ಕೊರೋನಾ ನಿರ್ಬಂಧ ಸಡಿಲಿಸಿದ ಕರ್ನಾಟಕ, ಟ್ರೋಲ್‌ಗೆ ಗುರಿಯಾದ ಮಲೈಕಾ, ಜ.21ರ Top 10 News

By Suvarna NewsFirst Published Jan 21, 2022, 4:47 PM IST
Highlights

ಕೊರೋನಾ ನಿಯಂತ್ರಣಕ್ಕ ಹೇರಿದ್ದ ವೀಕೆಂಡ್ ಕರ್ಫ್ಯೂ ನಿಯಮ ಕರ್ನಾಟಕದಲ್ಲಿ ಸಡಿಲಿಕೆ ಮಾಡಲಾಗಿದೆ. ಹೊಸ ನಿಯಮ ಜಾರಿಗೊಳಿಸಲಾಗಿದೆ. ಇದೇ ಮೊದಲ ಬಾರಿಗೆ 30 ನಿಮಿಷ ತಡವಾಗಿ ದಿಲ್ಲಿ ಪರೇಡ್ ಆರಂಭಗೊಳ್ಳಲಿದೆ. ಹೊಸ ಸಮೀಕ್ಷೆ ಹೊರಬಿದ್ದಿದ್ದು, ಬಿಜೆಪಿಯಲ್ಲಿ ಮೋದಿ ನಂತರ ಯಾರು ಅನ್ನು ಕುತೂಹಲಕ್ಕೆ ಉತ್ತರ ನೀಡಲಾಗಿದೆ. ಬ್ರಾ ಧರಿಸದೆ ವಾಕ್ ಹೊರಟ ಮಲೈಕಾ, ಕೊಹ್ಲಿಗೆ ಶೋಕಾಸ್ ನೊಟೀಸ್ ನೀಡಲು ಮುಂದಾಗಿದ್ದ ಗಂಗೂಲಿ ಸೇರಿದಂತೆ ಜನವರಿ 21ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
 

Covid-19: ವೀಕೆಂಡ್ ಕರ್ಫ್ಯೂ ರದ್ದು ಮಾಡಿದ ರಾಜ್ಯ ಸರ್ಕಾರ, ಬೆಂಗಳೂರಿನಲ್ಲಿ ಶಾಲೆಗಳು ಸದ್ಯಕ್ಕೆ ಆರಂಭವಿಲ್ಲ!

ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂವನ್ನು(Weekend Curfew)  ರದ್ದು ಮಾಡುವಂತೆ ಹೋಟೆಲ್, ಬಾರ್ ಮಾಲೀಕರು, ಉದ್ಯಮಿಗಳ ಸಂಘ ಮಾಡಿದ ಮನವಿಗೆ ಕರ್ನಾಟಕ ಸರ್ಕಾರ ಸ್ಪಂದಿಸಿದ್ದು ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂವನ್ನು ರದ್ದು ಮಾಡುವ ಅಧಿಕೃತ ಘೋಷಣೆ ಮಾಡಿದೆ.

Subhash Chandra Bose Statue : ಇಂಡಿಯಾ ಗೇಟ್ ನಲ್ಲಿ ಸ್ಥಾಪನೆಯಾಗಲಿದೆ ನೇತಾಜಿ ಪ್ರತಿಮೆ

ಸ್ವಾತಂತ್ರ್ಯ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ (Netaji Subhash Chandra Bose) ಅವರ 125ನೇ ಜನ್ಮ ದಿನಾಚರಣೆಗೂ ಮುನ್ನ ಸ್ವಾತಂತ್ರ್ಯ ಚಳುವಳಿಗೆ (independence movement) ಅವರ ನೀಡಿದ ಕೊಡುಗೆಗಳನ್ನು ಗೌರವಿಸುವ ಸಲುವಾಗಿ ಅವರ ಭವ್ಯ ಪ್ರತಿಮೆಯನ್ನು ಇಂಡಿಯಾ ಗೇಟ್ ನಲ್ಲಿ(India Gate) ಈಗಾಗಲೇ ಖಾಲಿ ಇರುವ ಭವ್ಯ ಮೇಲಾವರಣದ ಅಡಿಯಲ್ಲಿ ಸ್ಥಾಪನೆ ಮಾಡಲಾಗುತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ (Prime Minister Narendra Modi)ತಿಳಿಸಿದ್ದಾರೆ

MOTN Survey : ಬಿಜೆಪಿಯಲ್ಲಿ ಮೋದಿ ನಂತರ ಯಾರು? ಮೂಡ್ ಆಫ್ ದ ನೇಷನ್ ಸರ್ವೇಯ ಸ್ಪೆಷಲ್ ಜನಾಭಿಪ್ರಾಯ!

