
ಬೆಂಗಳೂರು (ಜ.3): ಸೋಶಿಯಲ್ ಮೀಡಿಯಾದಲ್ಲಿ ಬಿಜೆಪಿಯ ವಕ್ತಾರ ಶೆಹಜಾದ್ ಪೂನಾವಾಲಾ ಹಾಗೂ ಕಾಂಗ್ರೆಸ್ ವಕ್ತಾರೆ ಕರ್ನಾಟಕ ಲಾವಣ್ಯ ಬಲ್ಲಾಳ್ ಜೈನ್ ಅವರ ನಡುವೆ ಟಿವಿ ಶೋನಲ್ಲಿ ನಡೆದಿರುವ ವಾಕ್ಸಮರದ ವಿಡಿಯೋ ಟ್ರೆಂಡ್ ಆಗುತ್ತಿದೆ. ಇದರ ಬೆನ್ನಲ್ಲಿಯೇ ಎಕ್ಸ್‌ನಲ್ಲಿ ಲಾವಣ್ಯ ಬಿಜೆ ('Lavanya BJ) ಎನ್ನುವ ಹ್ಯಾಶ್‌ಟ್ಯಾಗ್ ಭರ್ಜರಿಯಾಗಿ ಟ್ರೆಂಡ್ ಆಗಿದೆ. ತಮಿಳುನಾಡಿನ ತಿರುಚನಾಪಳ್ಳಿಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಅನಾವರಣ ಮಾಡಿದ ವಿಚಾರವಾಗಿ ಖಾಸಗಿ ಟಿವಿಯಲ್ಲಿ ನಡೆದ ಚರ್ಚಾ ಕಾರ್ಯಕ್ರಮದಲ್ಲಿ ಬಿಜೆಪಿಯಿಂದ ಶೆಹಜಾದ್ ಪೂನಾವಾಲಾ ಹಾಗೂ ಕಾಂಗ್ರೆಸ್‌ನಿಂದ ಲಾವಣ್ಯ ಬಲ್ಲಾಳ್ ಜೈನ್ ಭಾಗವಹಿಸಿದ್ದರು.
ತಮಿಳುನಾಡಿಗೆ ಬಿಜೆಪಿ ಈವರೆಗೂ ಏನು ಮಾಡಿದೆ ಎಂದು ಲಾವಣ್ಯ ಬಲ್ಲಾಳ್ ಜೈನ್ ಅವರ ಪ್ರಶ್ನೆಗೆ, ಮಾಹಿತಿ ಇಟ್ಟು ಮಾತನಾಡಿದ ಶೆಹಜಾಬ್ ಪೂನಾವಾಲಾ, ಕಳೆದ 9 ವರ್ಷಗಳಲ್ಲಿ ತಮಿಳುನಾಡಿನಲ್ಲಿ 2750 ಕಿಲೋಮೀಟರ್ ನ್ಯಾಷನಲ್ ಹೈವೇಯನ್ನು ನಿರ್ಮಾಣ ಮಾಡಲಾಗಿದೆ. ಇದಕ್ಕೆ ಆಗಿರುವ ಅಂದಾಜು ವೆಚ್ಚವೇ 50 ಸಾವಿರ ಕೋಟಿ ರೂಪಾಯಿ. ಅದೇ ರೀತಿ ಚೆನ್ನೈ ಬೆಂಗಳೂರು ಎಕ್ಸ್‌ಪ್ರೆಸ್ ವೇ ಕೂಡ ಸಮರೋಪಾದಿಯಲ್ಲಿ ಸಾಗುತ್ತಿದೆ. ಚೆನ್ನೈ ಮೆಟ್ರೋಗಾಗಿ ಕೇಂದ್ರ ಸರ್ಕಾರ 72 ಸಾವಿರ ಕೋಟಿ ರೂಪಾಯಿಯನ್ನು ನೀಡಿದೆ. 56 ಲಕ್ಷ ತಮಿಳುನಾಡಿನ ರೈತರು ಕಿಸಾನ್ ಸಮ್ಮಾನ್ ನಿಧಿ ಪಡೆದುಕೊಂಡಿದ್ದಾರೆ. 84 ಲಕ್ಷ ಮಂದಿಗೆ ನಲ್ಲಿ ನೀರಿನ ಸಂಪರ್ಕ ನೀಡಲಾಗಿದೆ. 62 ಲಕ್ಷ ಶೌಚಾಲಯಗಳ ನಿರ್ಮಾಣವಾಗಿದೆ. ಇದೆಲ್ಲವೂ ಅಗಿರುವುದು ತಮಿಳುನಾಡಿನಲ್ಲಿ ಮಾತ್ರ. ಯುಪಿಎ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ತಮಿಳುನಾಡಿಗೆ ಮಾಡಿರುವ ಐದು ಕಾರ್ಯಗಳನ್ನು ನೀವು ಹೇಳ್ತೀರಾ ಎಂದು ಪೂನಾವಾಲಾ ಪ್ರಶ್ನೆ ಮಾಡಿದ್ದಾರೆ.
