ವಡೋದರಾ ಪ್ರವಾಹ: ಮೊಸಳೆಯೊಂದಿಗೆ ಸ್ಕೂಟರ್‌ನಲ್ಲಿ ಯುವಕರ ತ್ರಿಬಲ್ ರೈಡ್: ವೀಡಿಯೋ ವೈರಲ್

By Anusha Kb  |  First Published Sep 1, 2024, 3:11 PM IST

ನೀರಿನಿಂದ ಮೇಲೆ ಬಂದು ಜನವಸತಿ ಪ್ರದೇಶಗಳಲ್ಲಿ ಅಡ್ಡಾಡುತ್ತಿದ್ದ ಮೊಸಳೆಯೊಂದನ್ನು ಜನ ಹಿಡಿದು ಜನ ಅದನ್ನು  ಸ್ಕೂಟರ್‌ನಲ್ಲಿ ಮಲಗಿಸಿಕೊಂಡು ಸುರಕ್ಷಿತ ತಾಣದತ್ತ ಕರೆದುಕೊಂಡು ಹೋಗಿದ್ದಾರೆ. ಈ ಚಿಲ್ಲಿಂಗ್ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗ್ತಿದೆ.


ವಡೋದರಾ: ಇಡೀ ವರ್ಷದಲ್ಲಿ ಬರುವ ಮಳೆ ನಾಲ್ಕೇ ದಿನದಲ್ಲಿ ಒಂದೇ ಸಮನೆ ಸುರಿದ ಪರಿಣಾಮ ಗುಜರಾತ್‌ನ 12 ಜಿಲ್ಲೆಗಳಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು, ಜಲಚರಗಳಾದ ಮೊಸಳೆಗಳು ಕೂಟ ಆಶ್ರಯ ಅರಸಿ ಮನೆ ಮಹಡಿಗಳನ್ನು ಏರಿ ವಿರಮಿಸುತ್ತಿವೆ. ಹೀಗಾಗಿ ಜನವಸತಿ ಪ್ರದೇಶಗಳಿಗೆ ಜನ ಮತ್ತೆ ಹೋಗಲು ಭಯಪಡುವಂತಾಗಿದೆ. ಹೀಗೆ ನೀರಿನಿಂದ ಮೇಲೆ ಬಂದು ಜನವಸತಿ ಪ್ರದೇಶಗಳಲ್ಲಿ ಅಡ್ಡಾಡುತ್ತಿದ್ದ ಮೊಸಳೆಯೊಂದನ್ನು ಜನ ಹಿಡಿದು ಜನ ಅದನ್ನು  ಸ್ಕೂಟರ್‌ನಲ್ಲಿ ಮಲಗಿಸಿಕೊಂಡು ಸುರಕ್ಷಿತ ತಾಣದತ್ತ ಕರೆದುಕೊಂಡು ಹೋಗಿದ್ದಾರೆ. ಈ ಚಿಲ್ಲಿಂಗ್ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗ್ತಿದೆ.

ಗುಜರಾತ್‌ನ ಪ್ರವಾಹ ಪೀಡಿತ ವಡೋದರಾದಲ್ಲಿ ಈ ಘಟನೆ ನಡೆದಿದೆ. ಇಲ್ಲಿ ಒಟ್ಟು 40ಕ್ಕೂ ಹೆಚ್ಚು ಮೊಸಳೆಗಳನ್ನು ಜನವಸತಿ ಪ್ರದೇಶದಿಂದ ರಕ್ಷಿಸಿ ಬೇರೆಡೆ ಒಯ್ಯಲಾಗಿದೆ. ಪ್ರವಾಹ ನೀರು ಇಳಿಯುತ್ತಿದ್ದಂತೆ ವಡೋದರಾದಲ್ಲಿ ಎನ್‌ಜಿಒಗಳು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳ ಸಹಕಾರದೊಂದಿಗೆ ಸ್ಥಳೀಯಾಡಳಿತವೂ ಪುನರ್ವಸತಿ ಕೆಲಸ ಮಾಡಲು ಶುರು ಮಾಡಿದ್ದು, ಮೊದಲಿಗೆ ಕಾಡು ಪ್ರಾಣಿಗಳು ಹಾಗೂ ಮಾನ ಸಂಘರ್ಷ ತಡೆಯಲು ನಾಡಿಗೆ ಬಂದ ಮೊಸಳೆಗಳನ್ನು ಮೊದಲು ರಕ್ಷಿಸಲಾಗುತ್ತಿದೆ. 

