
ಬೆಂಗಳೂರು (ಫೆ.20): ಸಿಲಿಕಾನ್ ಸಿಟಿ ಬೆಂಗಳೂರು ಉದ್ಯೋಗ, ಹಣಕಾಸು, ಟ್ರಾಫಿಕ್ ಜಾಮ್ ಹಾಗೂ ವಸತಿ ಯೋಗ್ಯ ನಗರಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದ ಖ್ಯಾತಿಯನ್ನು ಪಡೆದುಕೊಂಡಿತ್ತು. ಆದರೆ, ಅಪರಾಧ ಕೃತ್ಯಗಳಲ್ಲಿ ಡ್ರಗ್ಸ್ ವಿಚಾರದಲ್ಲಿ ಮಾತ್ರ ಅಂತಾರಾಷ್ಟ್ರೀಯ ಲಿಂಕ್ ಹೊಂದಿದ್ದ ಬೆಂಗಳೂರು ಇದೀಗ ಮರ್ಡರ್ ವಿಚಾರದಲ್ಲಿಯೂ ಇಂಟರ್‌ನ್ಯಾಷನಲ್ ಲೆವೆಲ್‌ಗೆ ಬೆಳೆದು ಅಪಖ್ಯಾತಿ ಪಡೆದಿದೆ.
ಹೌದು ನಾವು ಹೇಳುತ್ತಿರುವ ವಿಚಾರ ಬೆಂಗಳೂರಿನಲ್ಲಿ ವಿದೇಶಿ ಪ್ರಜೆಯನ್ನು ಕೊಲೆ ಮಾಡಲಾಗಿದ್ದು, ಹೀಗಾಗಿ ಮರ್ಡರ್ ವಿಚಾರದಲ್ಲಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆದಿದೆ ಎಂದು ಇಲ್ಲಿ ಉಲ್ಲೇಖ ಮಾಡಲಾಗಿದೆ.
ಬೆಂಗಳೂರಿನ ಬಾಗಲಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನೈಜಿರೀಯಾ ದೇಶದಿಂದ ಬೆಂಗಳೂರಿಗೆ ಬಂದಿದ್ದ ವ್ಯಕ್ತಿಯನ್ನು ಮಟಮಟ ಮಧ್ಯಾಹ್ನವೇ ಅಟ್ಟಾಡಿಸಿಕೊಂಡು ಹೋಗಿ ಕೊಲೆ ಮಾಡಲಾಗಿದೆ. ನಿನ್ನೆ ಮಧ್ಯಾಹ್ನ 12 ಗಂಟೆ ಸುಮಾರಿಗೆ ಈ ಘಟನೆ ನಡದಿದೆ. ಚಿಕನ್ ತರುವುದಕ್ಕೆ ಮನೆಯಿಂದ ಹೊರಗೆ ಬಂದಿರುವ ವಿದೇಶಿ ಪ್ರಜೆ ಸ್ಥಳೀಯ ಯುವಕರೊಂದಿಗೆ ಕ್ಯಾತೆ ತೆಗೆದಿದ್ದಾನೆ. ಈ ವೇಳೆ ಸ್ಥಳೀಯರು ಅವನಿಗೆ ಥಳಿಸಿಲು ಮುಂದಾದಾಗ ಗಲಾಟೆ ಮಾಡಿಕೊಂಡಿದ್ದಾನೆ. ಆಗ ಸ್ಥಳೀಯ ಯುವಕರು ಆತನ ಮೇಲೆ ಮರದ ತುಂಡನ್ನು ತೆಗೆದುಕೊಂಡು ಭೀಕರವಾಗಿ ಹಲ್ಲೆ ಮಾಡಿದ್ದಾರೆ.
ಚಿಕನ್ ತರಲು ಬಂದರೆ ಮಾತಿಗೆ ಮಾತು ಬೆಳೆದು ಹಲ್ಲೆಗೆ ಒಳಗಾದ ವಿದೇಶಿ ಪ್ರಜೆ ಅಲ್ಲಿಂದ ತಾನಿದ್ದ ಮನೆಯತ್ತ ಓಡಿ ಹೋಗಲು ಮುಂದಾಗಿದ್ದಾನೆ. ಆತನನ್ನು ಅಟ್ಟಾಡಿಸಿಕೊಂಡು ಕೆಲವರು ಹೋಗಿದ್ದಾರೆ. ಆದರೆ, ಸ್ವಲ್ಪ ದೂರ ಓಡಿಹೋದ ನಂತರ ಆ ವಿದೇಶಿ ಪ್ರಜೆ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಈ ಘಟನೆಗೆ ಸಂಬಂಧಿಸಿದಂತೆ ಸ್ಥಳೀಯರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದ ಪೊಲೀಸರು ಈ ಘಟನೆ ಸಂಬಂಧ ಹಲ್ಲೆ ಮಾಡಿದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಬಾಗಲೂರು ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.