ಇಡೀ ಚರ್ಚೆಯಲ್ಲಿ ತಮಿಳುನಾಡಿಗೆ ಕಾಂಗ್ರೆಸ್ ಸರ್ಕಾರವಾಗಲಿ, ಯುಪಿಎ ಸರ್ಕಾರವಾಗಲಿ ಮಾಡಿರುವ 10 ಅಥವಾ ಕನಿಷ್ಠ 5 ಅಂಶಗಳನ್ನೂ ತಿಳಿಸಿಲ್ಲ ಎಂದು ಪೂನಾವಾಲಾ ಹೇಳಿದ್ದಕ್ಕೆ, ಇಲ್ಲಿ ನಾನು ನಿಮಗೆ ಉತ್ತರಿಸಲು ಬಂದಿಲ್ಲ. ಎಲ್ಲಿ ಹೇಳಬೇಕೋ ಅಲ್ಲಿ ಹೇಳುತ್ತೇನೆ ಎನ್ನುತ್ತಾರೆ. ಇದಕ್ಕೆ ಅಲ್ಲಿಯೇ ಉತ್ತರ ನೀಡುವ ಶೆಹಜಾದ್ ಪೂನಾವಾಲಾ, ಇದೇ ಕಾರಣಕ್ಕೆ ಲಾವಣ್ಯ ಬಿಜೆ ಅಹಂಕಾರದ ವ್ಯಕ್ತಿ ಎನ್ನುವುದು ಅರ್ಥವಾಗುತ್ತದೆ. ಯಾಕೆಂದರೆ, ವಿರೋಧ ಪಕ್ಷದ ನಾಯಕ ಹೋಗಲಿ, ಕನಿಷ್ಠ ಜನರೂ ಕೂಡ ಪ್ರಶ್ನೆ ಮಾಡಬಾರದು ಎನ್ನುವ ಭಾವನೆ ಅವರಲ್ಲಿದೆ ಎನ್ನುತ್ತಾರೆ.
ಟಗರು ಕಣ್ಣೋಟಕ್ಕೆ ಸಿಕ್ಕಿದ ಕಾಂಗ್ರೆಸ್ ನಾಯಕಿ ಲಾವಣ್ಯ ಬಲ್ಲಾಳ್, ಆರ್‌ಜೆಯಿಂದ ರಾಜಕೀಯದವರೆಗಿನ ಹಾದಿ..!
ಆ ಬಳಿಕ ಕೇಂದ್ರ ಸರ್ಕಾರದಲ್ಲಿ ಮಂತ್ರಿಗಳಾಗಿರುವ ದಕ್ಷಿಣ ಭಾರತದ ನಾಯಕರ ಹೆಸರನ್ನು ಶೆಹಜಾದ್ ಪೂನಾವಾ ಹೇಳುತ್ತಾ ಹೋಗುತ್ತಾರೆ. ಕೊನೆಗೆ ಯುಪಿಎ ಅಧಿಕಾರದ ಅವಧಿಯಲ್ಲಿ ಮಂತ್ರಿಯಾಗಿದ್ದ ಕನಿಷ್ಠ ಐವರ ಹೆಸರನ್ನು ಹೇಳಿ ಎಂದಾಗ ಲಾವಣ್ಯ ಇದಕ್ಕೆ ಉತ್ತರ ನೀಡಿಲ್ಲ. ಈ ವೇಳೆ ನಿರೂಪಕಿ ಕೂಡ ನೀವು ಇದಕ್ಕೆ ಉತ್ತರ ನೀಡಲು ಬಯಸುತ್ತೀರಾ ಎಂದು ಕೇಳುತ್ತಾರೆ. ಅದರ ಬೆನ್ನಲ್ಲಿಯೇ ವಿಷಯವನ್ನು ಬದಲಾಯಿಸುವ ಲಾವಣ್ಯ, ನನ್ನ ಹೆಸರು ಲಾವಣ್ಯ ಬಲ್ಲಾಳ್ ಜೈನ್, ನನ್ನ ಹೆಸರು ಕರೆಯಲು ನಿಮಗೆ ತೊಂದರೆ ಆಗುತ್ತಿದ್ದರೆ, ನೀವು ಅಶ್ಲೀಲವಾಗಿ ಹೇಳೋದನ್ನು ಬಿಡಬೇಕು ಎಂದು ಹೇಳುತ್ತಾರೆ. ನೀವು ನಿಮ್ಮ ಕಾರ್ಯಕ್ರಮಕ್ಕೆ ಬರುವ ಗೆಸ್ಟ್‌ಗಳನ್ನು ಕಂಟ್ರೋಲ್ ಮಾಡಬೇಕು ಎಂದು ನಿರೂಪಕಿಗೆ ಹೇಳುತ್ತಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಪ್ರಸಾರವಾದ ಬೆನ್ನಲ್ಲಿಯೇ ಲಾವಣ್ಯ ಬಿಜೆ ಎನ್ನುವ ಹ್ಯಾಶ್ ಟ್ಯಾಗ್ ಟ್ರೆಂಡ್ ಆಗಿದೆ.