Tap to resize

Latest Videos

ಊರಲ್ಲಿ ಮೊಸಳೆ ಬಂದಿದ್ದಕ್ಕೆ ಭಯದಿಂದ ಎಲ್ಲರೂ ಓಡ್ತಿದ್ರು… ಇವನು ಫುಟ್‌ಬಾಲ್‌ನಂತೆ ಒದ್ದ! ಮುಂದೇನಾಯ್ತು? 

ಈ ರಕ್ಷಣಾ ಕಾರ್ಯಾಚರಣೆಯ ವೀಡಿಯೋ ಈಗ ವೈರಲ್ ಆಗಿದ್ದು, ಸ್ಕೂಟರ್‌ನಲ್ಲಿ ಮೊಸಳೆಯನ್ನು ಸಾಗಿಸುತ್ತಿರುವ ದೃಶ್ಯಾವಳಿ ಸಖತ್ ವೈರಲ್ ಆಗಿದೆ. ಮುಂದೆ ಕೂತವ ಸ್ಕೂಟರ್ ಡ್ರೈವ್ ಮಾಡ್ತಿದ್ರೆ ಹಿಂದಿರುವವ ಮೊಸಳೆಯನ್ನು ಸ್ಕೂಟರ್‌ನ ಮಧ್ಯದಲ್ಲಿ ಅಡ್ಡವಾಗಿ ಮಲಗಿಸಿ ಹಿಡಿದುಕೊಂಡಿದ್ದಾನೆ. ಹೀಗೆ ಮೊಸಳೆಯನ್ನು ಸ್ಕೂಟರ್‌ನಲ್ಲಿ ಸಾಗಿಸುವ ಸಾಹಸ ಮಾಡಿದ ಯುವಕರನ್ನು ಸಂದೀಪ್ ಥಾಕೂರ್ ಹಾಗೂ ರಾಜ್ ಭವ್ಸರ್ ಎಂದು ಗುರುತಿಸಲಾಗಿದೆ. ಈ ಹುಡುಗರು ವಡೋದರಾದ ಮಂಜಲ್ಪುರದಲ್ಲಿ ಪ್ರಾಣಿಗಳ ರಕ್ಷಣಾ ಚಟುವಟಿಕೆಯಲ್ಲಿ ಕೆಲಸ ಮಾಡಿದ್ದಾರೆ. ಇವರು ಮೊಸಳೆಯನ್ನು ಹಿಡಿದು ಹೀಗೆ ಸ್ಕೂಟರ್‌ನಲ್ಲಿ ಕೂರಿಸಿಕೊಂಡು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಈ ಮೊಸಳೆಯನ್ನು ಹಸ್ತಾಂತರಿಸಲು ತೆಗೆದುಕೊಂಡು ಹೋಗುತ್ತಿದ್ದ ವೇಳೆ ಈ ದೃಶ್ಯವನ್ನು ಹಿಂದಿದ್ದ ವಾಹನ ಚಾಲಕರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. 

ಬದುಕಲು ಏನೂ ಉಳಿದಿಲ್ಲ, ಗುಜರಾತ್ ಪ್ರವಾಹದಲ್ಲಿ 50 ಲಕ್ಷ ರೂ ಕಾರು ಕಳೆದುಕೊಂಡ ವ್ಯಕ್ತಿಯ ಅಳಲು!

