
ಹೈದರಬಾದ್ (ಸೆ.2): ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಭಾರೀ ಮಳೆಯ ನಡುವೆ, ಹಲವೆಡೆ ಹಳಿಗಳ ಮೇಲೆ ನೀರು ನಿಂತಿದ್ದರಿಂದ ರೈಲು ಸಂಚಾರ ಸ್ಥಗಿತಗೊಂಡಿದೆ. ದಕ್ಷಿಣ ಮಧ್ಯ ರೈಲ್ವೆ ಭಾನುವಾರ 20 ಕ್ಕೂ ಹೆಚ್ಚು ರೈಲುಗಳನ್ನು ರದ್ದುಗೊಳಿಸಿದೆ ಮತ್ತು 30 ಕ್ಕೂ ಹೆಚ್ಚು ರೈಲುಗಳ ದಿಕ್ಕನ್ನು ಬದಲಾಯಿಸಿದೆ. ದಕ್ಷಿಣ ಮಧ್ಯ ರೈಲ್ವೆ ಮುಂದಿನ ಎರಡು ದಿನಗಳ ಕಾಲ 69 ರೈಲು ಸೇವೆಗಳನ್ನು ರದ್ದು ಮಾಡಿದ್ದಾಗಿ ತಿಳಿಸಿದೆ. ಅಲ್ಲದೆ, ಜನರ ಸುರಕ್ಷತೆ ಮತ್ತು ಅನುಕೂಲಕ್ಕಾಗಿ ರೈಲ್ವೆ ಸಹಾಯವಾಣಿ ಸಂಖ್ಯೆಗಳನ್ನು ಸ್ಥಾಪಿಸಿದೆ. ಸಹಾಯವಾಣಿ ಸ್ಥಾಪನೆ ಮಾಡಿದೆ. ಹೈದರಾಬಾದ್-27781500, ವಾರಂಗಲ್-27782751, ಕಾಜಿಪೇಟ್-27782660 ಮತ್ತು ಖಮ್ಮನ್-27782885.
ಆಂಧ್ರಪ್ರದೇಶದ ರಾಯನಪಾಡು ನಿಲ್ದಾಣದಲ್ಲಿ ಭಾರೀ ಮಳೆ ಎಫೆಕ್ಟ್‌ನಿಂದ ಬೆಂಗಳೂರಿನಿಂದ ಸಂಚಾರ ಮಾಡುವ ರೈಲು ಸೇವೆಯಲ್ಲೂ ವ್ಯತ್ಯಯವಾಗಿದೆ. ದಾನಪುರ ಟು ಬೆಂಗಳೂರು ನಡುವಿನ ರೈಲು ಸಂಚಾರ ರದ್ದಾಗಿದೆ. ಸೆಪ್ಟೆಂಬರ್ 4 ರವರೆಗೆ ರೈಲು ಸಂಚಾರ ರದ್ದುಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಇಂದು ಹೊರಡಬೇಕಿದ್ದ ರೈಲು ಸಂಖ್ಯೆ 06509 KSR ಬೆಂಗಳೂರು ಟು ದಾನಪುರ ರೈಲು ಸಂಚಾರ ರದ್ದಾಗಿದೆ. ಸೆ. 4ರಂದು ಹೊರಡಬೇಕಿದ್ದ ರೈಲು ಸಂಖ್ಯೆ 06510 ದಾನಪುರ ಟು KSR ಬೆಂಗಳೂರು ರೈಲು, ಇಂದು ಹೊರಡಬೇಕಿದ್ದ ರೈಲು ಸಂಖ್ಯೆ 12295 SMVT ಬೆಂಗಳೂರು ಟು ದಾನಪುರ ರೈಲು, ಇಂದು ಹೊರಡಬೇಕಿದ್ದ 16566 ಮಂಗಳೂರು ಸೆಂಟ್ರಲ್ ಟು ಯಶವಂತಪುರ ರೈಲು ಸಂಚಾರ ಕೂಡ ರದ್ದಾಗಿದೆ.
ತೆಲಂಗಾಣ ಸರ್ಕಾರವು ಸೋಮವಾರ ರಾಜ್ಯದಲ್ಲಿ ಭಾರೀ ಮಳೆಯಿಂದಾಗಿ ಕನಿಷ್ಠ ಒಂಬತ್ತು ಜನರ ಸಾವಿಗೆ ಮತ್ತು ತಗ್ಗು ಪ್ರದೇಶಗಳ ಪ್ರವಾಹಕ್ಕೆ ಕಾರಣವಾದ ನಂತರ ಪರಿಹಾರ ಕ್ರಮಗಳನ್ನು ಹೆಚ್ಚಿಸಿದೆ. ಸಂತ್ರಸ್ತ ಜನರನ್ನು ರಾಜ್ಯದ ಕೆಲವೆಡೆ ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. ಮಳೆ ಪರಿಹಾರ ಕ್ರಮಗಳ ಕುರಿತು ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಮಧ್ಯರಾತ್ರಿಯ ನಂತರ ವಿಜಯವಾಡ ನಗರ ಮತ್ತು ಸುತ್ತಮುತ್ತಲಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದರು ಮತ್ತು ಮೂರನೇ ದಿನವೂ ಕೃಷ್ಣಾ ನದಿಯ ಪ್ರವಾಹದ ಪ್ರಕೋಪ ಮುಂದುವರಿದಿದ್ದರಿಂದ ಭದ್ರತಾ ಕಾಳಜಿಯ ನಡುವೆಯೂ ಸುಮಾರು 3 ಗಂಟೆಯವರೆಗೆ ನಾಯ್ಡು ಪ್ರವಾಹ ಪೀಡಿತ ಪ್ರದೇಶದಲ್ಲಿದ್ದರು.
Indian Railways: ತತ್ಕಾಲ್‌ನಲ್ಲಿ ಕನ್ಫರ್ಮ್ ಟಿಕೆಟ್ ಬುಕ್ ಆಗತ್ತಿಲ್ಲವೇ? ಹಾಗಾದ್ರೆ ಈ ಸಿಂಪಲ್ ಟ್ರಿಕ್ ಬಳಸಿ
ತೆಲಂಗಾಣದ ಕೆಲವು ಭಾಗಗಳಲ್ಲಿ ಎರಡು ದಿನಗಳ ನಿರಂತರ ಭಾರೀ ಮಳೆಯ ನಂತರ, ಸೋಮವಾರದಿಂದ ತೀವ್ರತೆ ಕಡಿಮೆಯಾಗುವ ನಿರೀಕ್ಷೆಯಿದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ರಾಜ್ಯದ ಆರು ಜಿಲ್ಲೆಗಳಿಗೆ ಹಳದಿ ಅಲರ್ಟ್ ಘೋಷಿಸಿದ್ದು, ಇತರ ಪ್ರದೇಶಗಳಲ್ಲಿ ಗುಡುಗು ಮಿಂಚು ಸಹಿತ ಮಳೆಯಾಗುವ ಮುನ್ಸೂಚನೆ ಇದೆ.
ಟಿಕೆಟ್ ಖರೀದಿ ಮಾಡೋ ಮುನ್ನ ಎಚ್ಚರ, ಇವು ಭಾರತದ ಅತ್ಯಂತ ಕೊಳಕು ಟ್ರೇನ್‌ಗಳು!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