
ನವದೆಹಲಿ: ಭಾರತ ಸರ್ಕಾರ ಗೂಗಲ್ ಪ್ಲೇ ಸ್ಟೋರ್‌ನಿಂದ 119 ವಿದೇಶಿ ಅಪ್ಲಿಕೇಶನ್‌ಗಳನ್ನು ನಿರ್ಬಂಧಿಸಿ ಆದೇಶ ಹೊರಡಿಸಿದೆ. ಭಾರತ ಸರ್ಕಾರ ನಿರ್ಬಂಧಿಸಿರುವ ಅಪ್ಲಿಕೇಶನ್‌ಗಳಲ್ಲಿ ಹೆಚ್ಚಿನವು ವಿಡಿಯೋ ಮತ್ತು ವಾಯ್ಸ್ ಚಾಟ್ಸ್ ಆಪ್ ಸೇರಿದ್ದು, ಅದರಲ್ಲಿಯೂ ಬಹುತೇಕ ಚೀನಾ ಮತ್ತು ಹಾಂಗ್‌ಕಾಂಗ್ ಮೂಲದ ಆಪ್‌ಗಳನ್ನೇ ಸರ್ಕಾರ ಬ್ಲಾಕ್ ಮಾಡಿದೆ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ, ಐಟಿ ಕಾಯ್ದೆಯ ಸೆಕ್ಷನ್ 69 A ಅಡಿಯಲ್ಲಿ, 119 ಆಪ್‌ಗಳನ್ನು ಬ್ಲಾಕ್ ಮಾಡಿ ಆದೇಶ ಹೊರಡಿಸಿದೆ. ರಾಷ್ಟ್ರೀಯ ಭದ್ರತೆ ಅಥವಾ ಸಾರ್ವಜನಿಕ ಸುವ್ಯವಸ್ಥೆಗೆ ಬೆದರಿಕೆಯೊಡ್ಡಬಹುದಾದ ವಿಷಯ ಅಥವಾ ವೇದಿಕೆಗಳನ್ನು ನಿರ್ಬಂಧಿಸಲು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ಸರ್ಕಾರ ಈ ಅಧಿಕಾರ ನೀಡುತ್ತದೆ.
ಭಾರತ ಸರ್ಕಾರ ನಿರ್ಬಂಧಿಸಿರುವ ಅಪ್ಲಿಕೇಶನ್‌ಗಳಲ್ಲಿ ಕೆಲವು ಸಿಂಗಾಪುರ, ಅಮೆರಿಕೆ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಸೇರಿದಂತೆ ವಿವಿಧ ದೇಶಗಳದ್ದಾಗಿವೆ. ಮನಿ ಕಂಟ್ರೋಲ್ ವರದಿ ಪ್ರಕಾರ, ಆದೇಶದ ಬಳಿಕವೂ 119 ಅಪ್ಲಿಕೇಶನ್‌ಗಳಲ್ಲಿ ಇದುವರೆಗು ಕೇವಲ 15 ಆಪ್‌ಗಳನ್ನು ಮಾತ್ರ ಬ್ಲಾಕ್ ಮಾಡಲಾಗಿದೆ. ಇನ್ನುಳಿದ 104 ಅಪ್ಲಿಕೇಶನ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದ್ದು, ಬಳಕೆದಾರರು ಡೌನ್‌ಲೋಡ್ ಮಾಡಿಕೊಳ್ಳಬಹುದು.
ಭಾರತ ಸರ್ಕಾರದಿಂದ ನಿರ್ಬಂಧಕ್ಕೊಳಗಾಗಿರುವ ಅಪ್ಲಿಕೇಶನ್‌ಗಳ ಡೆವಲಪರ್ಸ್ ಪ್ರತಿಕ್ರಿಯೆ ನೀಡಿದ್ದಾರೆ. ನಾವು ಈ ಸಂಬಂಧ ಗೂಗಲ್‌ಗೆ ಮಾಹಿತಿ ನೀಡಿದ್ದೇವೆ. ಈ ಸಮಸ್ಯೆ ಪರಿಹರಿಸಲು ಭಾರತ ಸರ್ಕಾರದೊಂದಿಗೆ ಮಾತನಾಡಲು ಗೂಗಲ್ ಮುಂದಾಗಿದೆ. ಭಾರತ ಸರ್ಕಾರದ ಜೊತೆ ಗೂಗಲ್ ಸಂಸ್ಥೆ ಚರ್ಚೆ ನಡೆಸಲಿದೆ ಎಂದು ಅಪ್ಲಿಕೇಶನ್ ಡೆವಲಪರ್ಸ್ ಮಾಹಿತಿ ನೀಡಿದ್ದಾರೆ. ChangApp, HoneyCam ಮತ್ತು ChillChat ಮಾದರಿಯ ಅಪ್ಲಿಕೇಶನ್‌ಗಳನ್ನು ಭಾರತ ಸರ್ಕಾರ ಬ್ಲಾಕ್ ಮಾಡಿದೆ.
