ಭಾರಿ ಮಳೆಗೆ ದಕ್ಷಿಣದ 20 ರೈಲು ರದ್ದು, ಬೆಂಗಳೂರು-ದನಪುರ್ ಸೇರಿ 30 ರೈಲು ಮಾರ್ಗ ಬದಲಾವಣೆ!

By Chethan KumarFirst Published Sep 1, 2024, 3:01 PM IST
Highlights

ದಕ್ಷಿಣ ಭಾರತದ ಕೆಲ ರಾಜ್ಯಗಳಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ದಕ್ಷಿಣ ಕೇಂದ್ರ ರೈಲು ವಿಭಾಗ 20 ರೈಲು ಸೇವೆ ರದ್ದು ಮಾಡಿದೆ. ಇನ್ನು 30ಕ್ಕೂ ಹೆಚ್ಚು ರೈಲಿನ ಮಾರ್ಗ ಬದಲಾವಣೆ ಮಾಡಿದೆ.

ಬೆಂಗಳೂರು(ಸೆ.01) ದೇಶದ ಹಲವು ಭಾಗದಲ್ಲಿ ಭಾರಿ ಮಳೆಯಾಗುತ್ತಿದೆ. ಈ ಪೈಕಿ ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿನ ಮಳೆಗೆ ಹಲವು ರೈಲು ಸೇತುವೆಗಳು, ಹಳಿಗಳು ಅಸ್ತವ್ಯಸ್ತಗೊಂಡಿದೆ. ದಕ್ಷಿಣ ಭಾರತದ ಕೆಲ ರಾಜ್ಯದಲ್ಲಿನ ಮಳೆಯಿಂದ ಇದೀಗ ದಕ್ಷಿಣ ಕೇಂದ್ರ ರೈಲು ವಿಭಾಗ ಸುರಕ್ಷತಾ ದೃಷ್ಟಿಯಿಂದ ಮಹತ್ವದ ಕ್ರಮ ಕೈಗೊಂಡಿದೆ. 20 ರೈಲುಗಳನ್ನು ರದ್ದು ಮಾಡಿದ್ದರೆ, ಬೆಂಗಳೂರು-ದನಪುರ ಸೇರಿದಂತೆ 30ಕ್ಕೂ ಹೆಚ್ಚು ರೈಲುಗಳ ಮಾರ್ಗ ಬದಲಾವಣೆ ಮಾಡಿದೆ. 

ತೆಲಂಗಾಣ, ಆಂಧ್ರ ಪ್ರದೇಶದ ಮಳೆಗೆ ಹಲವು ರೈಲು ಹಳಿಗಳು ಮುಳುಗಡೆಯಾಗಿದೆ. ಹೀಗಾಗಿ ದಕ್ಷಿಣ ಕೇಂದ್ರ ರೈಲು ವಿಭಾಗ ಈ ನಿರ್ಧಾರ ಘೋಷಿಸಿದೆ. 20 ರೈಲುಗಳು ರದ್ದು ಹಾಗೂ 30ಕ್ಕೂ ಹೆಚ್ಚು ರೈಲುಗಳ ಮಾರ್ಗ ಬದಲಾವಣೆಯಿಂದ ಇದೀಗ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೇ ವೇಳೆ ರೈಲ್ವೇ ಇಲಾಖೆ ಸಹಾಯವಾಣಿ ತೆರೆದಿದೆ. ರದ್ದಾಗಿರುವ ಹಾಗೂ ಮಾರ್ಗ ಬದಲಾವಣೆ ಮಾಡಿರುವ ರೈಲು ವಿವರ ಇಲ್ಲಿದೆ

Latest Videos

ರೈಲಿನಲ್ಲಿ ಪ್ರಯಾಣಿಕರು ಎಷ್ಟು ಬಾಟಲಿ ಮದ್ಯ ಒಯ್ಯಲು ಅವಕಾಶವಿದೆ? ಇಲ್ಲಿದೆ ನಿಯಮ!

