ಸತತ 3ನೇ ಬಾರಿ ಇಡಿ ಸಮನ್ಸ್‌ ತಪ್ಪಿಸಿಕೊಂಡ ಅರವಿಂದ್ ಕೇಜ್ರಿವಾಲ್‌: ದೆಹಲಿ ಸಿಎಂಗೆ ಬಂಧನ ಭೀತಿ?

By BK AshwinFirst Published Jan 3, 2024, 2:59 PM IST
Highlights

ಕೇಜ್ರಿವಾಲ್‌ಗೆ ಕನಿಷ್ಠ 2 ಕಾನೂನು ಮಾರ್ಗಗಳಿವೆ. ಅವರು ಸಮನ್ಸ್ ಪ್ರಶ್ನಿಸಲು ನ್ಯಾಯಾಲಯದ ಮೊರೆ ಹೋಗಬಹುದು, ಅವರ ಹಕ್ಕುಗಳನ್ನು ಪ್ರತಿಪಾದಿಸಬಹುದು ಮತ್ತು ಆರೋಪಗಳ ಬಗ್ಗೆ ಸ್ಪಷ್ಟತೆ ಕೋರಬಹುದು.

ನವದೆಹಲಿ (ಜನವರಿ 3, 2024): ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ನೀಡಿದ್ದ ಮೂರನೇ ಸಮನ್ಸ್ ಅನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಿರ್ಲಕ್ಷ್ಯ ಮಾಡಿದ್ದು, ವಿಚಾರಣೆಗೆ ಹಾಜರಾಗಿಲ್ಲ. 2024 ರ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ಸಮನ್ಸ್‌ ನೀಡಿರುವ ಸಮಯವನ್ನು ಎಎಪಿ ಟೀಕೆ ಮಾಡಿದೆ. ಅಲ್ಲದೆ, ದೆಹಲಿ ಮುಖ್ಯಮಂತ್ರಿಯ ಪ್ರಚಾರಕ್ಕೆ ಅಡ್ಡಿಪಡಿಸುವ ಉದ್ದೇಶಪೂರ್ವಕ ಪ್ರಯತ್ನ ಎಂದೂ ಆರೋಪಿಸಿದೆ. 

ಅಲ್ಲದೆ, ಇಡಿಯೊಂದಿಗೆ ಸಹಕರಿಸಲು ಕೇಜ್ರಿವಾಲ್‌ ಸಿದ್ಧರಿದ್ದಾರೆ. ಆದರೆ, ಈ ನೋಟಿಸ್ ಅನ್ನು ಕಾನೂನುಬಾಹಿರ ಎಂದು ಎಎಪಿ ಹೇಳಿಕೊಂಡಿದೆ. 

Latest Videos

338ರೂ.ಕೋಟಿ ಅಕ್ರಮ ಹಣ ವರ್ಗಾವಣೆ ಆರೋಪ: ಸಮೀರ್ ಮಹೇಂದ್ರು ಹೇಳಿಕೆ ಸಾಕ್ಷ್ಯ ಆಧರಿಸಿ ಕೇಜ್ರಿವಾಲ್‌ಗೆ ಇಡಿ ಸಮನ್ಸ್..!

ದೆಹಲಿ ಸಿಎಂಗೆ ಸಂಕಷ್ಟ? 
ಒಬ್ಬ ವ್ಯಕ್ತಿಯು ಮೂರು ಬಾರಿ ED ಸಮನ್ಸ್ ಅನ್ನು ನಿರ್ಲಕ್ಷಿಸಬಹುದು. ಕೇಜ್ರಿವಾಲ್ ಈಗ ಇದನ್ನು ಮಾಡಿರುವುದರಿಂದ, ಇಡಿ ಈಗ ಜಾಮೀನು ರಹಿತ ವಾರಂಟ್ (ಎನ್‌ಬಿಡಬ್ಲ್ಯು) ಕೋರಬಹುದು. ನಂತರ ಅವರು ಕೋರ್ಟ್‌ಗೆ ಹಾಜರಾಗಬೇಕಾಗುತ್ತದೆ. 

ಒಂದು ವೇಳೆ ಕೋರ್ಟ್‌ಗೆ ಹಾಜರಾಗದಿದ್ದರೆ ಅವರನ್ನು ಬಂಧಿಸಬಹುದು ಹಾಗೂ ನಂತರದ ನ್ಯಾಯಾಲಯದ ಪ್ರಕ್ರಿಯೆಗಳಿಗೆ ಕಾರಣವಾಗಬಹುದು. 

 

Delhi Liquor Scam ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಮತ್ತೆ ಸಂಕಷ್ಟ, ಇಡಿ ಅಧಿಕಾರಿಗಳಿಂದ ಸಮನ್ಸ್!

ಅರವಿಂದ್ ಕೇಜ್ರಿವಾಲ್ ಕಾನೂನು ಆಯ್ಕೆಗಳು
ದೆಹಲಿ ಮುಖ್ಯಮಂತ್ರಿ ತನಿಖಾ ಏಜೆನ್ಸಿಯೊಂದಿಗೆ ಸಹಕರಿಸಲು ಸಿದ್ಧರಿದ್ದಾರೆ. ಆದರೆ ಸಮನ್ಸ್‌ನ ಸಮಯ ಮತ್ತು ತುರ್ತುಸ್ಥಿತಿಯನ್ನು ಪ್ರಶ್ನಿಸುತ್ತಾರೆ. ಈ ಹಿಂದೆ ಎರಡು ಬಾರಿ ಇಡಿ ಮುಂದೆ ಹಾಜರಾಗಲು ಕೇಜ್ರಿವಾಲ್ ನಿರಾಕರಿಸಿರುವುದು ಎಎಪಿ ಮತ್ತು ತನಿಖಾ ಸಂಸ್ಥೆ ನಡುವಿನ ಉದ್ವಿಗ್ನತೆಯನ್ನು ಹೆಚ್ಚಿಸಿದೆ. ಈಗ 3ನೇ ಬಾರಿಯೂ ತಪ್ಪಿಸಿಕೊಂಡಿದ್ದಾರೆ.

