರಣವಾಗಿದೆ. (ಸಮುದ್ರದ ಮಂಜುಗಡ್ಡೆ ಅಥವಾ ಸೀ ಐಸ್ ಎಂದರೆ ಸಮುದ್ರದ ನೀರು ಅದರ ಘನೀಕರಿಸುವ ತಾಪಮಾನದ ಸರಿಸುಮಾರು -2 ° C ಅಥವಾ 29 ° F ಗಿಂತ ಕಡಿಮೆ ತಂಪಾದಾಗ ಸಮುದ್ರದ ಮಂಜುಗಡ್ಡೆಯು ರೂಪುಗೊಳ್ಳುತ್ತದೆ. )
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