ಬುಲೆಟ್ ಏರಿ ಬಂದ್ಲು ವಧು... ವಿಡಿಯೋ ವೈರಲ್‌

Suvarna News   | Asianet News
Published : Jan 21, 2022, 03:58 PM ISTUpdated : Jan 21, 2022, 04:01 PM IST
ಬುಲೆಟ್ ಏರಿ ಬಂದ್ಲು ವಧು... ವಿಡಿಯೋ ವೈರಲ್‌

ಸಾರಾಂಶ

ಬುಲೆಟ್ ಏರಿ ಮಂಟಪಕ್ಕೆ ಬಂದ ವಧು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್

ಮದುವೆ ಎಂದರೆ ಅದು ಎಲ್ಲರ ಬದುಕಿನ ಅತ್ಯಂತ ವಿಶೇಷವಾದ ದಿನ. ಬಂಧುಗಳು, ಸ್ನೇಹಿತರು, ನೆಂಟರು ಸೇರಿ ಆ ಕ್ಷಣವನ್ನು ಇನ್ನಷ್ಟು ಮಧುರವಾಗಿಸುತ್ತಾರೆ. ಆ ದಿನ ನಡೆಯುವ ತಮಾಷೆಗಳಿಗೆ ಲೆಕ್ಕವಿರುವುದಿಲ್ಲ. ಜೊತೆಗೆ ಆ ದಿನವನ್ನು ಬೇರೆಲ್ಲ ಮದುವೆಗಿಂತಲೂ ವಿಭಿನ್ನವಾಗಿ ನಡೆಸಬೇಕು ಎಂಬ ಟ್ರೆಂಡ್‌ ಇತ್ತೀಚೆಗೆ ಹೆಚ್ಚಾಗುತ್ತಿದೆ. ಹೀಗಾಗಿ ಮದುವೆ ದಿನ  ಹಳೆಯ ಸಂಪ್ರದಾಯಗಳನ್ನೆಲ್ಲಾ ಮುರಿದು ವಿಭಿನ್ನ ಸಂಪ್ರದಾಯಗಳನ್ನು ಶುರು ಮಾಡುವುದು ಸಾಮಾನ್ಯವಾಗಿದೆ. ಹಾಗೆಯೇ ಮದುವೆ ದಿನದ ಹಲವು ವಿಭಿನ್ನ ಟ್ರೆಂಡ್‌ಗಳ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಇರುವುದನ್ನು ನೀವಿಗಾಗಲೇ ನೋಡಿರಬಹುದು. ಅದೇ ರೀತಿ ಇಲ್ಲೊಬ್ಬಳು ವಧು ತನ್ನ ಮದುವೆ ದಿನ ಬುಲೆಟ್ ರೈಡ್ ಮಾಡಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿದೆ. 

ಈ ವಿಡಿಯೋದಲ್ಲಿ ಲೆಹೆಂಗಾ ಹಾಗೂ ಆಭರಣಗಳನ್ನು ತೊಟ್ಟಿರುವ ವಧು, ಬುಲೆಟ್‌ ಡ್ರೈವ್‌ ಮಾಡುತ್ತಾ ರಸ್ತೆಯಲ್ಲಿ ಹೋಗುತ್ತಿರುವುದು ಕಾಣಿಸುತ್ತಿದೆ. ವಧುವಿನ ಈ ಡೋಂಟ್‌ಕೇರ್‌ ಗುಣ ನೆಟ್ಟಿಗರ ಗಮನ ಸೆಳೆಯುತ್ತಿದೆ. ಇದು ಇನ್ಸ್ಟಾಗ್ರಾಮ್‌ನಲ್ಲಿ ವಿಟ್ಟಿ ವೆಡ್ಡಿಂಗ್‌ ಹೆಸರಿನ ಖಾತೆಯಿಂದ ವೈರಲ್‌ ಆಗಿದ್ದು, 'ನೀವು ಪ್ರೀತಿಸುವವರನ್ನು ಮದುವೆಯಾಗಲು ನಿಮಗೆ ಒಪ್ಪಿಗೆ ಕೊಟ್ಟಾಗ' ಎಂದು ಕ್ಯಾಪ್ಷನ್‌ ನೀಡಲಾಗಿದೆ. ಜೊತೆಗೆ ತಮ್ಮ ಮದುವೆಯ ಬಗ್ಗೆ ತುಂಬಾ ಉತ್ಸಾಹಿಗಳಾಗಿರುವವರಿಗೆ ಈ ವಿಡಿಯೋ ಟ್ಯಾಗ್‌ ಮಾಡಿ ಎಂದು ಬರೆದು ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. 

Viral News: ಮದುವೆ ಮಂಟಪದಲ್ಲೇ ನಿದ್ದೆಗೆ ಜಾರಿದ ಮದುಮಗಳು..!