ಇನ್ನು, ಕೇಜ್ರಿವಾಲ್‌ಗೆ ಕನಿಷ್ಠ 2 ಕಾನೂನು ಮಾರ್ಗಗಳಿವೆ. ಅವರು ಸಮನ್ಸ್ ಪ್ರಶ್ನಿಸಲು ನ್ಯಾಯಾಲಯದ ಮೊರೆ ಹೋಗಬಹುದು, ಅವರ ಹಕ್ಕುಗಳನ್ನು ಪ್ರತಿಪಾದಿಸಬಹುದು ಮತ್ತು ಆರೋಪಗಳ ಬಗ್ಗೆ ಸ್ಪಷ್ಟತೆ ಕೋರಬಹುದು. ಹೆಚ್ಚುವರಿಯಾಗಿ, ನಿರೀಕ್ಷಣಾ ಜಾಮೀನು ತೆಗೆದುಕೊಳ್ಳಬಹುದು, ತನಿಖೆ ನಡೆಯುತ್ತಿರುವಾಗ ಬಂಧನದಿಂದ ರಕ್ಷಿಸಲು ಇದು ಕಾನೂನು ಕಾರ್ಯವಿಧಾನವಾಗಿದೆ.

ಕೇಜ್ರಿವಾಲ್ ಬಂಧನವಾದರೆ 'ವರ್ಕ್ ಫ್ರಂ ಜೈಲ್' : ಜೈಲಲ್ಲೇ ಸಂಪುಟ ಸಭೆ, ಅಲ್ಲಿಂದಲೇ ಕೆಲಸ: ಆಪ್ ನಿರ್ಣಯ

ಹಿಂದಿನ ಸಮನ್ಸ್
ನವೆಂಬರ್ 2 ರಂದು ಕೇಂದ್ರೀಯ ಏಜೆನ್ಸಿ ಇಡಿ ಮೊದಲ ಬಾರಿಗೆ ಸಮನ್ಸ್‌ ನೀಡಿದ್ದು, ಕೇಜ್ರಿವಾಲ್ ಹಾಜರಾಗಲು ನಿರಾಕರಿಸಿದ್ದರು. ಈ ಸಮನ್ಸ್ ಅಸ್ಪಷ್ಟ, ಪ್ರೇರಿತ ಮತ್ತು ಕಾನೂನಿನಲ್ಲಿ ಸಮರ್ಥನೀಯವಲ್ಲ ಎಂದಿದ್ದರು.

ಬಳಿಕ ತನಿಖಾ ಸಂಸ್ಥೆಯು ಡಿಸೆಂಬರ್ 18 ರಂದು ಕೇಜ್ರಿವಾಲ್‌ಗೆ ಎರಡನೇ ಸಮನ್ಸ್ ನೀಡಿತು, ಡಿಸೆಂಬರ್ 21 ರಂದು ಅವರ ಕಚೇರಿಯಲ್ಲಿ ಅವರು ಹಾಜರಾಗಬೇಕೆಂದು ಮನವಿ ಮಾಡಿತು. ಆದರೆ, ದೆಹಲಿ ಮುಖ್ಯಮಂತ್ರಿ ಇದನ್ನು ಪಾಲಿಸದಿರಲು ನಿರ್ಧರಿಸಿದರು.

ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಇಡಿ 2021-22 ರ ದೆಹಲಿ ಸರ್ಕಾರದ ಅಬಕಾರಿ ನೀತಿಯ ಬಗ್ಗೆ ತನಿಖೆ ನಡೆಸುತ್ತಿವೆ. ಈ ನೀತಿ ಕೆಲವು ಮದ್ಯ ಮಾರಾಟಗಾರರಿಗೆ ಲಾಭದಾಯಕವಾಗಿದೆ ಎಂದು ಆರೋಪಿಸಲಾಗಿದೆ. ಎಎಪಿ ಈ ಆರೋಪಗಳನ್ನು ನಿರಾಕರಿಸಿದೆ. ದೆಹಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಯಿಂದ ವರದಿ ಪಡೆದ ನಂತರ ನೀತಿಯಲ್ಲಿನ ಅಕ್ರಮಗಳ ಕುರಿತು ಸಿಬಿಐ ತನಿಖೆಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಶಿಫಾರಸು ಮಾಡಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಏಪ್ರಿಲ್‌ನಲ್ಲಿ ಕೇಜ್ರಿವಾಲ್ ಅವರನ್ನು ಸಿಬಿಐ ಒಂಬತ್ತು ಗಂಟೆಗಳ ಕಾಲ ವಿಚಾರಣೆ ನಡೆಸಿತ್ತು. ಎಎಪಿ ನಾಯಕ ಹಾಗೂ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾರನ್ನು ಈ ವರ್ಷದ ಫೆಬ್ರವರಿಯಲ್ಲಿ ಸಿಬಿಐ ಬಂಧಿಸಿತ್ತು.

click me!