ಐಐಟಿಗೆ ಸೆಲೆಕ್ಟ್‌ ಆದ್ರೆ ನಿವೃತ್ತಿಯವರೆಗೂ ನನ್ನ ಸಂಬಳದ ಶೇ. 40ರಷ್ಟು ನಿನಗೆ: ಮಗನಿಗೆ ಆಫರ್‌ ನೀಡಿದ ಅಪ್ಪ!

Published : Feb 20, 2025, 05:25 PM ISTUpdated : Feb 20, 2025, 05:49 PM IST
ಐಐಟಿಗೆ ಸೆಲೆಕ್ಟ್‌ ಆದ್ರೆ ನಿವೃತ್ತಿಯವರೆಗೂ ನನ್ನ ಸಂಬಳದ ಶೇ. 40ರಷ್ಟು ನಿನಗೆ: ಮಗನಿಗೆ ಆಫರ್‌ ನೀಡಿದ ಅಪ್ಪ!

ಸಾರಾಂಶ

ಈ ಪೋಸ್ಟ್‌ಗೆ ತುಂಬಾ ಜನ ತಮಾಷೆಯ ಕಾಮೆಂಟ್‌ಗಳನ್ನು ಹಾಕಿದ್ದಾರೆ. 'ನನಗೆ ಐಐಟಿಯಲ್ಲಿ ಸೀಟ್ ಸಿಕ್ಕರೆ, ನನ್ನ ತಂದೆ ಆಗಲೇ ಕೆಲಸದಿಂದ ರಿಟೈರ್ ಆಗ್ತಾರೆ' ಅಂತ ಬರೆದಿದ್ದಾರೆ.

ಬೆಂಗಳೂರು (ಫೆ.20): ಐಐಟಿ ಮತ್ತು ಎನ್‌ಐಟಿಯಲ್ಲಿ ಓದಬೇಕು ಅಂತ ತುಂಬಾ ಜನ ಯುವಕರಿಗೆ ಆಸೆ ಇರುತ್ತೆ. ಹಾಗೇ, ತಮ್ಮ ಮಕ್ಕಳಿಗೆ ಇಂತಹ ಕಾಲೇಜುಗಳಲ್ಲಿ ಸೀಟ್ ಸಿಗಬೇಕು ಅಂತ ಆಸೆ ಪಡುವವರು ಕೂಡ ತುಂಬಾ ಜನ ಇದ್ದಾರೆ. ಅದಕ್ಕೆ ಸಂಬಂಧಪಟ್ಟ ಒಂದು ಪೋಸ್ಟ್ ಈಗ ಸಖತ್ ವೈರಲ್ ಆಗಿದೆ. ಐಐಟಿಯಲ್ಲಿ ಸೀಟ್ ಸಿಕ್ಕರೆ ತಂದೆ ಏನು ಕೊಡ್ತಾರೆ ಅಂತ ಯುವಕ ಪೋಸ್ಟ್ ಹಾಕಿದ್ದಾನೆ. 

ಪೋಸ್ಟ್‌ನಲ್ಲಿ ಒಂದು ಚೀಟಿಯಲ್ಲಿ ಬರೆದಿರುವ ಚಿತ್ರವನ್ನು ಹಾಕಿದ್ದಾನೆ. ನಾನು ಐಐಟಿ, ಎನ್‌ಐಟಿ, ಐಐಐಟಿ, ಬಿಟ್ಸಾಟ್ ತರಹದ ಕಾಲೇಜುಗಳಲ್ಲಿ ಸೀಟ್ ಪಡೆದುಕೊಂಡರೆ, ತಂದೆ ರಿಟೈರ್ ಆಗೋವರೆಗೂ ಅವರ ಸಂಬಳದ 40% ಕೊಡ್ತಾರೆ ಅಂತ ಯುವಕ ಹೇಳಿದ್ದಾನೆ. ಟೈಯರ್ 2, 3 ಕಾಲೇಜುಗಳಲ್ಲಿ ಸೇರಿದರೆ, ರಿಟೈರ್‌ಮೆಂಟ್ ತನಕ ನನ್ನ 100% ಸಂಬಳವನ್ನು ತಂದೆಗೆ ಕೊಡಬೇಕು ಅಂತ ತಂದೆ ಹೇಳಿದ್ದಾರೆ ಅಂತಾನೂ ಯುವಕ ಹೇಳಿದ್ದಾನೆ. 

