ಆಧಾರ್ ಕಾರ್ಡ್ ಅಪ್‌ಡೇಟ್ ಗಡುವು ಸೆ.14ರ ವರೆಗೆ ವಿಸ್ತರಣೆ, ಬಳಿಕ ದುಬಾರಿ ದಂಡ!

By Chethan Kumar  |  First Published Sep 2, 2024, 3:47 PM IST

ಆಧಾರ್ ಕಾರ್ಡ್ ಅಪ್‌ಡೇಟ್ ಮಾಡಲು ನೀಡಿದ್ದ ಗಡುವನ್ನು ಸೆಪ್ಟೆಂಬರ್ 14ರ ವರೆಗೆ ವಿಸ್ತರಿಸಲಾಗಿದೆ. ಈ ದಿನಾಂಕದೊಳಗೆ ಅಪ್‌ಡೇಟ್ ಮಾಡಿಕೊಂಡರೆ ಉಚಿತ, ಬಳಿಕ ದುಬಾರಿ ದಂಡ ವಿಧಿಸಲಾಗುತ್ತದೆ. ಆನ್‌ಲೈನ್ ಮೂಲಕ ಆಧಾರ್ ಅಪ್‌ಡೇಟ್ ಮಾಡುವುದು ಹೇಗೆ? ಯಾರೆಲ್ಲಾ ಅಪ್‌ಡೇಟ್ ಮಾಡಬೇಕು?


ಬೆಂಗಳೂರು(ಸೆ.02) ಭಾರತದ ಪ್ರಜೆ ಆಧಾರ್ ಕಾರ್ಡ್ ಹೊಂದರುವುದು ಅತೀ ಅಗತ್ಯ. ಆದರೆ ಒಮ್ಮೆ ಆಧಾರ್ ಕಾರ್ಡ್ ಮಾಡಿದರೆ ಕರ್ತವ್ಯ ಮುಗೀತು ಎಂದಲ್ಲ. ಪ್ರತಿ 10 ವರ್ಷಕ್ಕೊಮ್ಮೆ ಆಧಾರ್ ಕಾರ್ಡ್ ಅಪ್‌ಡೇಟ್ ಮಾಡಿಕೊಳ್ಳಬೇಕು. ಅಂದರೆ ನೀವು ಆಧಾರ್ ಕಾರ್ಡ್ ಮಾಡಿಸಿ 10 ವರ್ಷವಾಗಿದ್ದರೆ ಅಪ್‌ಡೇಟ್ ಮಾಡಿಕೊಳ್ಳಬೇಕು. ಹೀಗೆ 10 ಹಾಗೂ 10ಕ್ಕಿಂತ ಮೇಲ್ಪಟ್ಟ ವರ್ಷಗಳಾಗಿರುವ ಆಧಾರ್ ಕಾರ್ಡ್‌ದಾರರು ಸದ್ಯ ಯಾವುದೇ ದಂಡ ಶುಲ್ಕವಿಲ್ಲದೆ ಉಚಿತವಾಗಿ ಅಪ್‌ಡೇಟ್ ಮಾಡಿಕೊಳ್ಳಲು ಕೇಂದ್ರ ಸರ್ಕಾರ ಅವಕಾಶ ಮಾಡಿದೆ. ಈ ಗಡವನ್ನು ಮತ್ತೆ ವಿಸ್ತರಿಸಿದೆ. ಇದೀಗ ಸೆಪ್ಟೆಂಬರ್ 14ರ ವರೆಗೆ ಆಧಾರ್ ಕಾರ್ಡ್ ಉಚಿತವಾಗಿ ಅಪ್‌ಡೇಟ್ ಮಾಡಿಕೊಳ್ಳಲು ಅನುಮತಿ ನೀಡಿದೆ. ಆದರೆ ಸೆಪ್ಟೆಂಬರ್ 15ರಿಂದ ದಂಡ ಪಾವತಿಸಬೇಕು.