ವಿಶ್ವಮಿತ್ರಿ ನದಿ ತೀರದಲ್ಲಿ ವಡೋದರಾ ನಗರ ಇದ್ದು, ಈ ನದಿಯಲ್ಲಿ ಭಾರಿ ಸಂಖ್ಯೆಯಲ್ಲಿ ಮೊಸಳೆಗಳಿವೆ. ಆದರೆ ಮಳೆಯಿಂದ ನದಿ ಉಕ್ಕಿ ಹರಿದು ಪ್ರವಾಹ ಉಂಟಾಗಿದ್ದರಿಂದ ಈ ಮೊಸಳೆಗಳು ನದಿಯಿಂದ ಜನವಸತಿ ಪ್ರದೇಶವನ್ನು ತಲುಪಿದ್ದವು. ಕೆಲವೊಂದು ಕಡೆ ಮೊಸಳೆಗಳು ಮನೆಗೆ ನುಗ್ಗಿದ್ದರೆ ಮತ್ತೆ ಕೆಲವು ಕಡೆ ಮೊಸಳೆಗಳು ಮನೆಯ ಟೆರೆಸ್‌ಗಳ ಮೇಲೆ ಆಶ್ರಯ ಪಡೆಯುತ್ತಿರುವ ವೀಡಿಯೋಗಳು ಕೂಡ ವೈರಲ್ ಆಗಿವೆ. 

Two young men took a crocodile found in Vishwamitra river in Vadodara to the forest department office on a scooter🫡
pic.twitter.com/IHp80V9ivP

— Ghar Ke Kalesh (@gharkekalesh)

ಚಂಡಮಾರುತ ಆತಂಕದಿಂದ ಗುಜರಾತ್ ಪಾರು

ಅಹಮದಾಬಾದ್: ಗುಜರಾತ್‌ನ ಕಛ್ ಕರಾವಳಿಯಲ್ಲಿ ರೂಪುಗೊಂಡು ರಾಜ್ಯಕ್ಕೆ ಆತಂಕ ಸೃಷ್ಟಿಸಿದ್ದ 'ಆಸ್ನಾ ಚಂಡಮಾರುತ' ಈಗ ಓಮಾನ್‌ ಕಡೆಗೆ ಚಲಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ .ಹೀಗಾಗಿ ಈಗಾಗಲೇ ಮಳೆಯಿಂದ ತತ್ತರಿಸಿದ್ದ ಗುಜರಾತ್, ಚಂಡಮಾರುತದ ಆತಂಕದಿಂದ ದೂರವಾಗಿದೆ. ಆದಾಗ್ಯೂ ಮುನ್ನೆಚ್ಚರಿಕೆ ಕ್ರಮವಾಗಿ, ಸ್ಥಳೀಯ ಆಡಳಿತವು ಸುಮಾರು 3,500 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದೆ ಮತ್ತು ಗುಡಿಸಲುಗಳು ಮತ್ತು ಮಣ್ಣಿನ ಮನೆಗಳಲ್ಲಿ ವಾಸಿಸುವ ಜನರಿಗೆ ಇತರ ಕಟ್ಟಡಗಳಲ್ಲಿ ಆಶ್ರಯ ಪಡೆಯಲು ಕೋರಿದೆ ಎಂದು ಕಛ್ ಜಿಲ್ಲಾಧಿಕಾರಿ ಅಮಿತ್ ಅರೋರಾ ಹೇಳಿದ್ದಾರೆ. ಆಸ್ತಾ ಚಂಡಮಾರುತ ಅರಬ್ಬಿ ಸಮುದ್ರದಲ್ಲಿ ಆಗಸ್ಟ್ ತಿಂಗಳಲ್ಲಿ ಎದ್ದ 46 ವರ್ಷ ನಂತರದ ಮೊದಲ ಚಂಡಮಾರುತವಾಗಿದೆ.

click me!