ರದ್ದಾಗಿರುವ ಪ್ರಮುಖ ರೈಲುಗಳು
ವಿಜಯವಾಡದಿಂದ ಸಿಕಂದರಾಬಾದ್ ರೈಲು(ಸಂಖ್ಯೆ 12713 )  
ಸಿಕಂದರಾಬಾದ್- ವಿಜಯವಾಡ( ರೈಲು ಸಂಖ್ಯೆ 12714)
ಗುಂಟೂರು -ಸಿಕಂದರಾಬಾದ್ (ರೈಲು ಸಂಖ್ಯೆ 17201)
ಸಿಕಂದರಾಬಾದ್-ಶ್ರೀಪುರ ಕಾಘಝನಗರ್ (ರೈಲು ಸಂಖ್ಯೆ 17233)
ಸಿಕಂದರಾಬಾದ್-ಗುಂಟೂರು( ರೈಲು ಸಂಖ್ಯೆ (12706 )
ಗುಂಟೂರು -ಸಿಕಂದರಾಬಾದ್( ರೈಲು ಸಂಖ್ಯೆ 12705)

ಮಾರ್ಗ ಬದಲಾವಣೆ ಮಾಡಿರುವ ಪ್ರಮುಖ ರೈಲುಗಳು
ದನಪುರ್-ಬೆಂಗಳೂರು(ರೈಲು ಸಂಖ್ಯೆ 03241)
ಈ ರೈಲನ್ನು ಇದೀಗ ಕಾಝಿಪೇಟ್, ಸಿಕಂದರಾಬಾದ್, ಸುಲೇಹಳ್ಳಿ, ಗುಂಟ್ಕಲ್, ಧರ್ಮಾವರಂ ಮಾರ್ಗವಾಗಿ ಸಂಚರಿಸಲಿದೆ. 

ಗಣೇಶ ಹಬ್ಬಕ್ಕೆ ಗುಡ್ ನ್ಯೂಸ್ ಕೊಟ್ಟ ಭಾರತೀಯ ರೈಲ್ವೇ, ಸುಗಮ ಸಂಚಾರಕ್ಕೆ 342 ವಿಶೇಷ ಟ್ರೈನ್!

ವಿಶಾಖಪಟ್ಟಣಂ-ನಂದೇಡ್(ರೈಲು ಸಂಖ್ಯೆ 2081)
ವಿಶಾಖಪಟ್ಟಣಂ- ತಿರುಪತಿ(ರೈಲು ಸಂಖ್ಯೆ 12739)
ತಂಬರಂ-ಹೈದರಾಬಾದ್ (ರೈಲು ಸಂಖ್ಯೆ 12759 )
ನಿಝಾಮುದ್ದೀನ್ -ಕನ್ಯಾಕುಮಾರಿ ( ರೈಲು ಸಂಖ್ಯೆ 12642)
ಮುಂಬೈ-ಭುವನೇಶ್ವರ್( ರೈಲು ಸಂಖ್ಯೆ 11019)
ಭುವನೇಶ್ವರ್ -ಸಿಎಸ್‌ಟಿ ಮುಂಬೈ (ರೈಲು ಸಂಖ್ಯೆ 11020 )
ವಿಶಾಖಪಟ್ಟಣಂ- ಎಲ್‌ಟಿಟಿ ಮುಂಬೈ(ರೈಲು ಸಂಖ್ಯೆ 18519) 
ವಿಜಯವಾಡ -ಹೈದರಾಬಾದ್ (ರೈಲು ಸಂಖ್ಯೆ 12727)  

ಆಂಧ್ರ ಪ್ರದೇಶ ಹಾಗೂ ತೆಲಂಗಾಣದ ಕೆಲ ಭಾಗದ ಮೂಲಕ ಹಾದುಹೋಗುವ ರೈಲುಗಳನ್ನು ರದ್ದು ಮಾಡಲಾಗಿದೆ. ಭಾರಿ ಮಳೆಯಿಂದ ಹಲವು ಪ್ರದೇಶಗಳು ಜಲಾವೃತಗೊಂಡಿದೆ. ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತುರ್ತು ಸಭೆ ನಡೆಸಿ ಪರಿಸ್ಥಿತಿ ಅವಲೋಕಿಸಿದ್ದಾರೆ.
 

click me!