ಅಪ್‌ಡೇಟ್ ಮಾಡದವರ ಆಧಾರ್ ಕಾರ್ಡ್‌ ಮಾನ್ಯವಾಗಿರುವುದಿಲ್ಲ. ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಹೀಗಾಗಿ ಅಪ್‌ಡೇಟ್ ಅನಿವಾರ್ಯವಾಗಿದೆ. ಆಧಾರ್ ಕಾರ್ಡ್ ಅಪ್‌ಡೇಟ್‌ನಲ್ಲಿ ಪ್ರಮುಖವಾಗಿ ವಿಳಾಸ, ಫೋನ್ ನಂಬರ್, ಫೋಟೋ, ಇಮೇಲ್ ಐಡಿ ಸೇರಿದಂತೆ ಇತರ ಕೆಲ ಮಾಹಿತಿಗಳನ್ನು ಅಪ್‌ಡೇಟ್ ಮಾಡಿಕೊಳ್ಳಬೇಕು. ವಿಳಾಸ ಸೇರಿದಂತೆ ಯಾವುದೇ ಮಾಹಿತಿಯಲ್ಲಿ ಬದಲಾವಣೆ ಇದ್ದರೆ ಸೂಕ್ತ ದಾಖಲೆ ಸಲ್ಲಿಸಿ ಅಪ್‌ಡೇಟ್ ಮಾಡಿಕೊಳ್ಳಬೇಕು.

Latest Videos

undefined

ಆಧಾರ್ ಕಾರ್ಡ್ ಫೋಟೋಗೆ ಪುಟ್ಟ ಮಗುವಿನ ಕ್ಯೂಟ್ ಫೋಸ್ ವಿಡಿಯೋ, ಸರ್ಕಾರಕ್ಕೆ ನೆಟ್ಟಿಗರ ಸಲಹೆ!

ಆಧಾರ್ ಕಾರ್ಡ್ ಅಪ್‌ಡೇಟ್ ಎರಡು ರೀತಿಯಲ್ಲಿ ಮಾಡಲು ಸಾಧ್ಯವಿದೆ. ಆಧಾರ್ ಅಧಿಕೃತ ಕೇಂದ್ರಕ್ಕ ತೆರಳಿ ಅಪ್‌ಡೇಟ್ ಮಾಡಿಕೊಳ್ಳಬಹುದು. ಮತ್ತೊಂದು ಆನ್‌ಲೈನ್ ಮೂಲಕವೂ ಅಪ್‌ಡೇಟ್ ಮಮಾಡಿಕೊಳ್ಳಬಹುದು.

ಆನ್‌ಲೈನ್ ಮೂಲಕ ಅಪ್‌ಡೇಟ್ ಮಾಡಲು uidai.gov.in/ ಆಧಾರ್ ಅಧಿಕೃತ ವೆಬ್‌ಸೈಟ್ ಕ್ಲಿಕ್ ಮಾಡಬೇಕು. ಬಳಿಕ ಭಾಷೆ ಆಯ್ಕೆ ಮಾಡಿಕೊಂಡು ಆಧಾರ್ ನಂಬರ್ ಹಾಕಿ ಲಾಗಿನ್ ಆಗಬೇಕು. ಒಟಿಪಿ ನಂಬರ್ ನಮೂದಿಸಿದಾಗ ನಿಮ್ಮ ಪ್ರೊಫೈಲ್ ತೆರೆದುಕೊಳ್ಳಲಿದೆ. ಇಲ್ಲಿ ಡ್ಯಾಕ್ಯುಮೆಂಟ್ ಅಪ್‌ಡೇಟ್ ಆಯ್ಕೆ ಕ್ಲಿಕ್ ಮಾಡಬೇಕು. ಇಲ್ಲಿ ಯಾವ ಮಾಹಿತಿ ಅಪ್‌ಡೇಟ್ ಮಾಡಬೇಕು ಅನ್ನೋದು ಕ್ಲಿಕ್ ಮಾಡಿ, ಬಳಿಕ ಅದಕ್ಕೆ ತಕ್ಕ ಸ್ಕ್ಯಾನ್ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು. ಬಳಿಕ ಎಲ್ಲಾ ಅಪ್‌ಡೇಟ್ ಮಾಡಿದ ಬಳಿಕ ಸಬ್‌ಮಿಟ್ ಮಾಡಬೇಕು. ಈ ವೇಳೆ ಸರ್ವೀಸ್  ರಿಕ್ವೆಸ್ಟ್ ನಂಬರ್ ದಾಖಲಿಸಿ ಇಟ್ಟುಕೊಳ್ಳಿ. ಬಳಿಕ ಯಾವುದೇ ಮಾಹಿತಿ ಪಡೆಯಬೇಕಿದ್ದರೆ, ದೂರು ನೀಡಬೇಕಿದ್ದರೆ, ಈ ಸರ್ವೀಸ್ ನಂಬರ್ ಮೂಲಕವೇ ಸಲ್ಲಿಕೆ ಮಾಡಬಹುದು. 

ಆಧಾರ್ ನಂಬರ್ ಮಿಸ್ ಯೂಸ್ ಆಗ್ತಿದ್ಯಾ ಅಂತ ಕಂಡು ಹಿಡಿಯೋದು ಹೇಗೆ?
 

click me!