ವಡಾಪಾವ್ ಮೇಲಿನ ಆಸೆ ದಂಪತಿಗೆ ದುಬಾರಿಯಾಗಿ ಪರಿಣಮಿಸಿದೆ. ಅಡವಿಟ್ಟ ಚಿನ್ನ ಬಿಡಿಸಿಕೊಂಡು ಬರುತ್ತಿದ್ದ ವೇಳೆ ಮಾರ್ಗಮಧ್ಯೆ ವಾಡಪಾವ್ ತಿನ್ನಲು ಹೋಗಿದ್ದು, ಈ ವೇಳೆ ಕಣ್ಣಿದುರೇ ಸ್ಕೂಟಿಯಲ್ಲಿದ್ದ ಚಿನ್ನವನ್ನು ಕಳ್ಳರು ಎಗರಿಸಿದ್ದಾರೆ.
ವಡಾಪಾವ್ ಮಹಾರಾಷ್ಟ್ರ ಹಾಗೂ ಮುಂಬೈ ಜನರ ನೆಚ್ಚಿನ ಆಹಾರ, ಏನಾದರೂ ಶಾಪಿಂಗ್ ಅಂತ ಹೊರಗೆ ಹೋಗುವ ಪೇಟೆ ಜನ ಇದನ್ನು ತಿನ್ನದೇ ವಾಪಸ್ ಮನೆಗೆ ಬರುವುದಿಲ್ಲ, ಮುಂಬೈ ಜನರ ಪಾಲಿನ ಅಷ್ಟೊಂದು ಅಚ್ಚುಮೆಚ್ಚಾಗಿರುವ ತಿನಿಸಾಗಿರುವ ಈ ವಡಾಪಾವ್ ತಿನ್ನಲು ಹೋಗಿ ದಂಪತಿ ಬರೋಬ್ಬರಿ 5 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಕಳೆದುಕೊಂಡಿದ್ದಾರೆ. ಮಹಾರಾಷ್ಟ್ರದ ಪುಣೆಯಲ್ಲಿ ಈ ಘಟನೆ ನಡೆದಿದ್ದು, ವಡಾಪಾವ್ ಮೇಲಿನ ಆಸೆ ದಂಪತಿಗೆ ದುಬಾರಿಯಾಗಿ ಪರಿಣಮಿಸಿದೆ. ಹಾಡಹಗಲೇ ನಡೆದ ಈ ದರೋಡೆ ದೃಶ್ಯಾವಳಿ ಹೊಟೇಲ್ ಮುಂದಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ.
ವೀಡಿಯೋ ನೋಡಿದರೆ ಹಿರಿಯ ದಂಪತಿಯ ಜೊತೆ ಇಷ್ಟು ಮೌಲ್ಯದ ಚಿನ್ನಾಭರಣವಿರುವುದನ್ನು ತಿಳಿದವರೇ ಈ ದರೋಡೆ ಮಾಡಿರಬಹುದು ಎಂಬುದು ಭಾಸವಾಗುತ್ತಿದೆ. ಈ ದರೋಡೆ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವೀಡಿಯೋದಲ್ಲಿ ಕಾಣಿಸುವಂತೆ ದಂಪತಿ ಸ್ಕೂಟರ್ ಅನ್ನು ನಿಲ್ಲಿಸಿ ಪತಿ ಅಂಗಡಿಯತ್ತ ಹೋದರೆ ಪತ್ನಿ ಅಲ್ಲೇ ನಿಂತಿರುತ್ತಾರೆ. ಈ ದಾರಿಹೋಕನಂತೆ ನಡೆದುಕೊಂಡು ಬಂದ ದರೋಡೆಕೋರ ಅಲ್ಲೇ ಸ್ವಲ್ಪ ಕಾಲ ಅತ್ತಿತ್ತ ನೋಡುತ್ತಾ ನಿಂತಿದ್ದು, ಮಹಿಳೆ ಹತ್ತಿರದಲ್ಲೇ ಅತ್ತ ತಿರುಗಿ ನಿಂತಿರುವಾಗಲೇ ಸ್ಕೂಟರ್‌ನಲ್ಲಿ ಸಿಕ್ಕಿಸಿಟ್ಟಿದ್ದ ಚಿನ್ನಾಭರಣವಿದ್ದ ಬ್ಯಾಗನ್ನು ಎಗರಿಸಿಕೊಂಡು ಅಲ್ಲಿಂದ ಜೂಟ್ ಹೇಳಿದ್ದಾನೆ. ಈ ವೇಳೆ ಮಹಿಳೆ ಜೋರಾಗಿ ಬೊಬ್ಬೆ ಹೊಡೆದು ಆತನ ಹಿಂದೆ ಓಡಿದರು ಅವರಿಗೆ ಚಿನ್ನಾಭರಣ ಸಿಕ್ಕಿಲ್ಲ, ಈ ವೇಳೆ ಮಹಿಳೆಯ ಬೊಬ್ಬೆ ಕೇಳಿ ಅಲ್ಲಿದ್ದವರೆಲ್ಲಾ ಓಡಿ ಬರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಆದರೆ ಅಷ್ಟರಲ್ಲಿ ಕಳ್ಳ ತಲುಪಬೇಕಾದ ಜಾಗ ತಲುಪಾಗಿದೆ.
undefined
ಬೊಂಬಾಟ್ ಮಸಾಲೆ ದೋಸೆ ಎಂದಿದ್ದ ಕಮಿಷನರ್‌ಗೆ ವಡಾಪಾವ್ ಮೋಡಿ!
ಈ ಬ್ಯಾಗ್‌ನಲ್ಲಿ ಬರೀ ಚಿನ್ನಾಭರಣ ಮಾತ್ರವಲ್ಲದೇ ಬ್ಯಾಂಕ್ ದಾಖಲೆಗಳು ಇದ್ದವು ಎಂದು ದಂಪತಿಗಳು ಅವಲತ್ತುಕೊಂಡಿದ್ದಾರೆ. ಈ ಬಗ್ಗೆ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದರು, ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ. ಆದರೆ ವಡಾಪಾವ್ ಆಸೆಗೆ ಸ್ಕೂಟಿ ನಿಲ್ಲಿಸಿದ ದಂಪತಿ ಮಾತ್ರ ಚಿನ್ನಾಭರಣ ಸೇರಿದಂತೆ ಅಮೂಲ್ಯ ವಸ್ತುಗಳನ್ನು ಕಳೆದುಕೊಂಡು ಶಾಕ್ ಆಗಿದ್ದಾರೆ. ಇದ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಇದು ದಂಪತಿ ತಮ್ಮ ಕಷ್ಟದ ಸಮಯದಲ್ಲಿ ಒತ್ತೆಇಟ್ಟ ಚಿನ್ನ ಆಗಿದ್ದು, ಬಿಡಿಸಿಕೊಂಡು ಬರುತ್ತಿದ್ದ ವೇಳೆಯೇ ಈ ದುರ್ಘಟನೆ ನಡೆದಿದ್ದು, ಅವರ ದುಃಖ ಹೇಳತೀರದಾಗಿದೆ.
ಸಚಿನ್ ವಡಾ ಪಾವ್ ತಿನ್ತಿದ್ದ ಶಾಪ್‌ನಲ್ಲಿ ಜನವೋ ಜನ, ವೀಡಿಯೋದಲ್ಲಿ ಮಾಹಿತಿ ತಿಳಿಸಿದ ಡಾ.ಬ್ರೋ
A couple's gold jewellery valued at ₹ 4.95 lakh was stolen while they paused to buy vada pav after picking it up from a bank. The incident took place on Thursday outside a vadapav shop in Shewalewadi. pic.twitter.com/oFYGmuTso4
— Pune Pulse (@pulse_pune)