ಉತ್ತರ ಪ್ರದೇಶ (Uttar Pradesh) ಸೇರಿದಂತೆ ಐದು ರಾಜ್ಯಗಳಿಗೆ ಮುಂದಿನ ತಿಂಗಳಿನಿಂದ ಆರಂಭವಾಗಲಿರುವ ಏಳು ಹಂತದ ಚುನಾವಣೆಗೆ ದೇಶ ಸಿದ್ಧವಾಗುತ್ತಿದೆ. ಈ ನಡುವೆ ಇಂಡಿಯಾ ಟುಡೇ ನಡೆಸಿದ ಮೂಡ್ ಆಫ್ ದ ನೇಷನ್ (MOTN) ಸಮೀಕ್ಷೆಯಲ್ಲಿ ದೇಶದ ಜನರ ಒಡಲಾಳ ತಿಳಿದುಬಂದಿದೆ.

Amar Jawan Jyoti : ತಪ್ಪು ಗ್ರಹಿಕೆ ಬೇಡ, ಅಮರ್ ಜವಾನ್ ಜ್ಯೋತಿ ಆರಿಸುತ್ತಿಲ್ಲ ಎಂದ ಕೇಂದ್ರ ಸರ್ಕಾರ

ಕಳೆದ 50 ವರ್ಷಗಳಿಂದ ಬಿಸಿಲು, ಗಾಳಿ, ಮಳೆ ಚಳಿಗೆ ನಿರಂತರವಾಗಿ ಉರಿಯುತ್ತಿದ್ದ ಅಮರವಾಗಿರುವ ದೇಶದ ಹೆಮ್ಮೆಯ ಸೈನಿಕರ ಪ್ರತೀಕವಾಗಿರುವ ಅಮರ್ ಜವಾನ್ ಜ್ಯೋತಿ (Amar Jawan Jyoti) ಇನ್ನು ಮುಂದೆ ನವೆದೆಹಲಿಯ ಇಂಡಿಯಾ ಗೇಟ್ (India Gate) ಹುಲ್ಲುಹಾಸಿನ ಬಳಿ ಕಾಣಸಿಗುವುದಿಲ್ಲ.

75 ವರ್ಷದಲ್ಲಿ ಮೊದಲ ಬಾರಿ, 30 ನಿಮಿಷ ತಡವಾಗಿ ಆರಂಭವಾಗುತ್ತೆ Republic Day ಪರೇಡ್!

ಈ ಬಾರಿ ಗಣರಾಜ್ಯೋತ್ಸವ ಪರೇಡ್ ನಿಗದಿತ ಸಮಯಕ್ಕಿಂತ ಅರ್ಧ ಗಂಟೆ ತಡವಾಗಿ ಆರಂಭವಾಗಲಿದೆ. 75 ವರ್ಷಗಳಲ್ಲಿ ಇದೇ ಮೊದಲ ಬಾರಿ ಮೆರವಣಿಗೆ ತಡವಾಗಿ ಆರಂಭವಾಗಲಿದೆ. ಕೊರೋನಾ ಪ್ರೋಟೋಕಾಲ್ (ಕೋವಿಡ್ 19) ಮತ್ತು ಶ್ರದ್ಧಾಂಜಲಿ ಸಭೆಯಿಂದಾಗಿ ಮೆರವಣಿಗೆ ವಿಳಂಬವಾಗಿ ಪ್ರಾರಂಭವಾಗಲಿದೆ.

Virat Kohli vs Sourav Ganguly: ವಿರಾಟ್ ಕೊಹ್ಲಿಗೆ ನೋಟಿಸ್ ನೀಡಲು ಮುಂದಾಗಿದ್ದ ಸೌರವ್ ಗಂಗೂಲಿ..!