ಎಲ್ಲರೂ ಈ ವಿಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಕೆಲವರು ಆಕೆಯ ಸುರಕ್ಷತೆ ಬಗ್ಗೆ ಭಯ ಪಟ್ಟಿದ್ದಾರೆ. ಆಕೆ ಹೆಲ್ಮೆಟ್‌ ಧರಿಸಿಲ್ಲ. ಲೆಹೆಂಗಾ ಡ್ರೆಸ್‌ ಏನಾದರೂ ಚಕ್ರಕ್ಕೆ ಸಿಲುಕಿದರೆ ಅನಾಹುತ ಸಂಭವಿಸಲಿದೆ ಎಂದು ಕಾಮೆಂಟ್ ಮಾಡಿದ್ದಾರೆ. 

 

ಇತ್ತೀಚೆಗೆ ಹಸೆಮಣೆಗೆ ಏರಲು ಮಧುವಣಗಿತ್ತಿ ಬುಲೆಟ್​ನಲ್ಲಿ ಮದುವೆ ಮಂಟಪಕ್ಕೆ ಎಂಟ್ರಿಯಾದ ಘಟನೆ ಮಂಗಳೂರಿನಲ್ಲಿ ನಡೆದಿತ್ತು. ಇದು ಮದುವೆಗೆ ಬಂದಿದ್ದವರನ್ನು ಹುಬ್ಬೇರಿಸುವಂತೆ ಮಾಡಿತ್ತು. ಮಂಗಳೂರಿನ ಸುರತ್ಕಲ್ ಮೂಲದ ಪೂಜಾ ಎಂಬ ವಧು ಬುಲೆಟ್ ಮೂಲಕ ಮದುವೆ ಮಂಟಪಕ್ಕೆ ಎಂಟ್ರಿ ಕೊಟ್ಟ ವಿಡಿಯೋ ನಂತರ  ಫುಲ್ ವೈರಲ್ ಆಗಿತ್ತು. ಸುರತ್ಕಲ್​ನ ಪೂಜಾ ಹಾಗೂ ಆಕಾಶ್ ಮದುವೆ ನವೆಂಬರ್ ನಾಲ್ಕರಂದು ನಡೆದಿತ್ತು. ಬುಲೆಟ್ ಪ್ರೇಮಿಯಾಗಿರುವ ಪೂಜಾ, ಸಿಂಗಾರಗೊಂಡಿದ್ದ ಕಾರನ್ನು ಹತ್ತಿ ಬರುವ ಬದಲು ತನ್ನ ಸ್ವಂತ ಬುಲೆಟ್ ಓಡಿಸಿಕೊಂಡು ಮದುವೆ ಮಂಟಪಕ್ಕೆ ಎಂಟ್ರಿಯಾಗಿದ್ದಳು. ಕಾಸರಗೋಡು ಮೂಲದ ಮ್ಯಾಚ್ ಫ್ರೇಮ್ ವೆಡ್ಡಿಂಗ್ ಸಂಸ್ಥೆಯ ಕ್ಯಾಮರಮೆನ್ಸ್ ಈ ದೃಶ್ಯವನ್ನು ಸೆರೆ ಹಿಡಿದಿದ್ದರು. ಬುಲೆಟ್ ರಾಣಿಯ ಈ ವಿಡಿಯೋ/ಫೋಟೋಗಳು ಭಾರೀ ಸದ್ದು ಮಾಡುತ್ತಿವೆ.

ಸಿನಿಮಾ ಸ್ಟೈಲ್‌ನಲ್ಲಿ ಮದುವೆ ಹಾಲ್‌ಗೆ ಎಂಟ್ರಿ ಕೊಟ್ಟ ವಧು..

ಕಳೆದ ವರ್ಷ ಪಾಕಿಸ್ತಾನದಲ್ಲಿ ವಧು ವರರು ಬುಲೆಟ್‌, ಬೈಕ್, ಕಾರು ಎಲ್ಲವನ್ನೂ ಬಿಟ್ಟು ಜೆಸಿಬಿ ಏರಿ ದಿಬ್ಬಣ ಬಂದ ಸುದ್ದಿ ಎಲ್ಲರ ಹುಬ್ಬೇರುವಂತೆ ಮಾಡಿತ್ತು. ಪಾಕಿಸ್ತಾನದ ಹುಂಜ ಕಣಿವೆಯಲ್ಲಿ ಈ ಘಟನೆ ನಡೆದಿತ್ತು.  ಶೃಂಗಾರಗೊಂಡ ಜೆಸಿಬಿಯಲ್ಲಿ ಬಂದ ವಧು ವರರು ದಾರಿಯುದ್ಧಕ್ಕೂ ಎಲ್ಲರಿಗೂ ನಮಸ್ಕರಿಸುತ್ತಾ ಬಂದಿದ್ದು ಸುದ್ದಿಯಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!