ಇದನ್ನೂ ಓದಿ: 'ಕಾಡುತ್ತಿರು ಅತ್ತೆಯನ್ನ ಕೊಲ್ಲಲು ಮಾತ್ರೆ ಬರೆದುಕೊಡಿ' ವೈದ್ಯರಿಗೆ ವಾಟ್ಸಪ್ ಮೆಸೇಜ್ ಮಾಡಿದ ಮಹಿಳೆ!
ಕೊಲೆಯಾದ ನೈಜೀರಿಯಾ ಪ್ರಜೆಯನ್ನು ಅಡಿಯಾಕೊ ಮಸಾಲಿಯೊ (40) ಎಂದು ಗುರುತಿಸಲಾಗಿದೆ. ಉದ್ಯೋಗದ ನಿಮಿತ್ತ ಬೆಂಗಳೂರಿನ ಬೆಳ್ಳಹಳ್ಳಿಗೆ ಬಂದು ವಾಸವಾಗಿದ್ದರು. ಆದರೆ, ಸ್ಥಳೀಯ ಜನರು ಇವರನ್ನು ಸಂಶಯಾಸ್ಪದವಾಗಿ ನೋಡುತ್ತಿದ್ದರು. ಇನ್ನು ದೇಶ, ಭಾಷೆ ಎರಡೂ ಬಾರದ ಹಿನ್ನೆಲೆಯಲ್ಲಿ ಯಾರನ್ನೇ ಕಂಡರೂ ಸ್ವಲ್ಪ ಭಯದಿಂದ ಅನುಮಾನ ಬರುವಂತೆ ವಿದೇಶಿ ಪ್ರಜೆಗಳು ನಡೆದುಕೊಳ್ಳುತ್ತಿದ್ದರು. ಈ ವಿಚಾರವಾಗಿ ಸ್ಥಳೀಯರು ಪ್ರಶ್ನೆ ಮಾಡಲು ಮುಂದಾಗಿದ್ದಾರೆ. ಈ ವೇಳೆ ಸ್ಥಳೀಯ ವ್ಯಕ್ತಿ ಯಾಸಿನ್ ಖಾನ್ ಜೊತೆಗೆ ಮಾತಿಗೆ ಮಾತು ಬೆಳೆದಿದೆ. ಆಗ ಯಾಸಿನ್ ಖಾನ್ ನೀವು ಇಲ್ಲಿಗೆ ಡ್ರಗ್ಸ್ ಪೆಡ್ಲಿಂಗ್ ಮಾಡಲು ಬಂದಿದ್ದಿರಾ ಎಂದು ಆರೋಪಿಸಿ ಗಲಾಟೆ ಮಾಡಿದ್ದಾನೆ.
ಈ ವೇಳೆ ದೇಹದಾರ್ಡ್ಯತೆಯಲ್ಲಿ ಬಲಿಷ್ಠವಾಗಿದ್ದ ವಿದೇಶಿ ಪ್ರಜೆ ಸ್ಥಳೀಯರು ಹಲ್ಲೆಗೆ ಮುಂದಾಗುತ್ತಿದ್ದಂತೆ ತಾನೂ ಗಲ್ಲೆ ಮಾಡಲು ಮುಂದಾಗಿದ್ದಾನೆ. ಆಗ ಯಾಸೀನ್ ಅಲ್ಲಿಯೇ ಇದ್ದ ರಿಪೀಸ್ ಪಟ್ಟಿಯಿಂದ ವಿದೇಶಿ ಪ್ರಜೆಯ ತಲೆಗೆ ಹೊಡೆದಿದ್ದಾನೆ. ಆಗ ಪ್ರಾಣ ಭಯದಿಂದ ತಲೆಗೆ ಪೆಟ್ಟಿ ಬಿದ್ದಿದ್ದರೂ ಅಲ್ಲಿಂದ ಓಡಿ ಹೋಗಿದ್ದಾನೆ. ತಾನು ಓಡುವಾಗ ಬಂಡೆಯ ಮೇಲೆ ಬಿದ್ದಿದ್ದು, ತಲೆಗೆ ಮತ್ತಷ್ಟು ಪೆಟ್ಟು ಬಿದ್ದು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾನೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಮತ್ತೊಂದು ಭೀಕರ ಘಟನೆ, ದುಶ್ಚಟ ಬೇಡ ಅಂತಾ ಬುದ್ಧಿ ಹೇಳಿದ ತಂದೆಯನ್ನೇ ಕೊಂದ ಮಗ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