ಭಾರತ ಏಕದಿನ ಕ್ರಿಕೆಟ್ ತಂಡದ (Indian Cricket Team) ನಾಯಕತ್ವದಿಂದ ವಜಾಗೊಂಡ ಬಳಿಕ ಸುದ್ದಿಗೋಷ್ಠಿಯಲ್ಲಿ ಬಿಸಿಸಿಐ (BCCI) ಅಧಿಕಾರಿಗಳ ವಿರುದ್ಧ ಬಹಿರಂಗ ಅಸಮಾಧಾನ ಹೊರಹಾಕಿದ್ದ ಭಾರತದ ಮಾಜಿ ನಾಯಕ ವಿರಾಟ್‌ ಕೊಹ್ಲಿಗೆ (Virat Kohli) ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ (Sourav Ganguly) ಶೋಕಾಸ್‌ ನೋಟಿಸ್‌ ನೀಡಲು ಮುಂದಾಗಿದ್ದರು 

Malaika Arora Trolled: ಬ್ರಾ ಧರಿಸದೆ ಮಲೈಕಾ ಮಾರ್ನಿಂಗ್ ವಾಕ್, ಕಾಲೆಳೆದ ನೆಟ್ಟಿಗರು

ನಟಿ ಮಲೈಕಾ ಅರೋರಾ ಬಾಲಿವುಡ್‌ನಲ್ಲಿ ಹೆಚ್ಚು ಬೇಡಿಕೆಯಿರುವ ಸೆಲೆಬ್ರಿಟಿಗಳಲ್ಲಿ ಒಬ್ಬರು. ಚೈಂಯಾ ಚೈಂಯಾ ಚೆಲುವೆ ಅಂದಿನಿಂದ ಇಂದಿನವರೆಗೂ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಉನ್ನತ-ಮಟ್ಟದ ಫ್ಯಾಶನ್ ಗೋಲ್ಸ್ ತೋರಿಸುವ ನಟಿ ಉತ್ಕಟವಾದ ಫಿಟ್‌ನೆಸ್ ಉತ್ಸಾಹಿ ಎನ್ನುವುದು ಎಲ್ಲರಿಗೂ ಗೊತ್ತು.

Hero Bike Booking 10 ಸಾವಿರ ರೂಗೆ ಬುಕ್ ಮಾಡಿ ಹೊಚ್ಚ ಹೊಸ ಹೀರೋ Xಪಲ್ಸ್ 200 4 Valve ಬೈಕ್!

ಮಾರುಕಟ್ಟೆಯಲ್ಲಿರುವ ಆಫ್ ರೋಡ್ ಬೈಕ್‌ಗಳಿಗೆ ಪ್ರತಿಸ್ಪರ್ಧಿಯಾಗಿ ಬಿಡುಗಡೆಯಾಗ ಹೀರೋ ಮೋಟೋಕಾರ್ಪ್(Hero MotoCorp) ಕಂಪನಿಯ ಹೀರೋ Xpulse ಅಷ್ಟೇ ಜನಪ್ರಿಯತೆ ಪಡೆದಿದೆ. ಹಲವು ಬದಲಾವಣೆ ಕಂಡ ಹೀರೋ Xpulse ಇದೀಗ 200 4Valve ಬೈಕ್ ಎರಡನೇ ಬ್ಯಾಚ್ ಬುಕಿಂಗ್ ಆರಂಭಿಸಿದೆ.

ಬುಲೆಟ್ ಏರಿ ಬಂದ್ಲು ವಧು... ವಿಡಿಯೋ ವೈರಲ್‌

ಮದುವೆ ದಿನದ ಹಲವು ವಿಭಿನ್ನ ಟ್ರೆಂಡ್‌ಗಳ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಇರುವುದನ್ನು ನೀವಿಗಾಗಲೇ ನೋಡಿರಬಹುದು. ಅದೇ ರೀತಿ ಇಲ್ಲೊಬ್ಬಳು ವಧು ತನ್ನ ಮದುವೆ ದಿನ ಬುಲೆಟ್ ರೈಡ್ ಮಾಡಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿದೆ

click me!