ಇದನ್ನೂ ಓದಿ: ದೆಹಲಿ ನೂತನ ಸಿಎಂ ರೇಖಾ ಗುಪ್ತಾರ 30 ವರ್ಷದ ಹಳೆಯ ಫೋಟೋ ವೈರಲ್; ಕಾಂಗ್ರೆಸ್ ನಾಯಕಿಯಿಂದ ಪೋಸ್ಟ್
ಕೆಲ ವರದಿಯ ಪ್ರಕಾರ, ಹಲವು ಅಪ್ಲಿಕೇಶನ್ ಡೆವಲಪರ್‌ಗಳು ಗೂಗಲ್‌ನಿಂದ ಈ ಬಗ್ಗೆ ಮಾಹಿತಿ ಪಡೆದಿದ್ದಾರೆ. ಆದ್ರೆ ಈ ಸಂಬಂಧ ಹೆಚ್ಚಿನ ಮತ್ತು ನಿಖರ ಸ್ಪಷ್ಟೀಕರಣ ಪಡೆದುಕೊಳ್ಳಲು ಡೆವಲಪರ್‌ಗಳು ಮುಂದಾಗಿದ್ದಾರೆ. ಡೆವಲಪರ್‌ಗಳು ಆಪ್ ನಿರ್ಬಂಧಕ್ಕೆ ಸಂಬಂಧಿಸಿದಂತೆ ವಿವರವಾದ ಸ್ಪಷ್ಟೀಕರಣದ ನಿರೀಕ್ಷೆಯಲ್ಲಿದ್ದಾರೆ. ಭಾರತ ಸರ್ಕಾರದ ಈ ಆದೇಶ ತಮ್ಮ ವ್ಯಾಪಾರದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಈಗಾಗಲೇ ಆಪ್ ಬಳಸುತ್ತಿರೋ ಬಳಕೆದಾರರ ಮೇಲೆಯೋ ದೊಡ್ಡ ಪರಿಣಾಮ ಬೀರಲಿದೆ ಎಂದು ಡೆವಲಪರ್ಸ್ ಹೇಳಿದ್ದಾರೆ. ಇನ್ನು ಕೆಲ ಡೆವಲಪರ್ಸ್, ಭಾರತ ಸರ್ಕಾರದೊಂದಿಗೆ ಕೆಲಸ ಮಾಡಲು ಸಿದ್ಧ ಮತ್ತು ಬದಲಾವಣೆ ಮಾಡಿಕೊಳ್ಳಲು ತಯಾರಾಗಿದ್ದೇವೆ ಎಂಬ ಮಾತನ್ನು ಹೇಳಿದ್ದಾರೆ ಎಂದು ವರದಿಯಾಗಿದೆ.
2020 ರಲ್ಲಿ ಚೀನಾದೊಂದಿಗೆ ಉದ್ವಿಗ್ನತೆಯನ್ನು ಹೆಚ್ಚಾದ ಸಂದರ್ಭದಲ್ಲಿ ಭಾರತ ಸರ್ಕಾರವು ಚೀನೀ ಅಪ್ಲಿಕೇಶನ್‌ಗಳ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಂಡಿತ್ತು. ಈ ಸಂದರ್ಭದಲ್ಲಿ 100ಕ್ಕೂ ಹೆಚ್ಚು ಅಪ್ಲಿಕೇಶನ್‌ಗಳನ್ನು ಭಾರತ ಸರ್ಕಾರ ನಿರ್ಬಂಧಿಸಿತ್ತು. ಇವುಗಳಲ್ಲಿ ಟಿಕ್‌ಟಾಕ್, ಯುಸಿ ಬ್ರೌಸರ್ ಮತ್ತು PUBG ಮುಂತಾದ ಅಪ್ಲಿಕೇಶನ್‌ಗಳು ಸೇರಿವೆ. ಆದರೆ ನಿರ್ಬಂಧಿತ ಆಪ್‌ಗಳು ಮತ್ತೆ ಬಂದಿವೆ.
ಇದನ್ನೂ ಓದಿ: 10, 12ನೇ ಕ್ಲಾಸ್‌ನಲ್ಲಿ ಐಐಟಿ ಬಾಬಾ ತೆಗೆದ ಮಾರ್ಕ್ಸ್ ರಿವೀಲ್; IIT-JEE ರ‍್ಯಾಂಕ್ ಕಂಡು ಸೈಕ್ ಆದ್ರು ಜನರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