ರೆಡ್ಡಿಟ್‌ನಲ್ಲಿ ಯುವಕ ತನ್ನ ತಂದೆ ಬರೆದ ಚೀಟಿಯ ಚಿತ್ರವನ್ನು ಹಂಚಿಕೊಂಡಿದ್ದಾನೆ. ತುಂಬಾ ಜನ ಈ ಪೋಸ್ಟ್‌ಗೆ ತಮಾಷೆಯ ಕಮೆಂಟ್‌ಗಳನ್ನು ಹಾಕಿದ್ದಾರೆ. ಒಬ್ಬರು, 'ನನಗೆ ಐಐಟಿಯಲ್ಲಿ ಸೀಟ್ ಸಿಕ್ಕರೆ, ನನ್ನ ತಂದೆ ಆಗಲೇ ಕೆಲಸದಿಂದ ರಿಟೈರ್ ಆಗ್ತಾರೆ' ಅಂತ ಬರೆದಿದ್ದಾರೆ. 

Viral Video: 15 ನಿಮಿಷದಲ್ಲಿ ಬಾಚಿಕೊಂಡಷ್ಟು ಹಣ ಬೋನಸ್‌ ಕೊಟ್ಟ ಕಂಪನಿಯ ಮಾಲೀಕ

ಸಾಕಷ್ಟು ಜನ ಈ ಪೋಸ್ಟ್‌ನ್ನು ತಮಾಷೆಯಾಗಿ ತೆಗೆದುಕೊಂಡಿದ್ದರೆ, ಕೆಲವರು ಸೀರಿಯಸ್ಸಾಗಿ ಕಮೆಂಟ್ ಮಾಡಿದ್ದಾರೆ. ಏನೇ ಆಗಲಿ, ಪೋಸ್ಟ್ ಹಾಕಿದ ಯೂಸರ್ ಒಂದು ಎಕ್ಸ್‌ಪ್ಲನೇಷನ್ ಕೊಟ್ಟಿದ್ದಾನೆ. ತಾನು ಮತ್ತು ತನ್ನ ತಂದೆ ಹೀಗೆ ಬರೆದು ತಮಾಷೆ ಮಾಡ್ತೀವಿ ಅಂತ ಯುವಕ ಹೇಳಿದ್ದಾನೆ. 

 

ಹತ್ತನೇ ಕ್ಲಾಸಲ್ಲಿ 90% ಮಾರ್ಕ್ಸ್ ತಗೊಂಡ್ರೆ ಅಂತ ನಾನು ಒಂದು ಚೀಟಿ ಬರೆದು ತಂದೆಗೆ ಕೊಟ್ಟಿದ್ದೆ. ಹಾಗೇ, ಬೇಗ ಎದ್ದರೆ ನನ್ನನ್ನು ಟ್ರಿಪ್‌ಗೆ ಕರ್ಕೊಂಡು ಹೋಗ್ತೀನಿ ಅಂತ ತಂದೆ ಬರೆದು ಕೊಟ್ಟಿದ್ರು. ತಂದೆ ಮಕ್ಕಳು ಅಂದ್ರೆ ಹೀಗೆಲ್ಲಾ ಮಾತು ಕೊಡುತ್ತಲೇ ಇರುತ್ತಾರೆ. ನನ್ನ ತಂದೆಗೆ ಬರೆದು ಕೊಡೋಕೆ ಇಷ್ಟ ಅಷ್ಟೇ ಅಂತ ಯುವಕ ಹೇಳಿದ್ದಾನೆ.

ಟಾಯ್ಲೆಟ್‌ಗೆ ಹೋಗೋಕು ಟೈಮಿಂಗ್‌, 2 ನಿಮಿಷ ಮಾತ್ರ ಕಾಲಾವಕಾಶ: ಕಂಪನಿಯ ನಿಯಮಕ್ಕೆ ಕಂಗಾಲಾದ ಉದ್ಯೋಗಿಗಳು!

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..