ಮೇಕೆಗೂ ಟಿಕೆಟ್ ಕೊಂಡ ಮಹಿಳೆ: ಕಾಂಗ್ರೆಸ್ ವಕ್ತಾರೆ ಲಾವಣ್ಯ ಬಲ್ಲಾಳ್ ಫುಲ್ ಟ್ರೋಲ್!?
ಮೂಲ ವಿಚಾರವೆಂದರೆ, ಐಎನ್‌ಡಿಐಎ ಮೈತ್ರಿಯನ್ನು ಇಂಡಿ ಮೈತ್ರಿ ಎಂದು ಕರೆದಿದ್ದರೆ, ಬಿಜೆಪಿಯನ್ನು ಬಿಜೆ ಪಾರ್ಟಿ ಎಂದು ಕರೆಯಬೇಕೇ ಎಂದು ಫ್ಯಾಕ್ಟ್ ಚೆಕರ್ ಮೊಹಮದ್ ಜುಬೇರ್ ಕರೆದಿದ್ದರು. ಬಿಜೆ ಎನ್ನುವುದು ಸೆಕ್ಸ್ ವೆಬ್‌ಸೈಟ್‌ಗಳಲ್ಲಿ ವ್ಯಾಪಕವಾಗಿ ಬಳಸಲಾಗುವ ಪದ. ಹಿಂದೊಮ್ಮೆ ಸ್ವತಃ ಲಾವಣ್ಯ ಬಲ್ಲಾಳ್ ಜೈನ್, ಬಿಜೆಪಿಯನ್ನು 'ಬಿಜೆ ಪಾರ್ಟಿ' ಎಂದು ಕರೆದಿದ್ದರು. ಇದಕ್ಕೆ ಆಕ್ರೋಶಗೊಂಡಿದ್ದ ಬಿಜೆಪಿ ನಾಯಕರು ಹಾಗಿದ್ದರೆ, ರಾಹುಲ್ ಗಾಂಧಿ ಮಾಡಿದ್ದು 'ಬಿಜೆ ಯಾತ್ರೆಯೇ' ಎಂದು ಪ್ರಶ್ನೆ ಮಾಡಿದ್ದಲ್ಲದೆ, ನಿಮ್ಮ ಹೆಸರನ್ನೂ ಶಾರ್ಟ್ ಫಾರ್ಮ್‌ನಲ್ಲಿ ಲಾವಣ್ಯ ಬಿಜೆ ಎಂದೇ ಕರೆಯಬಹುದೇ ಎಂದು ಕರೆದಿದ್ದರು. ತಮ್ಮ ಸಾಕಷ್ಟು ಟ್ವೀಟ್‌ಗಳಲ್ಲಿ ಲಾವಣ್ಯ ಬಿಜೆಪಿಯನ್ನು ಬಿಜೆ ಪಾರ್ಟಿ ಎಂದೇ ಕರೆದಿದ್ದಾರೆ. ಈಗ ಟಿವಿ ಚರ್ಚೆಯಲ್ಲಿಯೇ ಬಿಜೆಪಿ ವಕ್ತಾರ ಲಾವಣ್ಯರನ್ನು ಲಾವಣ್ಯ ಬಿಜೆ ಎಂದು ಕರೆದಿದ್ದು ಅವರ ಆಕ್ರೋಶಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲಿಯೇ ಲಾವಣ್ಯ ಬಿಜೆ ಹ್ಯಾಶ್ ಟ್ಯಾಗ್ ಟ್ರೆಂಡ್ ಆಗಿದೆ. ಕರ್ಮ ರಿಟರ್ನ್ಸ್ ಅನ್ನೋದು ಇದಕ್ಕೆ ಎಂದು ಲಾವಣ್ಯಗೆ ತಿವಿದಿದ್ದಾರೆ. ನೀವು ಬಿಜೆಪಿಯನ್ನು ಬಿಜೆ ಪಾರ್ಟಿ ಅಂದಾಗ ವಲ್ಗರ್ ಅನಿಸಿರಲಿಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